ಹೆಚ್ಚಿನವರು ತಮ್ಮ ಹೊರಗಿನ ಡ್ರೆಸ್‌ನೆಡೆ ಗಮನಿಸುತ್ತಾರೆ. ಆದರೆ ಅಂಡರ್ ವೇರ್ ಅಥವಾ ಅಂಡರ್ ಗಾರ್ಮೆಂಟ್ಸ್ ಹೈಜಿನ್ ಬಗ್ಗೆ ಗೊತ್ತೇ ಇರುವುದಿಲ್ಲ. ಇದರಿಂದ ದೇಹದಿಂದ ವಿಚಿತ್ರ ವಾಸನೆ ಬಂದು, ಹಲವು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಯೂರಿನರಿ ಟ್ರ್ಯಾಕ್ಟ್ ಇನ್ಫೆಕ್ಷನ್‌ನಿಂದ ಹಿಡಿದು, ಮತ್ತಿತರ ರೋಗಗಳಿಗೂ ಕಾರಣವಾಗಬಲ್ಲದು.

  • ಯುಟಿಐ ಅರ್ಥಾತ್ ಮೂತ್ರ ಮಾರ್ಗ ಸೋಂಕು ಒಂದು ಬ್ಯಾಕ್ಟಿರಿಯಾದಿಂದ ಬರುವ ರೋಗ. ಇದು ಮೂತ್ರನಾಳದ ಭಾಗದಲ್ಲಿ ಸಮಸ್ಯೆ ಉಂಟಾಗುವಂತೆ ಮಾಡುತ್ತದೆ. 
  • ಅಂಡರ್ ಗಾರ್ಮೆಂಟ್ ಅನ್ನು ನೀವು ವಾಶ್ ಮಾಡಿದ  ನಂತರ ಬಿಸಿಲಿನಲ್ಲಿ ಒಣಗಿಸಬೇಕು. ಬೆಳಕು ಮತ್ತು ಗಾಳಿಯಿಂದ ದೂರವಿಟ್ಟರೆ ಹಾಗೂ ಜನನಾಂಗಕ್ಕೆ ನಿರಂತರ ಸಂಪರ್ಕದಲ್ಲಿರುವುದರಿಂದ ಕೀಟಾಣುಗಳು ಉತ್ಪತ್ತಿಯಾಗುತ್ತದೆ. 
  • ಶುದ್ಧ ಒಳವಸ್ತ್ರ ಧರಿಸದೇ ಇದ್ದರೆ ಕಿಡ್ನಿ ಸ್ಟೋನ್ ಉಂಟಾಗಬಹುದು. ಇದು ಅಸುರಕ್ಷಿತ ಲೈಂಗಿಕ ಸಂಬಂಧದಿಂದಲೂ ಬರಬಹುದು. 
  • ಸ್ವಚ್ಛವಾಗಿರದ ಒಳವಸ್ತ್ರ ಧರಿಸದೇ ಇದ್ದರೆ, ಕ್ಲೀನ್ ಆಗಿರದ ಟಾಯ್ಲೆಟ್ ಬಳಸಿದರೆ ವೈರಸ್ ಹರಡಲೂಬಹುದು. ಇದರಿಂದ ಹಾನಿಕಾರಕ ಕೀಟಾಣು ದೇಹದೊಳಗೆ ಪ್ರವೇಶಿಸುತ್ತದೆ. ಇದರಿಂದ ಇನ್ಫೆಕ್ಷನ್ ಗ್ಯಾರಂಟಿ. 

ಮೂತ್ರ ಬಂದ್ರೆ ತಡ್ಕೋಬಾರ್ದು... ಇಲ್ಲಾಂದ್ರೆ ಜೀವಕ್ಕೆ ತೊಂದ್ರೆ ತಪ್ಪಿದ್ದಲ್ಲ

  • ಅನೇಕರು ಹಲವು ದಿನಗಳವರೆಗೆ ಒಂದೇ ಒಳವಸ್ತ್ರ ಧರಿಸುತ್ತಾರೆ. ಇದರಿಂದ ಹೆಚ್ಚು ಹೆಚ್ಚು ಕೀಟಾಣು ಉತ್ಪತ್ತಿಯಾಗುತ್ತದೆ. ಜನನಾಂಗದ ಹತ್ತಿರದ ಭಾಗದಲ್ಲಿ ಇನ್ಫೆಕ್ಷನ್ ಆಗಬಹುದು. 
  • ಒಳವಸ್ತ್ರವನ್ನೂ ಒಣಗಿದ ಜಾಗದಲ್ಲಿರಿಸಿ.  ಹೊಸ ಒಳವಸ್ತ್ರ ಧರಿಸುವ ಮುನ್ನ ಅದನ್ನು ಚೆನ್ನಾಗಿ ವಾಷ್ ಮಾಡಿ. 
  • ಸಾಧ್ಯವಾದಷ್ಟು ಕಾಟನ್ ಒಳವಸ್ತ್ರ ಬಳಸಿ. ಸಿಂಥೆಟಿಕ್ ಬಟ್ಟೆಯ ಒಳವಸ್ತ್ರ  ಧರಿಸಿದರೆ ಚರ್ಮದ ಮೇಲೂ ಪರಿಣಾಮ ಬೀರಬಹುದು.
  • ವರ್ಷದ ನಂತರ ಒಳ ಉಡುಪನ್ನು ಬದಲಾಯಿಸುವುದೂ ಉತ್ತಮ ಅಭ್ಯಾಸ.