ರುಚಿ ರುಚಿಯಾದ ಅಡುಗೆ ಎಲ್ಲರಿಗೂ ಇಷ್ಟ. ಆದರೆ ಅಡುಗೆ ಮಾಡುವುದು, ಪಾತ್ರೆ ತೊಳೆಯುದು, ಕಿಚನ್ ಕ್ಲೀನ್ ಮಾಡುವುದು ಹೆಚ್ಚು ಪ್ರಯಾಸದ ಕೆಲಸ. ಇದಕ್ಕೆ ಖ್ಯಾತ ಶೆಫ್ ಸಿಂಪಲ್ ಐಡಿಯಾ ಸಮಸ್ಯೆಗೆ ಉತ್ತರ ನೀಡಲಿದೆ.

ಅಡುಗೆ ಮಾಡುವುದಕ್ಕಿಂತ ದೊಡ್ಡ ಕೆಲಸ ಅಡುಗೆ ಬಳಸಿದ ವಸ್ತುಗಳನ್ನು ಶುಚಿಗೊಳಿಸುವುದು, ಅದು ಮಿಕ್ಸಿ ಗ್ರೈಂಡರ್ ಆಗಿರಲಿ, ಪಾತ್ರೆಯಾಗಿರಲಿ, ಮೈಕ್ರೋವೇವ್ ಆಗಿರಲಿ. ಆದ್ರೆ ಅಡುಗೆಗೆ ಕೆಲವೊಂದು ಹ್ಯಾಕ್‌ ಇರುವುಂತೆ ಈ ಮೈಕ್ರೋವೇವ್, ಗ್ರೈಂಡರ್ ಇವುಗಳನ್ನೆಲ್ಲಾ ಕೆಲವೇ ಸೆಕೆಂಡ್‌ಗಳಲ್ಲಿ ಶುಚಿಗೊಳಿಸುವ ಟಿಪ್ಸ್ ತಿಳಿಸಿದ್ದಾರೆ ಲೈಫ್‌ಸ್ಟೈಲ್‌ ಕಂಟೆಂಟ್ ಕ್ರಿಯೇಟರ್ ಹಾಗೂ ಶೆಫ್ ಆಗಿರುವ ಫ್ಯಾವರಿಕ್ ಮಾರ್ಕ್. ಇವರು ತಮ್ಮ ಇನ್‌ಸ್ಟಾ ಖಾತೆಯಲ್ಲಿ ಶೇರ್‌ ಮಾಡಿರುವ ಈ ಟಿಪ್ಸ್ ನಿಮಗೂ ಹೆಲ್ಪ್‌ ಆಗಬಹುದು ನೋಡಿ:

ಬ್ಲೆಂಡರ್ ಅನ್ನು ಹತ್ತೇ ಸೆಕೆಂಡ್‌ನಲ್ಲಿ ಕ್ಲೀನ್ ಮಾಡಬಹುದು

ಬ್ಲೆಂಡರ್‌ ಕ್ಲೀನ್ ಮಾಡುವುದು ಅಷ್ಟು ಸುಲಭವಲ್ಲ ಅಲ್ವಾ? ಅದರಲ್ಲಿಯೂ ಈ ಚಳಿಗಾಲದಲ್ಲಿ ಬ್ಲೆಂಡರ್ ಕ್ಲೀನ್ ಇನ್ನೂ ಕಷ್ಟ. ನೀವು ಬ್ಲೆಂಡರ್‌ಗೆ ಅರ್ಧದಷ್ಟು ಉಗುರು ಬೆಚ್ಚಗಿನ ನೀರು ಹಾಕಿ ಅದಕ್ಕೆ ಸ್ವಲ್ಪ ಡಿಶ್ ಲಿಕ್ವಿಡ್ ಅಥವಾ ಸೋಪ್‌ ತುಂಡು ಹಾಕಿ 10 ಸೆಕೆಂಡ್ ಬ್ಲೆಂಡ್ ಮಾಡಿದರೆ ಬ್ಲೆಂಡರ್ ಫುಲ್ ಕ್ಲೀನ್ ಆಗುತ್ತೆ ಅಂತೆ, ನಂತರ ಸ್ವಲ್ಪ ನೀರಿನಲ್ಲಿ ತೊಳೆದರೆ ಕ್ಲೀನ್ ಆಗಿರುತ್ತೆ.

ಮೈಕ್ರೋವೇವ್ ಕ್ಲೀನ್ ಮಾಡಲು ಟಿಪ್ಸ್

ಮೈಕ್ರೋವೇವ್‌ ಶುಚಿ ಮಾಡಲು ಒಂದು ಬೌಲ್‌ನಲ್ಲಿ ನಿಂಬೆ ಹಣ್ಣನ್ನು ತುಂಡುಗಳನ್ನಾಗಿ ಮಾಡಿ ಹಾಕಿ ಒಂದು ನಿಮಿಷ ಬಿಸಿ ಮಾಡಿ, ಹೀಗೆ ಮಾಡಿದಾಗ ಆ ಹಬೆ ಕಲೆಯನ್ನು ಸುಲಭವಾಗಿ ತೆಗೆಯಲು ಸಹಾಯ ಮಾಡುತ್ತೆ, ಅಲ್ಲದೆ ನಿಂಬೆ ಹಣ್ಣು ದುರ್ವಾಸನೆ ಹೋಗಲಾಡಿಸುತ್ತೆ.

ಇನ್ನು ಈ ಟಿಪ್ಸ್ ಅಂತೂ ಪ್ರತಿಯೊಂದು ಮನೆಯಲ್ಲಿ ಸಹಾಯ ಮಾಡುತ್ತೆ ಅಕ್ಕಿಗೆ ಹುಳ ಬರದಂತೆ ತಡೆಯಲು ಈ ಟಿಪ್ಸ್ ಬೆಸ್ಟ್ ಅಕ್ಕಿಯನ್ನು ತುಂಬಾ ಸಮಯ ಇಟ್ಟಾಗ ಹುಳ ಬರುತ್ತೆ, ಇದನ್ನು ತಡೆಗಟ್ಟಲು 2-3 ಪಲಾವ್ ಎಲೆ ಹಾಕಿಟ್ಟರೆ ಸಾಕು ಅಕ್ಕಿ ವರ್ಷದವರೆಗೆ ಇಟ್ಟರೂ ಹುಳ ಬರಲ್ಲ. ಅಕ್ಕಿಗೆ 2 ಲವಂಗ ಹಾಗೂ 8-10 ಕಾಳು ಮೆಣಸು ಹಾಕಿಟ್ಟರೆ ಹುಳ ಬರಲ್ಲ. ಬೆಳ್ಳುಳ್ಳಿ ಜಜ್ಜಿ ಹಾಕಿದರೂ ಹುಳ ಬರಲ್ಲ.

ಅಡುಗೆಯ ಟೇಸ್ಟ್ ಹೆಚ್ಚಿಸಲು

ನಾವು ಅಡುಗೆ ಮಾಡುವಾಗ ಸಂಬಾರ ಪದಾರ್ಥ ಹಾಗೇ ಹಾಕುವ ಬದಲಿಗೆ ಎಣ್ಣೆಯಲ್ಲಿ ಸ್ವಲಪ್ ಹುರಿದು ನಂತರ ಹಾಕಿದರೆ ರುಚಿ ಹೆಚ್ಚು.