ಮದುವೆಗೂ ಮುನ್ನವೇ ಗರ್ಭಿಣಿಯಾದ ನಟಿಯರಿವರು

Bollywood heroins conceived before marriage
Highlights

ಸೌಂದರ್ಯದ ಖನಿಯಾಗಿರುವ ತಾರೆಯರನ್ನು ಥಟ್ಟನೆ ನೋಡಿದಾಗ ಅಭಿಮಾನ ಉಕ್ಕೇರುತ್ತದೆ. ಅವರ ವೈಯಕ್ತಿಕ ಜೀವನದ ಬಗ್ಗೆ ವಿಪರೀತ ಕುತೂಹಲಿಗಳಾಗುವುದು ಸಹಜ. ಅವುಗಳಲ್ಲಿ ಕೆಲವೊಂದು ವಿಷಯಗಳಿಗೆ ಬೆಕ್ಕಸ ಬೆರಗಾಗುತ್ತೇವೆ. ಇವರಲ್ಲಿ ಅನೇಕರು ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದರೆಂಬುವುದೂ ಒಂದು. ಮಗು ಹುಟ್ಟುವ ಮುನ್ನ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ

ಆ ಸಾಲಿಗೆ ಸೇರುವ ನಟಿಯರು ಇವರು.

 

ಶ್ರಿದೇವಿ 

ಬಾಲಿವುಡ್ ಸೂಪರ್ ಸ್ಟಾರ್ ಶ್ರೀದೇವಿಗೆ ಏಳು ತಿಂಗಳಾಗಿದ್ದಾಗ ಬೋನಿ ಕಪೂರ್ ಅವರನ್ನು ವರಿಸಿದರು. ಮದುವೆಯಾದ ಎರಡ್ಮೂರು ತಿಂಗಳಲ್ಲಿ ಜಾಹ್ನವಿ ಹುಟ್ಟಿದಳು.

 

ಕೊಂಕಣಾ ಸೇನ್ ಶರ್ಮಾ

ಮೂರು ತಿಂಗಳ ಗರ್ಭಿಣಿಯಾದಾಗ ಬ್ಲ್ಯಾಕ್ ಬ್ಯೂಟಿ ಕೊಂಕಣಾ ಸೇನ್ ರಣ್ವೀರ್ ಶೌರಿಯನ್ನು ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಸರಳವಾಗಿ ವರಿಸಿದರು.

 

ಸಾರಿಕಾ 

ಶೃತಿ ಹಾಸನ್ ಇನ್ನೇನು ಹುಟ್ಟಬೇಕೆನ್ನುವಾಗ ಸಾರಿಕಾ, ತಮಿಳು ಸೂಪರ್ ಸ್ಟಾರ್ ಕಮಲ್ ಹಾಸನ್ ಅವರೊಂದಿಗೆ ಸಪ್ತಪದಿ ತುಳಿದರು.

 

ಸೆಲಿನಾ ಜೇಟ್ಲಿ

ಪೀಟರ್ ಹ್ಯಾಗ್‌ ಅವರನ್ನು ವರಿಸುವ ಮುನ್ನ ಸೆಲಿನಾ ಗರ್ಭದಲ್ಲಿ ಅವಳಿ ಮಕ್ಕಳಿದ್ದವು. ಮದುವೆಯಾದ ಎಂಟು ತಿಂಗಳಲ್ಲಿಯೇ ಮಕ್ಕಳಿಗೆ ಜನ್ಮ ನೀಡಿದ ಸೆಲಿನಾ, ಮತ್ತೆ ಕೆಲವು ವರ್ಷಗಳ ನಂತರವೂ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು ವಿಶೇಷ. 

 

ಮಹಿಮಾ ಚೌಧರಿ

ಬಾಬಿ ಮುಖರ್ಜಿ ಅವರನ್ನು ವರಿಸುವ ಮುನ್ನವೇ 'ಪರದೇಸಿ' ಬೆಡಗಿ ಮಹಿಮಾ ಕನ್ಸೀವ್ ಆಗಿದ್ದರು. 

 

ಅಮೃತಾ ಆರೋರಾ

ಉದ್ಯಮಿ ಶಕೀಲ್ ಲಡಕ್‌ ಅವರನ್ನು ಮದುವೆಯಾಗುವುದಾಗಿ ಅಮೃತಾ ಅರೋರಾ ದಿಢೀರ್ ಘೋಷಿಸಿದಾಗ, ಗೊತ್ತಾಗಿದ್ದು ಅವರು ಆಗಲೇ ತಾಯಿಯಾಗುತ್ತಿದ್ದಾರೆಂದು.

 

ನೀನಾ ಗುಪ್ತಾ

ವಿವಿಯನ್ ರಿಚರ್ಡ್ಸನ್ ಅವರೊಂದಿಗೆ ಬಾಲಿವುಡ್ ನಟಿ ನೀನಾ ಗುಪ್ತಾ ಅವರಿಗೆ ಪ್ರೀತಿ ಇದ್ದಿದ್ದು ಓಪನ್ ಸಿಕ್ರೇಟ್. ಇವರಿಬ್ಬರಿಗೆ ಮಸಾಬಾ ಎಂಬ ಮಗಳಿದ್ದಾಳೆ. ಆದರೆ, ರಿಚರ್ಡ್ಸನ್ ತಮ್ಮ ಮೊದಲನೆ ಪತ್ನಿಯೊಂದಿಗೇ ವಾಸವಿದ್ದು, ಸಿಂಗಲ್ ಪೇರೆಂಟ್ ಆಗಿಯೇ ನೀನಾ ಮಗಳನ್ನು ಬೆಳೆಸಿದ್ದಾಳೆ.

 

loader