ಮನೆಯಲ್ಲಿ ಮಹಿಳೆಯರು ಹೆಚ್ಚಿಗೆ ಸಮಯ ಕಳೆಯುವುದೇ ಕಿಚನ್‌ನಲ್ಲಿ. ಹೀಗಾಗಿ, ಅಡುಗೆಮನೆ ಕಟ್ಟಿಸುವಾಗ ಬಹಳ ಎಚ್ಚರಿಕೆ ವಹಿಸಬೇಕು. ಬಳಸುವಾಗಲೇ ಹಲವು ತಪ್ಪುಗಳು, ಎಡವಟ್ಟುಗಳು ಗಮನಕ್ಕೆ ಬರುವುದು. ಆದರೆ, ಪದೇ ಪದೆ ಅಲ್ಟ್ರೇಶನ್ ಮಾಡಿಸಲು ಅದೇನು ಬಟ್ಟೆಯಲ್ಲವಲ್ಲ. ಹೀಗಾಗಿ, ಕಿಚನ್ ಪ್ಲ್ಯಾನಿಂಗ್ ಸರಿಯಾಗಿರಬೇಕು. ಅಡುಗೆಮನೆ ಕಟ್ಟಿಸುವಾಗ ಈ ಟ್ರೆಂಡ್‌ಗಳನ್ನು ಅವಾಯ್ಡ್ ಮಾಡಿ.

ಬಣ್ಣಗಳ ಆಯ್ಕೆ 

ಅಡುಗೆ ಮನೆ ಗೋಡೆಗೆ ಬಿಳಿ, ಗುಲಾಬಿಯಂಥ ತಿಳಿವರ್ಣಗಳನ್ನು ಅವಾಯ್ಡ್ ಮಾಡಿ. ಅಡುಗೆ ಮಾಡುವಾಗ ಒಗ್ಗರಣೆ, ಕುದಿವ ಸಾಂಬಾರ್ ಇತರೆ ಆಹಾರ ವಸ್ತುಗಳು ಗೋಡೆಗೆ ಹಾರುವುದು ಸಾಮಾನ್ಯ. ಹೊಗೆಯ ಸಮಸ್ಯೆಯೂ ಇರಬಹುದು. ಆ ಕಲೆಗಳು ತಿಳಿಬಣ್ಣದ ಗೋಡೆಯಲ್ಲಿ ಎದ್ದು ಕಾಣುತ್ತವೆ. ಗೋಡೆಗೆ ಟೈಲ್ಸ್ ಹಾಕಿದರೆ ಈ ಕಲೆಗಳು ಹಸಿಯಾಗಿದ್ದಾಗ ಒರೆಸಿ ತೆಗೆಯುವುದು ಸುಲಭ. 

ಉದ್ಯೋಗಸ್ಥ ಮಹಿಳೆಯ ಅಡುಗೆಕೋಣೆಯಲ್ಲಿರಲೇಬೇಕಾದ ಸಾಧನಗಳಿವು

ಫ್ಯಾನ್ಸಿ ಬಣ್ಣಗಳ ಸಾಮಗ್ರಿಗಳು

ಕಿಚನ್ ಅಪ್ಲೈಯನ್ಸ್‌ಗಳು ಫ್ಯಾನ್ಸಿ ಬಣ್ಣದಲ್ಲಿದ್ದರೆ ಕೆಲವು ದಿನ ಚೆನ್ನಾಗಿ ಎನಿಸಬಹುದು. ಆದರೆ, ಗಾಢವರ್ಣಗಳು ಕೆಲ ದಿನಗಳಲ್ಲೇ ಬೋರ್ ಬರುತ್ತವೆ. ಅಲ್ಲದೆ ಕಿಚನ್‌ಗಾಗಿ ಯಾವುದೇ ವಸ್ತುಗಳನ್ನು ಖರೀದಿಸಿದರೂ ಆ ಫ್ಯಾನ್ಸಿ ಬಣ್ಣಗಳಿಗೆ ಮ್ಯಾಚ್ ಮಾಡುವಷ್ಟರಲ್ಲಿ ಹೈರಾಣಾಗಿ ಬಿಡುತ್ತೀರಿ. ಹೀಗಾಗಿ, ಕಪ್ಪುಬಣ್ಣದ ಅಪ್ಲೈಯನ್ಸ್‌ಗಳು ಹಾಗೂ ಸ್ಟೇನ್‌ಲೆಸ್ ಸ್ಟೀಲ್‌ಗಳ ಆಯ್ಕೆ ಅಡುಗೆ ಮನೆಗೆ ಉತ್ತಮ. 

ರೆಡಿಮೇಡ್ ಡೆಸ್ಕ್‌ಗಳು

ಆರಂಭದಲ್ಲಿ ಕಿಚನ್‌ಗೆ ಎಷ್ಟು ಡೆಸ್ಕ್, ಡ್ರಾಗಳಿದ್ದರೂ ಸಾಲದು ಎನಿಸುತ್ತದೆ. ಆದರೆ, ಒಮ್ಮೆ ಬಳಸಲು ಆರಂಭಿಸಿದ ಮೇಲೆ ಅವುಗಳು ಖಾಲಿ ಹೊಡೆಯುತ್ತವೆ. ಇಲ್ಲವೇ ಸಾಮಾನ್ಯವಾಗಿ ಬಳಸದ ವಸ್ತುಗಳನ್ನೆಲ್ಲ ಡಂಪ್ ಮಾಡಿ ಮುಚ್ಚಿಡುವ ಡಸ್ಟ್‌ಬಿನ್‌ನಂತಾಗುತ್ತವೆ. ಜಿರಲೆಗಳು ರಾಜ್ಯಭಾರ ಮಾಡಲಾರಂಭಿಸಿದ ಮೇಲಂತೂ ಆ ಡೆಸ್ಕ್‌ಗಳನ್ನು ಕೊಂಡಿದ್ದಕ್ಕಾಗಿ ಕೊರಗಲಾರಂಭಿಸುವಿರಿ. ಕ್ಲೀನಿಂಗ್ ಕೂಡಾ ಕಷ್ಟ. ಅದರ ಬದಲಿಗೆ ಸಾಧ್ಯವಾದಷ್ಟು ಓಪನ್ ಸ್ಲ್ಯಾಬ್‌ಗಳನ್ನು ಮಾಡಿಕೊಳ್ಳಿ. 

ಮನೆ ಮಂದಿ ಆರೋಗ್ಯಕ್ಕೆ ತಪ್ಪದಿರಿ ಕಿಚನ್ ರೂಲ್ಸ್...

ಹ್ಯಾಂಗಿಗ್ ಪಾಟ್ ಹಲಗೆಗಳು

ತಲೆ ಬುಡದಲ್ಲಿ ಕಾವಲಿ, ಸೌಟುಗಳೆಲ್ಲ ನೇತಾಡಬೇಕೆಂಬ ವಿಚಿತ್ರ ಬಯಕೆ ಅದೇಕೋ? ಹ್ಯಾಂಗಿಂಗ್ ಪಾಟ್ ಹಲಗೆಗಳು ಅಡುಗೆಮನೆಗೆ ಗೋಡನ್ ಲುಕ್ ನೀಡುತ್ತದೆ. ಎಷ್ಟು ಜೋಡಿಸಿಟ್ಟರೂ ಗೋಜಲು ಗೋಜಲೆನಿಸುತ್ತದೆ. ಅಲ್ಲದೆ ಒಂದನ್ನು ಎಳೆದರೆ ಮತ್ತೊಂದು ತಲೆ ಮೇಲೆ ಬೀಳುವ ಭಯ ಸದಾ ಕಾಡುತ್ತಲೇ ಇರುತ್ತದೆ. 

ಫಾರ್ಮ್‌ಹೌಸ್ ಸಿಂಕ್

ಫಾರ್ಮ್‌ಹೌಸ್ ಸಿಂಕ್‌ಗಳು ಫಾರ್ಮ್‌ಹೌಸ್‌ಗೆ ಬೆಸ್ಟ್. ಆದರೆ, ಅಡುಗೆಮನೆಗಲ್ಲ. ಇವು ನೋಡಲು ಆಕರ್ಷಕವೆಂಬುದೇನೋ ನಿಜ, ಆದರೆ, ಅಡುಗೆ ಮನೆಗೆ ಎಂಟ್ರಿ ಕೊಡುತ್ತಿದ್ದ ಹಾಗೇ ಸಿಂಕ್‌ನತ್ತಲೇ ಗಮನ ಹರಿದರೆ ಏನು ಚೆನ್ನ? ಅಲ್ಲದೆ, ಇವು ಹೆಚ್ಚು ಜಾಗ ತಿನ್ನುತ್ತವೆ. ಮಾಡರ್ನ್ ಕಿಚನ್‌ಗೆ ಇದು ಒಳ್ಳೆಯದಲ್ಲ.

ಅಡುಗೆ ಮನೆಗೆ ವಾಸ್ತು : ನಾರಿಯ ಸುಖಕ್ಕೆ ಅಸ್ತು

ಗ್ಲಾಸ್ ಹಾಗೂ ಕನ್ನಡಿ ಹೊಂದಿರುವ ವಿನ್ಯಾಸ

ಹೊಸದಾಗಿದ್ದಾಗ ಗ್ಲಾಸ್ ಹಾಗೂ ಮಿರರ್ ವಿನ್ಯಾಸದಷ್ಟು ಚೆನ್ನ ಇನ್ನೊಂದಿಲ್ಲ. ಆದರೆ, ಬಳಕೆ ಹೆಚ್ಚಾಗುತ್ತಲೇ ಕೈ ಗುರುತುಗಳು, ಸ್ಕ್ರ್ಯಾಚ್,  ಒಡೆಯುವಿಕೆ ಎಲ್ಲ ಕಿರಿಕಿರಿಗಳು ಶುರುವಾಗುತ್ತವೆ.