ಪ್ರೀತಿ, ಪ್ರೇಮದ ದ್ಯೋತಕ ತಾಜ್ ಬಗ್ಗೆ ನಿಮಗಿದು ಗೊತ್ತಿರಲಿಕ್ಕಿಲ್ಲ..!

First Published 4, Aug 2018, 4:46 PM IST
Unknown facts about Taj Mahal
Highlights

ಪ್ರೇಮಿಯಿಂದ, ಪ್ರೇಮಿಗಾಗಿ ಪ್ರೇಮಿಗಳಿಗೋಸ್ಕರ ಕಟ್ಟಿರುವ ತಾಜ್ ಮಹಲ್ ಪ್ರೀತಿಯ ದ್ಯೋತಕವೆಂದು ಪಠ್ಯದಲ್ಲಿ ಓದಿದ್ದೇವೆ. ಅತ್ಯಂತ ಪ್ರೀತಿ ಪಾತ್ರಳಾದ ತನ್ನ 13ನೇ ಹೆಂಡತಿ ಮಮ್ತಾಜ್ ಮೇಲಿನ ಪ್ರೀತಿಯ ದ್ಯೋತಕವಾಗಿ ಶಹಜಹಾನ್ ಈ ಭವ್ಯ ಕಟ್ಟಡವನ್ನು ನಿರ್ಮಿಸಿದನಂತೆ!

ತಾಜ್ ಮಹಲ್ ಕಟ್ಟಿ ನೂರಾರು ವರ್ಷಗಳಾದರೂ ಅದರ ಛಾರ್ಮ್ ಇನ್ನೂ ಕಳೆಗುಂದಿಲ್ಲ. ಪ್ರತಿಯೊಬ್ಬ ಪ್ರೇಮಿಯೂ ತನ್ನ ಪ್ರೇಯಸಿಗೆ ತಾಜ್ ಕಟ್ಟಿ ಕೊಡುವ ಕನಸು ಹುಟ್ಟಿಸಿರುತ್ತಾನೆ. ಆದರೆ, ಅದು ಅಸಾಧ್ಯವೆಂಬುವುದು ಎಲ್ಲರಿಗೂ ಗೊತ್ತು. ಇಂಥ ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್‌ ಮಹಲ್ ಸೌಂದರ್ಯ ವರ್ಣಿಸಲು ಅಸಾಧ್ಯ. ಇಂಥ ಐತಿಹಾಸಿಕ ಕಟ್ಟಡದ ಬಗ್ಗೆ ನಿಮಗೆ ತಿಳಿಯದ ಕೆಲವು ಸಂಗತಿಗಳು ಇಲ್ಲಿವೆ...

ದೃಷ್ಟಿಭ್ರಮೆ 

ತಾಜ್ ಮಹಾಲ್ ಪ್ರವೇಶಿಸುವ ಮುಖ್ಯ ದ್ವಾರದಿಂದ ನೋಡಿದರೆ, ತಾಜ್ ತುಂಬಾ ಹತ್ತಿರದಲ್ಲಿರುವಂತೆ ಭಾಸವಾಗುತ್ತದೆ. ಹತ್ತಿರ ಹೋದಾಗ, ಅದರ ಗಾತ್ರ ಸಣ್ಣದಾಗುತ್ತದೆ. ಅಲ್ಲದೇ ಅದರ ಸುತ್ತವಿರುವ ಪಿಲ್ಲರ್‌ಗಳು ನೇರವಿದ್ದಂತೆ ಕಂಡರೂ, ತುಸು ವಾಲಿವೆ.

ಪುರಾಣ

ಈ ಪ್ರೀತಿಯ ದ್ಯೋತಕವಾದ ತಾಜ್ ಮಾದರಿ ಮತ್ತೆಲ್ಲೂ ನಿರ್ಮಾಣವಾಗಬಾರದು ಎಂಬ ಕಾರಣಕ್ಕೆ ಶಹಜಹಾನ್ ಕಲಾವಿದರು ಹಾಗೂ ಕಾರ್ಮಿಕರ ಕೈ ಬೆರಳು ಕತ್ತರಿಸಿದ್ದನಂತೆ. 

ಖುತಾಬ್ ಮಿನಾರ್‌ಗಿಂತಲೂ ಎತ್ತರ..

ತಾಜ್‌ ಮಹಲ್ ಖುತಾಬ್ ಮಿನಾರ್‌ಗಿಂತಲೂ 5 ಅಡಿ ಎತ್ತರವಿದ್ದು, ಅದೆಷ್ಟು ಅಂದವಾಗಿ ಈ ಸ್ಮಾರಕವನ್ನು ವಾಸ್ತುಶಿಲ್ಪಿಗಳು ನಿರ್ಮಿಸಿದ್ದಾರೆಂದರೆ, ಅಷ್ಟು ಎತ್ತರವಿದೆ ಎಂದೆನಿಸುವುದೇ ಇಲ್ಲ. 

ಬದಲಾಗುವ ಬಣ್ಣ...

ಸೂರ್ಯನ ಕಿರಣಗಳಿಗೆ ತಕ್ಕಂತೆ ತಾಜ್ ತನ್ನ ಬಣ್ಣ ಬದಲಿಸುತ್ತದೆ. ಇದನ್ನು ನೋಡಲೆಂದೇ ಜನರು ಕಾಯುತ್ತಾ ಕುಳಿತಿರುತ್ತಾರೆ. ಬೆಳಗ್ಗೆ ಪಿಂಕ್ ಅಥವಾ ಬೂದು ಬಣ್ಣ, ಮಧ್ಯಾಹ್ನ ಅಚ್ಚ ಬಿಳಿ ಹಾಗೂ ಸಂಜೆ ಕಿತ್ತಳೆ ಬಣ್ಣಕ್ಕೆ ತಿರುಗುತ್ತದೆ. ಅದರಲ್ಲಿಯೂ ಗ್ರಹಣ ಮತ್ತು ಹುಣ್ಣಿಮೆ ದಿನವಂತೂ ಇದರ ಸೌಂದರ್ಯವನ್ನು ಸವಿದವರೇ ಬಲ್ಲರು. ಅದಕ್ಕಾಗಿಯೋ ಈ ದಿನಗಳಲ್ಲಿ ಟಿಕೆಟ್ ಬೆಲೆ ಅಧಿಕವಾಗಿರುತ್ತದೆ.

ಸಮಾಧಿಯಲ್ಲಿ ಮಮ್ತಾಜ್ ಇಲ್ಲ

ಕಥೆಗಳ ಪ್ರಕಾರ ತಾಜ್ ಮಹಾಲ್‌ನಲ್ಲಿ ಮಮ್ತಾಜ್ ಮತ್ತು ಶಹಜಹಾನ್ ಸಮಾಧಿಯಿದೆ. ಅದರೆ ಅಲ್ಲಿ ಯಾವುದೇ ಸಮಾಧಿಯೂ ಇಲ್ಲ. ಅಲ್ಲೊಂದು ಅಮೂಲ್ಯವಾದ ಕಲ್ಲಿದ್ದು, ಅದನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಸಮಾಧಿ ಇದೆ ಎಂದು ಹೇಳಿ, ಯಾರಿಗೂ ಹತ್ತಿರ ಸುಳಿಯಲು ಬಿಡುವುದಿಲ್ಲ.

loader