Asianet Suvarna News Asianet Suvarna News

ಮೂತ್ರ ಬಂದ್ರೆ ತಡ್ಕೋಬಾರ್ದು... ಇಲ್ಲಾಂದ್ರೆ ಜೀವಕ್ಕೆ ತೊಂದ್ರೆ ತಪ್ಪಿದ್ದಲ್ಲ

ಕೆಲವರಿಗೆ ಸೋಮಾರಿತನವೋ ಏನೋ, ಮೂತ್ರಕ್ಕೆ ಪದೆ ಪದೇ ಹೋಗುವುದೇ ಇಲ್ಲ. ಮೂತ್ರ ಸರಾಗವಾಗಿ ಆಗುವಷ್ಟು ನೀರೂ ಕುಡಿಯುವುದೂ ಇಲ್ಲ. ಇಂಥ ಅಭ್ಯಾಸ ಜೀವಕ್ಕೇ ತರುತ್ತೆ ಕುತ್ತು....

symptoms and cause of bladder control problem
Author
Bengaluru, First Published Jan 13, 2019, 1:22 PM IST

ಎಲ್ಲಾದ್ರೂ ಟ್ರಾವೆಲ್ ಮಾಡುತ್ತಿದ್ದರೆ ಅಥವಾ ಅರ್ಜೆಂಟ್ ಕೆಲಸದಲ್ಲಿದ್ದರೆ ಮೂತ್ರ ಮಾಡೋದನ್ನೇ ಮರೆತು ಬಿಡುತ್ತಾರೆ ಜನರು. ಅಯ್ಯೋ ಇಲ್ಲಿ ಇಷ್ಟೊಂದು ಜನ ಇದ್ದಾರೆ ವಾಶ್ ರೂಮ್ ಹೋಗಿ ಮೂತ್ರ ಮಾಡೋದು ಹೇಗೆ ಎಂದು ಅಂದುಕೊಳ್ಳುತ್ತಾರೆ. ಹಾಗೆ ಅಂದುಕೊಂಡು ಮೂತ್ರ ತಡೆ ಹಿಡಿದರೆ ಜೀವಕ್ಕೆ ಕುತ್ತು ತರೋದರಲ್ಲಿ ಸಂಶಯವಿಲ್ಲ. 

ಹೌದು ಮೂತ್ರ ತಡೆಯುವುದರಿಂದ ಹಲವಾರು ಸಮಸ್ಯೆಗಳು ಕಾಡುತ್ತವೆ.. 

ಕಿಡ್ನಿ ಸ್ಟೋನ್‌: ಮೂತ್ರವನ್ನು ತಡೆಹಿಡಿಯುತ್ತಿದ್ದರೆ ಕಿಡ್ನಿಯಲ್ಲಿ ಕಲ್ಲಾಗುತ್ತದೆ. ದೇಹದಲ್ಲಿ ಹೆಚ್ಚಿನ ಸೋಡಿಯಂ ಮತ್ತು ಕ್ಯಾಲ್ಶಿಯಂ ಉತ್ಪತ್ತಿಯಾಗಿ ಕಿಡ್ನಿ ಸ್ಟೋನ್‌ಗೆ ಕಾರಣವಾಗುತ್ತದೆ. ಇದು ವಿಪರೀತ ಎನ್ನುವಷ್ಟು ಹೊಟ್ಟೆನೋವು ಕಾಡುತ್ತದೆ. 

ಮೂತ್ರಕೋಶ ಊತ: ಮೂತ್ರಕೋಶದಲ್ಲಿ ಕೇವಲ 15 ಔನ್ಸ್‌ಗಳಷ್ಟು ಮಾತ್ರ ಮೂತ್ರ ಹಿಡಿದಿಡಲು ಸಾಧ್ಯ. ದಿನದಲ್ಲಿ 8 ಗ್ಲಾಸ್‌ ನೀರು ಕುಡಿದರೆ ಅದರ ಸಾಮರ್ಥ್ಯ 64 ಔನ್ಸ್‌ ಆಗುತ್ತದೆ. ಇದರ ಕಾಲು ಭಾಗದಷ್ಟನ್ನು ಕಂಟ್ರೋಲ್‌ ಮಾಡುವ ಸಾಮರ್ಥ್ಯವೂ ಮೂತ್ರಕೋಶಕ್ಕೆ ಇಲ್ಲ. 

ಇದನ್ನೂ ಓದಿ: ಮೂತ್ರದ ಬಣ್ಣದಲ್ಲಿದೆ ಆರೋಗ್ಯದ ಗುಟ್ಟು

ಮೂತ್ರನಾಳದಲ್ಲಿ ಉರಿ: ಮೂತ್ರವನ್ನು ಹೆಚ್ಚು ಹೊತ್ತು ತಡೆ ಹಿಡಿಯುವುದರಿಂದ ಮೂತ್ರ ವಿಸರ್ಜನೆ ಮಾಡುವಾಗ ಉರಿ ಕಂಡು ಬರುತ್ತದೆ. ಇದಕ್ಕೆ ಉರಿ ಮೂತ್ರ ಸಮಸ್ಯೆ ಎನ್ನುತ್ತಾರೆ. ಇದರಿಂದ ಹೊಟ್ಟೆ ನೋವೂ ಕಾಣಿಸಿಕೊಳ್ಳುತ್ತದೆ. 

ಬ್ಯಾಕ್ಟಿರಿಯಾ ಸಮಸ್ಯೆ: ಮೂತ್ರನಾಳದಲ್ಲಿ ಬ್ಯಾಕ್ಟೀರಿಯಾ ಹೆಚ್ಚಾಗಿ ಅದು ದೇಹಕ್ಕೆ ಹರಡಿ ನಂತರ ಜ್ವರ ಬರುವ ಸಂಭವವಿದೆ. ಚಳಿಯೂ ಆರಂಭವಾಗುತ್ತದೆ. ಹೊಟ್ಟೆ ನೋವು, ವಿಪರೀತ ನೋವು, ಆತಂಕ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. 

ಇದನ್ನೂ ಓದಿ: ಮೂತ್ರಕೋಶ ಸೋಂಕು ತರುತ್ತೆ ಈ ಬ್ಯಾಕ್ಟೀರಿಯ! ಇರಲಿ ಎಚ್ಚರ

Follow Us:
Download App:
  • android
  • ios