ಮದ್ಯ ಪ್ರಿಯರೇ ಗಮನಿಸಿ ! ಸಿಂಗಾಪುರದಲ್ಲಿ ತಯಾರಾಗುತ್ತಿದೆ ಮೂತ್ರ, ಕೊಳಚೆ ನೀರಿನಿಂದ ತಯಾರಿಸಿದ ಸ್ಪೆಷಲ್ ಬಿಯರ್ !
ಬಿಯರ್ (Beer) ಕುಡಿಯುವುದು ಆಧುನಿಕ ಜೀವನಶೈಲಿಯ (Lifestyle) ಪ್ರಮುಖ ಭಾಗವೆಂದು ಪರಿಗಣಿಸಲಾಗಿದೆ. ಕಡಿಮೆ ನಶೆ ಹೊಂದಿರುವ ಕಾರಣ ಹೆಚ್ಚಿನವರು ಬಿಯರ್‌ನ್ನು ಇಷ್ಟಪಡುತ್ತಾರೆ. ಬಿಯರ್ ಪ್ರಿಯರಿಗೊಂದು ಸಿಹಿ ಸುದ್ದಿ. ಸಿಂಗಾಪುರ(Singapore)ದಲ್ಲಿ ಸ್ಪೆಷಲ್ ಬಿಯರ್‌ವೊಂದು ರೆಡಿಯಾಗ್ತಿದೆ. ಅದು ಅಂತಿಂಥಾ ಬಿಯರ್ ಅಲ್ಲ. ಮೂತ್ರ (Urine)ದಿಂದ ತಯಾರಿಸಿದ ಬಿಯರ್.
ಮದ್ಯಪ್ರಿಯರಲ್ಲಿ ಹೆಚ್ಚಿನವರು ಬಿಯರ್ (Beer) ಪ್ರೇಮಿಗಳು. ಏಕೆಂದರೆ ಇದು ಇತರ ಆಲ್ಕೋಹಾಲ್ (Alcohol) ಗಳಿಗಿಂತ ಕಡಿಮೆ ನಶೆ ಹೊಂದಿರುತ್ತದೆ ಮತ್ತು ತಣ್ಣಗಾದ ಬಿಯರ್ ಶಾಖವನ್ನು ನಿವಾರಿಸುತ್ತದೆ ಎಂಬ ಕಾರಣಕ್ಕೆ ಹೆಚ್ಚಿನವರು ಬಿಯರ್ ಕುಡಿಯುತ್ತಾರೆ. ಬಿಯರ್‌ನಲ್ಲಿ ಹಲವು ವೆರೈಟಿನೂ ಇದೆ. ಸದ್ಯ ಸಿಂಗಾಪುರ (Singapore), ಮೂತ್ರದಿಂದ ಬಿಯರ್ ತಯಾರಿಸುವ ಮೂಲಕ ದೊಡ್ಡ ಬದಲಾವಣೆಗೆ ನಾಂದಿ ಹಾಡಿದೆ. ಶುದ್ಧೀಕರಿಸಿದ ಕೊಳಚೆ ನೀರು (Drinage water) ಮತ್ತು ಮೂತ್ರ ಮಿಶ್ರಿತ ನೀರಿನಿಂದಲೇ ಬಿಯರ್ ಉತ್ಪಾದಿಸುತ್ತಿರುವುದಾಗಿ ಸ್ವತಃ ಉತ್ಪಾದನಾ ಸಂಸ್ಥೆಯೇ ಹೇಳಿಕೊಂಡಿದೆ. ಈ ಹೊಸ ಬಿಯರ್ ಅನ್ನು ಸಿಂಗಾಪುರದಲ್ಲಿ ನ್ಯೂಬ್ರೂ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ. ಈ ಬಿಯರ್‌ನ ರುಚಿ ಅತ್ಯುತ್ತಮವಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.
ಕೊಳಚೆ ನೀರು, ಮೂತ್ರ ಮಿಶ್ರಿತ ಬಿಯರ್ ತಯಾರು ಮಾಡುತ್ತಿರುವುದೇಕೆ ?
ಉತ್ಪಾದನಾ ಸಂಸ್ಥೆ,ಕೊಳಚೆ ನೀರು ಮತ್ತು ಮೂತ್ರ (Urine) ಮಿಶ್ರಿತ ನೀರಿನಿಂದ ಬಿಯರ್ ತಯಾರಿಸೋದರ ಹಿಂದೆ ನಿರ್ಧಿಷ್ಟ ಕಾರಣವೂ ಇದೆ. ಸಿಂಗಾಪುರದಲ್ಲಿ ಮಾದಕ ಪಾನೀಯಗಳ ಉತ್ಪಾದನೆಯನ್ನು ಪರಿಸರ ಸ್ನೇಹಿ ಎಂಬ ಸಂದೇಶವನ್ನು ಸಾರಲು ಮುಂದಾಗಿದೆ. ನ್ಯೂಬ್ರೂ ಬಿಯರ್ ಅನ್ನು ಮೂತ್ರ ಮತ್ತು ಕೊಳಚೆ ನೀರಿನಿಂದ ಉತ್ಪಾದಿಸಲಾಗುತ್ತದೆ. ಸಿಂಗಾಪುರದ ರಾಷ್ಟ್ರೀಯ ಜಲ ಮಂಡಳಿಯೂ ಈ ಕಲ್ಪನೆಯ ಹಿಂದೆ ಇದೆ. ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯನೀರಿನ ಸಂಸ್ಕರಣೆಗೆ ವಿವಿಧ ಯೋಜನೆಗಳು ಈಗಾಗಲೇ ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದರೊಂದಿಗೆ, ಬಿಯರ್ ಅನ್ನು ಮಾಲಿನ್ಯಕಾರಕಗಳು ಮತ್ತು ಮೂತ್ರದಿಂದ ತಯಾರಿಸಲಾಗುತ್ತದೆ. ಸಿಂಗಾಪುರದಲ್ಲಿ ಪ್ರಸ್ತುತ ನ್ಯೂಬ್ರೂ ಅನ್ನು ಹಸಿರು ಬಿಯರ್ ಎಂದು ಪ್ರಚಾರ ಮಾಡಲಾಗಿದೆ.
ಎರಡು ಬಾಟಲ್ ಬಿಯರ್ ಬೇಕಿತ್ತು ಸಾರ್.. ಮಧ್ಯರಾತ್ರಿ 100 ಡಯಲ್ ಮಾಡಿ ಕಾಟ ಕೊಟ್ಟ ಭೂಪ !
ಜಗತ್ತಿನಲ್ಲಿ ಮುಂಬರುವ ವರ್ಷಗಳಲ್ಲಿ ನೀರಿನ ಬಿಕ್ಕಟ್ಟು ಸೃಷ್ಟಿಯಾಗಲಿದ್ದು, ಅದನ್ನು ಎದುರಿಸುವ ನಿಟ್ಟಿನಲ್ಲಿ ಎಲ್ಲ ರೀತಿ ಪ್ರಯತ್ನ ಮತ್ತು ಸಿದ್ಧತೆ ಮಾಡಿಕೊಳ್ಳಬೇಕಿದೆ. ಈ ಹಿನ್ನೆಲೆ ನೀರು ಸಂರಕ್ಷಿಸುವ ಮತ್ತು ಮರುಬಳಕೆಗೆ ಆದ್ಯತೆ ನೀಡುವ ಅಗತ್ಯವಿದೆ. ಆದರೆ ಬಿಯರ್ ತಯಾರಿಸುವುದಕ್ಕೆ ಅತಿಹೆಚ್ಚು ನೀರು ಬೇಕಾಗುತ್ತದೆ, ಈ ಪಾನೀಯದಲ್ಲಿ ಶೇ.90ರಷ್ಟು H2O ಆಗಿರುತ್ತದೆ. ಹೀಗಾಗಿ ಅನಿವಾರ್ಯ ನೀರಿನ ಬಿಕ್ಕಟ್ಟನ್ನು ನಿಭಾಯಿಸಲು ಸಿಂಗಾಪುರದ ನೀರಿನ ಏಜೆನ್ಸಿಯು ದೇಶದ ನೀರಿನ ಕೊರತೆಯ ಬಗ್ಗೆ ಜಾಗೃತಿ ಮೂಡಿಸಲು ಈ ಪಾನೀಯವನ್ನು ಪ್ರಾರಂಭಿಸಲಾಗಿದೆ ಎಂದು ಉತ್ಪಾದನಾ ಸಂಸ್ಥೆ ತಿಳಿಸಿದೆ.
ಕೊಳತೆ ನೀರು, ಮೂತ್ರದಿಂದ ಬಿಯರ್ ತಯಾರಿಕೆ ಹೇಗೆ ?
ನ್ಯೂಬ್ರೂ ಎನ್ನುವುದು ಸಿಂಗಾಪುರ ನೀರು ಸರಬರಾಜ ಮಂಡಳಿಯು ಶುದ್ಧೀಕರಿಸಿ, ಸೋಸಿ, ಪೂರೈಕೆ ಮಾಡಿರುವ ಶುದ್ಧ ನೀರಿನಲ್ಲಿ ಉತ್ಪಾದಿಸಿದ ಬಿಯರ್ ಆಗಿದೆ. ಈ ಬಿಯರ್ ಉತ್ಪಾದನೆಗಾಗಿ ಪೂರೈಕೆ ಆಗುವ ಹೊಸ ನೀರನ್ನು ಕಟ್ಟುನಿಟ್ಟಾದ ಪರೀಕ್ಷಿಸಿ, ಹಲವು ಹಂತಗಳಲ್ಲಿ ಶೋಧಿಸಿ, ಕುಡಿಯುವುದಕ್ಕೆ ಸುರಕ್ಷಿತವಾಗಿದೆಯೇ ಎಂಬುದನ್ನು ಮೊದಲು ಖಾತ್ರಿಪಡಿಸಿಕೊಳ್ಳಲಾಗುತ್ತದೆ.
ಅಲ್ಕೋಹಾಲ್ ಸೇವನೆಯಿಂದ ಬೊಜ್ಜು ಬರುತ್ತಾ ? ಹೊಸ ಅಧ್ಯಯನದಲ್ಲೇನಿದೆ
ದಿ ಸ್ಟ್ರೈಟ್ಸ್ ಟೈಮ್ಸ್ ವರದಿ ಪ್ರಕಾರ, ಸಿಂಗಾಪುರ ಇಂಟರ್ ನ್ಯಾಷನಲ್ ವಾಟರ್ ವೀಕ್ (SIWW) ಜೊತೆಗೆ ನ್ಯೂಬ್ರೂ ಅನ್ನು ಕಳೆದ ತಿಂಗಳು ರಾಷ್ಟ್ರೀಯ ವಾಟರ್ ಏಜೆನ್ಸಿ PUB ಮತ್ತು ಸ್ಥಳೀಯ ಕ್ರಾಫ್ಟ್ ಬಿಯರ್ ಬ್ರೂವರಿ ಬ್ರೂವರ್ಕ್ಜ್ ಪ್ರಾರಂಭಿಸಿತು. BBC ವರದಿಯ ಪ್ರಕಾರ, ಒಳಚರಂಡಿಯಿಂದ ಮರುಬಳಕೆ ಮಾಡುವ ದ್ರವವನ್ನು ಶುದ್ಧೀಕರಿಸಿ, ಸೋಸಿ (ಫಿಲ್ಟರ್) ಉತ್ಪಾದನೆಗೆ ಬಳಸಿಕೊಳ್ಳಲಾಗುತ್ತದೆ. ಇಂಡಿಪೆಂಡೆಂಟ್ ವರದಿ ಪ್ರಕಾರ, ಕೊಳಚೆನೀರನ್ನು "ಅಲ್ಟ್ರಾ-ಕ್ಲೀನ್" ನೀರಾಗಿ ಸಂಸ್ಕರಿಸಲಾಗುತ್ತದೆ, ಮೊದಲು ಉಷ್ಣವಲಯದ ಹೊಂಬಣ್ಣದ ಏಲ್‌ನ ಶೇ. 95 ಪ್ರತಿಶತವನ್ನು ತಯಾರಿಸಲು ಬಳಸಲಾಗುತ್ತದೆ.
ಬಿಯರ್ ಅನ್ನು ಮೂತ್ರದಿಂದ ಹಲವಾರು ಶುದ್ಧೀಕರಣ ಪ್ರಕ್ರಿಯೆಗಳ ಮೂಲಕ ತಯಾರಿಸಲಾಗುತ್ತದೆ. ಜಗತ್ತಿನಲ್ಲಿ ಹೆಚ್ಚುತ್ತಿರುವ ಸಿಹಿನೀರಿನ ಕೊರತೆಯ ಬಗ್ಗೆ ಜನರಿಗೆ ಶಿಕ್ಷಣ ನೀಡಲು ಈ ಕಲ್ಪನೆಯು ಒಳ್ಳೆಯದು ಎಂದು ಅಧಿಕಾರಿಗಳು ಹೇಳುತ್ತಾರೆ. ಈಗ ಬಾರ್ ಮತ್ತು ಮದ್ಯದ ಅಂಗಡಿಗಳಲ್ಲಿ ಮೂತ್ರ ಬಿಯರ್ ಲಭ್ಯವಿದೆ.