ಸ್ಮೃತಿ ಮಂಧನಾಗೆ ʻಈʼ ನಟನ ಮೇಲೆ ಇತ್ತಂತೆ ಕ್ರಶ್! ಶಾರೂಖ್, ಸಲ್ಮಾನ್ ಇವರ್ಯಾರೂ ಅಲ್ಲ ಮತ್ಯಾರು?
Smriti Mandhana crush: ಇದೀಗ ಸ್ಮೃತಿ ಮಂಧಾನ ಅವರ ಹಳೆಯ ವಿಡಿಯೋ ವೈರಲ್ ಆಗುತ್ತಿದೆ. ಅದರಲ್ಲಿ ಸ್ಮೃತಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹಲವು ವಿವರಗಳನ್ನು ಬಹಿರಂಗಪಡಿಸಿದ್ದಾರೆ.

ಹಾಟ್ ಟಾಪಿಕ್
ಕಳೆದ ಕೆಲವು ದಿನಗಳಿಂದ ಭಾರತೀಯ ಮಹಿಳಾ ಕ್ರಿಕೆಟ್ ತಾರೆ ಸ್ಮೃತಿ ಮಂಧನಾ ಮತ್ತು ಪಲಾಶ್ ಮುಚ್ಚಲ್ ಅವರ ವಿವಾಹ ಮುಂದೂಡಲ್ಪಟ್ಟಿರುವುದು ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿತ್ತು. ಏತನ್ಮಧ್ಯೆ ಇನ್ಸ್ಟಾಗ್ರಾಮ್ಗೆ ದೃಷ್ಟಿಬೊಟ್ಟು ಇಡುವ ಮೂಲಕ ತಮ್ಮ ಸಂಬಂಧಕ್ಕೆ ಯಾರ ಕೆಟ್ಟ ದೃಷ್ಟಿಯೂ ಬೀಳದಿರಲಪ್ಪ ಎನ್ನುವ ರೀತಿಯಲ್ಲಿ ಈ ಜೋಡಿ ಪೋಸ್ಟ್ ಹಂಚಿಕೊಂಡಿತು.
ವಿಡಿಯೋ ವೈರಲ್
ಇದೀಗ ಸ್ಮೃತಿ ಮಂಧಾನ ಅವರ ಹಳೆಯ ವಿಡಿಯೋ ವೈರಲ್ ಆಗುತ್ತಿದೆ. ಅದರಲ್ಲಿ ಸ್ಮೃತಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹಲವು ವಿವರಗಳನ್ನು ಬಹಿರಂಗಪಡಿಸಿದ್ದಾರೆ.
ಸ್ಮೃತಿ ಕ್ರಶ್ ಯಾರು?
ಅನೇಕ ಯುವಕರ ಕ್ರಶ್ ಆಗಿರುವ ಸ್ಮೃತಿ ಅವರು ತಮ್ಮ ಸೌಂದರ್ಯ ಮತ್ತು ಕ್ರಿಕೆಟ್ ಆಟದಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅಂದಹಾಗೆ ಸಂದರ್ಶನವೊಂದರಲ್ಲಿ ಸ್ಮೃತಿ ತಮ್ಮ ಕ್ರಶ್ ಯಾರೆಂದು ಬಹಿರಂಗಪಡಿಸಿದ್ದಾರೆ.
ಬಾಲಿವುಡ್ ಸೂಪರ್‌ಸ್ಟಾರ್
ಅಮೆಜಾನ್ ಪ್ರೈಮ್ ಕಾರ್ಯಕ್ರಮವೊಂದರಲ್ಲಿ ಸ್ಮೃತಿಗೆ ಅವರ ಸೆಲೆಬ್ರಿಟಿ ಕ್ರಶ್ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಲಾಯಿತು. ಆಗ ಒಂದು ಸ್ವಲ್ಪವೂ ಯೋಚನೆ ಮಾಡದೆ ಸ್ಮೃತಿ ಈಗ ಸುದ್ದಿಯಲ್ಲಿರುವ ಬಾಲಿವುಡ್ ಸೂಪರ್‌ಸ್ಟಾರ್‌ನ ಹೆಸರನ್ನು ಹೆಸರಿಸಿದರು.
ಪ್ರಸ್ತುತ ವೈರಲ್
ಹೌದು. ಈ ಸಂದರ್ಶನದಲ್ಲಿ ಸ್ಮೃತಿ ತಮ್ಮ ಸೆಲೆಬ್ರಿಟಿ ಕ್ರಶ್ ಹೃತಿಕ್ ರೋಷನ್ ಎಂದು ಬಹಿರಂಗಪಡಿಸಿದರು. ಅದು ಪ್ರಸ್ತುತ ವೈರಲ್ ಆಗುತ್ತಿದೆ. ಅನೇಕ ಹುಡುಗಿಯರು ಹೃತಿಕ್ ಅವರನ್ನು ತಮ್ಮ ಕ್ರಶ್ ಎಂದು ಹೇಳಿರುವುದನ್ನ ನೀವು ಕೇಳಿರಬಹುದು.
ಅಡುಗೆ ಮಾಡುತ್ತಿದ್ದೆ ..
ಇಷ್ಟೇ ಅಲ್ಲ, ಈ ರಾಪಿಡ್ ಫೈರ್ ಸುತ್ತಿನಲ್ಲಿ ಸ್ಮೃತಿ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ಅಂತಹ ಒಂದು ಪ್ರಶ್ನೆಯಲ್ಲಿ ಸ್ಮೃತಿಯನ್ನು, "ನೀವು ಕ್ರಿಕೆಟಿಗರಾಗಿಲ್ಲದಿದ್ದರೆ ಏನು ಮಾಡುತ್ತಿದ್ದಿರಿ?" ಎಂದು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಸ್ಮೃತಿ ಕ್ರಿಕೆಟಿಗರಾಗಿಲ್ಲದಿದ್ದರೆ ಅಡುಗೆ ಮಾಡಲು ಇಷ್ಟಪಡುತ್ತೇನೆ. ಆದ್ದರಿಂದ ತಾನು ಅಡುಗೆ ಮಾಡುತ್ತಿದ್ದೆ ಎಂದು ಹೇಳಿದರು.
ಹೆಚ್ಚು ಫಾಲೋವರ್ಸ್
ಸ್ಮೃತಿ ಜನಪ್ರಿಯತೆಯ ಬಗ್ಗೆ ಮಾತನಾಡುವುದಾದರೆ ಇನ್‌ಸ್ಟಾಗ್ರಾಮ್‌ನಲ್ಲಿ 14.1 ಮಿಲಿಯನ್‌ಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಏಕೈಕ ಮಹಿಳಾ ಕ್ರಿಕೆಟಿಗ. ಅಭಿಮಾನಿಗಳು ಮಂಧಾನಾಳನ್ನು ಸದಾ ಬಾಲಿವುಡ್ ನಟಿಯರೊಂದಿಗೆ ಕಂಪೇರ್ ಮಾಡ್ತಾರೆ. ಜುಲೈ 18, 1996 ರಂದು ಮುಂಬೈನಲ್ಲಿ ಜನಿಸಿದ ಸ್ಮೃತಿ ಮಂದಣ್ಣ ಕೂಡ ಉನ್ನತ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

