ಬೆಂಗಳೂರಿಗರೇ ಎಚ್ಚರ : ಹರಡುತ್ತಿದೆ ಮತ್ತೊಂದು ಜ್ವರ

ಬೆಂಗಳೂರು ನಾಗರಿಕರೇ ನೀವು ಎಚ್ಚರ ವಹಿಸುವುದು ಅತ್ಯಗತ್ಯ. ಯಾಕೆಂದರೆ ಮುಂಗಾರಿನ ಈ ಸಮಯದಲ್ಲಿ ಇಲ್ಲಿ ವೈರಲ್ ಜ್ವರದ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ.  ಆಸ್ಪತ್ರೆಗಳಲ್ಲಿ ವೈರಲ್ ಜ್ವರದಿಂದ ದಾಖಲಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. 

Viral fever Cases rise in Bengaluru

ಬೆಂಗಳೂರು : ಬೆಂಗಳೂರು ನಗರದಲ್ಲಿ ಡೆಂಘಿ, ಚಿಕೂನ್‌ಗುನ್ಯಾ ಹಾವಳಿ ಜತೆ ವೈರಲ್ ಫೀವರ್ (ವೈರಾಣು ಜ್ವರ) ಹಾಗೂ ಮಕ್ಕಳಲ್ಲಿ ಡಯೇರಿಯಾ ಸಮಸ್ಯೆ ವ್ಯಾಪಕ ವಾಗಿ ಹರಡುತ್ತಿದೆ. ಕಳೆದೊಂದು ವಾರದಿಂದ ವಿವಿಧ ಆಸ್ಪತ್ರೆಗಳಿಗೆ ಇದರ ಚಿಕಿತ್ಸೆಗೆಂದು ಬರುವ ರೋಗಿಗಳ ಸಂಖ್ಯೆ ದುಪ್ಪಟ್ಟಾಗಿದೆ. 

ವಿಕ್ಟೋರಿಯಾ ಆಸ್ಪತ್ರೆ, ಕೆ.ಸಿ.ಜನರಲ್ ಆಸ್ಪತ್ರೆ, ವಾಣಿವಿಲಾಸ್, ಕೆ.ಆರ್.ಪುರ ಹಾಗೂ ಸಿ.ವಿ. ರಾಮ ನ್‌ನಗರ ಜನರಲ್ ಆಸ್ಪತ್ರೆಗಳಲ್ಲಿ ನಿತ್ಯ ನೂರಾರು ಹಿರಿ ಯರು ಹಾಗೂ ಮಕ್ಕಳು ವೈರಾಣು ಜ್ವರ ಹಾಗೂ ಡಯೇರಿಯಾ ಸಮಸ್ಯೆಯಿಂದ ಚಿಕಿತ್ಸೆಗಾಗಿ ಅಲೆಯುತ್ತಿದ್ದಾರೆ. ವಿಶೇಷವಾಗಿ ಸಾಂಕ್ರಾಮಿಕ ವೈರಾಣುಗಳಿಂದಾಗಿ ಮಕ್ಕಳಲ್ಲಿ ವಾಂತಿ-ಭೇದಿ ಸಮಸ್ಯೆ ಹೆಚ್ಚಾ ಗಿದ್ದು, ಡಯೇರಿಯಾ ಸಮಸ್ಯೆಗೆ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ವೈದ್ಯಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. 

ವಾತಾವರಣದಲ್ಲಾದ ಬದಲಾವಣೆಯಿಂದಾಗಿ ವೈರಾಣುಗಳ ಹಾವಳಿ ಹೆಚ್ಚಾಗಿದೆ. ಮಕ್ಕಳು ಹಾಗೂ ವಯಸ್ಕರಲ್ಲಿ ಶುಚಿತ್ವವಲ್ಲದ ಆಹಾರ ಹಾಗೂ ನೀರು ಸೇವನೆ, ಸೋಂಕು ತಗುಲಿದ ವ್ಯಕ್ತಿಯಿಂದ ಉಸಿರಾಟದ ವೇಳೆ ಹೊಟ್ಟೆಗೆ ಸೇರುವ ಬ್ಯಾಕ್ಟೀರಿಯಾ ಸೋಂಕಿನಿಂ ದಾಗಿ ಈ ಸಮಸ್ಯೆ ಉಂಟಾಗುತ್ತದೆ. ಖಾಸಗಿ ಆಸ್ಪತ್ರೆಗ ಳಲ್ಲೂ ವೈರಾಣು ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.

ಮಕ್ಕಳ ಬಗ್ಗೆ ಎಚ್ಚರ ವಹಿಸಿ: ಮಕ್ಕಳಲ್ಲಿ ಡಯೇರಿಯಾ ಸಮಸ್ಯೆ ಉಂಟಾಗದಂತೆ ಅಗತ್ಯ ಎಚ್ಚರಿಕೆ ತೆಗೆದುಕೊಳ್ಳ ಬೇಕು. ತಡೆಯಲು  ಶುಚಿತ್ವದಿಂದ ಕೂಡಿದ ಆಹಾರ ಸೇವಿಸಬೇಕು. ಆಹಾರ ಹಾಗೂ ನೀರು ಕಲುಷಿತಗೊಂಡಿರದೆ ಶುಚಿಯಾಗಿರಬೇಕು. ವೈರಾಣುಗಳು ಹೊಟ್ಟೆ ಸೇರುವುದನ್ನು ತಡೆಯಲು ಪ್ರತಿ ಬಾರಿ ಊಟಕ್ಕೆ ಮೊದಲು ಕೈ ಶುಚಿಯಾಗಿ ತೊಳೆದುಕೊಳ್ಳಬೇಕು. 

ಮಲ-ಮೂತ್ರ ವಿಸರ್ಜನೆಯ ಬಳಿಕವೂ ಶುಚಿತ್ವ ಕಾಯ್ದುಕೊಳ್ಳಬೇಕು. ವಾಂತಿ-ಭೇದಿ ಹೆಚ್ಚಾಗಿ ದೇಹದಲ್ಲಿನ ನೀರಿನಂಶ ಕಳೆದುಕೊಳ್ಳುತ್ತಾರೆ. ಹೀಗಾಗಿ ಹೆಚ್ಚಿನ ದ್ರವ ಪದಾರ್ಥವನ್ನು ಸೇವಿಸಲು ನೀಡಬೇಕು ಎಂದು ವೈದ್ಯಾಧಿಕಾರಿಗಳು ಸಲಹೆ ನೀಡುತ್ತಾರೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಈ ಜ್ವರ ಒಬ್ಬರಿಗೆ ಬಂದರೆ ಮನೆ ಮಂದಿಯನ್ನೆಲ್ಲಾ ಕಾಡುತ್ತದೆ. ನೆಗಡಿ, ಕೆಮ್ಮು, ಮೈ-ಕೈ ನೋವಿನಿಂದ ಪ್ರಾರಂಭವಾಗುವ ಜ್ವರ ಐದಾರು ದಿನ ಬಾಧಿಸುತ್ತದೆ. ಜ್ವರದ ತೀವ್ರ ಹೆಚ್ಚಿಲ್ಲದಿದ್ದರೆ ನೆಗಡಿ, ಕೆಮ್ಮು, ಸೀನಿ ನಿಂದಲೇ ಮನುಷ್ಯನನ್ನು ಕಾಡುತ್ತದೆ. 

ತಣ್ಣನೆ ವಾತಾವರಣದಿಂದಾಗಿ ಮನುಷ್ಯರ ದೇಹದಲ್ಲಿ ರೋಗನಿರೋಧಕ ಶಕ್ತಿ ಕುಗ್ಗುತ್ತದೆ. ಇದರಿಂದ ವೈರಾಣುಗಳಿಂದ ಹರಡುವ ಈ ಸೋಂಕು ಸುಲಭವಾಗಿ ಹರಡುತ್ತದೆ ಎನ್ನುತ್ತಾರೆ ಸಾಂಕ್ರಾಮಿಕ ರೋಗಗಳ ತಜ್ಞರು. ಸೊಳ್ಳೆಯಿಂದಲೂ ಹರಡುತ್ತದೆ: ಸೋಂಕುಕಾರಕ ರೋಗಾಣು(ವೈರಸ್, ಬ್ಯಾಕ್ಟಿರಿಯಾ)ಗಳು ಗಾಳಿ ಇತ್ಯಾದಿ ಮಾರ್ಗಗಳಿಂದಲ್ಲದೇ ಸೊಳ್ಳೆ ಕಡಿತದಿಂದಲೂ ಹರಡಬಹುದು.

ಹಾಗಾಗಿ ಜನರು ಸೊಳ್ಳೆಗಳು ಕಚ್ಚದಂತೆ ಎಚ್ಚರ ವಹಿಸಬೇಕು. ಹಳ್ಳ-ಕೊಳ್ಳ ಹಾಗೂ ತೆಂಗಿನ ಚಿಪ್ಪುಗಳಲ್ಲಿ ನೀರು ನಿಲ್ಲದಂತೆ ನೋಡಿ  ಕೊಳ್ಳಬೇಕು. ಬಿಂದಿಗೆ, ಡ್ರಮ್‌ಗಳಲ್ಲಿ ನೀರು ಶೇಖರಿ ಸಿಟ್ಟಲ್ಲಿ ಮೇಲ್ಭಾಗವನ್ನು ಸರಿಯಾಗಿ ಮುಚ್ಚಬೇಕು. ಹಾಗೆಯೇ ಆಹಾರ ಸೇವನೆಯಲ್ಲೂ ಅಗತ್ಯ ಎಚ್ಚರಿಕೆ ವಹಿಸಬೇಕು. ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕು. 

Latest Videos
Follow Us:
Download App:
  • android
  • ios