ಸಾಮಾನ್ಯವಾಗಿ ಮನೆ ಮಂದಿ ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅದರಲ್ಲಿಯೂ ಆರೋಗ್ಯ ಆಗಾಗ ಕೈ ಕೊಡುತ್ತಿರುತ್ತದೆ. ಮನೆ, ಅಡುಗೆ ಸಾಮಾನುಗಳು...ಎಲ್ಲವನ್ನೂ ಆಗಾಗ ಕ್ಲೀನ್ ಮಾಡದೇ ಹೋದರೆ ಇಂಥ ಸಮಸ್ಯೆಗಳು ಹೆಚ್ಚು. ಅದಕ್ಕೆ ಮುಖ್ಯವಾಗಿ ಅಡುಗೆ ಮನೆಯನ್ನು ಚೆನ್ನಾಗಿ ಕ್ಲೀನ್ ಮಾಡಿ ಇಟ್ಟುಕೊಳ್ಳುವುದು ಮುಖ್ಯ. ಅದಕ್ಕೆ ಕಿಚನ್ ರೂಲ್ಸ್ ಪಾಲನೆ ಅತ್ಯಗತ್ಯ... 

ಚೆನ್ನಾಗಿ ಕೈ ತೊಳೆಯಿರಿ: ಅಡುಗೆ ಮಾಡಲು ಹೋಗೋ ಮುನ್ನ ಕೈಗಳನ್ನು ಚೆನ್ನಾಗಿ ತೊಳೆಯಿರಿ. ಕೈಗಳು ಎಷ್ಟು ಚೆನ್ನಾಗಿ ಕ್ಲೀನ್ ಮಾಡಿರುತ್ತೀರೋ ಅದರಿಂದ ನೀವು ತಯಾರಿಸುವ ಆಹಾರವೂ ಕೀಟಾಣುಗಳುಗಳಿಂದ ಮುಕ್ತಿ ಪಡೆದು, ರೋಗಗಳಿಂದ ನಿಮ್ಮನ್ನು ದೂರ ಮಾಡುತ್ತದೆ. ಆಹಾರ ಸೇವಿಸುವ ಮುನ್ನ ಮತ್ತು ನಂತರ  ಕೈ ತೊಳೆಯುವುದೂ ಅಷ್ಟೇ ಮುಖ್ಯ. ಟಾಯ್ಲೆಟ್‌ಗೆ ಹೋಗಿ ಬಂದ ನಂತರ, ಸಾಕು ಪ್ರಾಣಿಗಳನ್ನು ಮುಟ್ಟಿದರೂ ಕೈ ತೊಳೆಯಲೇ ಬೇಕು.

ಯಾವಾಗಲೋ ಮಾಡಿದ ಆಹಾರ ಸೇವಿಸಬೇಡಿ: ಹೆಚ್ಚು ಕೆಲಸ ಇರುವುದರಿಂದ ಬೆಳಗ್ಗೆಯೇ ರಾತ್ರಿಗೂ ಅಡುಗೆ ಮಾಡಿಡುತ್ತೇವೆ. ಅಲ್ಲದೆ ರಾತ್ರಿ ಬೆಳಗ್ಗೆ ಮಾಡಿದ ಆಹಾರವನ್ನೇ ಸೇವಿಸುವವರೂ ಇದ್ದಾರೆ. ಇದೊಂದು ಒಳ್ಳೆ ಅಭ್ಯಾಸವಲ್ಲ. ಇಂಥ ಆಹಾರ ಸೇವಿಸಿದರೆ ಆರೋಗ್ಯಕ್ಕೆ ಹಾನಿ ಗ್ಯಾರಂಟಿ. ಬೆಳಗ್ಗೆ ಮಾಡಿದ ಆಹಾರದಲ್ಲಿ ಕೊಂಚ ಸ್ಮೆಲ್  ಬರಲು ಆರಂಭಿಸಿದರೂ ಅದರ ಸೇವನೆ ಬೇಡ. 

ತರಕಾರಿ ಚೆನ್ನಾಗಿ ತೊಳೆಯಿರಿ: ಆಹಾರ ತಯಾರಿಸುವ ಸಮಯದಲ್ಲಿ ಟೊಮ್ಯಾಟೋ, ಈರುಳ್ಳಿ ಮೊದಲಾದ ತರಕಾರಿಗಳನ್ನೂ ಚೆನ್ನಾಗಿ ತೊಳೆಯಿರಿ. ನಂತರ ಬಳಸಿ. ಚೆನ್ನಾಗಿ ತೊಳೆಯದೆ ಇದ್ದರೆ ಜೀವಕ್ಕೇ ಅಪಾಯ. 

ಅಡುಗೆ ಮನೆಗೆ ವಾಸ್ತು : ನಾರಿಯ ಸುಖಕ್ಕೆ ಅಸ್ತು

ಹಸಿ ತರಕಾರಿ: ಅರ್ಧ ಬೆಂದ ಆಹಾರ ಸೇವಿಸಿದರೆ ಒಳ್ಳೆಯದು ಎನ್ನುತ್ತಾರೆ. ಆದರೆ ಚೆನ್ನಾಗಿ ಬೆಂದ ಆಹಾರ ಒಳಿತು. ಚೆನ್ನಾಗಿ ಬೆಂದರೆ ಅದರಲ್ಲಿರೋ ಕೀಟಾಣು ದೇಹ ಸೇರುವುದಿಲ್ಲ