Asianet Suvarna News Asianet Suvarna News

ಇಷ್ಟು ಫೂಟ್‌ವೇರ್‌ಗಳಿದ್ದರೆ ಸಾಕು, ಬಟ್ಟೆಗೆ ಹೊಂದೋಲ್ಲ ಎಂಬ ಕ್ಯಾತೆಗೆ ಬೀಳುತ್ತೆ ಬ್ರೇಕು!

ಬಟ್ಟೆ ಹಾಗೂ ಶೂ ವಿಷಯದಲ್ಲಿ ಯುವತಿಯರಿಗೆ ತೃಪ್ತಿ ಎಂಬುದು ಸಿಕ್ಕ ದಿನ ಸೂರ್ಯ ಪಶ್ಚಿಮದಲ್ಲಿ ಹುಟ್ಟಿದ್ರೂ ಆಶ್ಚರ್ಯವಿಲ್ಲ. ಆದ್ರೆ ಇಂಥ ಅತೃಪ್ತಿಗೆ ಒಂದು ಮಟ್ಟಿನ ಬ್ರೇಕ್ ಹಾಕಲು ಇಲ್ಲಿವೆ ನೋಡಿ ಕಲೆಕ್ಷನ್ ಟಿಪ್ಸ್. ಈ 10  ರೀತಿಯ ಫೂಟ್‌ವೇರ್‌ಗಳಿದ್ರೆ ಸಾಕು, ಎಲ್ಲ ಕಾಲಕ್ಕೂ, ಎಲ್ಲ ಸ್ಟೈಲ್‌ಗೂ ಮ್ಯಾಚ್ ಮಾಡಬಹುದು.

10 Types of Footwear That All Women Should Own
Author
Bangalore, First Published Jun 21, 2019, 3:59 PM IST
  • Facebook
  • Twitter
  • Whatsapp

ತುಂಬಿ ತುಳುಕುವ ವಾರ್ಡ್ರೋಬ್ ನೋಡಿ, 'ಅಯ್ಯೋ ನನ್ನ ಬಳಿ ಬಟ್ಟೆಯೇ ಇಲ್ಲ'' ಎಂಬ ರಾಗ, ಶೂ ಸ್ಟ್ಯಾಂಡ್‌ನಲ್ಲಿ ಸ್ಥಳಾವಕಾಶ ಸಾಲದೆ ಉದುರಿ ಬೀಳುತ್ತಿರುವ ಸ್ಯಾಂಡಲ್ಸ್ ನೋಡಿಯೂ 'ಈ ಬಟ್ಟೆಗೆ ಸೂಟ್ ಆಗೋ ಒಂದೇ ಒಂದು ಫೂಟ್‌ವೇರ್ ಕೂಡಾ ನನ್ನ ಬಳಿ ಇಲ್ಲ' ಎಂಬ ರಾಗ ಹೆಣ್ಣು ಮಕ್ಕಳಿರುವ ಮನೆಗಳಲ್ಲಿ ಪ್ರತಿದಿನ ಸುಪ್ರಭಾತದಂತೆ ಒಮ್ಮೆಯಾದರೂ ಕೇಳಲೇಬೇಕು. ಅಷ್ಟಾಗಿಯೂ ಅವರ ಆನ್‌ಲೈನ್ ಶಾಪಿಂಗ್ ಕಾರ್ಟ್‌ಗಳಲ್ಲಿ ಇನ್ನೊಂದಿಷ್ಟು ಶೂಗಳು, ಬಟ್ಟೆಗಳು ಮನೆ ಸೇರಲು ಈಕೆ ಪೇಮೆಂಟ್ ಮಾಡುವುದನ್ನೇ ಕಾದು ಕುಳಿತಿರುತ್ತವೆ.

ನೀವು ಕೊಂಡ ಬೆಳ್ಳಿ ಅಸಲಿಯೋ ನಕಲಿಯೋ? ಹೀಗೆ ಟೆಸ್ಟ್ ಮಾಡಿ...!

ಆದರೆ, ನೀವು ಫೂಟ್‌ವೇರ್ ಆರಿಸುವಾಗ ಸರಿಯಾಗಿ ಲೆಕ್ಕಾಚಾರ ಹಾಕಿ ತೆಗೆದುಕೊಂಡರೆ 10 ಜೊತೆ ಸಾಕಷ್ಟೇ. ಅವು ಎಲ್ಲ ಸಂದರ್ಭಗಳಿಗೂ ಸಲ್ಲುತ್ತವೆ. ಬಣ್ಣ, ಆಕಾರ, ಸೈಜ್, ಮೆಟೀರಿಯಲ್, ಸ್ಟೈಲ್ ಎಂದು ಹತ್ತು ಹಲವು ವಿಷಯಗಳನ್ನು ಯೋಚಿಸಿ ತಲೆ ಕೆಡಿಸಿಕೊಳ್ಳುವವರ ಗೊಂದಲ ಕಡಿಮೆ ಮಾಡಲು ಇಲ್ಲಿ ಕೆಲ ವೆರೈಟಿ ಫೂಟ್‌ವೇರ್ ನೀಡಲಾಗಿದೆ. 

1. ಸ್ಟಿಲೆಟ್ಟೋಸ್

ಪೆನ್ಸಿಲ್ ಮೊನೆಯ ಈ ಹೀಲ್ಸ್ ಚಪ್ಪಲಿಗಳು ಅರ್ಧ ಸೆಕೆಂಡ್‌ನಲ್ಲಿ ನಿಮ್ಮ ಔಟ್‌ಫಿಟ್‌ನ ಬರಿಯ ಚೆಂದವನ್ನು ಸೊಬಗಾಗಿಸಬಲ್ಲವು. ಈ ಚೂಪು ಮೊನೆಯ ಹೀಲ್ಸ್‌ಗಳನ್ನು ಹಾಕಿ ನಡೆದರೆ ಸಾಕು, ಅದು ನಿಮ್ಮ ಗ್ಲ್ಯಾಮರ್ ಹೆಚ್ಚಿಸುತ್ತದೆ. ಜೊತೆಗೆ, ನಡಿಗೆಗೂ ಒಂದು ಸ್ಟೈಲ್ ದೊರಕುತ್ತದೆ. ಸಂಜೆಯ ಗೌನ್‌ಗಳು, ಸ್ಲಿಮ್ ಫಿಟ್ ಜೀನ್ಸ್, ಬಾಡಿ ಫಿಟ್ ಡ್ರೆಸ್‌ಗಳಿಗೆ ಸ್ಟಿಲೆಟ್ಟೋಸ್ ಪರ್ಫೆಕ್ಟ್ ಮ್ಯಾಚ್. ಆದರೆ ಗರ್ಭಿಣಿಯರು ಹಾಗೂ ಬಾಣಂತಿಯರು ಸ್ಟಿಲೆಟ್ಟೋಸ್ ಧರಿಸುವ ಆಸೆಯನ್ನು ವರ್ಷದ ಕಾಲ ಮುಂದೆ ಹಾಕುವುದೊಳಿತು. 

2. ಸ್ಪೂಲ್ ಹೀಲ್ಸ್

ಮೇಲೆ ಅಗಲವಾಗಿಯೂ, ಕೆಳಗೆ ತೆಳುವಾಗಿಯೂ ಬರುವ ಸ್ಪೂಲ್ ಹೀಲ್ಸ್‌ನಲ್ಲಿ ನಡೆಯೋದು ಸ್ಟಿಲೆಟ್ಟೋಸ್‌ಗಿಂತ ಸುಲಭ. ಇವುಗಳಲ್ಲಿ ಪೀಪ್ ಹೀಲ್ಸ್ ಹಾಗೂ ಪಂಪ್‌ ಸ್ಟೈಲ್ ದೊರೆಯುತ್ತದೆ. ಇವು ಕ್ಯಾಶುಯಲ್ ವೇರ್ ಹಾಗೂ ಸ್ಟೈಲಿಶ್ ಔಟ್‌ಫಿಟ್‌ಗಳಿಗೆ ಹೊಂದುತ್ತವೆ. 

3. ವೆಡ್ಜಸ್

ಹೀಲ್ಸ್ ಇದ್ದರೂ ಪೂರ್ಣ ಸಮತಟ್ಟಾಗಿ ಇರುವುದರಿಂದ ಇವನ್ನು ಧರಿಸಿ ಬ್ಯಾಲೆನ್ಸ್ ಮಾಡುವುದು ಬಹಳ ಸುಲಭ. ನಿಮ್ಮ ಸುಂದರವಾದ ಮೇಗಾಲನ್ನು ಶೋ ಆಫ್ ಮಾಡಲೂ ಇವು ಸೂಕ್ತ ವೇದಿಕೆ ಒದಗಿಸಿಕೊಡುತ್ತವೆ. ಬೇಸಿಗೆಯ ಬಟ್ಟೆಗಳು ಹಾಗೂ ಮ್ಯಾಕ್ಸಿಗೆ ಇವು ಹೆಚ್ಚು ಸೂಟ್ ಆಗುತ್ತವೆ. ಜೀನ್ಸ್‌ಗೆ ಕೂಡಾ ಧರಿಸಬಹುದು. 

ಬೆಳ್ಳಿ ಕಾಲ್ಗೆಜ್ಜೆ ಓಲ್ಡ್ ಸ್ಟೈಲ್ ಎನ್ನದಿರಿ...

4. ಲೋಫರ್ಸ್

ಸ್ಟೈಲ್‌ಗಿಂತಾ ಕಂಫರ್ಟೇ ಮುಖ್ಯ ಎನ್ನುವವರು ಲೋಫರ್ಸ್ ಮೊರೆ ಹೋಗಬಹುದು. ಜೀನ್ಸ್, ಫಾರ್ಮಲ್ಸ್, ಲಾಂಗ್ ಸ್ಕರ್ಟ್ಸ್‌ನೊಂದಿಗೆ ಚೆನ್ನಾಗಿ ಹೊಂದುತ್ತವೆ. ಇಡೀ ದಿನ ಧರಿಸಿದ್ದರೂ ಕಾಲು ಬೆಳಗಿನಂತೆ ಫ್ರೆಶ್ ಆಗಿರಬಲ್ಲದು.

5. ಕಿಟನ್ ಹೀಲ್ಸ್

ಇವುಗಳ ಹೀಲ್ಸ್ ಉದ್ದ ಚಿಕ್ಕದಾಗಿದ್ದು, ನಿಮ್ಮ ಕಾಲಿನ ಮೇಲೆ ಹೆಚ್ಚು ಪ್ರೆಶರ್ ಬೀಳುವುದಿಲ್ಲ. ಕುರ್ತಾ, ಲೆಗ್ಗಿಂಗ್ಸ್ ಸೇರಿದಂತೆ ಆ್ಯಂಕಲ್ ಲೆಂತ್ ಬಟ್ಟೆ ಧರಿಸಿದಾಗೆಲ್ಲ ಇವನ್ನು ಮ್ಯಾಚ್ ಮಾಡಬಹುದು. 

6. ಮೇರಿ ಜೇನ್ಸ್ ಅಥವಾ ಡಾಲ್ ಶೂಸ್

ಇವು ಹೀಲ್ಸ್ ಹಾಗೂ ಫ್ಲ್ಯಾಟ್‌ನಲ್ಲಿಯೂ ದೊರೆಯುತ್ತವೆ. ಲೋ ಕಟ್, ಕ್ಲೋಸ್ಡ್ ಹಾಗೂ ಸ್ಟ್ರ್ಯಾಪ್ ಸ್ಟೈಲ್‌ನಲ್ಲಿ ಬರುವ ಡಾಲ್ ಶೂಸ್‌ನ್ನು ಜೀನ್ಸ್, ಕುರ್ತಾ, ಮ್ಯಾಕ್ಸಿ ಯಾವುದಕ್ಕೆ ಬೇಕಾದರೂ ಧರಿಸಬಹುದು. 

ಮೆನಿಕ್ಯೂರ್ ಜೊತೆ ಮೆಡಿಟೇಶನ್; ಈಗ ಸಲೂನ್‌ ಕೂಡಾ ಧ್ಯಾನ ತಾಣ!

7. ಬ್ಯಾಲೆರಿನಾಸ್

ಬ್ಯಾಲೆಟ್ ಶೂಗಳು ಕಂಫರ್ಟ್ ಕೂಡಾ, ಫ್ಯಾಶನೇಬಲ್ ಕೂಡಾ. ನಿಮ್ಮ ಟೇಸ್ಟ್‌ಗೆ ತಕ್ಕಂತೆ ಪ್ಲೇನ್ ಅಥವಾ ಮಿರುಗುವ ಬ್ಯಾಲೆರಿನಾಸ್ ಕೊಳ್ಳಬಹುದು. ಜಂಪ್‌ಸೂಟ್, ಗೌನ್ ಹಾಗೂ ಜೀನ್ಸ್‌ಗೆ ಹೆಚ್ಚು ಸೂಟ್ ಆಗುತ್ತವೆ. 

8. ಬ್ರೋಗ್ಸ್

ಈ ಫಾರ್ಮಲ್ ಶೂಗಳು ಎಲ್ಲ ಯುವತಿಯರಿಗೆ ಬೇಕೇ ಬೇಕು. ಈ ಲೇಸ್ ಶೂಗಳು ಆಫೀಸ್‌ಗೆ ಹೇಳಿ ಮಾಡಿಸಿದ್ದು. ಫಾರ್ಮಲ್ ಪ್ಯಾಂಟ್ಸ್‌ಗೆ ಚೆನ್ನಾಗಿ ಸೂಟ್ ಆಗುತ್ತವೆ. 

9. ಸ್ಯಾಂಡಲ್ಸ್

ಎಲ್ಲ ಓಪನ್ ಫೂಟ್‌ವೇರ್‌ಗಳಿಗೆ ಸ್ಯಾಂಡಲ್ಸ್ ಎನ್ನಲಾಗುತ್ತದೆ. ಸ್ಟ್ರ್ಯಾಪ್ಸ್, ಹೀಲ್ಸ್, ಫ್ಲಿಪ್ ಫ್ಲಾಪ್ಸ್ ಅಥವಾ ಸ್ಲೈಡರ್ಸ್ ಎಲ್ಲ ಸ್ಟೈಲ್‌ಗಳೂ ಇವುಗಳಲ್ಲಿ ಸಿಗುತ್ತದೆ. ಭಾರತೀಯ ಶೈಲಿಯ ಬಟ್ಟೆಗಳಿಗೆ ಹಾಗೂ ಜೀನ್ಸ್‌ಗೆ ಇವನ್ನು ಆರಾಮಾಗಿ ಧರಿಸಬಹುದು. ಸ್ವಲ್ಪ ಹೀಲ್ಸ್ ಇರುವ ಸ್ಯಾಂಡಲ್ಸ್ ಸೀರೆ ಹಾಗೂ ಲೆಹೆಂಗಾಗಳಿಗೂ ಚೆನ್ನಾಗಿ ಒಪ್ಪುತ್ತವೆ. ಫ್ಲ್ಯಾಟ್ ಸ್ಯಾಂಡಲ್ಸ್ ಕುರ್ತಾಗೆ ಸೂಟ್ ಆಗುತ್ತದೆ. 

10. ಸ್ನೀಕರ್ಸ್

ಇವು ಮಹಿಳೆಯರ ಸ್ಪೋರ್ಟ್ಸ್ ಶೂ. ಟ್ರೆಕಿಂಗ್, ರನ್ನಿಂಗ್, ಕ್ರೀಡೆ, ಜಿಮ್ ಎಲ್ಲ ಔಟ್‌ಡೋರ್ ಆ್ಯಕ್ಟಿವಿಟೀಸ್‌ಗೆ ಹೇಳಿ ಮಾಡಿಸಿದ್ದು. ಟ್ರ್ಯಾಕ್ ಪ್ಯಾಂಟ್ಸ್, ಶಾರ್ಟ್ಸ್, ಕ್ಯಾಶುಯಲ್ ಡ್ರೆಸ್‌ಗೆ ಸೂಟ್ ಆಗುತ್ತವೆ. 

Follow Us:
Download App:
  • android
  • ios