ಅಡುಗೆ ಮನೆಗೆ ವಾಸ್ತು : ನಾರಿಯ ಸುಖಕ್ಕೆ ಅಸ್ತು
ಹೆಣ್ಣು ಅಡುಗೆ ಮನೆಯಲ್ಲಿಯೇ ತನ್ನ ಜೀವನದ ಬಹು ಭಾಗವನ್ನು ಕಳೆಯುತ್ತಾಳೆ. ಸಂಸಾರದ ಕಣ್ಣಾಗಿರುವ ಆಕೆ ಖುಷ್ ಖುಷಿಯಾಗಿದ್ದರೆ ಎಲ್ಲರೂ ಸುಖಿಗಳು. ಆಕೆ ಕಳೆಯುವ ಈ ಅಡುಗೆ ಮನೆಗೆ ವಾಸ್ತು ಟಿಪ್ಸ್ ಇವು...
ಕಿಚನ್ ಮನೆಯ ಒಂದು ಪ್ರಮುಖವಾದ ಭಾಗ. ಅಡುಗೆ ಮನೆಯಲ್ಲಿ ವಾಸ್ತು ದೋಷ ಕಾಣಿಸಿಕೊಂಡರೆ, ಮನೆಯ ಸದಸ್ಯರು ಹಾಗೂ ಮನೆಯ ಮೇಲೂ ಪರಿಣಾಮ ಬೀರುತ್ತದೆ. ಆದುದರಿಂದ ಕಿಚನ್‌ಗೆ ಸಂಬಂಧಿಸಿದ ವಾಸ್ತು ಬಗ್ಗೆ ಗಮನಿಸಬೇಕು. ಏನವು?
- ವಾಸ್ತು ಶಾಸ್ತ್ರದ ಅನುಸಾರ ಈಶಾನ್ಯ ದಿಕ್ಕನ್ನು ಹೊರತುಪಡಿಸಿ, ಅಡುಗೆ ಮನೆಯನ್ನು ಬೇರಿ ದಿಕ್ಕಿನಲ್ಲಿರುವಂತೆ ನೋಡಿಕೊಳ್ಳಬೇಕು.
- ಅಡುಗೆ ಕೊನೆಯಲ್ಲಿ ಕಪ್ಪು ಬಣ್ಣದ ಗ್ರ್ಯಾನೈಟ್ ಬಳಸಬೇಡಿ. ಇದು ನೆಗೆಟಿವ್ ಎನರ್ಜಿ ಸೃಷ್ಟಿಸುತ್ತದೆ. ಪರಿವಾರದ ಜೊತೆ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ.
- ಅಡುಗೆ ಕೋಣೆ ಮನೆ ಮಧ್ಯ ಭಾಗದಲ್ಲಿ ಇರಬಾರದು. ಅದು ಮೂಲೆಯಲ್ಲಿ ಇದ್ದರೆ ಉತ್ತಮ. ಅಡುಗೆ ಕೋಣೆ ಬಳಿ ಸ್ವಲ್ಪ ಖಾಲಿ ಜಾಗ ಇರಬೇಕು.
- ಕಿಚನ್‌ನಲ್ಲಿ ಕಿಟಕಿ ಇರಲೇಬೇಕು. ಅಲ್ಲಿಂದ ಸೂರ್ಯನ ಬೆಳಕು ಸರಿಯಾಗಿ ಬೀಳುವಂತಿರಬೇಕು. ಒಂದು ವೇಳೆ ಬೆಳಗಿನ ಸಮಯದಲ್ಲಿ ಸೂರ್ಯನ ಕಿರಣ ಅಡುಗೆ ಮನೆಯೊಳಗೆ ಬಂದರೆ ಮನೆಯವರ ಅರೋಗ್ಯ ಉತ್ತಮವಾಗಿರುತ್ತದೆ.
- ಅಡುಗೆ ಮನೆಯನ್ನು ಮೆಟ್ಟಿಲುಗಳ ಕೆಳಗೆ ಇರದಂತೆ ನೋಡಿಕೊಳ್ಳಿ.
- ಅಡುಗೆ ಮನೆ ಶೌಚಾಲಯದ ಹತ್ತಿರವಿರದಂತೆ ನೋಡಿಕೊಳ್ಳಿ. ಜೊತೆಗೆ ಅಡುಗೆ ಕೋಣೆ ಮತ್ತು ಶೌಚಾಲಯದ ಬಾಗಿಲೂ ಎದರು ಬದುರು ಇರಬಾರದು. ಇದರಿಂದ ನಿರಾಶಾವಾದಿ, ನಕಾರಾತ್ಮಕ ಶಕ್ತಿ ಮನೆಯವರ ಮೇಲೆ ಉಂಟಾಗುತ್ತದೆ. ಇದರಿಂದ ಮಹಿಳೆಯರ ಮೇಲೆ ನಕಾರಾತ್ಮಕ ಪ್ರಭಾವ ಕೂಡ ಹೆಚ್ಚಾಗಿ ಬೀರುತ್ತದೆ.