ಪುಸ್ತಕವನ್ನು ಹತ್ತಾರು ವರ್ಷ ಸುಂದರವಾಗಿಡ್ಬೇಕೆಂದ್ರೆ ಈ Tips ಬಳಸಿ
ಎಷ್ಟೋ ವರ್ಷಗಳ ಹಿಂದೆ ಪುಸ್ತಕ ಖರೀದಿ ಮಾಡಿರ್ತೇವೆ. ಅದನ್ನು ಈಗ ಓದಲು ಸಮಯ ಸಿಕ್ಕಿರುತ್ತೆ. ಎಲ್ಲೋ ಮೂಲೆಯಲ್ಲಿ ಬಿದ್ದ ಪುಸ್ತಕದ ಪುಟ ತೆಗೆದು ನೋಡಿದ್ರೆ ಪುಸ್ತಕಕ್ಕೆ ಹುಳು ಹಿಡಿದಿರುತ್ತದೆ. ಇಲ್ಲವೆ ಪುಟಗಳು ಹರಿದಿರುತ್ವೆ. ಪ್ರೀತಿಯಿಂದ ಖರೀದಿಸಿದ ಪುಸ್ತಕ ಸದಾ ನಮ್ಮ ಜೊತೆಗಿರಬೇಕೆಂದ್ರೆ ಅದರ ಆರೈಕೆ ಮುಖ್ಯ.
ಓದು (Read) ವ ಹವ್ಯಾಸ (Hobby) ನಮ್ಮ ಜ್ಞಾನ ವೃದ್ಧಿಯ ಜೊತೆಗೆ ಜೀವನದ ಪ್ರಮುಖ ಪಾಠಗಳನ್ನು ಕಲಿಸುತ್ತದೆ. ಪುಸ್ತಕ (Book) ವನ್ನು ಒಳ್ಳೆ ಸ್ನೇಹಿತ (Friend) ಎನ್ನಬಹುದು. ಮೊಬೈಲ್,ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಜನರು ಓದುವ ಹವ್ಯಾಸ ಮರೆಯುತ್ತಿದ್ದಾರೆ. ಕೆಲವೇ ಕೆಲವು ಜನರು ಪುಸ್ತಕದ ಮಹತ್ವ ಅರಿತಿದ್ದಾರೆ. ಪುಸ್ತಕವನ್ನು ವಜ್ರ, ಆಭರಣಗಳಿಗೆ ಹೋಲಿಸಿದ್ರೆ ಅತಿಶಯೋಕ್ತಿ ಎನ್ನಿಸುವುದಿಲ್ಲ. ಕೆಲವರು ಪುಸ್ತಕವನ್ನು ಅತಿಯಾಗಿ ಪ್ರೀತಿಸುತ್ತಾರೆ. ನೆಚ್ಚಿನ ಪುಸ್ತಕಗಳು ಸದಾ ಇರಬೇಕೆಂದು ಬಯಸ್ತಾರೆ. ಅದೇ ಕಾರಣಕ್ಕೆ ಮನೆಯಲ್ಲಿಯೇ ಸಣ್ಣ ಗ್ರಂಥಾಲಯ ನಿರ್ಮಾಣವಾಗಿರುತ್ತದೆ. ಆದ್ರೆ ಹಳೆಯ ಪುಸ್ತಕಗಳು ಮಾತ್ರವಲ್ಲ ಕೆಲ ದಿನಗಳ ಹಿಂದೆ ಖರೀದಿಸಿ ಪುಸ್ತಕಗಳು ಕಲೆಯಾಗಿ,ಹರಿದು ಹಾಳಾಗುವುದಿದೆ. ಕೆಲವು ಸರಳ ಉಪಾಯದಿಂದ ಪುಸ್ತಕಗಳನ್ನು ನಿಮ್ಮ ಜೀವನದ ಸಂಗಾತಿಯನ್ನಾಗಿ ಮಾಡಬಹುದು.
ಪುಸ್ತಕಗಳನ್ನು ಹೀಗೆ ಸುಂದರವಾಗಿಡಿ
ಸ್ವಚ್ಛತೆ ಬಗ್ಗೆ ಗಮನ : ಪುಸ್ತಕವನ್ನು ದೇವರಿಗೆ ಹೋಲಿಕೆ ಮಾಡಲಾಗುತ್ತೆ. ನಾವು ಯಾವುದೇ ಕೊಳಕು ಕೈಗಳಲ್ಲಿ, ತಿಂದ ಕೈಗಳಲ್ಲಿ ದೇವರನ್ನು ಮುಟ್ಟುವುದಿಲ್ಲ. ಹಾಗೆ ಪುಸ್ತಕಗಳನ್ನು ಕೂಡ ಕೊಳಕು ಕೈಗಳಿಂದ ಮುಟ್ಟಬಾರದು. ಶೆಲ್ಫ್ ನಿಂದ ಪುಸ್ತಕಗಳನ್ನು ತೆಗೆದುಹಾಕಬೇಕಾದರೆ ಮೊದಲು ಕೈಗಳನ್ನು ಸ್ವಚ್ಛಗೊಳಿಸಿ, ಒರೆಸಿ ನಂತರ ಪುಸ್ತಕವನ್ನು ಸ್ಪರ್ಶಿಸಿ. ಹೀಗೆ ಮಾಡುವುದರಿಂದ ಪುಸ್ತಕದ ಪುಟಗಳು ಕಲೆಯಾಗುವುದಿಲ್ಲ. ಅನೇಕ ಬಾರಿ ಕೈಯಲ್ಲಿರುವ ಎಣ್ಣೆ ಪುಸ್ತಕಗಳಿಗೆ ಅಂಟಿಕೊಳ್ಳುತ್ತದೆ. ಇದರಿಂದಾಗಿ ಪುಸ್ತಕವನ್ನು ಹುಳು ತಿನ್ನಲು ಶುರು ಮಾಡುತ್ತದೆ. ಇದ್ರಿಂದ ಪುಸ್ತಕ ಹಾಳಾಗುತ್ತದೆ.
ಎಂಜಲು ಬಳಸಬೇಡಿ : ಬಹುತೇಕರು ಪುಸ್ತಕದ ಪುಟ ತಿರುಗಿಸುವಾಗ ಎಂಜಲು ಹಾಕ್ತಾರೆ. ಹೀಗೆ ಮಾಡಿದ್ರೆ ಪುಸ್ತಕದ ಮೇಲೆ ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಾರಂಭಿಸುತ್ತವೆ. ಇದ್ರಿಂದ ಪುಸ್ತಕ ಹಾಳಾಗುತ್ತದೆ. ಪುಟಕ್ಕೆ ಎಂಜಲು ಹಾಕುವ ಅಭ್ಯಾಸವಿದ್ದರೆ ಇಂದೇ ಅದನ್ನು ಬಿಟ್ಟುಬಿಡಿ. ಎಂಜಲಿನ ಬದಲು ಆರ್ದ್ರ ಸ್ಪಾಂಜ್ ಬಳಸಿ.
ಸೂರ್ಯ ನಮಸ್ಕಾರದೊಂದಿಗೆ ಈ ಯೋಗಾಸನ ಮಾಡಿದ್ರೆ ಉತ್ತಮ ಅರೋಗ್ಯ
ಪುಸ್ತಕಗಳ ಜೋಡಣೆ : ಪುಸ್ತಕಗಳನ್ನು ಯಾವಾಗಲೂ ಅಂದವಾಗಿ ಇಟ್ಟುಕೊಳ್ಳಬೇಕು. ಅದನ್ನು ಶೆಲ್ಫ್ ನಲ್ಲಿ ಜೋಡಿಸಿದಾಗ ಅದು ಸರಿಯಾಗಿರುತ್ತದೆ. ಕಂಡ ಕಂಡಲ್ಲಿ ಪುಸ್ತಕವನ್ನು ಎಸೆದಾಗ ಅಥವಾ ಅನೇಕ ವಸ್ತುಗಳ ಮಧ್ಯೆ ಪುಸ್ತಕ ಸಿಕ್ಕಿ ಬಿದ್ದಾಗ ಅದನ್ನು ಹುಡುಕಿ ತೆಗೆಯುವುದು ಕಷ್ಟ. ಹಾಗೆ ತೆಗೆಯುವಾಗ ಪುಟಗಳು ಹರಿಯುವ ಸಾಧ್ಯತೆಯಿರುತ್ತದೆ. ಶೆಲ್ಫ್ ನಲ್ಲಿ ಕೂಡ ಸಣ್ಣ ಪುಸ್ತಕವನ್ನು ಮುಂದೆ ಹಾಗೂ ದೊಡ್ಡ ಪುಸ್ತಕವನ್ನು ಹಿಂದೆ ಇಡಿ.
ಪುಸ್ತಕಕ್ಕೆ ಬೈಂಡಿಂಗ್ : ಪುಸ್ತಕವನ್ನು ಹಾಗೆ ಇಟ್ಟರೆ ಹರಿದು ಹಾಳಾಗುವ ಸಾಧ್ಯತೆಯಿರುತ್ತದೆ. ನೀರು ತಾಗಿ ಪುಸ್ತಕ ಹರಿಯಬಹುದು. ಹಾಗಾಗಿ ತೇವಾಂಶದಿಂದ ಪುಸ್ತಕವನ್ನು ರಕ್ಷಿಸಲು ಬೈಂಡಿಂಗ್ ಹಾಕಿ.
ಸೂರ್ಯನಿಂದ ಪುಸ್ತಕದ ರಕ್ಷಣೆ : ಸೂರ್ಯನ ಕಿರಣಗಳು ನೇರವಾಗಿ ಬೀಳುವ ಜಾಗದಲ್ಲಿ ಪುಸ್ತಕಗಳನ್ನು ಇಡಬೇಡಿ. ಯುವಿ ಕಿರಣಗಳು ಪುಸ್ತಕಗಳ ಪುಟಗಳನ್ನು ಹಳದಿ ಮಾಡುತ್ತವೆ. ಇದ್ರಿಂದ ಪುಸ್ತಕದಲ್ಲಿರುವ ಅಕ್ಷರಗಳು ಸರಿಯಾಗಿ ಕಾಣಿಸುವುದಿಲ್ಲ. ಪುಸ್ತಕಕ್ಕೆ ಶೆಲ್ಫ್ ಅಥವಾ ಕಪಾಟು ಬಳಸುತ್ತಿದ್ದರೆ ಆ ಕಪಾಟನ್ನು ಕಿಟಕಿಯಿಂದ ದೂರವಿಡಿ. ನೇರ ಸೂರ್ಯನ ಬೆಳಕಿನಿಂದ ನಿಮ್ಮ ಪುಸ್ತಕಗಳನ್ನು ಸುರಕ್ಷಿತವಾಗಿರಿಸಲು ನೀವು ವಿಂಡೋ ಫಿಲ್ಮ್ ಅಥವಾ ಕರ್ಟನ್‌ಗಳನ್ನು ಸಹ ಬಳಸಬಹುದು.
ದೊಡ್ಡ ಗಾತ್ರದ ಬುಕ್ ಮಾರ್ಕ್ : ದೊಡ್ಡ ಬುಕ್‌ಮಾರ್ಕ್‌ಗಳು ಪುಸ್ತಕಗಳ ಬೈಂಡಿಂಗ್ ಮತ್ತು ಹೊಲಿಗೆಯ ಮೇಲೆ ಪರಿಣಾಮ ಬೀರುತ್ತವೆ. ರೇಷ್ಮೆ ಅಥವಾ ಸ್ಯಾಟಿನ್ ರಿಬ್ಬನ್ ಬಳಸಿದರೆ ಒಳ್ಳೆಯದು. ಬುಕ್ ಮಾರ್ಕ್ ಬದಲು ಪುಸ್ತಕದ ಪುಟ ಮಡಚುವ ಹವ್ಯಾಸವನ್ನಿಟ್ಟುಕೊಳ್ಳಬೇಡಿ.
ಹೀಗೆಲ್ಲಾ ಆಗ್ತಿದ್ರೆ ನೀವು Love Addict ಆಗಿದ್ದೀರಾ ಎಂದರ್ಥ
ಪ್ಲಾಸ್ಟಿಕ್‌ನಲ್ಲಿ ಸಂಗ್ರಹ : ಪುಸ್ತಕವನ್ನು ಸುರಕ್ಷಿತವಾಗಿಡಲು ಬಯಸಿದ್ದರೆ ಅದನ್ನು ರೊಟ್ಟಿನ ಬಾಕ್ಸ್ ಅಥವಾ ಬಟ್ಟೆಯಲ್ಲಿ ಕಟ್ಟಿಡಿ. ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಕವರ್ ನಲ್ಲಿ ಇಡಬೇಡಿ. ಪ್ಲಾಸ್ಟಿಕ್ ಕವರ್ ನಲ್ಲಿ ಗಾಳಿ ತಲುಪದೆ ಪುಸ್ತಕ ಹಾಳಾಗುತ್ತದೆ.