ಅಮೆರಿಕಕ್ಕೆ ತೆರಳುವ ಮುನ್ನ ಶಿವಣ್ಣ ಫ್ಯಾಮಿಲಿ ಹೋಟೆಲ್​ನಲ್ಲಿ ಕಾಣಿಸಿಕೊಂಡದ್ದು ಹೀಗೆ... ವಿಡಿಯೋ ವೈರಲ್​

ನಟ ಶಿವರಾಜ್​ ಕುಮಾರ್​ ಅವರು ಚಿಕಿತ್ಸೆಗೆಂದು ಅಮೆರಿಕಕ್ಕೆ ತೆರಳುತ್ತಿದ್ದು, ಇದರ ನಡುವೆಯೇ ಹೋಟೆಲ್​ನಲ್ಲಿ ಫ್ಯಾಮಿಲಿ ಸಹಿತ ಭೇಟಿ ನೀಡಿರುವ ವಿಡಿಯೋ ವೈರಲ್​ ಆಗಿದೆ.
 

Shivaraj Kumar with family visited hotel before departing to America gone viral suc

ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ತುಂಬಾ ಓಡಾಡುತ್ತಿರುವ ಹಾಗೆಯೇ ಅಭಿಮಾನಿಗಳು ಆತಂಕ ಪಡುತ್ತಿರುವ ವಿಷಯ ಏನೆಂದರೆ, ನಟ ಶಿವರಾಜ್‌ ಕುಮಾರ್ ಅವರ ಅನಾರೋಗ್ಯ. ಶಿವರಾಜ್‌ ಕುಮಾರ್ ಅವರು ಚಿಕಿತ್ಸೆಗೆಂದು ಇದೇ 18ರಂದು ಅಮೆರಿಕಕ್ಕೆ ತೆರಳಲಿದ್ದಾರೆ. ಇದಾಗಲೇ ತಿರುಪತಿಗೆ ಭೇಟಿ ಕೊಟ್ಟು ಕೇಶ ಮುಂಡನೆ ಮಾಡಿಸಿಕೊಂಡಿದೆ ಶಿವಣ್ಣ ಫ್ಯಾಮಿಲಿ. ಇದಾಗಲೇ ಹಲವಾರು ದೇವಸ್ಥಾನಗಳಿಗೆ ಕುಟುಂಬಸ್ಥರು ಭೇಟಿ ಕೊಡುತ್ತಿದ್ದಾರೆ. ನಿನ್ನೆಯಷ್ಟೇ  ಶಿವನ ಸಮುದ್ರದ ಮದ್ಯರಂಗ ಸ್ವಾಮಿ ದೇವಸ್ಥಾನ, ಸೋಮೇಶ್ವರ ದೇವಸ್ಥಾನ ಸೇರಿದಂತೆ ಮಾರಮ್ಮನ ದೇಗುಲಗಳಿಗೂ ಹೋಗಿ ಪೂಜೆ ಸಲ್ಲಿಸಿದ್ದಾರೆ. ಕಾವೇರಿ ನದಿಗೆ ಬಾಗಿನ ಅರ್ಪಿಸಿದ್ದಾರೆ. 

ಇದೀಗ ಹೋಟೆಲ್​ ಒಂದರಲ್ಲಿ ಶಿವರಾಜ್​ ಕುಮಾರ್​, ಪತ್ನಿ ಗೀತಾ ಸೇರಿದಂತೆ ಕುಟುಂಬಸ್ಥರು ಕಾಣಿಸಿಕೊಂಡಿದ್ದು, ಅದರ ವಿಡಿಯೋ ವೈರಲ್​ ಆಗುತ್ತಿದೆ. ರುಕ್ಮಿಣಿ ವಸಂತ ಎನ್ನುವವರು ಈ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಇದರಲ್ಲಿ ಶಿವರಾಜ್​ ಕುಮಾರ್​ ಹಾಗೂ ಕುಟುಂಬದವರು ವಿವಿಧ ರೀತಿಯ ಆಹಾರಗಳನ್ನು ಸೇವನೆ ಮಾಡುವುದನ್ನು ನೋಡಬಹುದಾಗಿದೆ. ಇನ್ನು ಶಿವರಾಜ್‌ ಕುಮಾರ್‍‌ ಅವರ ಸಿನಿಮಾದ ಕುರಿತು ಹೇಳುವುದಾದರೆ, ಇವರ  ನಟನೆಯ 'ಭೈರತಿ ರಣಗಲ್' ಸಿನಿಮಾ ಸಾಕಷ್ಟು ಗಳಿಕೆ ಮಾಡಿದೆ. ಈ ಚಿತ್ರವನ್ನು ಶಿವರಾಜ್‌ ಅವರೇ  ನಿರ್ಮಿಸಿದ್ದಾರೆ.    ಈ ಚಿತ್ರದ ಸಂದರ್ಭದಲ್ಲಿ ಅನಾರೋಗ್ಯದ ವಿಷಯವನ್ನು ನಟ ಹೇಳಿದ್ದರು.  ‘ಎಲ್ಲರಂತೆ ನಾನೂ ಮನುಷ್ಯ. ನನಗೂ ತೊಂದರೆ ಆಗಿದೆ. ಯಾರೂ ಭಯ ಪಡುವ ಅಗತ್ಯವಿಲ್ಲ.  ಚಿಕಿತ್ಸೆ ಪಡೆಯುತ್ತಿದ್ದೇನೆ. ಆರಂಭದಲ್ಲಿ ಭಯ ಆಯ್ತು. ಈಗ ಧೈರ್ಯ ತೆಗೆದುಕೊಂಡಿದ್ದೇನೆ. ಚಿಕಿತ್ಸೆಗೆ ಅಮೆರಿಕಕ್ಕೆ ಹೋಗಬೇಕು’ ಎಂದಿದ್ದರು. ಮೆರಿಕದ ಫ್ಲೋರಿಡಾದಲ್ಲಿರುವ ಮಿಯಾಮಿಯಲ್ಲಿ ಶಿವರಾಜ್​ಕುಮಾರ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಯಲಿದೆ. ಡಿಸೆಂಬರ್ 18ಕ್ಕೆ ಅವರು ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಡಿಸೆಂಬರ್ 24ರಂದು ಸರ್ಜರಿ ನಡೆಯಲಿದೆ ಎಂದು ತಿಳಿದು ಬಂದಿದೆ. 

ಅಪ್ಪಾಜಿಯನ್ನು ನಾನು ಎಂದಿಗೂ ಅನುಕರಿಸಲ್ಲ... ಆದರೆ... ಶಿವರಾಜ್​ಕುಮಾರ್​ ಓಪನ್​ ಮಾತು


  ಮಫ್ತಿ ಚಿತ್ರದ ನಂತರದ ಭೈರತಿ ರಣಗಲ್ ಚಿತ್ರದ ಮೇಲೆ ಬಹು ನಿರೀಕ್ಷೆ ಹೊಂದಿರುವ ಅವರು, ಈ ಚಿತ್ರದ  ಮೂಲಕ ತಮ್ಮ 127 ಚಿತ್ರಗಳ ಮೈಲಿಗಲ್ಲನ್ನು ತಲುಪಿದ್ದಾರೆ. ಭೈರತಿ ರಣಗಲ್ ಚಿತ್ರವನ್ನು ನರ್ತನ್ ನಿರ್ದೇಶಿಸಿದ್ದಾರೆ.   ಇದು ಶಿವರಾಜ್‌ ಅವರ ಮಫ್ತಿ ಚಿತ್ರದ ಪ್ರೀಕ್ವೆಲ್ ಚಿತ್ರವಾಗಿದೆ.  ಭೈರತಿ ರಣಗಲ್ ಚಿತ್ರದಲ್ಲಿ ರುಕ್ಮಿಣಿ ವಸಂತ್ ಇದ್ದಾರೆ. ಅಮೃತಧಾರೆ ಖ್ಯಾತಿಯ ಭೂಮಿಕಾ ಅಂದರೆ ಛಾಯಾ ಸಿಂಗ್ ಕೂಡ ನಟಿಸಿದ್ದಾರೆ. ಇದರ ನಡುವೆಯೇ, ಶಿವರಾಜ್‌ ಕುಮಾರ್‌ ಅವರು ಜಾಹೀರಾತು, ರಿಯಾಲಿಟಿ ಷೋಗಳಲ್ಲಿಯೂ ಬ್ಯುಜಿ ಆಗಿದ್ದಾರೆ. ಇದಾಗಲೇ ಕೆಲವು ಜಾಹೀರಾತುಗಳಿಗೆ ಶಿವಣ್ಣ ರಾಯಭಾರಿಯಾಗಿದ್ದರೆ, ಡಾನ್ಸ್‌ ರಿಯಾಲಿಟಿ ಷೋನಲ್ಲಿ ತೀರ್ಪುಗಾರರಾಗಿದ್ದಾರೆ.  

ಕೆಲ ದಿನಗಳ ಹಿಂದೆ ಶಿವರಾಜ್​ ಕುಮಾರ್​ ಅವರು, ಯುಟ್ಯೂಬರ್​ ಕೀರ್ತಿ ನಾರಾಯಣ್​ ಅವರ ಚಾಟ್​ ಷೋನಲ್ಲಿ ಕಾಣಿಸಿಕೊಂಡಿದ್ದು, ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದರು. ಕೀರ್ತಿ ಅವರು ಶಿವರಾಜ್​  ಕುಮಾರ್​ ಅವರ ಬಯೋಪಿಕ್​ ಮಾಡುವುದಾದರೆ, ನಿಮ್ಮ ಪಾತ್ರದಲ್ಲಿ ಯಾರನ್ನು ನೋಡಲು ಇಷ್ಟಪಡುತ್ತೀರಿ ಎಂದು ಕೇಳಿದಾಗ, ಶಿವರಾಜ್​ ಕುಮಾರ್​ ಒಂದು ಸೆಕೆಂಡ್​ ಕೂಡ ಯೋಚಿಸಿದರೆ, ನಾನೇ ಮಾಡಬೇಕು ಎಂದು ಹೇಳಿ ನಕ್ಕಿದ್ದಾರೆ. ಅಂದರೆ, ತಮ್ಮ ಜೀವನ ಚರಿತ್ರೆ ಮಾಡುವುದಾದರೆ ಅದಕ್ಕೆ ತಾವೇ ಸರಿಸಾಟಿ ಎಂದು ಹೇಳಿದ್ದರು. ಅದೇ ವೇಳೆ ನಿಮಗೆ 24 ಗಂಟೆ ಸಾಲುವುದಿಲ್ಲ ಎಂದು ಕೆಲವರು ಹೇಳ್ತಾರೆ. ಅಪ್ಪಿ- ತಪ್ಪಿ ಒಂದು ದಿನಕ್ಕೆ ಇನ್ನಾರು ಗಂಟೆ ಹೆಚ್ಚಿಗೆ ಆದ್ರೆ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದಾಗ ಶಿವರಾಜ್​ ಅವರು ಇನ್ನೊಂದು ಸಿನಿಮಾ ಮಾಡ್ತೀನಿ ಎಂದು ಹೇಳಿ ನಗಿಸಿದ್ದಾರೆ. ಶಿವರಾಜ್ ಕುಮಾರ್​ ಅವರ ಕೂದಲು ಮುಟ್ಟುವ ಅಧಿಕಾರ ಯಾರಿಗೆ ಇದೆ ಎಂದು ಪ್ರಶ್ನಿಸಿದಾಗ, ಅವರು ಉಪೇಂದ್ರ ಅವರ ಹೆಸರನ್ನು ಹೇಳಿದ್ದಾರೆ. ಇದೀಗ ಅವರು ಆರೋಗ್ಯವಂತರಾಗಿ ವಾಪಸಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. 

ನಿಮ್ಮ ಬಯೋಪಿಕ್​ಗೆ ನಟ ಯಾರಾಗ್ಬೇಕು ಎಂಬ ಪ್ರಶ್ನೆಗೆ ಶಿವರಾಜ್​ ಕುಮಾರ್​ ಕೊಟ್ಟ ಉತ್ತರ ನೋಡಿ...

Latest Videos
Follow Us:
Download App:
  • android
  • ios