ಭಾರತದ ಐದು ಶ್ರೀಮಂತ ನಗರಗಳಿವು; ಬೆಂಗಳೂರಿಗೆ ಎಷ್ಟನೇ ಸ್ಥಾನ?
ಭಾರತದಲ್ಲಿ ಹಲವಾರು ಸುಂದರ ನಗರಗಳಿವೆ. ಅದರಲ್ಲಿ ಕೆಲವೊಂದು ಸಿಟಿ ಹೆಚ್ಚು ಅಭಿವೃದ್ಧಿಯಾಗಿದ್ದರೆ, ಇನ್ನು ಕೆಲವು ಅಭಿವೃದ್ಧಿಯ ಕೊರತೆಯಿಂದ ಇವತ್ತಿಗೂ ಜನರಿಗೆ ಇಷ್ಟವಿಲ್ಲದ ನಗರಗಳಾಗಿವೆ. ಇತ್ತೀಚಿಗೆ ದೇಶದ ಐದು ಶ್ರೀಮಂತ ನಗರಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ಅದ್ರಲ್ಲಿ ಬೆಂಗಳೂರಿಗೆ ಎಷ್ಟನೇ ಸ್ಥಾನ ನೋಡೋಣ.

ಭಾರತದಲ್ಲಿ ಹಲವಾರು ಸುಂದರ ನಗರಗಳಿವೆ. ಆದರೆ ಕೆಲವೊಂದು ಸಿಟಿ ಹೆಚ್ಚು ಅಭಿವೃದ್ಧಿಯಾಗಿದ್ದರೆ, ಇನ್ನು ಕೆಲವು ಅಭಿವೃದ್ಧಿಯ ಕೊರತೆಯಿಂದ ಇವತ್ತಿಗೂ ಜನರಿಗೆ ಇಷ್ಟವಿಲ್ಲದ ನಗರಳಾಗಿವೆ. ಆದರೆ ಅಭಿವೃದ್ಧಿ, ವಾತಾವರಣ ಹೀಗೆ ಎಲ್ಲಾ ರೀತಿಯಲ್ಲೂ ಬೆಸ್ಟ್ ಆಗಿರುವ ನಗರಗಳನ್ನು ಕೋಟ್ಯಾಧಿಪತಿಗಳು ಹೆಚ್ಚು ಇಷ್ಟಪಡುತ್ತಾರೆ. ಅಲ್ಲೇ ವಾಸಿಸುತ್ತಾರೆ ಸಹ. ದೆಹಲಿಯಿಂದ ಬೆಂಗಳೂರಿನವರೆಗೆ 5 ಭಾರತೀಯ ನಗರಗಳು 2023ರ ದೇಶದ ಅತ್ಯಂತ ಶ್ರೀಮಂತ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ದೇಶದ ಶ್ರೀಮಂತ ನಗರಗಳ ಇತ್ತೀಚಿನ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ವರದಿಯ ಪ್ರಕಾರ, ಎಲ್ಲಾ ಅಂಕಿಅಂಶಗಳು ಡಿಸೆಂಬರ್ 31, 2022ಕ್ಕೆ 'ಹೆಚ್ಚಿನ ನೆಟ್‌ವರ್ತ್ ಹೊಂದಿರುವ ವ್ಯಕ್ತಿಗಳು ಎಲ್ಲಿ ವಾಸಿಸುತ್ತಾರೆ ಎಂಬುದನ್ನು ಲಿಸ್ಟ್ ಮಾಡಿದೆ. 1.25 ಲಕ್ಷಕ್ಕೂ ಹೆಚ್ಚು ಮಿಲಿಯನೇರ್‌ಗಳನ್ನು ಹೊಂದಿರುವ ಐದು ಭಾರತೀಯ ನಗರಗಳ (Indian cities) ಮಾಹಿತಿಯನ್ನು ನೀಡಲಾಗಿದೆ. ಆ ಪಟ್ಟಿಯಲ್ಲಿ ಯಾವೆಲ್ಲಾ ನಗರಗಳಿವೆ ನೋಡೋಣ.
2023ರ ಭಾರತದ ಟಾಪ್ 5 ಸ್ಮಾರ್ಟ್‌ಫೋನ್‌ಗಳ ಪಟ್ಟಿ ಹೀಗಿದೆ: ಐಫೋನ್ ಈ ಲಿಸ್ಟ್‌ನಲ್ಲೇ ಇಲ್ಲ!
ಮುಂಬೈ
ಮಹಾರಾಷ್ಟ್ರದ ರಾಜಧಾನಿ ಮುಂಬೈ ಬಾಲಿವುಡ್‌ನ ಕೇಂದ್ರ ಸ್ಥಾನವಾಗಿದೆ. ದೇಶದ ಖ್ಯಾತ ನಟ, ನಟಿಯರು ಇಲ್ಲಿ ವಾಸವಿದ್ದಾರೆ. ಏಷ್ಯಾದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿಯಿಂದ ಹಿಡಿದು ಅನೇಕ ದೊಡ್ಡ ಉದ್ಯಮಿಗಳು (Businessman) ಸಹ ಇಲ್ಲಿ ನೆಲೆಸಿದ್ದಾರೆ. ಮುಂಬೈನಲ್ಲಿ ಜೀವನಮಟ್ಟ ಬಹಳ ದುಬಾರಿ (Costly). ಆದರೂ ಎಲ್ಲ ವರ್ಗದ ಜನರು ಇಲ್ಲಿ ವಾಸಿಸುತ್ತಾರೆ ಅನ್ನೋದು ವಿಶೇಷ. ಭಾರತದಲ್ಲಿ ದುಬಾರಿ ನಗರಗಳ ಪಟ್ಟಿಯಲ್ಲಿ ಮುಂಬೈ ಮೊದಲನೇ ಸ್ಥಾನದಲ್ಲಿದೆ.
ದೆಹಲಿ
ರಾಷ್ಟ್ರ ರಾಜಧಾನಿಯಾಗಿರುವ ದೆಹಲಿಯ ಇತಿಹಾಸ ಬಹಳ ಹಳೆಯದು. ಅನೇಕ ಮೊಘಲ್ ದೊರೆಗಳೂ ಇಲ್ಲಿಂದ ಆಳ್ವಿಕೆ ನಡೆಸಿದ್ದಾರೆ. ಇದರೊಂದಿಗೆ ಕೇಂದ್ರ ಸರಕಾರದ ಕಾರ್ಯ ನಡೆಯುವುದು ಕೂಡ ಇಲ್ಲಿಂದಲೇ. ದೆಹಲಿ ಕೂಡ ಅತ್ಯಂತ ದುಬಾರಿ ನಗರವಾಗಿದೆ. ಇಲ್ಲಿ 30,200 ಹೆಚ್ಚು ಮಿಲಿಯನೇರ್‌ಗಳು ವಾಸವಿದ್ದಾರೆ. ಭಾರತದಲ್ಲಿ ದುಬಾರಿ ನಗರಗಳ ಪಟ್ಟಿಯಲ್ಲಿ ಮುಂಬೈಎರಡನೇ ಸ್ಥಾನದಲ್ಲಿದೆ.
ಬೆಂಗಳೂರು
ಐಟಿಬಿಟಿ ಸಿಟಿ ಎಂದು ಕರೆಸಿಕೊಳ್ಳೋ ಬೆಂಗಳೂರು ತನ್ನ ಕೂಲ್ ಆದ ವಾತಾವರಣದಿಂದಲೇ ದೇಶದ ಹಲವೆಡೆಯ ಜನರನ್ನು ಸೆಳೆಯುತ್ತದೆ. ಸುಂದರವಾದ ನಗರ ರೆಸ್ಟೋರೆಂಟ್‌ಗಳು, ಸ್ಟ್ರೀಟ್ ಫುಡ್ ಕಾರ್ನರ್‌ಗಳು, ಕೆಫೆಗಳು, ಕಾಫಿ ರೋಸ್ಟರ್‌ಗಳು ಇತ್ಯಾದಿಗಳಿಗೆ ಹೆಸರುವಾಸಿಯಾಗಿದೆ. ಹೀಗಾಗಿಯೇ ಕಾಸ್ಟ್ಲೀ ಆದರೂ ಪ್ರತನಿತ್ಯ ಇಲ್ಲಿ ಸಾವಿರಾರು ಜನರು ಬಂದು ಸೇರುತ್ತಲೇ ಇರುತ್ತಾರೆ. ವರದಿಯ ಪ್ರಕಾರ ಸಿಲಿಕಾನ್ ಸಿಟಿಯಲ್ಲಿ 12,600 ಮಿಲಿಯನೇರ್‌ಗಳು ವಾಸವಿದ್ದಾರೆ. ಹೀಗಾಗಿ ನಗರವು ಕಾಸ್ಟ್ಲೀ ಸಿಟಿ ಲಿಸ್ಟ್‌ನಲ್ಲಿ ಮೂರನೇ ಸ್ಥಾನದಲ್ಲಿದೆ.
ಯೂಟ್ಯೂಬ್ನಲ್ಲಿ ಅತಿ ಹೆಚ್ಚು ವೀಕ್ಷಣೆಯಾದ ಟಾಪ್-5 ಕನ್ನಡ ಚಿತ್ರಗಳಿವು!
ಕೋಲ್ಕತ್ತಾ
ಭಾರತದ ರಾಜ್ಯ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ ಭಾರತದ ನಾಲ್ಕನೇ ಶ್ರೀಮಂತ ನಗರವಾಗಿದೆ. 2023 ರ ಶ್ರೇಯಾಂಕದ ವಿಶ್ವದ ಶ್ರೀಮಂತ ನಗರಗಳಲ್ಲಿ ಇದು ಒಟ್ಟಾರೆ 63 ಸ್ಥಾನವನ್ನು ಪಡೆದುಕೊಂಡಿದೆ. ಭಾರತದಲ್ಲಿ ಕೋಲ್ಕತ್ತಾ ದೇಶದ ದುಬಾರಿ ನಗರಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಹೈದರಾಬಾದ್
ಹೈದರಾಬಾದ್ ಪಟ್ಟಿಯಲ್ಲಿ ಎರಡನೇ ಅತ್ಯಂತ ದುಬಾರಿ ನಗರವಾಗಿದೆ. ಹೊಸದಿಲ್ಲಿ: ಪ್ರಾಪರ್ಟಿ ಕನ್ಸಲ್ಟೆಂಟ್ ಸಂಸ್ಥೆ ನೈಟ್ ಫ್ರಾಂಕ್ ಇಂಡಿಯಾದ ಇತ್ತೀಚಿನ ವರದಿಯ ಪ್ರಕಾರ, ಹೈದರಾಬಾದ್ ಭಾರತದ ಅತ್ಯಂತ ದುಬಾರಿ ನಗರಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಹೈದರಾಬಾದ್‌ನಲ್ಲಿ 11,100 ಮಿಲಿಯನೇರ್‌ಗಳಿದ್ದಾರೆ.