Asianet Suvarna News Asianet Suvarna News

ರೇಮಾಂಡ್ ಮಾಲೀಕನ ಡಿವೋರ್ಸ್‌ನಿಂದ ವಿಶ್ವ ಸುಂದರಿ ಕಿರೀಟದವರೆಗೆ: ಹೆಚ್ಚು ಸಂಚಲನ ಸೃಷ್ಟಿಸಿದ ಸುದ್ದಿಗಳಿವು

ಈ ವರ್ಷದ ನವೆಂಬರ್ ತಿಂಗಳಲ್ಲಿ ಆರೋಗ್ಯ, ಜೀವನಶೈಲಿ, ಪ್ರಯಾಣ, ಶಿಕ್ಷಣ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದ ಕೆಲ ಮಹತ್ವದ ವಿಚಾರಗಳ ಸಣ್ಣ ಡಿಟೇಲ್ ಇಲ್ಲಿದೆ.
 

The news that created a lot of buzz on the internet in the month of November In this year 2023 akb
Author
First Published Dec 12, 2023, 6:18 PM IST

ಹಂದಿ ಹೃದಯ ಕಸಿಗೊಳಗಾಗಿ ಬದುಕಿದ್ದ ವ್ಯಕ್ತಿ 40 ದಿನದ ಬಳಿಕ ಸಾವು
ಈ ವರ್ಷದ ನವಂಬರ್ ತಿಂಗಳ ಆರಂಭದಲ್ಲಿ ಹಂದಿಯ ಹೃದಯ ಕಸಿ ಪಡೆದ ವ್ಯಕ್ತಿಯೊಬ್ಬರು ಶಸ್ತ್ರಚಿಕಿತ್ಸೆಯ 40 ದಿನಗಳ ನಂತರ ಸಾವಿಗೀಡಾಗಿದ್ದರು. ಇವರು ವಿಶ್ವದಲ್ಲೇ ಹಂದಿ ಹೃದಯ ಕಸಿಗೊಳಗಾಗಿದ್ದ 2ನೇ ವ್ಯಕ್ತಿಯಾಗಿದ್ದರು.

ಐಬ್ರೋ ಮಾಡಿಸಿಕೊಂಡ ಪತ್ನಿಗೆ ವಿಡಿಯೋ ಕಾಲ್‌ನಲ್ಲೇ ತಲಾಖ್‌ ನೀಡಿದ ಪತಿ!

ಉತ್ತರ ಪ್ರದೇಶದ ಕಾನ್ಪುರದಲ್ಲಿ ತನ್ನ ಒಪ್ಪಿಗೆಯಿಲ್ಲದೆ ಪತ್ನಿ ಐಬ್ರೋಸ್ ಮಾಡಿಸಿದುದನ್ನು ನೋಡಿದ ಪತಿ ವಿಡಿಯೋ ಕಾಲ್ ಮೂಲಕ ಪತ್ನಿಗೆ ವಿಚ್ಛೇದನ ನೀಡಿದ ಘಟನೆ ನಡೆದಿತ್ತು.

ಮಧುಮೇಹಿಗಳಿಗೆ ಇನ್ಮುಂದೆ ಇಂಜೆಕ್ಷನ್ ಬದಲು ಇನ್ಸುಲಿನ್ ಸ್ಪ್ರೇ

ಮಧುಮೇಹ ಹೊಂದಿರುವ ಜನರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪ್ರತಿದಿನ ನಿಯಂತ್ರಿಸಲು ಇನ್ಸುಲಿನ್ ಚುಚ್ಚುಮದ್ದನ್ನು ಅವಲಂಬಿಸಿದ್ದಾರೆ. ಆದರೆ ಇನ್ಸುಲಿನ್‌ ಇಂಜೆಕ್ಷನ್‌ಗಳು ನೋವಿನಿಂದ ಕೂಡಿರುತ್ತವೆ. ಆದರೆ  ಹೈದರಾಬಾದ್ ಮೂಲದ ನೀಡಲ್‌ ಫ್ರೀ ಟೆಕ್ನಾಲಜೀಸ್‌ ಕಂಪನಿಯು ಈಗ ಇನ್ಸುಲಿನ್ ಸ್ಪ್ರೇ ಎಂಬ ಔಷಧವನ್ನು ಅಭಿವೃದ್ಧಿಪಡಿಸಿದೆ. 

ವ್ಯಕ್ತಿಗೆ ಪ್ರಜ್ಞೆಯಿರುವಾಗ್ಲೇ ಮೆದುಳಿನ ಸರ್ಜರಿ; ಪಿಯಾನೋ ನುಡಿಸಿ, ಹನುಮಾನ್ ಚಾಲೀಸಾ ಪಠಿಸಿದ ಯುವಕ!

ವ್ಯಕ್ತಿ ಎಚ್ಚರವಾಗಿದ್ದಾಗಲೇ ವೈದ್ಯರು ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಿದ ಘಟನೆ ಭೋಪಾಲ್‌ನ AIIMS ಆಸ್ಪತ್ರೆಯಲ್ಲಿ ನಡೆದಿದೆ. ಬ್ರೈನ್‌ ಟ್ಯೂಮರ್‌ ಸಮಸ್ಯೆಯಿಂದ ವ್ಯಕ್ತಿಯೊಬ್ಬನಿಗೆ ವೈದ್ಯರು ಮೆದುಳಿನ ಶಸ್ತ್ರಚಿಕಿತ್ಸೆಯನ್ನು ಮಾಡಿದರು. ಈ ಸಂದರ್ಭದಲ್ಲಿ ರೋಗಿ ಎಚ್ಚರವಾಗಿದ್ದು. ಪಿಯಾನೋ ನುಡಿಸುತ್ತಿದ್ದರು ಮತ್ತು ಹನುಮಾನ್‌ ಚಾಲೀಸಾ ಪಠಿಸುತ್ತಿದ್ದರು ಎಂದು ತಿಳಿದುಬಂದಿದೆ. 

ಮೃತ ಮಾಲೀಕನಿಗಾಗಿ 4 ತಿಂಗ್ಳಿಂದ ಆಸ್ಪತ್ರೆ ಶವಾಗಾರದ ಹೊರ ಕಾಯ್ತಿತ್ತು ಶ್ವಾನ!
ಸಾಕು ಪ್ರಾಣಿ ಅದ್ರಲ್ಲೂ ನಾಯಿ ನಿಯತ್ತಿಗೆ ಹೆಸರುವಾಸಿ. ಮಾಲೀಕನನ್ನು ಅತಿ ಹೆಚ್ಚು ಪ್ರೀತಿಸುವ ಈ ನಾಯಿಯೊಂದು ಆಸ್ಪತ್ರೆಗೆ ದಾಖಲಾದ ತನ್ನ ಮಾಲೀಕ ಸತ್ತ ವಿಚಾರ ತಿಳಿಯದೇ ತಿಂಗಳು ಗಟ್ಟಲೇ ಆಸ್ಪತ್ರೆಯ ಮುಂಭಾಗ ಕಾಯುತ್ತಾ ನಿಂತ ಸುದ್ದಿ ಇಂಟರ್‌ನೆಟ್‌ನಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಕೇರಳ (Kerala)ದ ಕಣ್ಣೂರು ಜಿಲ್ಲಾ ಆಸ್ಪತ್ರೆ (Hospital) ಬಳಿ ಈ ಘಟನೆ ನಡೆದಿತ್ತು. 
 
ಅಮೇರಿಕಾದಲ್ಲಿ ಡೇಂಜರಸ್ ವಾಂಪೈರ್ ವೈರಸ್ ಪತ್ತೆ
ಅಮೇರಿಕಾದ ಮೇರಿಲ್ಯಾಂಡ್ ಮತ್ತು ಮಿಸೌರಿಯಲ್ಲಿ ಮೊದಲ ಬಾರಿಗೆ ಮಣ್ಣಿನ ಮಾದರಿಗಳಲ್ಲಿ ಹಲವಾರು ವಾಂಪೈರ್‌ ವೈರಸ್‌ಗಳು ಪತ್ತೆಯಾಗಿವೆ. ಇವು ಮಣ್ಣನ್ನು ಬಲವಾಗಿ ಮತ್ತು ಆರೋಗ್ಯಕರವಾಗಿಡಲು ಅಗತ್ಯವಾದ ಉತ್ತಮ ವೈರಸ್‌ಗಳನ್ನು ಸಹ ಕೊಲ್ಲುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಸಂಗಾತಿ ಜೊತೆ ಈ ದ್ವೀಪದಲ್ಲಿದ್ರೆ ಸಿಗುತ್ತೆ 1.5 ಕೋಟಿ ಸಂಬಳ
ವಿಶ್ವದಲ್ಲಿ ಚಿತ್ರವಿಚಿತ್ರ ಕೆಲಸಗಳಿವೆ. ಕೆಲವೊಂದು ಕೆಲಸ ಕಮ್ಮಿ, ಅಪಾಯ ಜಾಸ್ತಿ. ಮತ್ತೆ ಕೆಲವೊಂದು ಕೆಲಸದಲ್ಲಿ ಸಂಬಳ ಕಡಿಮೆ ಇರುತ್ತದೆ. ಹಾಗೆಯೇ ಇಲ್ಲೊಂದು ಬೀಚ್‌ನಲ್ಲಿ ಸಂಗಾತಿ ಜೊತೆ ಇದ್ದರೆ  ಸಂಬಳ ಕೊಡುವ ಆಫರ್ ನೀಡಿತ್ತು ಅಲ್ಲಿನ ಅಥಾರಿಟಿ

2026ಕ್ಕೆ ಬೆಂಗ್ಳೂರಲ್ಲಿ ಹಾರಾಡಲಿದೆ ಏರ್‌ ಟ್ಯಾಕ್ಸಿ!
ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಬೆಂಬಲಿತ ಇಂಟರ್‌ಗ್ಲೋಬ್ ಎಂಟರ್‌ಪ್ರೈಸಸ್, 2026 ರ ವೇಳೆಗೆ ಭಾರತದಲ್ಲಿ ಆಲ್-ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ ಸೇವೆಯನ್ನು ಪರಿಚಯಿಸಲು ಅಮೆರಿಕ ಮೂಲದ ಆರ್ಚರ್  ಏವಿಯೇಷನ್‌ ಜೊತ ಪಾಲುದಾರಿಕೆ ಹೊಂದಿದೆ. 

ಬಾಡಿಗೆ ತಾಯಂದಿರಿಗೂ ಹೆರಿಗೆ ರಜೆ ಪಡೆಯುವ ಹಕ್ಕಿದೆ; ಹೈಕೋರ್ಟ್‌
ಮಾತೃತ್ವ ರಜೆಗೆ ಸಂಬಂಧಿಸಿದಂತೆ ತಾಯಿಗೆ ತಾರತಮ್ಯ ಮಾಡಬಾರದು, ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಹೆತ್ತಿದ್ದಾಳೆ ಅನ್ನೋ ಕಾರಣಕ್ಕೆ ಆಕೆಗೆ ಮೆಟರ್ನಿಟಿ ಲೀವ್‌ ನಿರಾಕರಿಸುವಂತಿಲ್ಲ ಎಂಬುದಾಗಿ ರಾಜಸ್ಥಾನ ಹೈಕೋರ್ಟ್ ಹೇಳಿದೆ.

ಪತಿಗೆ ಕೆಲಸವಿಲ್ಲದಿದ್ದರೂ ವಿಚ್ಛೇದಿತ ಪತ್ನಿಗೆ ಜೀವನಾಂಶ ಕೊಡಲೇಬೇಕು!
ತನಗೆ ಪತ್ನಿಯೊಂದಿಗೆ ಜೀವನ ಮಾಡಲು ಇಷ್ಟವಿಲ್ಲವೆಂದು ವಿಚ್ಛೇದನ ನಿಡಿದ ಪತಿಯು ತನಗೆ ದುಡಿಮೆ ಇಲ್ಲ ಎಂಬ ಕಾರಣಕ್ಕೆ ವಿಚ್ಚೇದಿತ ಪತ್ನಿಗೆ ಜೀವನಾಂಶ ಕೊಡುವುದನ್ನು ನಿರಾಕರಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ತಿಳಿಸಿದೆ. 

ಒಂದೇ ವರ್ಷದಲ್ಲಿ 151 ಕೋಟಿ ರೂ ಆದಾಯ
ಒನ್ಲಿಫ್ಯಾನ್ಸ್ ಪೋರ್ನ್ ವೆಬ್‌ಸೈಟ್ ಮೂಲಕ ಮಾಡೆಲ್ ಕಮ್ ರಾಪ್ ಆರ್ಟಿಸ್ಟ್ ಒಂದೇ ವರ್ಷದಲ್ಲಿ 151 ಕೋಟಿ ರೂಪಾಯಿ ಆದಾಯಗಳಿಸಿದ್ದಾರೆ. ನಟಿ ತಮ್ಮ ಆದಾಯದ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ ಪೊರ್ನ್ ಸೈಟ್‌ನಲ್ಲಿ ಈಕೆ ಕೇವಲ ತಮ್ಮ ಫೋಟೋಸ್ ಮಾತ್ರ ಹಾಕಿ ಈ ಆದಾಯ ಪಡೆದಿದ್ದಾರೆ.

ಎರಡೆರಡು ಗರ್ಭಕೋಶ ಇರೋ ಮಹಿಳೆಗೆ ಎರಡರಲ್ಲೂ ಕುಡಿಯೊಡಿಯುತ್ತಿದೆ ಕಂದಮ್ಮ!
ನ್ಯೂಯಾರ್ಕ್‌: ಅಮೆರಿಕಾದ ಅಲ್ಬಾಮಾದ ಮಹಿಳೆಯೊಬ್ಬರೂ ಎರಡು ಗರ್ಭಕೋಶಗಳನ್ನು ಹೊಂದಿದ್ದು, ಎರಡರಲ್ಲೂ ಕಂದನನ್ನು ಹೊಂದಿದ್ದು, ವೈದ್ಯಕೀಯ ಅಚ್ಚರಿಗೆ ಕಾರಣರಾಗಿದ್ದಾರೆ. 

ಸ್ನಾನಕ್ಕೆ ಹೋಗುವಾಗ ಸುತ್ತಿಕೊಳ್ಳೋ ಟವೆಲ್‌ನಂತಿರೋ ಈ ಸ್ಕರ್ಟ್ ಬೆಲೆ ಹತ್ತಿಪ್ಪತ್ತು ಸಾವಿರವಲ್ಲ!
ದಿನ ದಿನಕ್ಕೂ ಫ್ಯಾಷನ್ ಬದಲಾಗ್ತಿರುತ್ತದೆ. ಫ್ಯಾಷನ್ ಜಗತ್ತಿನಲ್ಲಿ ಹೊಸ ಹೊಸ ಪ್ರಯೋಗ ನಡೆಯುತ್ತಿರುತ್ತದೆ. ಈ ಪ್ರಯೋಗ ಮಾಡೋದ್ರಲ್ಲಿ  ಐಷಾರಾಮಿ ಬ್ರಾಂಡ್ ಬಾಲೆನ್ಸಿಯಾಗ ಹಿಂದೆ ಬಿದ್ದಿಲ್ಲ. ಈಗ ಅದು ಹೊರತಂದಿರುವ ಈ ಸ್ಕರ್ಟ್ ಬೆಲೆ 925 ಅಮೆರಿಕನ್ ಡಾಲರ್

ಕಸಕ್ಕೆ ಎಸೀಬೇಕಾಗಿದ್ದ ಪೇಂಟಿಂಗ್ ₹208 ಕೋಟಿಗೆ ಹರಾಜು!
ಒಂದು ಪೇಂಟಿಂಗ್ ಕೂಡ ಅದೃಷ್ಟ ಬದಲಿಸಬಹುದು. ಪ್ರಯೋಜನವಿಲ್ಲ ಅಂದ್ಕೊಂಡಿದ್ದ ವಸ್ತುವೇ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡ್ಬಹುದು. ಹಳೆ ವಸ್ತುವನ್ನು ಪರಿಶೀಲಿಸದೆ ಕಸಕ್ಕೆ ಹಾಕ್ಬೇಡಿ. ಫ್ರಾನ್ಸ್ ನಲ್ಲಿ ಕಸಕ್ಕೆ ಎಸೆಯಲ್ಪಡ್ತಿದ್ದ ಪೇಂಟಿಂಗ್ ಈಗ ಮ್ಯೂಜಿಯಂ ಸೇರಿದೆ.

ಬಾಯ್‌ಫ್ರೆಂಡ್‌ ಜತೆ ಮದ್ವೆಯಾಗು ಅಂತ ಹೆಂಡ್ತಿಯನ್ನೇ ಬಿಟ್ಟುಕೊಟ್ಟ ತ್ಯಾಗಮಯಿ ಗಂಡ
ಪತಿಯೊಬ್ಬ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನೊಂದಿಗೆ ವಿವಾಹ ಮಾಡಿಕೊಟ್ಟ ಘಟನೆ ಬಿಹಾರದ ಬೇಗುಸರೈನಲ್ಲಿ ನಡೆದಿದೆ. ಈ ಪತ್ನಿ ಜೊತೆ  ತನಗಿದ್ದಇಬ್ಬರು ಮಕ್ಕಳನ್ನೂ ನಾನೇ ನೋಡಿಕೊಳ್ಳುತ್ತೇನೆ ಎಂದೂ ಪತಿ ಹೇಳಿದ್ದಾನೆ. 

ಸುಬ್ರತಾ ರಾಯ್ ಅಂತ್ಯ ಸಂಸ್ಕಾರಕ್ಕೆ ಬಾರದ ಮಕ್ಕಳು, ಮೊಮ್ಮಗನಿಂದ ಅಗ್ನಿ ಸ್ಪರ್ಶ!
ಭಾರತದ ಶ್ರೀಮಂತ ಉದ್ಯಮಿಗಳಲ್ಲೊಬ್ಬರಾಗಿರುವ ಸಹರಾ ಗ್ರೂಪ್ ಮುಖ್ಯಸ್ಥ ಸುಬ್ರತಾ ರಾಯ್ ಅವರು ಈ ವರ್ಷದ ನವೆಂಬರ್‌ನಲ್ಲಿ ತೀರಿಕೊಂಡಿದ್ದರು. ಆದರೆ ಅವರ ಅಂತ್ಯಸಂಸ್ಕಾರದಲ್ಲಿ ಅವರ ಮಕ್ಕಳು ಪಾಲ್ಗೊಳ್ಳದಿರೋದು ಬಹಳಷ್ಟು ಚರ್ಚೆಗೆ ಕಾರಣವಾಗಿತ್ತು.

ಮಿಸ್ ಯುನಿವರ್ಸ್‌ನಲ್ಲಿ ಭಾಗಿಯಾದ Plus Size ಮಾಡೆಲ್‌  ಜೇನ್ ದೀಪಿಕಾ

ಈ ಬಾರಿಯ ಮಿಸ್ ಯುನಿವರ್ಸ್‌ ಸ್ಪರ್ಧೆಯಲ್ಲಿ ನೇಪಾಳ ಮೂಲದ ಮಾಡೆಲ್‌ ಜೇನ್ ದೀಪಿಕಾ ಗ್ಯಾರೆಟ್ ಭಾಗವಹಿಸಿ ಸಂಚಲನ ಸೃಷ್ಟಿಸಿದ್ದರು. ಇವರು ಸಾಮಾನ್ಯ ಮಾಡೆಲ್‌ಗಳಂತಿಲ್ಲದೇ ಪ್ಲಸ್ ಸೈಜ್ ಹೊಂದಿದ್ದು,  ಧಡೂತಿ ಮಹಿಳೆಯರ ಸಬಲೀಕರಣದ ದೃಷ್ಟಿಯಲ್ಲಿ ಅತಿದೊಡ್ಡ ಸ್ಟೇಟ್‌ಮೆಂಟ್‌ ಎಂದೇ ಬಿಂಬಿಸಲಾಗುತ್ತಿದೆ.
 

ತಂಬಾಕು ಕ್ಯಾನ್ಸರ್‌ಗೆ ಭಾರತ ಸೇರಿ 7 ದೇಶದಲ್ಲಿ 13 ಲಕ್ಷ ಜನ ಬಲಿ

ತಂಬಾಕು ಸೇವನೆಯಿಂದಾಗಿ ಉಂಟಾಗುತ್ತಿರುವ ಕ್ಯಾನ್ಸರ್‌ನಿಂದಾಗಿ ಭಾರತ ಸೇರಿದಂತೆ 7 ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಶೀಲ ದೇಶಗಳಲ್ಲಿ ಪ್ರತಿ ವರ್ಷ 13 ಲಕ್ಷ ಜನರು ಮೃತಪಡುತ್ತಿದ್ದಾರೆ ಎಂದು ಲ್ಯಾನ್ಸೆಟ್‌ ಸಂಶೋಧನಾ ವರದಿ ಹೇಳಿದೆ. ಹೀಗೆ ಹೆಚ್ಚು ಸಾವು ಸಂಭವಿಸುತ್ತಿರುವ ದೇಶಗಳೆಂದರೆ ಭಾರತ, ಚೀನಾ, ಬ್ರಿಟನ್‌, ಬ್ರೆಜಿಲ್‌, ರಷ್ಯಾ, ಅಮೆರಿಕ ಮತ್ತು ದಕ್ಷಿಣ ಆಫ್ರಿಕಾ.

ಮಕ್ಕಳ ಫ್ಲೇವರಡ್ ನೀರಿಗೆ 19 ಸಾವಿರ!
ಮಕ್ಕಳ ಪ್ರಾಡೆಕ್ಟ್ (Product) ಗೆ ಕೆಮಿಕಲ್ ಬಳಕೆಯಾಗೋದಿಲ್ಲ ಎನ್ನುವ ಥೀಮ್ ಇಟ್ಟುಕೊಂಡೇ ಕಂಪನಿ (Company) ಗಳು ವಸ್ತುಗಳ ಉತ್ಪಾದನೆ, ಮಾರಾಟ ಮಾಡೋದು. ಹಾಗಾಗಿಯೇ ಇವುಗಳ ಬೆಲೆ ಒನ್ ಟು ಡಬಲ್ ಇರುತ್ತೆ. ಮಕ್ಕಳ ಉತ್ಪನ್ನ ತಯಾರಿಸುವ ಕಂಪನಿಯೊಂದು ತನ್ನ ಉತ್ಪನ್ನ ಹಾಗೂ ಬೆಲೆ ವಿಷ್ಯಕ್ಕೆ ಈಗ ಸುದ್ದಿಯಾಗಿದೆ. ಮಕ್ಕಳಿಗಾಗಿ ಪರಿಮಳಯುಕ್ತ ನೀರನ್ನು ಇದು ತಯಾರಿಸಿದ್ದು, ಅದ್ರ ಬೆಲೆ 19 ಸಾವಿರ

ದೇಶದ ಮೊದಲ ಯಕೃತ್ ಕಸಿಗೆ 25 ವರ್ಷ 
ದೇಶದಲ್ಲೇ ಮೊದಲ ಯಕೃತ್ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದ ದಾಖಲೆಗೆ ಪಾತ್ರನಾಗಿದ್ದ 20 ತಿಂಗಳ ಬಾಲಕ ಸ೦ಜಯ್‌ ಶಕ್ತಿ ಇದೀಗ ಸ್ವತಃ ವೈದ್ಯ! ದೇಶದ ವೈದ್ಯಕೀಯ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದ ಘಟನೆಗೆ ಇದೀಗ 25 ವರ್ಷ ತುಂಬಿದ್ದು, ಈ ನಿಮಿತ್ತ ಡಾ.ಸ೦ಜಯ್‌ ಶಕ್ತಿಯನ್ನು ದೆಹಲಿಯಲ್ಲಿ ನವಂಬರ್‌ನಲ್ಲಿ ಸನ್ಮಾನಿಸಲಾಗಿತ್ತು.

2023ರ ವಿಶ್ವ ಸುಂದರಿ ಕಿರೀಟ ಗೆದ್ದ ನಿಕರಾಗುವಾದ ಶೆಯ್ನಿಸ್ ಪಲಾಸಿಯೋಸ್
ಮಿಸ್ ಯೂನಿವರ್ಸ್ 2023ರ ಕಿರೀಟವನ್ನು ಶೆಯ್ನಿಸ್ ಪಲಾಸಿಯೋಸ್ ಗೆದ್ದಿದ್ದಾರೆ. 72ನೇ ವಿಶ್ವ ಸುಂದರಿ ಸ್ಪರ್ಧೆಯನ್ನು ಎಲ್ ಸಾಲ್ವಡಾರ್‌ನಲ್ಲಿರುವ ಜೋಸ್ ಅಡಾಲ್ಫೋ ಪಿನೆಡಾ ಅರೆನಾದಲ್ಲಿ ನಡೆಯಿತು. ಈ ಬಾರಿ ಭಾರತವನ್ನು ಪ್ರತಿನಿಧಿಸಿದ  ಶ್ವೇತಾ ಶಾರದಾ ಅಗ್ರ 20 ಫೈನಲಿಸ್ಟ್‌ಗಳಲ್ಲಿ ಸ್ಥಾನ ಪಡೆದರು. 

ವಿಶ್ವದ ಅತ್ಯಂತ ದುಬಾರಿ ವಿಸ್ಕಿ ಬಾಟಲ್‌ 22.7 ಕೋಟಿ ರೂಗೆ ಮಾರಾಟ!
ಮದ್ಯ ಹೀರುವ ಮುನ್ನ ಎರಡು ಹನಿ ಹೊರಗೆ ಚೆಲ್ಲಿ ಆರಂಭಿಸುವ ಸಂಪ್ರದಾಯ ಹಲವರಿಗಿದೆ. ಆದರೆ ಇಲ್ಲೊಂದು ವಿಸ್ಕಿ ಇದೆ. ನೀವೇನಾದರೂ ಈ ವಿಸ್ಕಿಯ ಗುಟುಕು ಹೀರುವ ಮುನ್ನ ಈ ಸಂಪ್ರದಾಯ ಮಾಡಿದರೆ ಕತೆ ಮುಗಿಯಿತು. ಕಾರಣ ಒಂದೊಂದು ಹನಿಗೆ ಲಕ್ಷ ಲಕ್ಷ ರೂಪಾಯಿ. ಹೌದು, ವಿಶ್ವದ ಅತ್ಯಂತ ದುಬಾರಿ ಮದ್ಯ ಬರೋಬ್ಬರಿ 22.7 ಕೋಟಿ ರೂಪಾಯಿಗೆ ಮಾರಾಟವಾಗಿದೆ. 

ಗಂಡು ಮಗುವಿನ ಜನ್ಮ ನೀಡಿದ ಸಲಿಂಗಿ, ವಿಶ್ವದಲ್ಲೇ ಎರಡನೇ ಪ್ರಕರಣ!
ಸ್ಪೇನ್ ಎಸ್ಟೆಫಾನಿಯಾ ಹಾಗೂ ಅಜಹರಾ ಇಬ್ಬರು ಮಹಿಳೆಯರು ವಿವಾಹ ಭಾರಿ ಸುದ್ದಿಯಾಗಿತ್ತು. ಇದೀಗ ಈ ಸಲಿಂಗಿ ದಂಪತಿ ಗಂಡು ಮಗುವಿನ ಜನ್ಮ ನೀಡುವ ಮೂಲಕ ಮತ್ತೊಮ್ಮೆ ವಿಶ್ವದ ಗಮನಸೆಳೆದಿದ್ದಾರೆ.

ವಸ್ತ್ರೋದ್ಯಮದಲ್ಲಿ ಹೆಸರು ಮಾಡಿದ್ದ ರೇಮಾಂಡ್ ಮುಖ್ಯಸ್ಥ ಗೌತಮ್ ಸಿಂಘನಿಯಾ ಡಿವೋರ್ಸ್‌
ವಸ್ತ್ರೋದ್ಯಮದಲ್ಲಿ ಹೆಸರು ಮಾಡಿದ್ದ ರೇಮಾಂಡ್ ಸಂಸ್ಥೆಯ ಮುಖ್ಯಸ್ಥ ಗೌತಮ್ ಸಿಂಘನಿಯಾ ಹಾಗೂ ಪತ್ನಿ ನವಾಜ್ ಮೋದಿ ವಿಚ್ಛೇದನ ಈ ನವೆಂಬರ್ ತಿಂಗಳಲ್ಲಿ ಸಂಚಲನ ಸೃಷ್ಟಿಸಿದ ಮತ್ತೊಂದು ಸುದ್ದಿ,  ವಿಚ್ಛೇದನದ ಇತ್ಯರ್ಥದ ಭಾಗವಾಗಿ ಪತ್ನಿ ನವಾಜ್ ಮೋದಿ ಅಂದಾಜು 1.4 ಬಿಲಿಯನ್ ನಿವ್ವಳ ಮೌಲ್ಯದ 75 ಪ್ರತಿಶತಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು  ವರದಿಯಾಗಿದೆ

ವಕೀಲಿಕೆ ಬಿಟ್ಟು ಪ್ರಾಣಿ ಜೊತೆ ಮಾತನಾಡಿ ಕೋಟಿ ಗಳಿಸ್ತಿದ್ದಾಳೆ ಈ ಮಹಿಳೆ!
ಅಮೆರಿಕಾರ ಫಿಲಡೆಲ್ಫಿಯಾ ಪ್ರಾಪರ್ಟಿ ವಕೀಲೆ ನಿಕ್ಕಿ ವಾಸ್ಕೊನೆಜ್ ಹಿಂದೆ ಮಾಡ್ತಿದ್ದ ಕೆಲಸದಲ್ಲಿ ವಾರ್ಷಿಕವಾಗಿ 62 ಲಕ್ಷ ರೂಪಾಯಿ ಗಳಿಸ್ತಾ ಇದ್ರು. ಆದ್ರೆ ಇದ್ದಕ್ಕಿದ್ದಂತೆ ಆ ಕೆಲಸ ಬಿಟ್ಟುಸಾಕುಪ್ರಾಣಿ (Pet) ತಜ್ಞೆಯಾಗಿ ಕೆಲಸ ಮಾಡ್ತಿದ್ದಾರೆ. 

ಜೀವನಪೂರ್ತಿ ಜಗಳವನ್ನೇ ಮಾಡದ ಜೋಡಿಗೆ ಮತ್ತೆ ಮದುವೆ ಮಾಡಿದ ಹಾಸನ ಜನ
ಹಾಸನದ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯಲ್ಲಿ  ಅಪರೂಪದ ಮದುವೆ ನಡೆದಿತ್ತು. ಮಾತು ಬಾರದ ಕಿವಿ ಕೇಳದ ಆ ಜೋಡಿ ಜೀವನದಲ್ಲಿ ಜಗಳವನ್ನೇ ಮಾಡಿಲ್ಲ ಎಂದು ಅವರಿಗೆ ಊರಿನ ಮಂದಿ ಮತ್ತೆ ಮದುವೆ ಮಾಡಿ ಶುಭ ಹಾರೈಸಿದ್ದರು.

ಬಾಡಿಗೆಗಿದ್ದಾರೆ ಕಣ್ಣೀರು ಒರೆಸೋ ಹುಡುಗ್ರು, ಅತ್ರೆ ಕಣ್ಣೀರು ಒರೆಸ್ತಾರೆ ಈ ಹ್ಯಾಂಡ್‌ಸಮ್‌ ಬಾಯ್ಸ್‌!
ಜಗತ್ತಿನಲ್ಲಿ ಅದೆಷ್ಟು ಚಿತ್ರವಿಚಿತ್ರವಾದ ಆಸಕ್ತಿಕರ ಉದ್ಯೋಗಗಳಿವೆ.  ಅವುಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋದರೆ ಅಚ್ಚರಿಯಾಗೋದು ಖಂಡಿತ. ಅದೇ ರೀತಿ ಜಪಾನ್‌ನಲ್ಲಿದೆ ಒಂದು ವಿಚಿತ್ರ ಜಾಬ್‌. ಅಲ್ಲಿ ಅತ್ತವರ ಕಣ್ಣೀರು ಒರೆಸಿದ್ರೆ ಸಾಕು ತಿಂಗಳಿಗೆ ಲಕ್ಷಗಟ್ಟಲೆ ದುಡ್ಡು ಸಂಪಾದಿಸ್ಬೋದು. ಜಪಾನ್‌ನಲ್ಲಿ ಹೀಗೆ ಕಣ್ಣೀರು ಒರೆಸೋ ಹ್ಯಾಂಡ್‌ಸಮ್‌ ಹುಡುಗರು ಬಾಡಿಗೆಗೆ ದೊರಕುತ್ತಾರೆ.

33 ವರ್ಷದ ಬಾಡಿ ಬಿಲ್ಡರ್‌ ಹೃದಯಾಘಾತದಿಂದ ನಿಧನ
33 ವರ್ಷದ ಬಾಡಿ ಬಿಲ್ಡರ್, ಬ್ರೆಜಿಲ್‌ನ ಸಾವೋ ಪೌಲೋದ ಖ್ಯಾತ ಡಾಕ್ಟರ್ ರೊಡೋಲ್ಫ್ ಡ್ಯುರೇಟ್ ರಿಬೈರೋ ಡೋಸ್ ಸ್ಯಾಂಟೋಸ್ ಹೃದಯಾಘಾತದಿಂದ ನವೆಂಬರ್‌ನಲ್ಲಿ ನಿಧನರಾಗಿದ್ದಾರೆ. ಜಿಮ್‌ನಲ್ಲಿ ಕಸರತ್ತು ಮಾಡುತ್ತಿರುವ ಸಂದರ್ಭದಲ್ಲೇ ಸ್ಯಾಂಟೋಸ್ ಅಸ್ವಸ್ಥರಾಗಿ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದರು.

ನಾಲ್ಕು ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ!
ಗರ್ಭಿಣಿ ಅವಳಿ ಮಕ್ಕಳಿಗೆ ಜನ್ಮ ನೀಡುವ ಘಟನೆಗಳು ನಮ್ಮ ಸುತ್ತಮುತ್ತ ಆಗಾಗ ನಡೆಯುತ್ತಿರುತ್ತದೆ. ಆದರೆ ಒಂದೇ ಬಾರಿಗೆ ನಾಲ್ಕು ಮಕ್ಕಳು ಹುಟ್ಟುವುದು ತೀರಾ ಅಪರೂಪ. ಹಾಗೆ ಗರ್ಭಿಣಿಯೊಬ್ಬರು ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿರೋ ಘಟನೆ ಬಿಹಾರದಲ್ಲಿ ನಡೆದಿದೆ. 

14 ವರ್ಷದಿಂದ ಕೇವಲ ಬೆಲ್ಲ, ಹಾಲು ಸೇವಿಸಿ ಬದುಕಿದ ಯಾದಗಿರಿಯ ಬಾಲೆ!

ಮನುಷ್ಯ ಸದೃಢವಾಗಿ ಬದುಕಲು ಮೂರು ಹೊತ್ತು ಚೆನ್ನಾಗಿ ಊಟ ಮಾಡಬೇಕು. ಒಂದು ವೇಳೆ ಒಂದೊತ್ತು ಊಟ ಕಡಿಮೆಯಾದ್ರೂ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಆದ್ರೆ ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ರಂಗಂಪೇಟೆಯ ರೇಣುಕಮ್ಮ ಎಂಬ ಬಾಲಕಿ ಆಹಾರವಿಲ್ಲದೇ ಕೇವಲ ಬೆಲ್ಲ, ಹಾಲು ಹಾಗೂ ನೀರು ಸೇವಿಸಿಯೇ 14 ವರ್ಷದಿಂದ ಬದುಕಿದ್ದಾಳೆ‌. ಬಾಲಕಿಯ ಆಹಾರ ಪದ್ಧತಿ ವೈದ್ಯಕೀಯ ಲೋಕಕ್ಕೆ ಸವಾಲೆಸೆದಿದೆ.

ಹಾರುವ ವಿಮಾನದಲ್ಲಿ ಮಗಳನ್ನು ಮದುವೆ ಮಾಡಿದ  ಉದ್ಯಮಿ
ದುಬೈನಲ್ಲಿ ಭಾರತೀಯ ಮೂಲದ ಉದ್ಯಮಿಯೊಬ್ಬರು ಮಗಳ ಮದುವೆಯನ್ನು ವಿಶಿಷ್ಟವಾಗಿ ಮಾಡಿದ್ದರು. ಮದುವೆಗಾಗಿಯೇ ಬೋಯಿಂಗ್ 747 ವಿಮಾನವನ್ನು ತಮಗೆ ಬೇಕಾದ ರೀತಿಯಲ್ಲಿ ನವೀಕರಣಗೊಳಿಸಿ 3 ಗಂಟೆಗಳ ಪ್ರಯಾಣದಲ್ಲಿ ವಿಮಾನದೊಳಗೆ ಮಗಳ ಮದುವೆ ಮಾಡಿ ಕೊಟ್ಟಿದ್ದಾರೆ. ಯುಎಇ ಪ್ರಮುಖ  ಉದ್ಯಮಿ ದಿಲೀಪ್ ಪೋಪ್ಲಿ ಈ ಮದುವೆ ಆಯೋಜಿಸಿದವರು.

ನನ್ನ ಜೊತೆ ಯಾರೂ ಇಲ್ಲ, ಪೋಷಕರ ಕುರಿತ ಪ್ರಶ್ನೆಗೆ ಉತ್ತರಿಸುವ ವೇಳೆ ಕಣ್ಣೀರಿಟ್ಟ 4 ವರ್ಷದ ಬಾಲಕ!

ನನ್ನ ಜೊತೆ ಯಾರೂ ಇಲ್ಲ, ಮನೆಯಲ್ಲಿ ನಾನೊಬ್ಬನೇ ಆಟವಾಡುತ್ತೇನೆ. ತಂದೆ ಎಂದರೆ ನನಗೆ ಭಯ, ಪ್ರೀತಿಯಿಂದ ಮಾತಾಡಿಲ್ಲ, ತಾಯಿಗೆ ನಾನು ಇಷ್ಟವಿಲ್ಲ ಎಂದು ಕಣ್ಣೀರಿಟ್ಟ ಬಾಲಕನ ವಿಡಿಯೋವೊಂದು ಈ ವರ್ಷದ ನವೆಂಬರ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು ದಕ್ಷಿಣ ಕೊರಿಯಾದ ವೀಡಿಯೋ ಇದಾಗಿತ್ತು. 

ಕೆಲಸಕ್ಕಿಂತ ಭಿಕ್ಷೆ ಬೇಡೋದು ಬೆಸ್ಟಾ? ಭಿಕ್ಷೆ ಬೇಡಿ ಕೋಟ್ಯಧಿಪತಿಯಾಗಿದ್ದಾಳೆ ಈಕೆ!
ಪಾಕಿಸ್ತಾನದ ಒಬ್ಬ ಯುವತಿ ಲೈಬಾ ಭಿಕ್ಷಕಿಯ ರೂಪದಲ್ಲಿ ಹಣ ಸಂಪಾದಿಸಿ ಕೋಟಿ ಕೋಟಿಯ ಒಡತಿಯಾಗಿರುವುದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಭಿಕ್ಷೆ ಬೇಡಿ ಹಣ ಸಂಪಾದಿಸಿದ ಈಕೆ ಈಗ ಅಮೆರಿಕದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾಳೆ.


Roti Didi: ರೊಟ್ಟಿ ತಯಾರಿಸಿ 18 ಜನರಿಗೆ ಕೆಲಸ ನೀಡಿದ ಟೀಚರಮ್ಮ!
ಮಹಿಳೆಯರೇ ನಡೆಸುತ್ತಿರುವ ಸ್ಟಾರ್ಟ್ ಅಪ್ ಗಳ ಸಂಖ್ಯೆ ಕೂಡ ಈಗ ಹೆಚ್ಚಾಗಿದೆ. ಅದೇ ರೀತಿ ಗುಜರಾತಿನ ವಡೋದರದ ಈ ಟೀಚರ್ ರೋಟಿ ಮಾಡುವ ಮೂಲಕವೇ 18 ಜನರಿಗೆ ಕೆಲಸ ನೀಡಿದ್ದು, ಈ ವಿಚಾರ ಈಗ ಸಂಚಲನ ಸೃಷ್ಟಿಸಿದೆ. 

2023ರಲ್ಲಿ ತಮ್ಮ ಕೆಲಸದಿಂದ ದೇಶಾದ್ಯಂತ ಜನಪ್ರಿಯತೆ ಪಡೆದ ಮಹಿಳೆಯರಿವರು!
ಮಹಿಳೆಯರು ಸಮಯದೊಂದಿಗೆ ಮುಂದೆ ಸಾಗುತ್ತಿದ್ದಾರೆ.  2023 ರಲ್ಲಿ ತಮ್ಮ ಕೆಲಸ ಮತ್ತು ಸಾಧನೆಗಳಿಂದ (popular women) ಜನರ ಹೃದಯವನ್ನು ಗೆದ್ದ ಮಹಿಳೆಯರ ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ. ಲೇಖಕಿ ನಂದಿನಿ ದಾಸ್, ಉದ್ಯಮಿ ನೀತಿ ಗೋಯಲ್  ರಸ್ಲರ್ ಪೂಜಾ ತೋಮರ್ ,  ದಿಯೋಘರ್ ಡಾ ರೂಪಶ್ರೀ, ನಟಿ ಪಲ್ಲವಿ ಜೋಶಿ, ಡಾ ಸುಧಾಮೂರ್ತಿ, ಈ ವರ್ಷ ಜನಪ್ರಿಯತೆಯ ಉತ್ತುಂಗಕ್ಕೇರಿದ ಮಹಿಳೆಯರಾಗಿದ್ದಾರೆ.

ವಿಚ್ಛೇದನವಾಗಿ ಐದು ವರ್ಷವಾದ್ಮೇಲೆ ಮತ್ತವಳನ್ನೇ ಮದುವೆಯಾದ!
ಮನೆಯಲ್ಲಿರುವ ಮಾಣಿಕ್ಯದ ಮೌಲ್ಯ ಕಳೆದುಹೋದ್ಮೇಲೆ ಗೊತ್ತಾಗುತ್ತದೆ ಎಂಬ ಮಾತಿನಂತೆ  ಈ ಉತ್ತರ ಪ್ರದೇಶದ ಪ್ರಯಾಗರಾಜ್ ವ್ಯಕ್ತಿಯೊಬ್ಬನಿಗೆ. ಪತ್ನಿಗೆ ವಿಚ್ಛೇದನ ನೀಡಿ ದೂರವಾದ್ಮೇಲೆ ತಪ್ಪಿನ ಅರಿವಾಗಿದ್ದು, ಮತ್ತೆ ಆಕೆ ಜೊತೆ ಜೀವಿಸುವ ನಿರ್ಧಾರ ತೆಗೆದುಕೊಂಡು ಮರು ಮದುವೆ ಆಗಿದ್ದಾನೆ.

ಈ ರಾಜಕುಮಾರ ವಿಶ್ವದ ಅತ್ಯಂತ ಸೆಕ್ಸಿಯಸ್ಟ್ ಬೋಳು ತಲೆ ಮನುಷ್ಯ

ಆಕರ್ಷಣೆಯ ವಿಷಯಕ್ಕೆ ಬಂದಾಗಲೆಲ್ಲಾ, ಪ್ರಪಂಚದಾದ್ಯಂತ ವಿಭಿನ್ನ ಮಾಪಕಗಳಿವೆ. ಇದು ಪುರುಷರಿಗೆ ಮತ್ತು ಮಹಿಳೆಯರಿಗೂ ಸಹ ಬೇರೆ ಬೇರೆ ರೀತಿಯದ್ದಾಗಿದೆ. ವಿಶ್ವದ ಅತ್ಯಂತ ಸೆಕ್ಸಿಯಸ್ಟ್ ಬೋಳು ಮನುಷ್ಯನ ಬಗ್ಗೆಯೂ ನಡೆಸಲಾಯಿತು, ಇದರಲ್ಲಿ ಬ್ರಿಟನ್ ರಾಜಕುಮಾರನೊಬ್ಬ ಟಾಪ್ ನಲ್ಲಿದ್ದಾರೆ. 

ಮುಸ್ಲಿಂ ವಿದ್ಯಾರ್ಥಿನಿಯರಿಂದ ಬುರ್ಖಾ ಫ್ಯಾಷನ್ ಶೋ, ಸಂಘಟನೆಗಳಿಂದ ಪ್ರತಿಭಟನೆ
ಉತ್ತರ ಪ್ರದೇಶದ ಮುಜಾಫರ್‌ನಗರದ ಶ್ರೀರಾಮ್‌ ಗ್ರೂಪ್‌ ಆಫ್‌ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಮುಸ್ಲಿಂ ವಿದ್ಯಾರ್ಥಿನಿಯರ ಬುರ್ಖಾ ಕ್ಯಾಟ್‌ವಾಕ್‌ ವಿವಾದಕ್ಕೀಡಾಗಿದೆ. ಈ ಬಗ್ಗೆ ಇಸ್ಲಾಂ ಸಂಘಟನೆಯಾದ ಜಮಿಯತ್‌ ಉಲಾಮಾ ತೀವ್ರ ಅಸಮಾಧಾನ ಹೊರಹಾಕಿತ್ತು.

ಮಕ್ಕಳ ಆಯಾಸ ಹೋಗಿಸಲು ಹೊಸ ಟ್ರೆಂಡ್, ಶಾಲೆಯಲ್ಲೇ ಮಲಗಲು ಅವಕಾಶ!
ಊಟವಾದ್ಮೇಲೆ ನಿದ್ರೆ ಬರೋದು ಸಹಜ. ಮಕ್ಕಳಿಗೆ ಅದನ್ನು ತಡೆಯೋದು ಕಷ್ಟ. ನಿದ್ರೆಗಣ್ಣಿನಲ್ಲಿ ಪಾಠ ಕೇಳಿದ್ರೆ ಓದು ತಲೆಯಲ್ಲಿ ನಿಲ್ಲೋದಿಲ್ಲ. ಮಕ್ಕಳ ಗಮನವನ್ನು ಕೇಂದ್ರೀಕರಿಸಲು ಚೀನಾ ಶಾಲೆಗಳು ಮಾಡಿದ ನೂತನ ಐಡಿಯಾ ಸಂಚಲನ ಸೃಷ್ಟಿಸಿದೆ.

ಬಾಯ್‌ಫ್ರೆಂಡ್‌ ಮೊಬೈಲ್‌ನಲ್ಲಿ ತನ್ನದೂ ಸೇರಿ ಹುಡ್ಗೀರ 13,000 ನಗ್ನ ಫೋಟೋ ಪತ್ತೆ!
ಬೆಂಗಳೂರಿನ ಬೆಳ್ಳಂದೂರಲ್ಲಿರುವ ಬಿಪಿಒ ಕಂಪನಿಯೊಂದರ ಉದ್ಯೋಗಿಯಾಗಿ ಕೆಲಸ ಮಾಡುತ್ತಿರುವ 22 ಪ್ರಾಯದ ಯುವತಿ ತಾನು ಸಂಬಂಧ ಹೊಂದಿದ್ದ ಸಹೋದ್ಯೋಗಿಯ ಫೋನ್ ಗ್ಯಾಲರಿಯಲ್ಲಿ ತನ್ನದೂ ಸೇರಿದಂತೆ ತನ್ನದೇ ಕಂಪನಿಯ ಮಹಿಳಾ ಸಹೋದ್ಯೋಗಿಗಳು ಫೋಟೋ ನೋಡಿ ಶಾಕ್ ಆಗಿದ್ದರು. ಈ ಬಗ್ಗೆ ನಂತರ ದೂರು ದಾಖಲಾಗಿ ಉದ್ಯೋಗಿಯನ್ನು ಬಂಧಿಸಲಾಗಿತ್ತು. 

ಮಾನವ ಮಲಕ್ಕೂ ದುಡ್ಡು
ಮಾನವ ಮಲ ಯಾವುದಕ್ಕೂ ಬೇಡದ್ದೆಂದು ಮೂಗು ಮುರೀಬೇಡಿ, ಅದನ್ನೂ ಕೋಟಿ ಕೊಟ್ಟು ಕೊಳ್ಳುತ್ತೆ ಈ ಕಂಪನಿ!
ಮಾನವ ಮಲ ಸಂಗ್ರಹಿಸಿ ಅಧ್ಯಯನ ಮಾಡುವ ಉದ್ದೇಶದಿಂದ ಹ್ಯೂಮನ್‌ ಮೈಕ್ರೋಬ್ಸ್‌ ಎನ್ನುವ ಸಂಸ್ಥೆ ಮಾಡುವ ಈ ಕೆಲಸದ ಸುದ್ದಿ ಇಂಟರ್‌ನೆಟ್‌ನಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. 

ಬರಡು ಭೂಮಿಯಲ್ಲಿ ಸ್ಟ್ರಾಬೆರಿ ಬೆಳೆದು ದಿನಕ್ಕೆ 30 ಸಾವಿರ ಗಳಿಸುವ ಯುವತಿ

ಬರಡು ಭೂಮಿಯಲ್ಲಿ ಏನ್ ಬೆಳೆಯೋಕ್ಕಾಗುತ್ತೆ ಎಂದು ಸುಮ್ಮನೆ ಕುರೋರೆ ಜಾಸ್ತಿ. ಆದರೆ, ಬರಡು ಭೂಮಿಯಿಂದಲೂ ಲಕ್ಷ ಲಕ್ಷ ಸಂಪಾದಿಸ್ಬಹುದು ಎಂಬುದನ್ನು ಉತ್ತರ ಪ್ರದೇಶದ ಯುವತಿ  ಗುರ್ಲೀನ್ ಚಾವ್ಲಾ ಸಾಧಿಸಿ ತೋರಿಸಿದ್ದಾಳೆ. ಇವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್ ನಲ್ಲಿ ಪ್ರಸ್ತಾಪಿಸಿದ್ದರು.

ನೇಪಾಳದಲ್ಲಿ ಸಲಿಂಗ ವಿವಾಹದ ಮೊದಲ ನೋಂದಣಿ, ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟ ಜೋಡಿ
ಸುಪ್ರೀಂಕೋರ್ಟ್ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದ ಐದು ತಿಂಗಳ ನಂತರ ನೇಪಾಳದಲ್ಲಿ ಸಲಿಂಗ ವಿವಾಹದ ಮೊದಲ ನೋಂದಣಿ ಯಶಸ್ವಿಯಾಗಿ ನಡೆಸಲಾಗಿದೆ. ಈ ಮೂಲಕ ಸಲಿಂಗ ವಿವಾಹವನ್ನು ಅಧಿಕೃತವಾಗಿ ನೋಂದಾಯಿಸಿದ ದಕ್ಷಿಣ ಏಷ್ಯಾದ ಮೊದಲ ದೇಶವೆಂದು ನೇಪಾಳ ಗುರುತಿಸಿಕೊಂಡಿದೆ.

ವಿಮಾನದಲ್ಲೇ ಕಿತ್ತಾಡಿದ ದಂಪತಿ: ದೆಹಲಿಯಲ್ಲೇ ತುರ್ತು ಭೂ ಸ್ಪರ್ಶ!

ಮನೆಯಲ್ಲಿ ದಂಪತಿ ಜಗಳ ಆಡೋದು ಸಾಮಾನ್ಯ.  ಆದರೆ ಇಲ್ಲೊಂದು ದಂಪತಿಯ ಜಗಳ ಮನೆಯಿಂದ ಬೀದಿ ತಲುಪಿ ವಿಮಾನವನ್ನು ಏರಿತು. ಹೀಗಾಗಿ ವಿಮಾನ ತುರ್ತು ಭೂಸ್ಪರ್ಶವಾದ ಘಟನೆ ಈ ವರ್ಷದ ನವೆಂಬರ್‌ನಲ್ಲಿ ನಡೆದಿದೆ. ಮ್ಯೂನಿಚ್‌ನಿಂದ ಬ್ಯಾಂಕಾಕ್‌ಗೆ ತೆರಳುತ್ತಿದ್ದ ಲುಫ್ತಾನ್ಸಾ (Lufthansa) ವಿಮಾನದಲ್ಲಿ ನಡೆದಿತ್ತು. ನಂತರ ಜಗಳ ಮಾಡ್ತಿದ್ದ ಇಬ್ಬರನ್ನೂ ಕೆಳಗಿಳಿಸಿ ವಿಮಾನ ಮತ್ತೆ ತನ್ನ ಹಾರಾಟ ಶುರು ಮಾಡಿತ್ತು. 

ಇವರು ಅಮ್ಮ  ಮಗಳಲ್ಲ… ದಂಪತಿ!  ಈ ಜೋಡಿ ಮಧ್ಯೆ ಇದೆ 37 ವರ್ಷಗಳ ಅಂತರ

ಪ್ರೀತಿ ಅರ್ಥ ಈಗಿನ ದಿನಗಳಲ್ಲಿ ಸಂಪೂರ್ಣ ಬದಲಾಗಿದೆ. ಮದುವೆಗೆ ಜಾತಿ, ಊರು, ಧರ್ಮ ಗೊತ್ತಿಲ್ಲ ಎನ್ನುವ ಕಾಲವಿತ್ತು. ಈಗ ಪ್ರೀತಿಗೆ ಲಿಂಗ ಹಾಗೂ ವಯಸ್ಸಿನ ಅಂತರವೂ ಗೊತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ಹಾಗೆಯೇ ಸಲಿಂಗಕಾಮಿಗಳ ಸಂಖ್ಯೆ ಹೆಚ್ಚಾಗಿದೆ. ಇಂಗ್ಲೆಂಡ್ ಹುಡುಗಿಯೊಬ್ಬಳು ತನಗಿಂತ 37 ವರ್ಷ ಹಿರಿ ವಯಸ್ಸಿನ ಮಹಿಳೆಯನ್ನು ಮದುವೆಯಾಗಿದ್ದಾಳೆ. ಇಬ್ಬರು ತಾಯಿ ಮಗಳಂತೆ ಕಾಣ್ತಾರಾದ್ರೂ ಅವರು ವಾಸ್ತವದಲ್ಲಿ ಗಂಡ- ಹೆಂಡತಿ. ಅವರ ಸ್ಟೋರಿ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ. 
 

Follow Us:
Download App:
  • android
  • ios