Asianet Suvarna News Asianet Suvarna News

ಸೌಂದರ್ಯ ವರ್ಧಕ ಉತ್ಪನ್ನಗಳಿಗೆ ಯಾವಾಗ ಮುಕ್ತಿ ಕೊಡಬೇಕು?

ಲೈಫಲ್ಲಿ ಎಲ್ಲಕ್ಕೂ ಒಂದು ಕೊನೆ ಇರುವಂತೆ ಸೌಂದರ್ಯವರ್ಧಕಗಳ ಲೈಫಿಗೂ ಒಂದು ಕೊನೆ ಇರುತ್ತದೆ. ಹಾಲು, ಮೊಸರು ತರುವಾಗ ಎಕ್ಸ್‌ಪೈರಿ ಡೇಟ್ ಚೆಕ್ ಮಾಡುವಂತೆ ಸೌಂದರ್ಯವರ್ಧಕ ಸಾಮಗ್ರಿಗಳ ಎಕ್ಸ್‌ಪೈರೇಶನ್ ಅವಧಿಯನ್ನು ಕೂಡಾ ಆಗಾಗ ಚೆಕ್ ಮಾಡುತ್ತಿರಬೇಕು. ಹಳೆಯವಕ್ಕೆ ಗೇಟ್ ಪಾಸ್ ಕೊಡುತ್ತಿರಬೇಕು. 

when to toss out these 6 beauty products
Author
Bangalore, First Published Jul 8, 2019, 3:33 PM IST

ಸೌಂದರ್ಯದ ಬಗ್ಗೆ ವಿಪರೀತ ಕಾಳಜಿ ಉಳ್ಳವರು ನೀವಾಗಿದ್ದು, ಮೇಕಪ್ ನಿಮ್ಮಿಷ್ಟದ ಕೆಲಸಗಳಲ್ಲೊಂದಾಗಿದ್ದರೆ ಬಹುಷಃ ನಿಮ್ಮ ಮನೆಯ ಅಲ್ಮೆರಾದಲ್ಲಿ ಸೌಂದರ್ಯವರ್ಧಕಗಳು, ಮಾಯಿಶ್ಚರೈಸರ್, ಫೇಸ್‌ವಾಶ್, ಸೆಂಟ್ ಬಾಟಲ್‌‌ಗಳು, ವ್ಯಾಕ್ಸ್, ಫೇಶಿಯಲ್ ಇತರೆ ಕ್ರೀಮ್‌ಗಳು ಎರಡು ಬುಟ್ಟಿಯಲ್ಲಿ ತುಂಬಿಡುವಷ್ಟು ಇರಬಹುದು. ಹೆಚ್ಚಿನವರ ವ್ಯಾನಿಟಿ ಬ್ಯಾಗ್‌ಗಳಲ್ಲಿ ಬಹುಕಾಲದಿಂದ ಬಳಸದೆ ತೆಪ್ಪಗೆ ಕುಳಿತುಕೊಂಡ ಮೇಕಪ್ ಸಾಮಗ್ರಿಗಳು ಸಾಕಷ್ಟು ಸಿಗುತ್ತವೆ. ಆದರೆ, ಸೌಂದರ್ಯವರ್ಧಕಗಳ ಬಗ್ಗೆ ತಿಳಿದಿದ್ದರಷ್ಟೇ ಸಾಲದು, ಅವುಗಳ ಎಕ್ಸ್‌ಪೈರೇಶನ್ ಡೇಟ್ ಬಗ್ಗೆಯೂ ಅರಿವಿರಬೇಕು. ಇಲ್ಲದಿದ್ದರೆ ರೂಪಾಂತರವಾಗಲು ಹೋಗಿ ಅವಾಂತರ ಮಾಡಿಕೊಂಡು ಬಿಡುವ ಸಾಧ್ಯತೆಗಳಿವೆ. 

ಕೆಲವು ಮೇಕಪ್ ಪ್ರಾಡಕ್ಟ್‌ಗಳನ್ನು ನೋಡಿದರೆ ಅವುಗಳ ವಯಸ್ಸು ಮೀರಿದ್ದು ಅರಿವಿಗೆ ಬರಬಹುದು. ಮತ್ತೆ ಕೆಲವು ಎಕ್ಸ್‌ಪೈರಿ ಆಗಿದ್ದರೂ ಇನ್ನೂ ಹೊಸತರಂತಿರಬಹುದು. ಇದರಿಂದ ಬಳಸಿದರೆ ಏನಾಗಲ್ಲ, ಸುಮ್ಮನೆ ಎಸೆಯುವುದೇಕೆ ಎನಿಸಬಹುದು. ಆದರೆ ಅವಧಿ ಮೀರಿದ ಸೌಂದರ್ಯವರ್ಧಕಗಳ ಬಳಕೆಯಿಂದ ತುರಿಕೆ, ಗುಳ್ಳೆಗಳು, ಚರ್ಮ ಕೆಂಪಾಗುವುದು, ಉರಿ ಸೇರಿದಂತೆ ಹಲವು ಚರ್ಮ ಸಮಸ್ಯೆಗಳು ಬರಬಹುದು. ಇಲ್ಲಿ ಕೆಲ ಸೌಂದರ್ಯವರ್ಧಕಗಳ ಪಟ್ಟಿಯೂ ಅವುಗಳ ಬಾಳಿಕೆ ಅವಧಿಯ ಬಗ್ಗೆಯೂ ನೀಡಲಾಗಿದೆ. ಓದಿಕೊಂಡರೆ ಬಳಸುವಾಗ ಎಚ್ಚರಿಕೆ ವಹಿಸುತ್ತೀರಿ.

ವಿಗ್‌ನ ಕೋಮಲತೆ ಕಾಪಾಡುವುದು ಹೇಗೆ?

ಫೇಸ್ ಕ್ಲೆನ್ಸರ್ಸ್

ಬಹುತೇಕ ಫೇಸ್‌ವಾಶ್‌ಗಳ ಅವಧಿ ಗರಿಷ್ಠ 1 ವರ್ಷ. ಕೆಲವೊಮ್ಮೆ ಅವಧಿ ಮುಗಿಯುತ್ತಿದ್ದಂತೆಯೇ ಅವುಗಳು ಮುದ್ದೆಯಾಗುವುದು, ಬಣ್ಣ ಕಳೆದುಕೊಳ್ಳುವ ಮೂಲಕ ನಿಮ್ಮ ಗಮನ ಸೆಳೆಯಬಹುದು. ಇನ್ನೂ ಬಹುತೇಕ ಸಮಯ ನಿಮ್ಮ ಹಣೆಬರಹ ಎಂದು ತೆಪ್ಪಗಿರುತ್ತವೆ. ಹೀಗಾಗಿ, ವರ್ಷ ದಾಟುತ್ತಲೇ ಹಳೆಯ ಫೇಸ್‌ವಾಶ್‌ಗಳನ್ನು ಮುಲಾಜಿಲ್ಲದೆ ಎಸೆದುಬಿಡಿ.

ಮಿಸೆಲ್ಲಾರ್ ವಾಟರ್

ಈ ಉತ್ಪನ್ನವು ಗಾಳಿಯ ಜೊತೆ ಸಂಪರ್ಕಕ್ಕೆ ಬರುತ್ತಲೇ ಬ್ಯಾಕ್ಟೀರಿಯಾ ಬೆಳವಣಿಗೆಗೆ ಕಾರಣವಾಗಬಹುದು. ಮಿಸೆಲ್ಲಾರ್ ವಾಟರ್‌ನ ಗರಿಷ್ಠ ಅವಧಿ 6 ತಿಂಗಳು. ಹೀಗಾಗಿ, ಅರ್ಧ ವರ್ಷ ದಾಟಿದ ನೀರನ್ನು ಚೆಲ್ಲಿ ನೀರು ಹಾಕಿಬಿಡಿ.

ಫೇಸ್ ಟೋನರ್

ಫೇಸ್ ಟೋನರ್ ಕೂಡಾ ವಾಟರ್ ಬೇಸ್ಡ್ ಉತ್ಪನ್ನವಾಗಿದ್ದು, ಸುಲಭವಾಗಿ ಬ್ಯಾಕ್ಟೀರಿಯಾವನ್ನು ಆಕರ್ಷಿಸುತ್ತದೆ. ಇದರ ಆರೋಗ್ಯವಂತ ಜೀವಿತಾವಧಿ 6 ತಿಂಗಳಿನಿಂದ 1 ವರ್ಷ. ಟೋನರ್‌ನ ಬಣ್ಣ ಬದಲಾಗಿದ್ದು ಅಥವಾ ವಾಸನೆ ಬದಲಾಗಿದ್ದು, ಟೆಕ್ಸ್‌ಚರ್ ದಪ್ಪವಾಗಿದ್ದು -ಹೀಗೆ ಏನೇ ಬದಲಾವಣೆ ಕಂಡುಬಂದರೂ ಕಸದ ಬುಟ್ಟಿಗೆ ಹಾಕಿ.

ಇಷ್ಟು ಫೂಟ್‌ವೇರ್‌ಗಳಿದ್ದರೆ ಸಾಕು, ಬಟ್ಟೆಗೆ ಹೊಂದೋಲ್ಲ ಎಂಬ ಕ್ಯಾತೆಗೆ ಬೀಳುತ್ತೆ ಬ್ರೇಕು!

ಮಾಯಿಶ್ಚರೈಸರ್

ಬಹುತೇಕ ಫೇಸ್ ಕ್ರೀಮ್‌ಗಳು ಒಂದು ವರ್ಷದವರೆಗೆ ಬಾಳಿಕೆ ಬರುತ್ತವೆ. ಆದರೆ, ನೈಸರ್ಗಿಕ ಹಾಗೂ ಆರ್ಗ್ಯಾನಿಕ್ ಉತ್ಪನ್ನಗಳ ಬಗ್ಗೆ ಹೆಚ್ಚು ಎಚ್ಚರಿಕೆಯಿಂದಿರಿ. ಅವು ವರ್ಷದೊಳಗೇ ಕೆಡುವ ಸಾಧ್ಯತೆಗಳು ಹೆಚ್ಚು. 

ಪರ್ಫ್ಯೂಮ್ಸ್

ನೀವು ನಿಮ್ಮ ಪಪ್ಫ್ಯೂಮ್‌ಗಳನ್ನು ಹೆಚ್ಚು ಜತನದಿಂದ ಸ್ಟೋರ್ ಮಾಡಿಟ್ಟಲ್ಲಿ ಅವುಗಳ ಜೀವಿತಾವಧಿಯನ್ನು ವಿಸ್ತಿರಿಸಬಹುದು. ಒಳ್ಳೆಯ ಕಂಪನಿಯ ಪಪ್ಫ್ಯೂಮ್‌ಗಳನ್ನು 8ರಿಂದ 10 ವರ್ಷದವರೆಗೂ ಬಳಸಬಹುದು. ಅವುಗಳನ್ನು ಬೆಳಕು ಬೀಳದಂತೆ ಕಬೋರ್ಡ್‌ನೊಳಗೆ ಇಟ್ಟುಕೊಳ್ಳಿ. 

ಕನ್ಸೀಲರ್, ಫೌಂಡೇಶನ್

ಇವೆರಡೂ ಲಿಕ್ವಿಡ್ ರೂಪದಲ್ಲಿದ್ದರೆ ಗರಿಷ್ಠ 18 ತಿಂಗಳು ಬಳಕೆಗೆ ಯೋಗ್ಯವಾಗಿರುತ್ತದೆ. ಒಂದು ವೇಳೆ ಫೌಂಡೇಶನ್ ಪೌಡರ್ ರೂಪದಲ್ಲಿದ್ದರೆ 2 ವರ್ಷ ಬಳಸಬಹುದು.

ಐಲೈನರ್

ಐಲೈನರ್ ವಿಷಯದಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯ. ಅದರಲ್ಲೂ ಅವು ಲಿಕ್ವಿಡ್ ರೂಪದಲ್ಲಿದ್ದರೆ ಮೂರು ತಿಂಗಳಿಗಿಂತ ಹೆಚ್ಚು ಕಾಲ ಬಳಸಲೇಬೇಡಿ. ಆ ನಂತರ ಆ ಲಿಕ್ವಿಡ್‌ನಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲವೆಂದರೂ ಅದನ್ನು ಬಿಸಾಡುವುದು ಸುರಕ್ಷಿತ. ಇನ್ನು ಐಲೈನರ್ ಪೆನ್ಸಿಲ್ ಆಗಿದ್ದರೆ, ಅದು ಒಣ ಆಗಿರುವುದರಿಂದ ಬ್ಯಾಕ್ಟೀರಿಯಾ ಸೆಳೆವ ಚಾನ್ಸ್ ಕಡಿಮೆ. ಹೀಗಾಗಿ ಅವನ್ನು 24 ತಿಂಗಳ ಕಾಲ ಬಳಸಬಹುದು.

ಗೊತ್ತಾ, ಐಬ್ರೋ ಟ್ಯಾಟೂನಿಂದ ನಿಮ್ಮ ಕನಸಿನ ಹುಬ್ಬು ನಿಮ್ಮದಾಗುತ್ತೆ....

ಮೇಕಪ್ ಬ್ರಶ್‌ಗಳು

ಜನರು ಮೇಕಪ್ ಬ್ರಶ್‌ಗಳನ್ನು ಎಷ್ಟು ಸಮಯ ಬೇಕಾದರೂ ಬಳಸಬಹುದು ಎಂದುಕೊಳ್ಳುತ್ತಾರೆ. ಆದರೆ ಇದು ನಿಜವಲ್ಲ. ನೀವು ಪ್ರತಿ ವಾರಕ್ಕೊಮ್ಮೆ ಅವನ್ನು ತೊಳೆದು ಒಣಗಿಸಿಕೊಳ್ಳುತ್ತಿದ್ದರೆ, ಆಗ ಅದು ರಫ್ ಆಗುವವರಗೆ ಅಥವಾ ಬ್ರಿಸ್ಟಲ್‌ಗಲು ಉದುರತೊಡಗುವವರೆಗೆ ಬಳಸಬಹುದು. ನಂತರ ಹೊಸತನ್ನು ಖರೀದಿಸಿ.

Follow Us:
Download App:
  • android
  • ios