ಗರ್ಭಿಣಿಯಾಗುತ್ತಿದ್ದಂತೆಯೇ ದೇಹವು ಹಲವಾರು ಬದಲಾವಣೆಗಳಿಗೆ ಸಾಕ್ಷಿಯಾಗುತ್ತದೆ. ಕೆಲವೊಂದು ಕಾಲು ಬಾತುಕೊಳ್ಳುವುದು, ನೀರು ತುಂಬುವುದು ಹೀಗೆ ನಿರೀಕ್ಷಿತವಾದರೆ ಮತ್ತಷ್ಟು ದೃಷ್ಟಿ ಬದಲಾವಣೆಯಷ್ಟು ಅನಿರೀಕ್ಷಿತ. ಈ ಸಂದರ್ಭದಲ್ಲಿ ಏನೇನು ಬದಲಾವಣೆಯಾಗುತ್ತದೆ ಗೊತ್ತಾ?

ಹಾರ್ಮೋನ್‌ಗಳ ಬದಲಾವಣೆ

ಗರ್ಭಿಣಿ ಮಹಿಳೆಯರಲ್ಲಿ ಸಡನ್ ಆಗಿ ಈಸ್ಟ್ರೋಜನ್ ಹಾಗೂ ಪ್ರೊಜೆಸ್ಟೆರೋನ್ ಹಾರ್ಮೋನ್‌ಗಳ ಬಿಡುಗಡೆ ಸಿಕ್ಕಾಪಟ್ಟೆ ಹೆಚ್ಚುತ್ತದೆ. ಇಷ್ಟೇ ಅಲ್ಲದೆ ಹಲವಾರು ಇತರೆ ಹಾರ್ಮೋನ್‌ಗಳ ಬಿಡುಗಡೆಯಲ್ಲಿ ಏರುಪೇರನ್ನು ಕಾಣಬಹುದು. ಈ ಬದಲಾವಣೆಗಳು ಕೇವಲ ಮೂಡ್ ಮೇಲೆ ಪರಿಣಾಮಬೀರುವುದಿಲ್ಲ. ಅವು,

ನೀವು ಗರ್ಭಿಣಿಯರಾದಲ್ಲಿ, ವೆಜೈನಲ್ ಡಿಸ್ಚಾರ್ಜ್ ಕುರಿತ ಈ ವಿಷಯ ತಿಳಿಯಲೇಬೇಕು!

- ಪ್ರಗ್ನೆನ್ಸಿ ಗ್ಲೋಗೆ ಕಾರಣವಾಗುತ್ತವೆ

- ಭ್ರೂಣದ ಬೆಳವಣಿಗೆಗೆ ಸಹಕಾರ ನೀಡುತ್ತವೆ.

- ವ್ಯಾಯಾಮ ಹಾಗೂ ಇತರೆ ದೈಹಿಕ ಚಟುವಟಿಕೆಗಳು ದೇಹದ ಮೇಲೆ ಬೀರುವ ಪರಿಣಾಮವನ್ನು ಬದಲಾಯಿಸುತ್ತವೆ. 

ಈಸ್ಟ್ರೋಜನ್ ಹಾಗೂ ಪ್ರೊಜೆಸ್ಟೆರೋನ್ ಬದಲಾವಣೆಗಳು

ಪ್ರೆಗ್ನೆಂಸಿಯಲ್ಲಿ ಸ್ಮೋಕ್ ಮಾಡಿದ್ರೆ ಮಗುವಿನ ಮೇಲೆ ಬೀರುತ್ತೆ ಈ ಎಫೆಕ್ಟ್!

ಇವೆರಡೂ ಪ್ರಗ್ನೆನ್ಸಿಯ ಪ್ರಮುಖ ಹಾರ್ಮೋನ್‌ಗಳು. ಮಹಿಳೆಯು ತನ್ನಿಡೀ ಬದುಕಿನಲ್ಲಿ ಉತ್ಪಾದಿಸದಷ್ಟು ಈಸ್ಟ್ರೋಜನ್ ಹಾರ್ಮೋನ್ ಆಕೆ ಗರ್ಭಿಣಿಯಾಗಿದ್ದಾಗ ಉತ್ಪತ್ತಿಯಾಗುತ್ತದೆ. ಪ್ರಗ್ನೆನ್ಸಿ ಆರಂಭದಿಂದಲೇ ಈಸ್ಟ್ರೋಜನ್ ಬಿಡುಗಡೆ ಹೆಚ್ಚುತ್ತದಾದರೂ, 3ನೇ ತ್ರೈಮಾಸದಲ್ಲಿ ಅದರ ಬಿಡುಗಡೆ ಬಹಳಷ್ಟು ಹೆಚ್ಚುತ್ತದೆ. ಹೀಗೆ ಸಡನ್ ಆಗಿ ಈ ಹಾರ್ಮೋನ್ ಹೆಚ್ಚುವುದರಿಂದ ಮೊದಲ ತಿಂಗಳಲ್ಲಿ ಸಂಕಟ, ವಾಂತಿ ಎಲ್ಲ ಕಾಣಿಸಿಕೊಳ್ಲಬಹುದು. ಎರಡನೇ ತ್ರೈಮಾಸದಲ್ಲಿ ಈ ಹಾರ್ಮೋನ್ ಎದೆಹಾಲ್ನ ತಯಾರಿಕೆಗೆ ಎದೆಯನ್ನು ಸಜ್ಜುಗೊಳಿಸುತ್ತದೆ. ಹೀಗೆ ಈಸ್ಟ್ರೋಜನ್ ಉತ್ಪತ್ತಿ ಹೆಚ್ಚಾಗಿದ್ದು ಗರ್ಭಕೋಶ ಹಾಗೂ ಗರ್ಭಚೀಲಕ್ಕೆ

-  ರಕ್ತನಾಳಗಳ ಬೆಳವಣಿಗೆಯನ್ನು ಉತ್ತಮಗೊಳಿಸುತ್ತದೆ.

- ಪೋಷಕಾಂಶಗಳನ್ನು ವರ್ಗಾಯಿಸುತ್ತದೆ

- ಬೆಳೆಯುತ್ತಿರುವ ಮಗುವಿನ ಸಹಾಯಕ್ಕೆ ನಿಲ್ಲುತ್ತವೆ.

ಪ್ರೊಜೆಸ್ಟೆರೋನ್ ಹೆಚ್ಚುವುದರಿಂದ

ಗರ್ಭಿಣಿಯರಲ್ಲಿ ಮೂತ್ರನಾಳ ಸೋಂಕು; ಏನು, ಹೇಗೆ, ಪರಿಹಾರವೇನು?

- ದೇಹದೆಲ್ಲೆಡೆಯ ಮಣಿಕಟ್ಟು ಹಾಗೂ ಜಾಯಿಂಟ್‌ಗಳು ಲೂಸ್ ಆಗುತ್ತವೆ. 

- ಗರ್ಭಕೋಶದ ಗಾತ್ರ ಹಿಗ್ಗುತ್ತದೆ. 

- ಗರ್ಭಕೋಶವು ತಾಯಿಯ ದೇಹದ ಬ್ಲ್ಯಾಡರ್‌ನ್ನು ಕಿಡ್ನಿಗೆ ಸಂಪರ್ಕ ಕಲ್ಪಿಸುತ್ತದೆ. 

- ಗರ್ಭಾಶಯವು ಸಣ್ಣ ಪೇರಲೆ ಹಣ್ಣಿನ ಗಾತ್ರದಿಂದ 9 ತಿಂಗಳು ತುಂಬಿದ ಮಗುವಿನ ಗಾತ್ರಕ್ಕೆ ಹಿಗ್ಗುವಂತೆ ನೋಡಿಕೊಳ್ಳುತ್ತದೆ. 

ಹಾರ್ಮೋನ್‌ಗಳು ಹಾಗೂ ವ್ಯಾಯಾಮ

ಈ ಹಾರ್ಮೋನ್‌ಗಳ ಉತ್ಪತ್ತಿ ಹೆಚ್ಚುವುದರಿಂದ ಪ್ರಗ್ನೆನ್ಸಿ ಯಾವುದೇ ತೊಂದರೆಯಿಲ್ಲದೆ ಆಗುವುದೇನೋ ನಿಜ. ಆದರೆ, ಇದರಿಂದ ವ್ಯಾಯಾಮ ಮಾಡಲು ಕಷ್ಟವಾಗತೊಡಗುತ್ತದೆ. ಏಕೆಂದರೆ ಮೂಳೆಕಟ್ಟುಗಳೆಲ್ಲ ಸಡಿಲವಾಗಿದ್ದರಿಂದ ಈ ಸಂದರ್ಭದಲ್ಲಿ ವ್ಯಾಯಾಮ ಅತಿಯಾದರೆ ಮಹಿಳೆಯು ನೋವು ಹಾಗೂ ಗಾಯಗಳನ್ನು ಮಾಡಿಕೊಳ್ಳುವ ಅಪಾಯ ಹೆಚ್ಚು. ಆಕೆಯ ಎದೆ ಹಿಗ್ಗುತ್ತದೆ, ಹೊಟ್ಟೆ ದೊಡ್ಡಗಾಗುತ್ತದೆ, ಬೆನ್ನು ಬಾಗುತ್ತದೆ, ಇದರಿಂದಾಗಿ ಆಕೆ ದೇಹವನ್ನು ಬ್ಯಾಲೆನ್ಸ್ ಮಾಡಲು ಹೊಸ ಕ್ರಮವನ್ನೇ ಕಲಿತುಕೊಳ್ಳಬೇಕಾಗುತ್ತದೆ. 

ಗರ್ಭಿಣಿಯರ ಕಾಡೋ ಹೊಟ್ಟೆ ನೋವು, ಮಗುವಿನ ಮೇಲಾಗೋ ಎಫೆಕ್ಟ್

ತೂಕ ಹೆಚ್ಚಳ

ಗರ್ಭಿಣಿ ಮಹಿಳೆ ತೂಕ ಹೆಚ್ಚಿದಂತೆಲ್ಲ ಆಕೆಯ ರಕ್ತ ಸಂಚಲನ ಹಾಗೂ ಇತರೆ ದ್ರವಪದಾರ್ಥಗಳ ಸಂಚಲನ ನಿಧಾನಗತಿ ಪಡೆದುಕೊಳ್ಳುತ್ತದೆ. ವಿಶೇಷವಾಗಿ ಕಾಲಿನ ಕೆಳಭಾಗದಲ್ಲಿ ಹೀಗಾಗುವುದರಿಂದ ಕಾಲುಗಳು ಹಾಗೂ ಮುಖ ಬಾತುಕೊಳ್ಳುತ್ತವೆ. ಸಾಮಾನ್ಯವಾಗಿ ಎರಡನೇ ತ್ರೈಮಾಸದಲ್ಲಿ ಈ ಬಾತುಕೊಳ್ಳುವಿಕೆ ಆರಂಭವಾಗುತ್ತದೆ. ಈ ಫ್ಲೂಯಿಡ್ ರಿಟೆನ್ಷನ್ ಹೆಚ್ಚುವುದರಿಂದಲೇ ಮಹಿಳೆ ಅತಿಯಾಗಿ ತೂಕ ಹೆಚ್ಚುವುದು. 

ಸೆನ್ಸರಿ ಬದಲಾವಣೆಗಳು

ಗರ್ಭಿಣಿ ಮಹಿಳೆಯ ದೃಷ್ಟಿ, ರುಚಿ, ವಾಸನೆ ಗ್ರಹಿಕೆ ಎಲ್ಲವೂ ನಾಟಕೀಯವೆನ್ನುವಷ್ಟು ಬದಲಾಗುತ್ತವೆ. ಕೆಲ ಮಹಿಳೆಯರಿಗೆ ಸಮೀಪದೃಷ್ಟಿದೋಷ ಹೆಚ್ಚುತ್ತದೆ. ಆದರೆ, ಇದು ಮಗು ಜನಿಸಿದ ಬಳಿಕ ಮುಂಚಿನಂತಾಗುತ್ತದೆ. ಇದಲ್ಲದೆ ಕಣ್ಣು ಮಂಜಾಗುವುದು, ಕಾಂಟ್ಯಾಕ್ಟ್ ಲೆನ್ಸ್‌ಗಳು ಕಿರಿಕಿರಿ ಎನಿಸುವುದು, ಅಪರೂಪದ ಪ್ರಕರಣಗಳಲ್ಲಿ ಈ ಸಂದರ್ಭದ ಡಯಾಬಿಟೀಸ್‌ನಿಂದಾಗಿ ಅಪರೂಪದ ಪ್ರಕರಣಗಳಲ್ಲಿ ದೃಷ್ಟಿ ಕಳೆದುಕೊಂಡ ಉದಾಹರಣೆಗಳೂ ಇವೆ.
ಈ ಸಂದರ್ಭದಲ್ಲಿ ಮಹಿಳೆಯ ರುಚಿ ಗ್ರಹಿಕೆಯೂ ಬದಲಾಗುತ್ತದೆ. ಆಕೆ ಹೆಚ್ಚಾಗಿ ಉಪ್ಪು ಹಾಗೂ ಸ್ವೀಟಾದ ಆಹಾರ ತಿನ್ನಬಯಸುತ್ತಾಳೆ. ಹುಳಿ, ಸಿಹಿ ಹಾಗೂ ಉಪ್ಪು ಎಷ್ಟಿದ್ದರೂ ತಿನ್ನುವ ಬಯಕೆ ಕಾಣಿಸಿಕೊಳ್ಳುತ್ತದೆ. ಮೊದಲ ತ್ರೈಮಾಸದಲ್ಲಿ ರುಚಿ ನೋಡುವ ಸಾಮರ್ಥ್ಯ ಕಳೆದುಕೊಳ್ಳುವ ಸಮಸ್ಯೆ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. 

ಮಾನಸಿಕವಾಗಿ, ದೈಹಿಕವಾಗಿ ಹೆಣ್ಣನ್ನು ಹೈರಾಣಿಗಿಸೋ ಗರ್ಭಪಾತ!

ಅಷ್ಟೇ ಅಲ್ಲ, ಗರ್ಭಿಣಿ ಮಹಿಳೆಯರು ಸಾಮಾನ್ಯ ಮಹಿಳೆಗಿಂತ ಹೆಚ್ಚು ವಾಸನೆಗಳನ್ನು ಗ್ರಹಿಸಬಲ್ಲರು. 

ಎದೆ ಹಾಗೂ ಗರ್ಭಕಂಠದ ಬದಲಾವಣೆ

ಮಗುವಿನ ಹಾಲು ಉತ್ಪತ್ತಿಗಾಗಿ ಎದೆ ಸಜ್ಜಾಗುತ್ತದೆ. ಗಾತ್ರದಲ್ಲಿ ಹಿಗ್ಗುವುದಷ್ಟೇ ಅಲ್ಲ, ಅದು ಹೆಚ್ಚು ಕಪ್ಪಗಾಗುತ್ತದೆ ಜೊತೆಗೆ ನಿಪ್ಪಲ್‌ಗಳು ದೊಡ್ಡಗಾಗುತ್ತವೆ. ಸ್ಟ್ರೆಚ್ ಮಾರ್ಕ್‌ಗಳು ಕೂಡಾ ಎದೆಯ ಮೇಲೆ ಕಾಣಿಸಿಕೊಳ್ಳಬಹುದು. ಹಾಲನ್ನು ಒಳಗೊಂಡ ಸಣ್ಣ ಸಣ್ಣ ಊತಗಳು ಎರಡನೇ ತ್ರೈಮಾಸದಲ್ಲಿ ಕಾಣಿಸಿಕೊಳ್ಳಬಹುದು. 
ಇನ್ನು ಗರ್ಭಾಶಯದ ಬಾಗಿಲೆನಿಸಿಕೊಂಡ ಗರ್ಭಕಂಠವು ದಪ್ಪಗಾಗಿ ಗಟ್ಟಿಯಾಗುತ್ತದೆ. ಮಗು ಜನಿಸುವ ಸಮಯ ಹತ್ತಿರ ಬಂದಾಗ ಇದು ಮೆತ್ತಗಾಗುತ್ತದೆ. ಅಷ್ಟೇ ಅಲ್ಲ ಅಗಲವಾಗುತ್ತಾ, ತೆಳ್ಳಗಾಗುತ್ತಾ ಸಾಗುತ್ತದೆ. ಇದರಿಂದ ಮಗುವು ಹೊರಬರಲು ದಾರಿಯಾಗುತ್ತದೆ. 

ಕೂದಲು, ಚರ್ಮ ಬದಲಾವಣೆ

ಪ್ರಗ್ನೆನ್ಸಿಯಲ್ಲಿ ತೊಡೆ, ಹೊಟ್ಟೆ ಇತರೆ ಭಾಗಗಳ ಮೇಲೆ ಸ್ಟ್ರೆಚ್ ಮಾರ್ಕ್ಸ್ ಕಾಣಿಸಿಕೊಳ್ಳುತ್ತದೆ. ಇದು ಜೀವನಪರ್ಯಂತ ಉಳಿದುಬಿಡಬಹುದು. ಇದಲ್ಲದೆ ಶೇ.70ರಷ್ಟು ಗರ್ಭಿಣಿಯರಲ್ಲಿ ಮುಖ ಹಾಗೂ ಕೆಳ ಭಾಗದಲ್ಲಿ ಕಪ್ಪು ಕಲೆ ಕಾಣಿಸಿಕೊಳ್ಳುತ್ತದೆ. ಇನ್ನು ಹಾರ್ಮೋನ್ ಬದಲಾವಣೆಯಿಂದಾಗಿ ಕೆಲವರಿಗೆ ಕೂದಲುದುರುವಿಕೆ ಹೆಚ್ಚುತ್ತದೆ. ಇದು ಮಗು ಜನಿಸಿದ ಮೇಲೂ ಒಂದು ವರ್ಷ ಮುಂದುವರಿಯಬಹುದು.  ಮತ್ತೆ ಕೆಲವರಿಗೆ ದಪ್ಪಗೆ ಕೂದಲು ಹುಟ್ಟುತ್ತದೆ. ಅಷ್ಟೇ ಅಲ್ಲ, ಬೇಡದ ಸ್ಥಳಗಳಲ್ಲಿ ಕೂಡಾ ಕೂದಲು ಕಾಣಿಸಿಕೊಳ್ಳಬಹುದು. ಹಲವರಿಗೆ ಪ್ರಗ್ನೆನ್ಸಿಯಲ್ಲಿ ಉಗುರು ಬಹಳ ವೇಗವಾಗಿ ಬೆಳೆಯುತ್ತದೆ. ಚೆನ್ನಾಗಿ ತಿನ್ನುವುದು ಹಾಗೂ ವಿಟಮಿನ್‌ಗಳನ್ನು ತೆಗೆದುಕೊಳ್ಳುವುದರಿಂದ ಬೆಳವಣಿಗೆ ಹಾರ್ಮೋನ್ ಪ್ರಗ್ನೆನ್ಸಿಯಲ್ಲಿ ಹೆಚ್ಚುತ್ತದೆ. 

ರಕ್ತ ಪರಿಚಲನಾ ವ್ಯವಸ್ಥೆ

ಮೆಟ್ಟಿಲೇರುವಾಗ ಏದುಸಿರು ಬರುವುದು, ನಿಂತ ಕೂಡಲೇ ತಲೆ ತಿರುಗುವುದು ಪ್ರಗ್ನೆನ್ಸಿಯಲ್ಲಿ ಸಾಮಾನ್ಯ. ಈ ಸಮಯದಲ್ಲಿ ದೇಹದಲ್ಲಿ ರಕ್ತ ಹೆಚ್ಚುವುದರಿಂದ ಹೃದಯ ಶೇ.20ರಷ್ಟು ಹೆಚ್ಚು ಜೋರಾಗಿ ಬಡಿದುಕೊಳ್ಳುತ್ತದೆ. ಹೀಗೆ ರಕ್ತ ಹೆಚ್ಚುವ ಕಾರಣದಿಂದಾಗಿಯೇ ಐರನ್ ಹಾಗೂ ಫೋಲಿಕ್ ಆ್ಯಸಿಡ್ ತೆಗೆದುಕೊಳ್ಳಬೇಕಾಗುತ್ತದೆ. 

ಉಸಿರಾಟ ಹಾಗೂ ಮೆಟಾಬಾಲಿಕ್ ಬದಲಾವಣೆಗಳು

ಗರ್ಭಿಣಿಯರಲ್ಲಿ ಉಸಿರಾಟದಲ್ಲಿ ಗಾಳಿಯನ್ನು ಒಳತೆಗೆದುಕೊಳ್ಳುವುದು ಹಾಗೂ ಹೊರ ಹಾಕುವ ಪ್ರಕ್ರಿಯೆ ಶೇ.30ರಿಂದ 50ರಷ್ಟು ಹೆಚ್ಚುತ್ತದೆ. ಪ್ರತಿ ಉಸಿರಲ್ಲೂ ಹೆಚ್ಚು ಗಾಳಿ ತೆಗೆದುಕೊಳ್ಳಬೇಕಾಗುತ್ತದೆ. ಗರ್ಭಾಶಯ ದೊಡ್ಡಗಾದಂತೆಲ್ಲ ಡಯಾಫ್ರಾಮ್ ಚಲನೆಗೆ ಹೆಚ್ಚು ಸ್ಥಳಾವಕಾಶವಿರುವುದಿಲ್ಲ. ಇದರಿಂದ ಗರ್ಭಿಣಿಯು ಉಸಿರಾಡಲು ಕಷ್ಟ ಪಡಬೇಕಾಗುತ್ತದೆ. ರೆಸ್ಟ್‌ನಲ್ಲಿರುವಾಗಲೂ ಹೆಚ್ಚು ಎನರ್ಜಿ ಖಾಲಿಯಾಗುತ್ತದೆ. ಇದರಿಂದ ಮಹಿಳೆ ಹೆಚ್ಚು ಹೆಚ್ಚು ಆಹಾರ ತೆಗೆದುಕೊಳ್ಳಬೇಕಾಗುತ್ತದೆ.

ಗರ್ಭಿಣಿಯರಲ್ಲಿ ಮಲಬದ್ಧತೆ ಸಮಸ್ಯೆ; ಮನೆಯಲ್ಲೇ ಇದೆ ಮದ್ದು

ದೇಹದ ತಾಪಮಾನ

ಪ್ರಗ್ನೆನ್ಸಿಯ ಆರಂಭಿಕ ಹಂತದಲ್ಲೇ ದೇಹದ ತಾಪಮಾನ ಹೆಚ್ಚುತ್ತದೆ. ಈ ತಾಪಮಾನವನ್ನು ನಿಯಂತ್ರಣದಲ್ಲಿಡಲು ಮಹಿಳೆ ಹೆಚ್ಚಾಗಿ ನೀರು ಸೇವಿಸಬೇಕು.