Asianet Suvarna News Asianet Suvarna News

113 ವರ್ಷ ಪೂರೈಸಿ ಗಿನ್ನೀಸ್ ದಾಖಲೆ: ಆರೋಗ್ಯದ ಗುಟ್ಟು ರಟ್ಟು!

ಸಂಸ್ಕೃತದಲ್ಲಿ(Sanskrit) ಒಂದು ಶ್ಲೋಕವಿದೆ(Chant) "ಶತಮಾನಂ ಭವತಿ ಶತಾಯುಃ ಪುರುಷಃ ಶತೇಂದ್ರಿಯ ಆಯುಷ್ಯೆವೇಂದ್ರಿಯೆಃ ಪ್ರತಿತಿಷ್ಠತಿ". ಈಗಿನ ಕಾಲದಲ್ಲಿ 40 ವರ್ಷ ದಾಟೋದೆ ಕಷ್ಟವಿರುವಾಗ ಇಲ್ಲೊಬ್ಬ ಅಜ್ಜ ಬರೋಬ್ಬರಿ 113 ವರ್ಷ ಪೂರೈಸಿ ಇನ್ನೂ ಬದುಕಿದ್ದಾರೆ. 4 ಜನರೇಷನ್(Generation) ಮೊಮ್ಮಕ್ಕಳನ್ನು(Gransons) ನೋಡಿರುವ ಇವರು ಮೊನ್ನೆಯಷ್ಟೆ ಕುಟುಂಬದವರ(Family) ಜೊತೆ ಬರ್ಥಡೇ(Birthday) ಆಚರಿಸಿಕೊಂಡು ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ( World’s Oldest Person) ಎಂದು ಗಿನ್ನೀಸ್ ದಾಖಲೆ(Guinness Record) ಮಾಡಿದ್ದಾರೆ. ಅಷ್ಟಕ್ಕು ಇಷ್ಟು ವರ್ಷ ಬದುಕಿರುವ ಈ ಅಜ್ಜಯ್ಯನ ಆರೋಗ್ಯದ(Health) ಗುಟ್ಟೇನು ಗೊತ್ತಾ? ಕೇಳಿದ್ರೆ ನಿಬ್ಬೆರಗಾಗುತ್ತೀರಿ. ನೀವು ತಿಳಿಯಬೇಕಾದರೆ ಈ ಸ್ಟೋರಿ ಓದಿ. 

Man celebrated 113 years birthday secret of long life and health
Author
Bangalore, First Published May 31, 2022, 12:19 PM IST

ಲಿಮಿಟೇಷನ್(Limitation) ಎನ್ನುವುದು ಬಹಳ ಮುಖ್ಯ. ಅದು ಆರೋಗ್ಯದಿಂದ ಹಿಡಿದು ಬದುಕಿನ ಯಾವುದೇ ವಿಷಯದಲ್ಲಿರಬಹುದು. ಲಿಮಿಟ್‌ನಲ್ಲಿದ್ದರೆ ಬದುಕು ಉತ್ತಮವಾಗಿರುತ್ತೆ. ಬದುಕು ಎಂದಾಕ್ಷಣ ಎಷ್ಟು ವರ್ಷ ಬದುಕುವೆವು ಎಂದು ಸಾಮನ್ಯವಾಗಿ ಎಲ್ಲರೂ ಕೇಳುತ್ತಾರೆ.

ಎಷ್ಟು ವರ್ಷ ಬದುಕಬಹುದು ಎಂಬುದಕ್ಕಿಂತ, ಹೀಗೆ ಬದುಕಿದರೆ ಎಷ್ಟು ವರ್ಷಬೇಕಾದರೂ ಬದುಕಬಹುದು ಎಂಬುದು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಹೆಚ್ಚಾಗಿ ಯೋಚಿಸಿದರೆ (Thinking) ಅದರಾಳ ತಿಳಿಯುತ್ತೆ. ಎಲ್ಲವೂ ನಮ್ಮ ಕೈನಲ್ಲಿರುವಾಗ ಆಳ ತಿಳಿಯುವ ಗೋಜಿಗೆ ಈಗಿನ ಕಾಲದಲ್ಲಿ ಯಾರು ಹೋಗ್ತಾರೆ ಹೇಳಿ. ಇದಕ್ಕೆ ನಾವು ಜೀವನದಲ್ಲಿ ಹೇಗಿದ್ದೇವೆ, ಯಾವ ರೀತಿಯ ಆಹಾರ ತೆಗೆದುಕೊಳ್ಳುತ್ತಿದ್ದೇವೆ, ನಮ್ಮ ದಿನದ ರೋಟೀನ್ (Routine), ಬ್ಯುಸಿ ಶೆಡ್ಯುಲ್(Busy schedule), ಅಡಿಕ್ಷನ್ (Addiction) ಎಲ್ಲವೂ ಮ್ಯಾಟರ್ ಆಗುತ್ತೆ. ಹೆಚ್ಚಿನ ವರ್ಷ ಬದುಕಬೇಕು ಎಂಬುದು ನಿಮ್ಮ ಮನಸ್ಸಿನಲ್ಲಿದೆಯೇ, ಬಂದಿಲ್ಲವೆAದರೆ ಇಲ್ಲೊಬ್ಬರ ಶತಾಯುಷಿ(Centurion) ಇದ್ದಾರೆ. ಅವರ ಶತಾಯುಷಿಯ ಗುಟ್ಟು ತಿಳಿದರೆ ಬಬ್ಬರೆ! ಎಂದು ಬಾಯಿಮೇಲೆ ಬೊಟ್ಟಿಟ್ಟುಕೊಳ್ಳುವಿರಿ. ಇಷ್ಟು ವರ್ಷ ಬದುಕಿಯೇ ಅವರು ವರ್ಲ್ಡ್ ಗಿನ್ನೀಸ್ ದಾಖಲೆ(World Guiness Record) ಮಾಡಿದ್ದಾರೆಂದ ಮೇಲೆ ನಮಗೇಕೆ ಸಾಧ್ಯವಿಲ್ಲ. ಈ ಬಗ್ಗೆ ಡೀಟೇಲ್ಸ್ ಇಲ್ಲದೆ ಓದಿ.

ಲಿಮಿಟ್(Limit) ಇದ್ರೆ ನಮ್ಮ ವಯಸ್ಸು ಅನ್‌ಲಿಮಿಟೆಡ್(Unlimited) ಆಗುತ್ತೆ. ತಿನ್ನುವ ಆಹಾರದಿಂದ ಹಿಡಿದು ಎಲ್ಲವೂ ಲಿಮಿಟ್‌ನಲ್ಲಿದ್ದರೆ ಗಿನ್ನಿಸ್ ದಾಖಲೆ ಮಾಡಬಹುದು ಎಂದು ಇಲ್ಲೊಬ್ಬ ಅಜ್ಜ ತಿಳಿಸಿಕೊಟ್ಟಿದ್ದಾರೆ. ಇವರು ವಿಶ್ವದಲ್ಲಿ ಬದುಕಿರುವ ಅತ್ಯಂತ ಹಿರಿಯ ವ್ಯಕ್ತಿ ಎಂದು ಗಿನ್ನಿಸ್ ದಾಖಲೆ ಮಾಡಿದ್ದಾರೆ. 

40 ವರ್ಷಗಳ ಬಳಿಕ ಕನ್ನಡತಿಗೆ ಮನ್ನಣೆ: ಶಕುಂತಲಾ ದೇವಿ ಸಾಧನೆ ಗಿನ್ನೆಸ್‌ಗೆ ಸೇರ್ಪಡೆ!

ನೋಡಲು ಗಟ್ಟಿಮುಟ್ಟಾಗಿರುವ "ಜುವಾನ್ ವಿಸೆಂಟೆ ಪೆರೆಜ್"((Juan Vicente Pérez) ಬದುಕಿಯೇ ಗಿನ್ನೀಸ್ ದಾಖಲೆ ಮಾಡಿರುವ ವ್ಯಕ್ತಿ. ವೆನೆಂಜುಲಾದ(Venezuela) ಈ ಅಜ್ಜನಿಗೆ ಮೊನ್ನೆ ಮೇ 27ಕ್ಕೆ 113ವರ್ಷ ಪೂರೈಸಿದೆ. ಹಾಗಾಗಿ ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ ಎಂದು ದಾಖಲೆ(Record) ನಿರ್ಮಿಸಿದ್ದಾರೆ. ಈ ಮೂಲಕ 112 ವರ್ಷ 341ದಿನ ಬದುಕಿದ್ದ ಸ್ಪೇನ್‌ನ(Spain) ಸ್ಯಾಟನಿನೊ ಡೆ ಲಾ ಫ್ಯೂಯೆಂಟರ ಗಾರ್ಸಿಯಾ(Aturnino De La Fuente Garcia) ಅವರ ದಾಖಲೆ ಮುರಿದಿದ್ದಾರೆ. ಗಾಸಿಯಾ ಅವರು ಕಳೆದ ಫೆಬ್ರವರಿಯಲ್ಲಿ(February) ನಿಧನರಾಗಿದ್ದಾರೆ. 
 
ಜುವಾನ್ ಅಜ್ಜ ಜನಿಸಿದ್ದು ಮೇ 27 1909ರಂದು ವೆನೆಂಜುಲಾದ ತಾಚಿರ್‌ನಲ್ಲಿ(Tachira). 10 ಜನ ಮಕ್ಕಳಲ್ಲಿ(Children's) ಒಂಭತ್ತನೆಯವರಾದ ಇವರು 4 ಜನರೇಷನ್(Generation) ನೋಡಿದ್ದಾರೆ. ಅಬ್ಬಾ! ಎಂದು ಆಶ್ಚರ್ಯವಾಗಬಹುದು ಆದರೆ ಇದು ಸತ್ಯ. ಈ ಶತಾಯುಶಿಗೆ 41 ಜನ ಮೊಮ್ಮಕ್ಕಳು(Grand Childrens), 18 ಜನ ಮಿಮ್ಮಕ್ಕಳು(Grand Grand Children) ಹಾಗೂ 12 ಜನ ಮರಿ ಮೊಮ್ಮಕ್ಕಳು(Grand grand grand children) ಇದ್ದಾರೆ ಎಂದು ಗಿನ್ನೀಸ್ ದಾಖಲೆಯಲ್ಲಿ ತಿಳಿಸಿದೆ.  ಈ ಶತಾಯುಷಿಗೆ ಮೊನ್ನೆ ನಡೆದ ಹುಟ್ಟು ಹಬ್ಬದ ಸಂಭ್ರಮದಲ್ಲಿ(Birthday Party) ಕುಟುಂಬುದವರು(Family), ಸ್ನೇಹಿತರೆಲ್ಲಾ(Friends) ಸೇರಿ ಬರ್ತಡೇಯನ್ನು ಸಂಭ್ರಮಿಸಿದ್ದಾರೆ. 

ಜುವಾನ್ ಬಾಲ್ಯ 
ಜುವಾನ್ ಅವರ ಪೋಷಕರಿಗೆ 10 ಜನ ಮಕ್ಕಳಲ್ಲಿ ಒಂಭತ್ತನೆಯವರಾಗಿ ಜನಿಸಿದ್ದರು. ಕಬ್ಬಿನ ಗದ್ದೆ(Sugarcane) ಹಾಗೂ ಕಾಫೀ ತೋಟ(Coffee farm) ಇವರ ತಂದೆಯ ಕಾಯಕವಾಗಿತ್ತು. ಸುಮಾರು 10 ನೇ ವರ್ಷಕ್ಕೆ ಶಿಕ್ಷಣ(Education) ಆರಂಭಿಸಿದ ಇವರಿಗೆ ಹೆಚ್ಚು ಕಾಲ ಮುಂದುವರೆಯಲಾಗಲಿಲ್ಲ. ಇವರ ಟೀಚರ್(Teacher) ನಿಧನದ ನಂತರ ಶಿಕ್ಷಣ ಅರ್ಧಕ್ಕೆ ನಿಂತಿತು. 

ವೃತ್ತಿ ಜೀವನ
ಶಿಕ್ಷಣ ಅರ್ಧಕ್ಕೆ ಮೊಟುಕಾದರೂ ಈ ಶತಾಯುಷಿ ಓದಲು ಬರೆಯಲು ಕಲಿತಿದ್ದರು. ಹಾಗಾಗಿ 1940ರಲ್ಲಿ ಸುಬರ್ಬನಲ್ಲಿ(Subarb) ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲಿ ಸುಮಾರು ವರ್ಷಗಳ ಕಾಲ ಕುಟುಂಬ( ಹಾಗೂ ಭೂಮಿಯ ಕುರಿತಾದ ವಿವಾದಗಳನ್ನು ಪರಿಹರಿಸುತ್ತಿದ್ದರು. ಆದರೆ ಬಾಲ್ಯದಿಂದಲೂ ಕೃಷಿಯಲ್ಲಿ(Agriculture) ಪೋಷಕರೊಂದಿಗೆ ತೊಡಗಿಸಿಕೊಂಡಿದ್ದರಿAದ ಇನ್ನೂ ಕೃಷಿ ಕಾಯಕ ಮುಂದುವರೆಸಿಕೊAಡು ಬಂದಿದ್ದಾರೆ.

ವಿಶಿಷ್ಠ ಗಿನ್ನೆಸ್‌ ದಾಖಲೆ : ಆಕಾಶದೆತ್ತರದಲ್ಲಿ ಹಗ್ಗದ ಮೇಲೆ ನಡೆದ ಯುವಕ

ಶತಾಯುಷಿಯ ಆರೋಗ್ಯದ ಗುಟ್ಟು
100 ದಾಟಿದರೂ ಗಟ್ಟಿಮುಟ್ಟಾಗಿರುವ ಜುವಾನ್‌ಗೆ ವಯೋ ಸಹಜ ಖಾಯಿಲೆಗಳಿವೆ ಬಿಟ್ಟರೆ ಬೇರೇನೂ ಇಲ್ಲ. ಹೌದು ಈಗಿನ ಯುವ ಜನತೆಗೆ ಏನೆಲ್ಲಾ ಖಾಯಿಲೆಗಳು ಅಂಟಿಸಿಕೊಳ್ಳುತ್ತಿದ್ದಾರೆ. ಆದರೆ ಈ ಅಜ್ಜ ರೋಲ್ ಮಾಡೆಲ್ಲಾಗಿದ್ದಾರೆ(Role Model). ಬಿಪಿ(Blood Pleasure) ಹಾಗೂ ಹೃದಯದ(Cardiac) ಸಮಸ್ಯೆ ಇದ್ದು ಬೇರಿನ್ಯಾವ ಖಾಯಿಲೆಯೂ ಇಲ್ಲ. ಇವರ ಡಾಕ್ಟರ್(Doctor) ಹೇಳುವ ಪ್ರಕಾರ ಇವರ ಆರೋಗ್ಯ ಫಸ್ಟ್ ಕ್ಲಾಸ್ ಆಗಿದ್ದು, ಯಾವ ಮೆಡಿಸಿನ್ ಜುವಾನ್‌ಗೆ ಅಗತ್ಯವಿಲ್ಲ ಎನ್ನುತ್ತಾರೆ. 

ಶತಾಯುಷಿಯ ಸೀಕ್ರೆಟ್ ಕೇಳಿದ್ರೆ ಶಾಕ್
ಶತಮಾನಗಳಷ್ಟು ಬದುಕು ನಡೆಸುವುದು ಕಷ್ಟ.  ಅಲ್ಪಾವಧಿಗೆ ಮರಣಹೊಂದುವ ಈಗಿನ ಕಾಲದಲ್ಲಿ ಈ ಅಜ್ಜ ಇಷ್ಟು ವರ್ಷ ಬದುಕು ಹೇಗೆ ಸವೆಸಿದರು? ಆರೋಗ್ಯದ ಗುಟ್ಟಿನ(Secret) ಬಗ್ಗೆ ಕೇಳಿದಾಗ ಶಾಕ್ ಆಯಿತು. ಅವರು ಹೇಳಿದ್ದು ಹೀಗೆ "ಚೆನ್ನಾಗಿ ಕೆಲಸ ಮಾಡುವುದು(Work Hard), ರಜೆಯಲ್ಲಿ ಮಜ ಮಾಡಿಕೊಂಡು ವಿಶ್ರಾಂತಿ(Rest) ಪಡೆಯುವುದು, ರಾತ್ರಿ ಬೇಗ ಮಲಗುವುದು(Early Sleep), ಪ್ರತಿ ದಿನ ಒಂದು ಲೋಟ ಅಗ್ಯಾರ್ಡಿಯಂಟ್(Alcohol)) ಅನ್ನು ಕುಡಿಯುವುದು, ದೇವರನ್ನು ಪ್ರೀತಿಸುವುದು(Love God) ಹಾಗೂ ಆತನನ್ನು ಮನಸ್ಸಿನಲ್ಲಿ ಯಾವಾಗಲೂ ಪೂಜಿಸುವುದು" ಎಂದು ತಿಳಿಸಿದರು.

Follow Us:
Download App:
  • android
  • ios