ತೆಳ್ಳಗೆ ಕಾಣಲು ಗಾಢ ಬಣ್ಣದ ಬಟ್ಟೆಗಳನ್ನು ಆಯ್ಕೆ ಮಾಡಿ. ಕಪ್ಪು ಜೊತೆಗೆ ನೇರಳೆ, ಬೂದು, ಕಂದು, ಮರೂನ್, ಟೀಲ್ ಬ್ಲೂ, ಗಾಢ ಹಸಿರು, ಬರ್ಗಂಡಿ ಮತ್ತು ಗಾಢ ಕೆಂಪು ಬಣ್ಣಗಳು ಸ್ಲಿಮ್ ಲುಕ್ ನೀಡುತ್ತವೆ. ಈ ಬಣ್ಣಗಳು ವಿವಿಧ ಚರ್ಮದ ಟೋನ್‌ಗಳಿಗೆ ಹೊಂದಿಕೊಂಡು ಆಕರ್ಷಕವಾಗಿ ಕಾಣುವಂತೆ ಮಾಡುತ್ತವೆ.

ಪ್ರಪಂಚದಲ್ಲಿ ಸುಂದರವಾಗಿ ಕಾಣಲು ಇಷ್ಟಪಡದ ವ್ಯಕ್ತಿ ಯಾರೂ ಇರಲು ಸಾಧ್ಯವಿಲ್ಲ. ಹೀಗೆ ನಿಮ್ಮನ್ನು ಸುಂದರವಾಗಿ ಆಕರ್ಷಕವಾಗಿ ಕಾಣುವಂತೆ ಮಾಡುವಲ್ಲಿ ಬಣ್ಣ ಬಣ್ಣದ ಬಟ್ಟೆಗಳು ಸಹ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಅಂದರೆ ಎಲ್ಲಾ ದೇಹ ಪ್ರಕಾರಗಳಿಗೆ ಹೊಂದಿಕೆಯಾಗುವ ಹಲವು ಕಲರ್ ಗಳಿವೆ. ನಿಮಗೇ ಗೊತ್ತಿರುವ ಹಾಗೆ ಕೆಲವು ಬಣ್ಣದ ಬಟ್ಟೆಗಳು ನಿಮ್ಮ ದೇಹದ ಆಕಾರಕ್ಕೆ ತಕ್ಕನಾಗಿ ಕಾಣದೆ ಕೆಟ್ಟದಾಗಿ ಕಾಣುತ್ತವೆ ಅಥವಾ ದಪ್ಪಗೆ ಕಾಣುತ್ತಿದ್ದೇವೆ ಎಂಬಂತೆ ಫೀಲ್ ಕೊಡುತ್ತವೆ. ಹಾಗಿದ್ದಲ್ಲಿ ಚಿಂತಿಸಬೇಡಿ, ನಿಮ್ಮ ಬಟ್ಟೆಗಳ ಬಣ್ಣಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ನೀವು ಚೆಂದಗೆ ಕಾಣಬಹುದು. ಇಂದು ನಾವು ನಿಮಗೆ ಸ್ಲಿಮ್ ಮತ್ತು ಸುಂದರವಾಗಿ ಕಾಣಲು ಸಹಾಯ ಮಾಡುವ ಬಣ್ಣದ ಬಟ್ಟೆಗಳ ಕುರಿತು ಕೆಲವು ಟಿಪ್ಸ್‌ ಕೊಡುತ್ತಿದ್ದೇವೆ.

ಹೆಚ್ಚಿನ ಮಹಿಳೆಯರು ತಮ್ಮ ತೂಕದ ಬಗ್ಗೆ ಹೆಚ್ಚು ಚಿಂತಿತರಾಗಿರುತ್ತಾರೆ. ಏಕೆಂದರೆ ಎಷ್ಟೋ ಬಾರಿ ಕೆಲವು ಬಣ್ಣದ ಬಟ್ಟೆಗಳು ಅಥವಾ ಉಡುಪನ್ನು ಧರಿಸಿದ ಕೂಡಲೇ ನಾವು ದಪ್ಪಗೆ/ತೆಳ್ಳಗೆ ಕಾಣಲು ಪ್ರಾರಂಭಿಸುತ್ತೇವೆ. ಹೌದು, ಸರಿಯಾದ ಬಣ್ಣದ ಬಟ್ಟೆಗಳು ಕೂಡ ನಾವು ಫಿಟ್ ಆಗಿ ಕಾಣವಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹಾಗಾಗಿ ನಾವು ನಮ್ಮ ಆಕಾರಕ್ಕೆ ತಕ್ಕ ಹಾಗೆ ಕಲರ್ ಕಲರ್ ಬಟ್ಟೆಗಳನ್ನು ಆರಿಸಿಕೊಳ್ಳುವುದರಿಂದ ಸ್ಲಿಮ್ ಆಗಿ ಕಾಣಬಹುದು. ಈ ಮೊದಲೇ ಹೇಳಿದ ಹಾಗೆ ದೇಹದ ಆಕಾರ ಮತ್ತು ಗಾತ್ರವನ್ನು ಅರ್ಥಮಾಡಿಕೊಳ್ಳುವಲ್ಲಿ ಬಣ್ಣವು ಪ್ರಮುಖ ಪಾತ್ರ ವಹಿಸುತ್ತದೆ. ಬಣ್ಣಗಳ ಸರಿಯಾದ ಆಯ್ಕೆಯು ತೆಳ್ಳಗೆ ಕಾಣುವಂತೆ ಅಥವಾ ದಪ್ಪಗೆ ಕಾಣುವ ಹಾಗೆ ಫೀಲ್ ಮಾಡಿಸುತ್ತವೆ. ಕಪ್ಪು ಬಣ್ಣವು ಸ್ಲಿಮ್ ಆಗಿ ಕಾಣುವಂತೆ ಮಾಡಲು ಹೆಸರುವಾಸಿಯಾಗಿದ್ದರೂ, ನಿಮ್ಮ ಲುಕ್ ಹೆಚ್ಚಿಸುವ ಮತ್ತು ನಿಮ್ಮನ್ನು ಸ್ಲಿಮ್ ಆಗಿ ಕಾಣುವಂತೆ ಮಾಡುವ ಇನ್ನೂ ಅನೇಕ ಬಣ್ಣಗಳಿವೆ. ಹಾಗಾದರೆ ಸ್ಲಿಮ್ ಆಗಿ ಕಾಣಲು ನೀವು ಯಾವ ಬಣ್ಣದ ಬಟ್ಟೆಗಳನ್ನು ಧರಿಸಬಹುದು ಎಂದು ನೋಡೋಣ ಬನ್ನಿ...

ಟೀಲ್ ಬ್ಲೂ 
ನೀಲಿ ಬಣ್ಣದ ಹಲವು ವಿಭಿನ್ನ ಶೇಡ್‌ ಗಳು ಸುಂದರವಾಗಿ ಕಾಣುತ್ತವೆ. ವಿಶೇಷವಾಗಿ ಟೀಲ್ ಬ್ಲೂ ಬಣ್ಣವು ನಿಮ್ಮನ್ನು ಸ್ಲಿಮ್ ಆಗಿ ಕಾಣಲು ಸಹಾಯ ಮಾಡುತ್ತದೆ ಮತ್ತು ಈ ಬಣ್ಣವು ಯಾವುದೇ ಚರ್ಮದ ಟೋನ್‌ಗೆ ಹೊಂದಿಕೆಯಾಗುತ್ತದೆ. 

ಗಾಢ ಹಸಿರು
ಕಡು ಹಸಿರು ಅಥವಾ ಗಾಢ ಹಸಿರು ಬಣ್ಣ ನಿಮಗೆ ಸ್ಲಿಮ್ ಲುಕ್ ನೀಡುತ್ತದೆ. ನೀವು ಕೂಡ ನಿಮ್ಮ ಉಡುಪಿನಲ್ಲಿ ಸ್ಲಿಮ್ ಆಗಿ ಕಾಣಲು ಬಯಸಿದರೆ, ನಿಮ್ಮ ಬೀರುವಿನಲ್ಲಿ ಹಸಿರು ಬಣ್ಣದ ಬಟ್ಟೆಗಳನ್ನು ಸೇರಿಸಿಕೊಳ್ಳಬಹುದು.

ಬರ್ಗಂಡಿ ಕಲರ್
ಇತ್ತೀಚಿನ ದಿನಗಳಲ್ಲಿ ಬರ್ಗಂಡಿ ಬಣ್ಣದ ಬಟ್ಟೆಗಳು ಸಾಕಷ್ಟು ಟ್ರೆಂಡ್ ಆಗಿವೆ. ಜನರು ಈ ಬಣ್ಣವನ್ನು ತುಂಬಾ ಇಷ್ಟಪಡುತ್ತಿದ್ದಾರೆ. ನೀವು ಸಹ ಸ್ಲಿಮ್ ಆಗಿ ಕಾಣಲು ಬಯಸಿದರೆ, ಈ ಬಣ್ಣದ ಬಟ್ಟೆಗಳನ್ನು ಧರಿಸಬಹುದು.

ನೇರಳೆ
ನೇರಳೆ ಬಣ್ಣವು ತುಂಬಾ ಸುಂದರವಾಗಿ ಕಾಣುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. ಹುಡುಗಿಯರು ಸುಂದರವಾಗಿ ಮತ್ತು ಸ್ಲಿಮ್ ಆಗಿ ಕಾಣಲು ತಮ್ಮ ಬೀರುವಿನಲ್ಲಿ ನೇರಳೆ ಬಟ್ಟೆಗಳನ್ನು ಸೇರಿಸಿಕೊಳ್ಳಬಹುದು.

ಗಾಢ ಕೆಂಪು
ಹೆಚ್ಚಿನ ಜನರು ಕೆಂಪು ಬಣ್ಣವನ್ನು ಇಷ್ಟಪಡುತ್ತಾರೆ. ನೀವು ಕೂಡ ಗಾಢ ಕೆಂಪು ಬಣ್ಣದ ಬಟ್ಟೆ ಧರಿಸಿದರೆ ಬೊಜ್ಜು ಮಾಯವಾಗುತ್ತದೆ. ಇದಲ್ಲದೆ, ಕಪ್ಪು ಬಣ್ಣ ಮತ್ತು ಚಾಕೊಲೇಟ್ ಕಂದು ಬಣ್ಣವು ನಿಮಗೆ ಸ್ಲಿಮ್ ಲುಕ್ ನೀಡುತ್ತದೆ.

ಗಾಢ ಬಣ್ಣಗಳು
ಹಾಗಾಗಿ ತೆಳ್ಳಗೆ ಕಾಣಬೇಕೆನ್ನುವವರು ಸಾಧ್ಯವಾದಷ್ಟು ಗಾಢ ಬಣ್ಣದ ಬಟ್ಟೆಗಳನ್ನು ಧರಿಸಲು ಪ್ರಯತ್ನಿಸಿ. ಕಪ್ಪು ಬಣ್ಣವನ್ನು ಹೊರತುಪಡಿಸಿ, ನೀವು ನೇರಳೆ, ಬೂದು, ಕಂದು ಅಥವಾ ಮರೂನ್ ನಂತಹ ಬಣ್ಣಗಳನ್ನು ಧರಿಸಬಹುದು. ಒಟ್ಟಾರೆ ನೀವು ಗಾಢ ಬಣ್ಣಗಳಲ್ಲಿ ಸ್ಲಿಮ್ ಆಗಿ ಕಾಣುವಿರಿ.