ನೀವು ಪ್ರೆಗ್ನೆಂಟ್ ಅಂತ ಗೊತ್ತಾಗಿದ್ದು ಯಾವಾಗ?

When you realized you are conceived
Highlights

ಹೆಣ್ಣಿಗೆ ತಾಯಿಯಾಗುವುದೆಂದರೆ ಎಲ್ಲಿಲ್ಲದ ಸಂಭ್ರಮ. ಆದರೆ, ಕೆಲವರಿಗೆ ಅದೋ ನೋವು. ಇನ್ನಷ್ಟು ದಿನ ಬಿಟ್ಟು ಕನ್ಸೀವ್ ಆಗಿದ್ದರೆ ಚೆನ್ನಾಗಿರುತ್ತಿತ್ತು ಎನ್ನುವ ಭಾವ. ಒಟ್ಟಿನಲ್ಲಿ ಮಡಲಿನಲ್ಲಿ ಕುಡಿಯೊಂದು ಚಿಗರೊಡೆಯುತ್ತಿದೆ ಎಂದು ಗೊತ್ತಾಗಿದ್ದು ಯಾವಾಗ? ಆಗ ಮನದಲ್ಲಿ ಬಂದ ಭಾವನೆಗಳೇನು? ಇಲ್ಲಿದೆ ಕೆಲವರ ಅಭಿಪ್ರಾಯಗಳು...

ಫಸ್ಟ್ ಟೈಂ ನಾನು ಪ್ರೆಗ್ನೆಂಟ್ ಆಗಿರಬಹುದೇನೋ ಅನ್ನೋ ಅನುಮಾನ ನಿಮಗೆ ಬಂದಿದ್ದು ಯಾವಾಗ? 

ಹೀಗೆ ಕೇಳಿದರೆ ಒಬ್ಬೊಬ್ಬರದು ಒಂದೊಂದು ಬಗೆಯ ಅನುಭವ. ವಿಚಿತ್ರ ಏನು ಗೊತ್ತಾ? 2,500 ಗರ್ಭಿಣಿಯರಲ್ಲಿ ಒಬ್ಬರಿಗೆ ತಾವು ಗರ್ಭ ಧರಿಸಿದ್ದೇವೆ ಅಂತ ಗೊತ್ತಾಗೋದು ಹೆರಿಗೆ ನೋವು ಶುರುವಾದಲೇ ಅಂತೆ! ಪೀರಿಯಡ್ಸ್ ಸ್ಟಾಪ್ ಆಗ್ಲಿಲ್ವಾ? ಅನ್ನೋ ಪ್ರಶ್ನೆ ಬರಬಹುದು, ಆದರೆ ಕೆಲವು ಗರ್ಭಿಣಿಯರಿಗೆ ತಿಂಗಳು ತಿಂಗಳು ಕಡಿಮೆ ಪ್ರಮಾಣದಲ್ಲಿ ಋತುಸ್ರಾವ ಆಗುತ್ತಂತೆ. ಇಲ್ಲಿ ಪ್ರೆಗ್ನೆನ್ಸಿ ಬಗ್ಗೆ ಮೊದಲ ಸಲ ಅನುಮಾನ ಬಂದ ಮೂವರ ಅನುಭವಗಳಿವೆ.
ಗರ್ಭಿಣಿಯರ ಆಹಾರ ಪಟ್ಟಿಯಲ್ಲಿ ಏನಿರಬೇಕು?
ಅವತ್ತಿಂದ ಗ್ರೀನ್ ಟೀ ಕುಡಿದಿಲ್ಲ ನೋಡಿ!
ಅವತ್ತು ಮನೆಯಲ್ಲಿ ಪಾರ್ಟಿ. ಗೆಳೆಯರೆಲ್ಲ ಒಟ್ಟಿಗೆ ಸೇರುವವರಿದ್ದರು. ಬೆಳಗ್ಗಿನಿಂದಲೇ ಪಾರ್ಟಿ ಪ್ರಿಪರೇಶನ್‌ನಲ್ಲಿದ್ದೆ. ಫ್ರೆಂಡ್ಸ್ ಜೊತೆಗೆ ಹರಟೆ ಹೊಡೆಯುತ್ತ ಕೇಕ್, ತಿಂಡಿ, ಜ್ಯೂಸ್, ಎಲ್ಲ ರೆಡಿ ಮಾಡ್ಕೊಂಡು ತಿಂದ್ಕೊಂಡು ಮಜಾ ಮಾಡ್ತಿದ್ವಿ, ಹಾಗೆ ಗ್ರೀನ್ ಟೀ ರೆಡಿ ಮಾಡ್ಕೊಂಡು ಇನ್ನೇನು ಒಂದು ಸಿಪ್ ಕುಡೀಬೇಕು, ಅಷ್ಟರಲ್ಲಿ ಬಂತು ನೋಡಿ ಬವಳಿ. ಬಾಯಿಗೆ ಕೈ ಅಡ್ಡ ಹಿಡ್ಕೊಂಡು ಬಾತ್‌ರೂಂಗೆ ಒಂದೇ ಓಟ .. ಈಗ ನನ್ನ ಪಾಪುಗೆ ೩ ವರ್ಷ. ಆದ್ರೆ ಅವತ್ತೇ  ಲಾಸ್ಟ್, ಇಲ್ಲಿಯವರೆಗೆ ಗ್ರೀನ್ ಟೀ ಕುಡಿದಿಲ್ಲ.
ಮದುವೆಗೂ ಮುನ್ನವೇ ಗರ್ಭಿಣಿಯಾದ ನಟಿಯರಿವರು
ಓಡ್ತಾ ಇದ್ದೆ, ಉಸಿರು ಕಟ್ಟಿದ ಹಾಗಾಯ್ತು!
ನಾನು ನನ್ನ ಗಂಡ ಅಥ್ಲೆಟ್‌ಗಳಿಗೆ ಟ್ರೈನಿಂಗ್ ಕೊಡ್ತೀವಿ. ಬೆಳಗ್ಗಿಂದ ಸಂಜೆಯವರೆಗೂ ಗ್ರೌಂಡ್‌ನಲ್ಲಿ ಓಟ. ಆದರೆ ಅವತ್ತು ಬೆಳಗ್ಗೆ ಎರಡನೇ ರೌಂಡ್ ಓಡುವಾಗಲೇ ಉಸಿರಾಡಲು ಕಷ್ಟಪಡುವಂತಾಯ್ತು. ಮುಂದೆ ಓಡಲಾಗ್ತಿಲ್ಲ. ಬಹಳ ಕೇರಿಂಗ್ ಆಗಿರೋ ಗಂಡ ವಿಚಾರಿಸಿದ, ‘ಹುಷಾರಿದ್ದೀಯ ತಾನೆ? ಏನಾದ್ರೂ ಸಮಸ್ಯೆನಾ?’ ಅಂತ. ನನ್ನ ಸಮಸ್ಯೆ ಹೇಳಿದೆ. ಬೇರೆಯವರಿಗೆ ಜವಾಬ್ದಾರಿ ಹೊರಿಸಿ ನಾವಿಬ್ಬರೂ ಮನೆಗೆ ಬಂದೆವು, ನನಗೆ ಅಸ್ತಮಾ ಶುರುವಾಗಿರಬಹುದಾ? ಅಂತನಿಸಿ ಆತಂಕವಾಯ್ತು.
ಇದೇ ಸಮಯದಲ್ಲಿ ಫ್ರೆಂಡ್ ಫೋನ್ ಬಂತು. ಅವಳಿಗೂ ನನ್ನ ಸಮಸ್ಯೆ ಹೇಳಿದೆ, ‘ನೀನೊಮ್ಮೆ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸು, ಗರ್ಭಿಣಿಯಾಗಿದ್ರೆ ಈ ಸಮಸ್ಯೆ ಬರುತ್ತೆ’ ಅಂದ್ಲು. ಚೆಕ್ ಮಾಡಿದಾಗ ರಿಸಲ್ಟ್ ಪಾಸಿಟಿವ್ ಆಗಿತ್ತು.
ಮೀನು ಸೇವನೆ ಲೈಂಗಿಕ ಸಾಮರ್ಥ್ಯ ಹೆಚ್ಚಿಸುತ್ತೆ
ಜೋರಾಗಿ ಅತ್ತುಬಿಟ್ಟೆ!
ಅಲ್ಲಿಯವರೆಗೆ ಹಾಗಾಗಿರಲಿಲ್ಲ. ಹೊಟ್ಟೆಯೊಳಗೆ ಸಂಕಟ, ಕೈ ಕಾಲಿನ ಶಕ್ತಿ ಸೋರಿ ಹೋದಂತೆ ಅನುಭವ. ಆಫೀಸ್‌ನಲ್ಲಿದ್ದೆ, ಮಧ್ಯಾಹ್ನದ ಹೊತ್ತಾಗಿತ್ತು. ಬಹುಶಃ
ಅವತ್ತು ಮಧ್ಯಾಹ್ನದ ಊಟ ಸರಿಹೋಗಿರಲಿಕ್ಕಿಲ್ಲ, ಎಲ್ಲೋ ಗ್ಯಾಸ್ಟ್ರಿಕ್ ಆಗಿರಬೇಕು ಅಂದುಕೊಂಡು ಸುಮ್ಮನಾದೆ. ಆದ್ರೂ ಸಣ್ಣ ಅನುಮಾನ, ಆತಂಕದಲ್ಲೇ  ಪ್ರೆಗ್ನೆನ್ಸಿ ಚೆಕ್ ಮಾಡಿದೆ, ಪಾಸಿಟಿವ್ ರಿಸಲ್ಟ್ ಬಂತು. ನಂಗೆ ಕಣ್ತುಂಬ ನೀರು, ಕಂಟ್ರೋಲ್ ಮಾಡಲಿಕ್ಕೇ ಆಗ್ತಿಲ್ಲ. ನಾನಿನ್ನೂ ಪ್ರೆಗ್ನೆನ್ಸಿಗೆ ಪ್ರಿಪೇರ್ ಆಗಿರಲಿಲ್ಲ. ಮಕ್ಕಳ ಬಗ್ಗೆ ಅಂಥ ಪ್ರೀತಿಯೇನೂ ಇರಲಿಲ್ಲ. ಆ ಜವಾಬ್ದಾರಿ ಹೊರುವ ಮನಸ್ಸೂ ಇರಲಿಲ್ಲ. ಯಾರ ಮಾತನ್ನೂ ಕೇಳದೇ ಅಬಾರ್ಶನ್ ಮಾಡಿಸಿಕೊಳ್ಳಲು ಹೋದೆ. ಡಾಕ್ಟರ್ ಕೂರಿಸಿಕೊಂಡು ಪ್ರೀತಿಯಿಂದ ತಿಳಿ ಹೇಳಿದರು. ಇವತ್ತು ನಮ್ಮ ಪಾಪುಗೆ ನಾಲ್ಕು ವರ್ಷ. ಈಗಲೂ ಆ ಘಟನೆ ನೆನಪಾಗುತ್ತೆ. ಏನಾದ್ರೂ ಅಬಾರ್ಶನ್ ಮಾಡಿಸ್ಕೊಂಡಿದ್ರೆ ಇಷ್ಟು ಮುದ್ದು ಮಗಳನ್ನು ಮಿಸ್ ಮಾಡ್ಕೊಳ್ತಿದ್ನಲಾ ಅನಿಸಿ ಬೇಸರ, ಖುಷಿ ಒಟ್ಟಿಗೇ ಆಗುತ್ತೆ.

ಮತ್ತು ತರಿಸುವ ಮುತ್ತು ಆರೋಗ್ಯಕ್ಕೂ ಕುತ್ತು

loader