ಭಾರತದಲ್ಲಿ ಸಾಮಾನ್ಯವಾದ ಪಾನ್ ಉಗುಳುವಿಕೆಯು ಈಗ ಲಂಡನ್‌ನ ಸಾರ್ವಜನಿಕ ಸ್ಥಳಗಳನ್ನೂ ಗಬ್ಬೆಬ್ಬಿಸುತ್ತಿದೆ. ದಕ್ಷಿಣ ಏಷ್ಯಾದ ಸಮುದಾಯಗಳಿಂದ ಬಂದ ಈ ಅಭ್ಯಾಸವು ನಗರದ ಬೀದಿಗಳಲ್ಲಿ ತೆಗೆಯಲು ಕಷ್ಟವಾದ ಕೆಂಪು ಕಲೆಗಳನ್ನು ಸೃಷ್ಟಿಸುತ್ತಿದ್ದು, ಸ್ಥಳೀಯ ಸ್ವಚ್ಛತಾ ಮಂಡಳಿಗಳಿಗೆ ಇದು ದೊಡ್ಡ ಸವಾಲಾಗಿದೆ.
ಲಂಡನ್ ನಗರದ ಸ್ವಚ್ಛತೆಗೆ ಧಕ್ಕೆ ತರ್ತಿದೆ ಪಾನ್ ಮಸಾಲಾ
ಭಾರತದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಉಗುಳೋದು ಸಾಮಾನ್ಯ ಎನಿಸಿ ಬಿಟ್ಟಿದೆ. ಸಾರ್ವಜನಿಕ ಬಸ್ ನಿಲ್ದಾಣಗಳು, ಬಸ್‌ಗಳ ಕಿಟಕಿ ಗಾಜುಗಳು, ರೈಲುಗಳ ಹೊರಮೈ, ರಸ್ತೆಗಳು, ನಡೆದಾಡುವ ಪ್ರದೇಶಗಳು ಹೀಗೆ ಎಲ್ಲಾ ಕಡೆ ಈ ಪಾನ್‌ಪ್ರಿಯರು ಉಗುಳಿದ ಕಲೆಗಳಿಂದಾಗಿ ಮದರಂಗಿಯಂತೆ ಅಲ್ಲಲ್ಲಿ ಕೆಂಪು ಕೆಂಪು ಕಲೆಗಳು ಆಗಿರುವುದನ್ನು ಕಾಣಬಹುದು. ಆದರೆ ಇಂಗ್ಲೆಂಡ್‌ನ ರಾಜಧಾನಿ ಲಂಡನ್‌ನಲ್ಲಿಯೂ ಇತ್ತೀಚೆಗೆ ಈ ಪಾನ್ ಮದರಂಗಿ ಸಾರ್ವಜನಿಕ ಸ್ಥಳಗಳನ್ನು ಗಬ್ಬೆಬ್ಬಿಸುತ್ತಿದೆ. ಭಾರತದಲ್ಲಾದ್ರೆ ಪಾನ್ ಹಾಕೋದು ಸಂಪ್ರದಾಯ ಅಲ್ಲಲ್ಲಿ ಉಗಿಯೋದು ಚಟ. ಆದರೆ ವಿದೇಶದಲ್ಲಿ ಪಾನ್ ಹಾಕೋದು ಯಾರು? ಹೇಳಿ ಕೇಳಿ ಲಂಡನ್‌ನಲ್ಲಿ ಭಾರತೀಯರು ಸಾಕಷ್ಟಿದ್ದಾರೆ ಎಲ್ಲಾದ್ರೂ ಅವ್ರೇನೇ ಅಲ್ಲೂ ಉಗಿದು ಹೋದ ನಗರವನ್ನು ಗಬ್ಬೆಬ್ಬಿಸ್ತಿದ್ದಾರಾ? ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.
ಬೀದಿಗಳಲ್ಲಿ ಪಾನ್ ಮಸಾಲಾದ ಮದರಂಗಿ:
ಲಂಡನ್ ವಿಶ್ವದ ಅತ್ಯಂತ ಪ್ರತಿಷ್ಠಿತ ನಗರಗಳಲ್ಲಿ ಒಂದಾಗಿದೆ, ಆದರೂ ಅದರ ಬೀದಿಗಳು ಕಸದಿಂದ ಹಿಡಿದು ಸಾರ್ವಜನಿಕ ಉಗುಳುವಿಕೆ ಸೇರಿದಂತೆ ದೈನಂದಿನ ಹಲವು ನಾಗರಿಕ ಸಮಸ್ಯೆಗಳೊಂದಿಗೆ ಹೋರಾಡುತ್ತಿದೆ. ಇಲ್ಲಿನ ಕೌನ್ಸಿಲ್‌ಗಳು ಪ್ರತಿ ವರ್ಷ ಬೀದಿ ಶುಚಿಗೊಳಿಸುವಿಕೆಗಾಗಿ ನೂರಾರು ಮಿಲಿಯನ್ ಪೌಂಡ್‌ಗಳಷ್ಟು ಹಣವನ್ನು ಒಟ್ಟಾರೆಯಾಗಿ ಖರ್ಚು ಮಾಡುತ್ತದೆ. ಉಗುಳುವುದು, ಕಸ ಹಾಕುವುದು ಮತ್ತು ಇತರ ಉಪದ್ರವಕಾರಿ ನಡವಳಿಕೆಗಾಗಿ ಸಾವಿರಾರು ರೂಪಾಯಿ ದಂಡಗಳನ್ನು ವಿಧಿಸುತ್ತದೆ. ಆದರೂ ಇಲ್ಲಿ ಪಾನ್ ಉಗುಳಿ ನಗರವನ್ನು ಕೊಳಕು ಮಾಡುವ ಜನರ ಸಂಖ್ಯೆಯಲ್ಲಿ ಕಡಿಮೇ ಏನಿಲ್ಲ, ಅಷ್ಟೊಂದು ಶಿಸ್ತುಬದ್ಧವಾಗಿದ್ದರು ಈ ನಗರದಲ್ಲಿ ಜನ ಹೇಗೆ ಉಗುಳುತ್ತಾರೆ ಎಂಬ ಬಗ್ಗೆ ಡಿಟೇಲ್ ಇಲ್ಲಿದೆ.
ಭಾರತ ಮೂಲದ ಪಾನ್ ಲಂಡನ್ ಬೀದಿಗಳಿಗೆ ಬಂದಿದ್ದು ಹೇಗೆ?
ಹೆಚ್ಚಿನ ಭಾರತೀಯ ಮೂಲದ ಆಹಾರಗಳು ವಿದೇಶಕ್ಕೆ ಹೋದಂತೆಯೇ ಪಾನ್ ಕೂಡ ಲಂಡನ್‌ಗೆ ಬಂತು. ಭಾರತೀಯ ಜನರು ತಮ್ಮ ಅಭ್ಯಾಸಗಳನ್ನು ತಮ್ಮೊಂದಿಗೆ ಹೊರದೇಶಕ್ಕೆ ಸಾಗಿಸಿದಂತೆ ಈ ಪಾನ್ ಅನ್ನು ಕೂಡ ಸಾಗಿಸಿದರು. ಹಾಗಾದ್ರೆ ಬರೀ ಭಾರತೀಯರೇ ಇಲ್ಲಿ ಪಾನ್ ತಿನ್ನುವವರ? ಲಂಡನ್ ಬೀದಿಯನ್ನು ಇವರೇ ಗಲೀಜು ಮಾಡ್ತಿದ್ದಾರಾ? ಖಂಡಿತ ಇಲ್ಲ...
ಲಂಡನ್ ಬೀದಿಯಲ್ಲಿ ಉಗುಳ್ತಿರೋರು ಭಾರತೀಯರಾ?
ಭಾರತೀಯರಂತೆ ಪಾಕಿಸ್ತಾನಿ, ಬಾಂಗ್ಲಾದೇಶಿ ಮತ್ತು ನೇಪಾಳಿ ಸಮುದಾಯಗಳು ದಶಕಗಳಿಂದ ಯುಕೆಯಲ್ಲಿ ವಾಸಿಸುತ್ತಿವೆ ಮತ್ತು ಅಲ್ಲಿ ವಾಸಿಸುವ ಅನೇಕರು ಹಿಂದಿನ ಸಂಪ್ರದಾಯದಂತೆ ಊಟದ ನಂತರ ಅಥವಾ ಸಂತೊಷ ಕೂಟಗಳ ಸಮಯದಲ್ಲಿ ಅಥವಾ ಮನೆಯಲ್ಲಿ ಆರಾಮವಾಗಿ ಪಾನ್ ಅನ್ನು ತಿನ್ನುತ್ತಾರೆ. ಅಂದಹಾಗೆ ಲಂಡನ್‌ನಲ್ಲಿ ಅಗಿಯುವ ಹೆಚ್ಚಿನ ಪಾನ್‌ಗಳನ್ನು ಭಾರತದಂತೆ ಹೆದ್ದಾರಿಗಳಲ್ಲಿ ಬಹಿರಂಗವಾಗಿ ಮಾರಾಟ ಮಾಡಲಾಗುವುದಿಲ್ಲ. ಬದಲಾಗಿ, ಸೌತಾಲ್, ವೆಂಬ್ಲಿ, ಇಲ್ಫೋರ್ಡ್, ಟೂಟಿಂಗ್ ಮತ್ತು ಈಸ್ಟ್ ಹ್ಯಾಮ್‌ನಂತಹ ಸ್ಥಳಗಳಲ್ಲಿ ದಕ್ಷಿಣ ಏಷ್ಯಾದ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ಸಿಗುತ್ತದೆ.
ಇದನ್ನೂ ಓದಿ: 52 ಬಾರಿ ಸಾರಿ ಕೇಳಿ 3ನೇ ಮಹಡಿಯಿಂದ ಜಿಗಿದ 8ನೇ ಕ್ಲಾಸ್ ವಿದ್ಯಾರ್ಥಿ
ಏಷ್ಯಾದ ಸಣ್ಣ ದಿನಸಿ ಅಂಗಡಿಗಳು ವೀಳ್ಯದ ಎಲೆಗಳು, ಅಡಿಕೆ, ಸಿಹಿ ಸುಪಾರಿ ಮತ್ತು ರೆಡಿಮೇಡ್ ಪಾನ್ ಮಿಶ್ರಣಗಳನ್ನು ಕೌಂಟರ್ ಹಿಂದೆ ಇಡುತ್ತವೆ. ಗುಟ್ಕಾದಂತಹ ನಿಷೇಧಿತ ತಂಬಾಕು ರೂಪಾಂತರಗಳನ್ನು ಹೊಂದಿರದಿದ್ದರೆ ಅವುಗಳನ್ನು ಅಲ್ಲಿ ಕಾನೂನುಬದ್ಧವಾಗಿ ಮಾರಾಟ ಮಾಡಬಹುದಾಗಿದೆ. ಪಾನ್ ಅನ್ನು ಸದ್ದಿಲ್ಲದೆ ಮಾರಾಟ ಮಾಡಿ ಖಾಸಗಿಯಾಗಿ ಸೇವಿಸುವುದರಿಂದ, ಅನೇಕ ಲಂಡನ್ ನಿವಾಸಿಗಳಿಗೆ ಪಾನ್ ನಗರದ ವಲಸೆ ಆಹಾರ ಸಂಸ್ಕೃತಿಯ ಭಾಗವಾಗಿದೆ ಎಂದು ತಿಳಿದೇ ಇಲ್ಲ. ಆದರೆ ಹೀಗೆ ಪಾನ್ ತಿಂದ ಕೆಲವು ಜನರು ಪಾದಚಾರಿ ಮಾರ್ಗಗಳಲ್ಲಿ ಅಥವಾ ಬಸ್ ನಿಲ್ದಾಣಗಳ ಬಳಿ ಉಗುಳಿದಾಗ ಸಮಸ್ಯೆ ಪ್ರಾರಂಭವಾಗುತ್ತದೆ, ಇದರಿಂದ ಕೆಂಪು ಕಲೆಗಳು ಉಳಿಯುತ್ತವೆ, ಅವುಗಳನ್ನು ತೆಗೆದುಹಾಕಲು ಸ್ವಚ್ಛತಾ ಮಂಡಳಿಗಳು ಹೆಣಗಾಡುತ್ತವೆ.
ಲಂಡನ್‌ನಲ್ಲಿ ಪಾನ್ ಉಗುಳುವುದು ಹೇಗೆ; ಯಾರೂ ಅವರನ್ನು ತಡೆಯುವುದಿಲ್ಲವೇ?
ಸಾಮಾನ್ಯವಾಗಿ ಯಾರೋ ಒಬ್ಬರು ಪಾನ್ ಖರೀದಿಸುತ್ತಾರೆ ಅದನ್ನು ಅಗಿಯುತ್ತಾರೆ ನಂತರ ಕೆಂಪು ಲಾಲಾರಸವನ್ನು ಗೋಡೆ ಅಥವಾ ಪಾದಚಾರಿ ಮಾರ್ಗದ ಮೇಲೆ ಉಗುಳುತ್ತಾರೆ. ಇದು ಲಂಡನ್‌ನ ಅನೇಕ ಮಂಡಳಿಗಳು ಉಗುಳುವುದು ಮತ್ತು ಪಾದಚಾರಿ ಮಾರ್ಗಗಳು ಕಲೆ ಮಾಡುವುದನ್ನು ನೈರ್ಮಲ್ಯ ಸಮಸ್ಯೆ ಎಂದೇ ಪರಿಗಣಿಸಿವೆ. ಸ್ಥಳೀಯ ಜನರು ವರದಿ ಮಾಡುವುದರಿಂದ ಅಥವಾ ಸಿಸಿಟಿವಿ ದೃಶ್ಯಾವಳಿಗಳಿಂದಷ್ಟೇ ಅವರನ್ನು ಪತ್ತೆ ಮಾಡಲು ಸಾಧ್ಯವಾಗುತ್ತಿದೆ.
ಇದನ್ನೂ ಓದಿ: ಶಾಹೀನಾ ನನ್ನ ಪತ್ನಿ ಮಸೀದಿಯಲ್ಲಿ ನಿಖಾ ನಡೆದಿದೆ: ದೆಹಲಿ ಸ್ಪೋಟದ ಆರೋಪಿ ಮುಜಾಮಿಲ್ ಮದ್ವೆ ರಹಸ್ಯ


