CM Mohan Yadav Son Abhimanyu Marriage: ಇಂದು ಮದುವೆಗೋಸ್ಕರ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಆದರೆ ಇಲ್ಲೋರ್ವ ಸಿಎಂ ಮಾತ್ರ ಸಾಮೂಹಿಕ ಮದುವೆಯಲ್ಲಿ ತಮ್ಮ ಮಗನ ಮದುವೆ ಮಾಡಿಸಿ, ಎಲ್ಲರಿಗೂ ಮಾದರಿ ಆಗಿದ್ದಾರೆ. 

ಈಗ ಸಾಮಾನ್ಯ ಜನರೇ ಮದುವೆ ಅಂತ ಬಂದಾಗ ಗ್ರ್ಯಾಂಡ್‌ ಆಗಿ ಮಾಡುವುದುಂಟು. ಹೀಗಿರುವಾಗ ರಾಜಕಾರಣಿಗಳ ಮನೆಯ ಮದುವೆ ಹೇಗಿರುತ್ತದೆ ಎಂದು ನೋಡಿರುತ್ತೀರಿ. ಆದರೆ ಇಲ್ಲೋರ್ವ ರಾಜಕಾರಣಿ ಸಾಮೂಹಿಕ ಮದುವೆಯಲ್ಲಿ ತನ್ನ ಮಗನ ಮದುವೆ ಮಾಡಿಸಿದ್ದಾರೆ.

ಸಾಮೂಹಿಕ ಮದುವೆಯಲ್ಲಿ ಮಗನ ಮದುವೆ ಮಾಡಿದ್ರು

ಮಧ್ಯ ಪ್ರದೇಶದಲ್ಲಿ ಹತ್ತು ವರ್ಷಗಳ ವರ್ಷ ಹಿರಿಯ ರಾಜಕಾರಣಿಯೊಬ್ಬರು ಸಾಮೂಹಿಕ ವಿವಾಹದಲ್ಲಿ ಮಗನ ಮದುವೆ ಮಾಡಿದ್ದರು. ಅಂದಿನ ಸಚಿವರು, ಪ್ರಸ್ತುತ ಶಾಸಕರಾಗಿರುವ ಗೋಪಾಲ್ ಭಾರ್ಗವ ಅವರ ಗಹ್ರಾಕೋಟಾದಲ್ಲಿ ನಡೆದ ಸಾಮೂಹಿಕ ವಿವಾಹಲ್ಲಿ ಮಗ ಅಭಿಷೇಕ್ ಭಾರ್ಗವ, ಮಗಳು ಅವಂತಿಕಾ ಮದುವೆ ಮಾಡಿದ್ದರು.

ಹತ್ತು ವರ್ಷಗಳ ಬಳಿಕ ಮದುವೆ

ಈ ಮದುವೆ ನಡೆದು ಹತ್ತು ವರ್ಷಗಳಾಗಿವೆ. ಈಗ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಮಗ ಅಭಿಮನ್ಯು ಮದುವೆಯನ್ನು ಭಾನುವಾರ ಉಜ್ಜಯಿನಿಯಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಮಾಡಿದ್ದಾರೆ.

1,400 ಜೋಡಿಗಳ ನಡುವೆ ಭಾರ್ಗವ ಮಕ್ಕಳ ಮದುವೆಯು ನಡೆದಿತ್ತು. ಭಾರ್ಗವ ಅವರು ಪ್ರತಿ ವರ್ಷ ತಮ್ಮ ತವರಿನಲ್ಲಿ ಸಾಮೂಹಿಕ ವಿವಾಹ ಮಾಡುತ್ತಾರೆ. ಆಗ ತಮ್ಮ ಮಕ್ಕಳ ಮದುವೆಯ ದಿನಾಂಕಗಳು ಫಿಕ್ಸ್‌ ಆದಾಗ, ಸಾಮೂಹಿಕ ಮದುವೆಯಲ್ಲೇ ಮದುವೆ ಮಾಡಿಸಿದ್ದರು.

ಈಗ 21 ಜೋಡಿಗಳ ನಡುವೆ ಯಾದವ್ ಮಗ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ಸಮಾರಂಭದಲ್ಲಿ ವಿವಿಧ ಸಮುದಾಯಗಳ ಜನರು ಭಾಗವಹಿಸಿದ್ದಾರೆ. ಎಂಟು ತಿಂಗಳ ಹಿಂದೆಯೇ ಯಾದವ್ ಮಗನ ಮದುವೆ ಡಾ. ಇಶಿತಾ ಅವರೊಂದಿಗೆ ಫಿಕ್ಸ್‌ ಆಗಿತ್ತು.

ಮಗನ ಮದುವೆ ಫಿಕ್ಸ್‌ ಆದಾಗಲೇ ಅವರು, ಮಗನ ಮದುವೆಯನ್ನು ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾಡುವುದಾಗಿ ಹೇಳಿದ್ದರು.

ಹಲವಾರು ಕೇಂದ್ರ ಸಚಿವರು, ವಿವಿಧ ರಾಜ್ಯಗಳ ರಾಜ್ಯಪಾಲರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಸಚಿವರಲ್ಲದೆ, ಶಾಸಕರು ಕೂಡ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದಾರೆ.

ದುಬಾರಿ ಮದುವೆಗಳ ಬಗ್ಗೆ ಮಾತನಾಡಿದ್ರುವ ಭಾರ್ಗವ ಅವರು, ಜನರು ಮಕ್ಕಳ ಮದುವೆಗೆ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದ್ದಾಗ, ನಾವು ಮಕ್ಕಳ ಮದುವೆಯನ್ನು ಸಾಮೂಹಿಕ ವಿವಾಹದಲ್ಲಿ ಮಾಡಿದ್ದಾಗಿ” ಹೇಳಿದ್ದರು. ಈಗ ಯಾದವ್ ಕೂಡ ಇದೇ ಮಾದರಿಯನ್ನು ಅನುಸರಿಸಿದ್ದಾರೆ.