ನೀವು ಬಹಳ ವರ್ಷಗಳಿಂದ ಚೈನ್ ಸ್ಮೋಕರ್ ಆಗಿದ್ದರೆ, ನಿಮ್ಮ ಶ್ವಾಸಕೋಶದಲ್ಲಿ ನಿಕೋಟಿನ್ ದೊಡ್ಡ ಪ್ರಮಾಣದಲ್ಲಿಯೇ ಕರಿ ಕಟ್ಟಿರುತ್ತದೆ. ಇದೇ ನಿಧಾನವಾಗಿ ಶ್ವಾಸಕೋಶದ ಇನ್ಫೆಕ್ಷನ್‌ಗೂ ಕಾರಣವಾಗುತ್ತದೆ. ಅಲ್ಲೇ ಎಚ್ಚೆತ್ತುಕೊಳ್ಳಲಿಲ್ಲ ಎಂದರೆ ಇದು ಶ್ವಾಸಕೋಶದ ಕ್ಯಾನ್ಸರ್‌ಗೂ ಎಡೆ ಮಾಡಿಕೊಡುತ್ತದೆ. ಹಲವಾರು ಜಾಹಿರಾತುಗಳು, ಸರಕಾರದ ಕಸರತ್ತು ಜನರನ್ನು ಸ್ಮೋಕಿಂಗ್‌ನಿಂದ ದೂರವಿಡಲು ಸೋತಿವೆ. ಸ್ಮೋಕಿಂಗ್ ಹಾಗೂ ತಂಬಾಕು ಸೇವನೆ ಶ್ವಾಸಕೋಶದಲ್ಲಿ ವಿಷಕಾರಿ ಅಂಶಗಳನ್ನು ತುಂಬುವುದಷ್ಟೇ ಅಲ್ಲ, ದೇಹದಿಂದ ವಿಟಮಿನ್‌ಗಳನ್ನೂ ದೂರವಿಡುತ್ತವೆ.

ಸಿಗರೇಟ್‌ನಲ್ಲಿ 4800ಕ್ಕೂ ಹೆಚ್ಚು ರಾಸಾಯನಿಕ ಅಂಶ!

ಇದು ಮತ್ತಷ್ಟು ಅನಾರೋಗ್ಯಕ್ಕೆ ದಾರಿ. ಇನ್ನು ಹೆಚ್ಚುತ್ತಿರುವ  ಮಾಲಿನ್ಯ, ಉಸಿರಾಟದ ಮೂಲಕ ವಾತಾವರಣದಿಂದ ಇನ್ನಷ್ಟು ಟಾಕ್ಸಿನ್‌ಗಳನ್ನು ದೇಹಕ್ಕೆ ಸೇರಿಸುತ್ತಿದೆ. ಇವೆಲ್ಲವೂ ಸೇರಿ ನಮ್ಮ ಶ್ವಾಸಕೋಶ ಹೊಗೆ ಉಗುಳುವ ಕಾರ್ಖಾನೆಯ ಚಿಮಿಣಿಯಂತಾಗಿದ್ದರೂ ಅಚ್ಚರಿಯಿಲ್ಲ. ಅಂಥ ನಿಕೋಟಿನ್‌ ಹಾಗೂ ವಿಷಕಾರಿ ಅಂಶಗಳನ್ನು ಶ್ವಾಸಕೋಶದಿಂದ ತೆಗೆಯುವುದು ಹೇಗೆ?

ದಾನ ಮಾಡಿದ ಶ್ವಾಸಕೋಶವನ್ನೇ ರಿಜೆಕ್ಟ್ ಮಾಡಿದ್ರಂತೆ ವೈದ್ಯರು

ಡಾಕ್ಟರ್ ಹತ್ರ ಓಡುವ ಮೊದಲು ಅಡುಗೆಮನೆಗೆ ಓಡಿ. ಏಕೆಂದರೆ ಅಡುಗೆಮನೆಯ ಕಪಾಟಿನಲ್ಲೇ ಇವೆ ಕೆಲವು ಮ್ಯಾಜಿಕ್ ಔಷಧಗಳು. 

ಕ್ಯಾರಟ್ ಜ್ಯೂಸ್:

3-4 ಕ್ಯಾರೆಟ್ ತೆಗೆದುಕೊಂಡು ಸ್ವಲ್ಪ ನೀರು ಸೇರಿಸಿ ಗ್ರೈಂಡ್ ಮಾಡಿ. ಇದನ್ನು ಪ್ರತಿ ದಿನ ಕುಡಿಯುವುದರಿಂದ ದೇಹಕ್ಕೆ ಹೆಚ್ಚಿನ ವಿಟಮಿನ್‌ಗಳು ದೊರೆತು, ಶ್ವಾಸಕೋಶ ಸ್ವಚ್ಛವಾಗುತ್ತದೆ.

ಕಿವಿ ಹಣ್ಣು:

ಕಿವಿ ಹಣ್ಣು ವಿಟಮಿನ್‌ಗಳಿಂದ ಶ್ರೀಮಂತವಾಗಿದ್ದು, ಸ್ಮೋಕಿಂಗ್‌ನಿಂದ ದೇಹ ಕಳೆದುಕೊಂಡ ವಿಟಮಿನ್‌ಗಳನ್ನು ಮರಳಿಸುತ್ತದೆ. ಆ ಮೂಲಕ ದೇಹದಿಂದ ನಿಕೋಟಿನ್ ಹೊರಹಾಕುತ್ತದೆ. 

ನೀರು:

ಗುಪ್ತಾಂಗ ಒಣಗಿಸೋ ಗಾಂಜಾ, ಲೈಂಗಿಕ ಸುಖಕ್ಕೆ ಕುತ್ತು

ನಿಕೋಟಿನ್ ಶ್ವಾಸಕೋಶವನ್ನು ಒಣಗಿಸುತ್ತದೆ. ಹೀಗಾಗಿ, ಹೆಚ್ಚು ನೀರು ಕುಡಿಯುವುದರಿಂದ ಶ್ವಾಸಕೋಶಗಳನ್ನು ಹೈಡ್ರೇಟ್ ಮಾಡಬಹುದು. ಹಾಗೆಯೇ ನೀರು ಶ್ವಾಸಕೋಶಗಳಿಂದ ವಿಷವಸ್ತುಗಳನ್ನು ಫ್ಲಶ್ ಔಟ್ ಮಾಡುತ್ತದೆ.

ಈರುಳ್ಳಿ:

ಈರುಳ್ಳಿ ಅಡುಗೆಗೆ ರುಚಿ ಕೊಡುವುದಷ್ಟೇ ಅಲ್ಲ, ಇದು ಔಷಧೀಯ ಗುಣಗಳನ್ನೂ ಹೊಂದಿದೆ. ದೆೇಹದಿಂದ ನಿಕೋಟಿನ್ ಹೊರ ಹಾಕಲು ಇದು ಸಹಾಯಕ.

ಅರಿಶಿನ:

ಅರಿಶಿನವು ತನ್ನ ಔಷಧೀಯ ಗುಣಗಳಿಗೆ ಹೆಸರುವಾಸಿ. ಇದು ನಿಕೋಟಿನ್ ಹಾಗೂ ವಿಷಪದಾರ್ಥಗಳನ್ನು ಶ್ವಾಸಕೋಶದಿಂದ ಹೊರ ಕಳಿಸಿ, ದೇಹವನ್ನು ಒಳಗಿನಿಂದ ಸ್ವಚ್ಛವಾಗಿಸುತ್ತದೆ. 

ಶುಂಠಿ:

ಉತ್ತಮ ಕ್ರಿಮಿನಾಶಕವಾಗಿರುವ ಶುಂಠಿ ನಿಕೋಟಿನ್‌ನ್ನು ದೇಹದಿಂದ ಹೊರ ಹಾಕಿ, ಶ್ವಾಸಕೋಶವನ್ನು ಸೋಂಕುಮುಕ್ತವಾಗಿರಿಸುತ್ತದೆ.

ಕಿತ್ತಳೆ:

ಹೇರಳ ವಿಟಮಿನ್‌ಗಳನ್ನು ಹೊಂದಿರುವ ಕಿತ್ತಳೆಯಲ್ಲಿ ಕ್ರಿಪ್ಟೋಕ್ಸಾಂಥಿನ್ ಎಂಬ ಕಾಂಪೌಂಡ್ ಇದ್ದು, ಇದು ಶ್ವಾಸಕೋಶದಿಂದ ವಿಷಪದಾರ್ಥ ಹೊರಕಳಿಸುತ್ತದೆ.

ಸೇಬುಹಣ್ಣು:

ದಿನಕ್ಕೊಂದು ಸೇಬು ತಿಂದರೆ ವೈದ್ಯರನ್ನು ದೂರ ಇಡಬಹುದು ಎಂಬ ಮಾತಿದೆ. ಅದು ಶ್ವಾಸಕೋಶದ ವಿಷಯಕ್ಕೂ ಅನ್ವಯವಾಗುತ್ತದೆ. ಉಸಿರಾಟ ವ್ಯವಸ್ಥೆಯ ಆರೋಗ್ಯ ಕಾಪಾಡುವಲ್ಲಿ ಸೇಬುವಿಗೆ ಮೊದಲ ಹೆಸರಿದೆ.

ಪಾಲಕ್:

ಫೋಲಿಕ್ ಆ್ಯಸಿಡ್ ಹಾಗೂ ವಿಟಮಿನ್‌ಗಳಿಂದ ಶ್ರೀಮಂತವಾಗಿರುವ ಪಾಲಕ್ ಸೊಪ್ಪು, ತಂಬಾಕಿನ ರುಚಿ ಕೆಡಿಸುವ ಶಕ್ತಿ ಹೊಂದಿದೆ. ನಿಕೋಟಿನ್‌ನ್ನು ಕೂಡಾ ಇದು ದೇಹದಿಂದ ಆಚೆ ತಳ್ಳುತ್ತದೆ. 

ಪೈನ್ ನೀಡಲ್ ಟೀ:

ಪರ್ವತ ಪ್ರದೇಶಗಳಲ್ಲಿ ಕಂಡುಬರುವ ಪೈನ್ ನೀಡಲ್ ಎಲೆಗಳನ್ನು ಬಳಸಿ ಟೀ ಮಾಡಿ ಸೇವಿಸುವುದರಿಂದ ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಬಹುದು.