ಕಾಡೋ ಡೆಂಗ್ಯೂಗೇನು ಮದ್ದು?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 30, Jul 2018, 11:35 AM IST
What to do control mosquitoes which cause Dengue
Highlights

ಸೊಳ್ಳೆಯಿಂದ ಕಾಡೋ ಮತ್ತೊಂದು ರೋಗವೆಂದರೆ ಡೆಂಗ್ಯೂ. ಅನೇಕ ಮಂದಿ ಈ ರೋಗಕ್ಕೆ ಬಲಿಯಾಗುತ್ತಾರೆ. ಆದರೆ, ತಕ್ಷಣವೇ ಸೂಕ್ತ ಚಿಕಿತ್ಸೆ ಹಾಗೂ ಮನೆ ಮದ್ದು ಮಾಡಿದರೆ ರೋಗದಿಂದ ಮುಕ್ತರಾಗಬರುದು. ಹೇಗೆ?

ಪ್ರಪಂಚದಲ್ಲಿ ಪ್ರತಿ ವರ್ಷ ಸುಮಾರು 10 ಕೋಟಿ ಜನರು ಡೆಂಗ್ಯೂ ರೋಗಕ್ಕೆ ತುತ್ತಾಗುತ್ತಾರೆ. ಭಾರತದಲ್ಲಿಯೂ ಹಲವು ಮಂದಿ ಡೆಂಗ್ಯೂ  ಜ್ವರಕ್ಕೆ ತುತ್ತಾಗಿ ಮೃತಪಡುತ್ತಾರೆ. ಮಳೆಗಾಲದಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಒಂದು ಸೊಳ್ಳೆ ಕಚ್ಚುವುದರಿಂದ ತಗಲುವ ರೋಗ ಡೆಂಗ್ಯೂ. ಹಾಗಂತ ರೋಗ ಬಂತೆಂದರೆ ಸತ್ತೆ ಬಿಡುತ್ತೇವೆ ಎಂದಲ್ಲ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯಬೇಕಷ್ಟೆ. 

ಆದರೂ, ರೋಗ ಹರಡದಂತೆ ಈ ಜಾಗರೂಕರಾಗಿರುವುದು ಒಳಿತು...

ಡೆಂಗ್ಯೂಗೇನು ಕಾರಣ?
ಡೆಂಗ್ಯೂ ಜ್ವರ ಈಡಿಸ್ ಈಜಿಪ್ಟೆ ಎಂಬ ಸೊಳ್ಳೆಯಿಂದ ಹರಡುತ್ತದೆ. ಶುದ್ಧ ನೀರಿನಲ್ಲಿ ಬೆಳೆಯುವ ಸೊಳ್ಳೆ ಇವು. ಆದರೆ ಇವು 100 ಮೀ.ಗಿಂತ ಎತ್ತರ ಹಾರುವುದಿಲ್ಲ. ಹಗಲು ಹೊತ್ತಿನಲ್ಲಿಯೇ ಕಚ್ಚೋದು ಹೆಚ್ಚು. ಸುಲಭವಾಗಿ ಗುರುತಿಸಬಹುದಾದ ಈ ಸೊಳ್ಳೆ ಗಾತ್ರದಲ್ಲಿ ದೊಡ್ಡದಿರುತ್ತವೆ. ಮೈ ಮೇಲೆ ಬಿಳಿ ಗೆರೆ ಕಾಣಿಸಿಕೊಳ್ಳುತ್ತವೆ. 

ಡೆಂಗ್ಯೂ ಲಕ್ಷಣಗಳು:

 
- ದಿಢೀರನೆ ತೀವ್ರ ಜ್ವರ ಬರುವುದು. 
- ಅತೀ ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಮೈ ಮತ್ತು ಸಂದು ನೋವು.
- ವಾಂತಿ, ವಾಕರಿಕೆ ಮತ್ತು ಹಸಿವು ಇಲ್ಲದಿರುವಿಕೆ ಡೆಂಗ್ಯೂ ಜ್ವರ ಕೆಲವು ಲಕ್ಷಣಗಳಾಗಿವೆ.

ಈ ಲಕ್ಷಣಗಳು ಆರಂಭದಲ್ಲಿಯೇ ಕಾಣಿಸಿಕೊಂಡು, ಎರಡರಿಂದ ಮೂರು ದಿನಗಳೊಳಗೆ ಜ್ವರವಿರುತ್ತದೆ. ಆದರೆ ಈ ಅವಧಿಯಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಅಪಾಯಕಾರಿಯಾದ ಈ ಸೊಳ್ಳೆ ಕಚ್ಚಿ, ಒಮ್ಮೆ ಜ್ವರ ಬಂತೆಂದರೆ ಅಪಾಯಕಾರಿ. ಒಂದು ಸಾರಿ ಜ್ವರ ಬಂದು ಬಿಟ್ಟ ಮೇಲೆ ಮತ್ತೆ ಜ್ವರ ಬಂದರೆ ಡೆಂಗ್ಯೂ ಗಂಭೀರ ಮಟ್ಟಕ್ಕೆ ತಲುಪಿದೆ ಎಂದರ್ಥ. ಡೆಂಗ್ಯೂ ಗಂಭೀರಾವಸ್ಥೆಗೆ ತಲುಪಿದಾಗ ಕಣ್ಣು, ಮೂಗಿನಲ್ಲಿ ರಕ್ತ ಬರಲು ಆರಂಭವಾಗುತ್ತದೆ.  

ಪರಿಹಾರ ಏನು? 
ಈ ಲಕ್ಷಣ ಕಂಡ ಕೂಡಲೇ ವೈದ್ಯರ ಬಳಿ ಹೋಗುವುದು ಉತ್ತಮ. ಸೊಳ್ಳೆ ನಾಶಕ್ಕೆ ಕ್ರಮ ಕೈಗೊಳ್ಳುವ ಜತೆಗೆ, ರೋಗಿಗೆ ಈ ಆರೈಕೆ ಅಗತ್ಯ...
- ರೋಗಿಗೆ ಸಾಧ್ಯವಾದಷ್ಟು ದ್ರವ ಆಹಾರ ನೀಡಿ. ಇದರಿಂದ ಅವರ ದೇಹದಲ್ಲಿ ನೀರಿನ ಅಂಶ ಸಾಕಷ್ಟು ಪ್ರಮಾಣದಲ್ಲಿರುತ್ತದೆ. 
- ರೋಗಿಗಳಿಗೆ ಪಪ್ಪಾಯಿ ಎಲೆ ರಸ ಒಳ್ಳೆಯದು ಎನ್ನುತ್ತಾರೆ. ಶರೀರದಲ್ಲಿ ಪ್ಲೇಟ್ ಲೆಟ್ ಅಂಶಗಳನ್ನು ಹೆಚ್ಚಲು ಇವು ಸಹಕರಿಸುತ್ತದೆ. 
- ನೀವೇ ಚಿಕಿತ್ಸೆ ಆರಂಭಿಸುವ ಜತೆಗೆ ವೈದ್ಯರ ಸಲಹೆ ಕೇಳಿ. 
- ರೋಗಿಗಳಿಗೆ ಡಿಸ್ಪೆರಿನ್ ಅಥವಾ ಆಸ್ಪಿರಿನ್ ಮಾತ್ರೆಗಳನ್ನು ನೀಡಲೇಬೇಡಿ. 
- ಎಷ್ಟು ಸಾಧ್ಯವೋ ಅಷ್ಟು ಎಳನೀರು ಹಾಗು ಜ್ಯೂಸ್ ನೀಡಿ. 

ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೊಳ್ಳೆ ಕಡಿತಕ್ಕೆ ಟೀ ಬ್ಯಾಗ್

ಬೆಂಗಳೂರಿನಲ್ಲಿ ಹರಡುತ್ತಿದೆ ಹೊಸ ರೀತಿ ಜ್ವರ

ಸೊಳ್ಳೆ ಕಾಟದಿಂದ ಮುಕ್ತ

ಸೊಳ್ಳೆ ನಾಶಕ್ಕೆ ಕಾಫಿ ಬೀಜ ಮದ್ದು

ನೈಸರ್ಗಿಕವಾಗಿ ಸೊಳ್ಳೆ ನಾಶಕ್ಕೆ ಮದ್ದು

 

 

 

loader