ಲಿಂಬೆ ಮತ್ತು ಲವಂಗ ಸೊಳ್ಳೆಗೆ ಆಗಬಹುದು ನೈಸರ್ಗಿಕ ಮದ್ದು!

ಅಬ್ಬಾ, ಸೊಳ್ಳೆ ಕಾಟ ಎಂಥವರನ್ನೂ ಹೈರಾಣಾಗಿಸುತ್ತದೆ. ಕೇವಲ ಮಾರಾಣಾಂತಿಕ ಕಾಯಿಲೆಗಳಿಗೆ ಕಾರಣವಾಗುವುದು ಮಾತ್ರವಲ್ಲ, ರಾತ್ರಿ ನಿದ್ರಿಗೂ ಭಂಗ ತರುವ ಈ ಸೊಳ್ಳೆಯಿಂದ ನೆಮ್ಮದಿ ಕೆಡುವುದು ಗ್ಯಾರಂಟಿ. ರಾಸಾಯನಿಕಗಳನ್ನು ಬಳಸಿ ಇವನ್ನು ನಾಶ ಮಾಡೋ ಬದಲು, ಇಲ್ಲಿವೆ ಸಿಂಪಲ್ ನ್ಯಾಚುರಲ್ ಟಿಪ್ಸ್. ಟ್ರೈ ಮಾಡಿ.

Know how coffee seeds could control mosquito menace

ಮಳೆಗಾಲ ಎಂದ ಮೇಲೆ ಕೇಳಬೇಕೆ? ಸೊಳ್ಳೆಗಳ ಕಾಟ ಹೆಚ್ಚಾಗುತ್ತೆ. ಸಂಜೆಯಾಗುತ್ತಿದ್ದಂತೆ ಕಾಯುತ್ತಿದ್ದ ಸೊಳ್ಳೆಗಳು ಮನೆಯೆಡೆಗೆ ದಾಂಗುಡಿ ಇಡುತ್ತಿದೆ. ಇದರಿಂದ ತಪ್ಪಿಸಿಕೊಳ್ಳಲು ಕಾಯಿಲ್ ಇಟ್ಟರೂ ಪ್ರಯೋಜನವಾಗೋಲ್ಲ. ಅಲ್ಲದೇ, ಈ ಕಾಯಿಲ್‌ಗಳಿಂದ ಉಸಿರುಗಟ್ಟಂತೆ ಆಗಿ, ತಲೆ, ನೋವೂ, ಶೀತವೂ ಕಾಡುತ್ತದೆ. ಸೊಳ್ಳೆಗಳು ಕಚ್ಚಿದರೆ ಪರವಾಗಿಲ್ಲ ಎಂದು ಸುಮ್ಮನೆ ಕುಳಿತರೆ ಅದರಿಂದ ಹರಡುವ ರೋಗಗಳು ಜೀವವನ್ನೇ ತೆಗೆಯುತ್ತವೆ. ಅದಕ್ಕೆ ಇಲ್ಲಿವೆ ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲು ನ್ಯಾಚುರಲ್ ಟಿಪ್ಸ್..

- ಕಾಫಿ ಬೀಜ: ಸೊಳ್ಳೆಗಳನ್ನು ನಿವಾರಿಸುವ ವಿಧಾನವೆಂದರೆ ಕಾಫಿ ಬೀಜಗಳನ್ನು ನಿಂತ ನೀರಿರುವ ಜಾಗದ ಮೇಲೆ ಹಾಕುವುದು. ಇವು ನೀರಿನ ಕೆಳಗೆ ಹೋದಾಗ ಸೊಳ್ಳೆ ಮೊಟ್ಟೆಗಳು ಸಹ ನೀರಿನ ಕೆಳಗೆ ಹೋಗುತ್ತವೆ. ಅಲ್ಲಿ ಆಕ್ಸಿಜನ್ ಕೊರತೆಯಿಂದ ಸೊಳ್ಳೆಗಳು ಹುಟ್ಟುವ ಮೊದಲೇ ಸಾಯುತ್ತವೆ. 

ಮೇಕಪ್ ತೆಗೆಯಲು ಇಲ್ಲಿವೆ ಸಿಂಪಲ್ ಮದ್ದು

- ನಿಂಬೆ ಮತ್ತು ಲವಂಗ: ನಿಂಬೆ ಹಣ್ಣನ್ನು ಅರ್ಧಕ್ಕೆ ಕತ್ತರಿಸಿ ಅದರ ಮೇಲೆ ಲವಂಗಗಳನ್ನು ಸಿಕ್ಕಿಸಿ. ಇದನ್ನು ಮನೆಯ ಬೇರೆ ಬೇರೆ ಭಾಗಗಳಲ್ಲಿ ಇಡಿ. ಇದರಿಂದ ಮನೆಯಲ್ಲಿ ಸೊಳ್ಳೆ, ನೊಣ ಯಾವುದೂ ಸುಳಿಯುವುದಿಲ್ಲ. 

- ಬೆಳ್ಳುಳ್ಳಿ: ಬೆಳ್ಳುಳ್ಳಿಯನ್ನು ಜಜ್ಜಿ ನೀರಿನಲ್ಲಿ ಹಾಕಿ ಕುದಿಸಿ. ಈ ನೀರನ್ನು ಸ್ಪ್ರೇ ಬಾಟಲ್‌ಗೆ ಹಾಕಿ ಮೂಲೆ ಮೂಲೆಗೂ  ಸ್ಪ್ರೇ ಮಾಡಿ. ಒಂದೇ ಒಂದು ಸೊಳ್ಳೆ ಸುಳಿಯೋದಿಲ್ಲ. 

- ಬೇವು ಮತ್ತು ಲಾವೆಂಡರ್ ಎಣ್ಣೆ: ಈ ಎರಡು ಎಣ್ಣೆಗಳನ್ನು ಮಿಕ್ಸ್ ಮಾಡಿ ತ್ವಚೆಗೆ ಹಚ್ಚಿಕೊಂಡರೆ, ಸೊಳ್ಳೆ ನಿಮ್ಮ ಹತ್ತಿರ ಸುಳಿಯೋದಿಲ್ಲ. 

- ಡಿಶ್ ವಾಷ್ ಸೋಪನ್ನು ನೀರಿನ ಜೊತೆ ಮಿಕ್ಸ್ ಮಾಡಿ, ಸ್ಪ್ರೇ ಮಾಡಿದರೆ ಸೊಳ್ಳೆಗಳು ನಾಶವಾಗುತ್ತದೆ. 

- ಪುದೀನಾ: ಪುದೀನಾ ಸೊಪ್ಪಿನ ರಸ ಅಥವಾ ಮಿಂಟ್ ಆಯಿಲ್ ತೆಗೆದುಕೊಂಡು ನೀರಿನ ಜೊತೆ ಮಿಕ್ಸ್ ಮಾಡಿ ಬಾಟಲ್‌ನಲ್ಲಿ ತುಂಬಿಸಿಡಿ. ಸೊಳ್ಳೆಗಳ ಕಾಟ ಪ್ರಾರಂಭವಾದರೆ ಅದನ್ನು ಸಿಂಪಡಿಸಿದರೆ, ಕೀಟಗಳು ಮಾಯವಾಗುತ್ತದೆ.

ಡೆಂಗ್ಯೂಗೆ ಬಾಲಕಿ ಬಲಿ

Latest Videos
Follow Us:
Download App:
  • android
  • ios