ಇಲ್ಲಿಯವರೆಗೆ ಯೂಟ್ಯೂಬ್ನಲ್ಲಿ ಅತಿ ಹೆಚ್ಚು ವೀಕ್ಷಣೆಯಾಗಿರುವ ಟಾಪ್ 5 ಕನ್ನಡ ಚಿತ್ರಗಳು ಯಾವುವು ಗೊತ್ತೆ?
ಈಗ ಏನಿದ್ದರೂ ಆನ್‌ಲೈನ್ ಜಮಾನಾ. ಅದರಲ್ಲಿಯೂ ಯೂಟ್ಯೂಬ್ಗಳನ್ನು ಬಳಸುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಸಿನಿಮಾ ಕ್ಷೇತ್ರದಲ್ಲಿಯೂ ಯೂಟ್ಯೂಬ್ಗಳಿಗೇ ಹೆಚ್ಚಿನ ಪ್ರಾಧಾನ್ಯ ನೀಡಲಾಗುತ್ತಿದೆ. ಟೀಸರ್, ಟ್ರೇಲರ್, ಪ್ರೋಮೊ ಹೀಗೆ ಹಲವು ಯೂಟ್ಯೂಬ್ ವಿಡಿಯೋ ಮುಖಾಂತರ ಚಲನಚಿತ್ರಗಳ ಪ್ರಚಾರ ಮಾಡುವುದು ಈಗಿನ ಟ್ರೆಂಡ್ ಆಗಿದೆ. ಇದರಿಂದ ಕನ್ನಡ ಚಿತ್ರಗಳ ಮಾರುಕಟ್ಟೆ ಕೂಡ ವಿಸ್ತಾರವಾಗುತ್ತಿದೆ. ಟ್ವಿಟರ್, ಇನ್ಸ್ಸ್ಟಾಗ್ರಾಮ್, ಫೇಸ್ಬುಕ್, ವಾಟ್ಸ್ಆ್ಯಪ್ಗಳು ಏನೇ ಇದ್ದರೂ ಅವು ಯೂಟ್ಯೂಬ್ ಜಾಗವನ್ನು ಪಡೆಯಲು ಇದುವರೆಗೆ ಸಾಧ್ಯವಾಗಿಲ್ಲ. ಇದೇ ಕಾರಣಕ್ಕೆ ಯೂಟ್ಯೂಬ್ ಟ್ರೆಂಡ್ ಕೂಡ ಈಗ ಹೆಚ್ಚಾಗುತ್ತಿದೆ.
ಆನ್ಲೈನ್ನಲ್ಲಿ ಚಿತ್ರ ವೀಕ್ಷಣೆಗೆ ಹಲವಾರು ಮಾಧ್ಯಮಗಳಿವೆ. ಆದರೆ ಹೆಚ್ಚಿನ ಜನರು ನೋಡುವುದು ಯೂಟ್ಯೂಬ್ ಅನ್ನೇ. ಇದಕ್ಕೆ ಒಂದು ಕಾರಣವೂ ಇದೆ. ಅದೇನೆಂದರೆ, ಎಲ್ಲಾ ಭಾಷೆಯ ಬಹುತೇಕ ಚಿತ್ರಗಳು ಇಲ್ಲಿ ಸಿಗುತ್ತವೆ. ಇದೇ ಕಾರಣಕ್ಕೆ ಯಾವುದೇ ಭಾಷೆಯ ಚಿತ್ರಗಳನ್ನೇ ತೆಗೆದುಕೊಂಡರೂ ಅವುಗಳಿಗೆ ಸಂಬಂಧಿಸಿದ ಟೀಸರ್, ಟ್ರೈಲರ್ ಹಾಗೂ ಹಾಡುಗಳನ್ನು ಚಿತ್ರತಂಡಗಳು ಯುಟ್ಯೂಬ್‌ನಲ್ಲಿಯೇ ಬಿಡುಗಡೆ ಮಾಡುತ್ತವೆ. ಬಿಡುಗಡೆಯಾದ ಕೂಡಲೇ ಸಕತ್ ರಿಸ್ಪಾನ್ಸ್ ಸಿಗುವ ಹಿನ್ನೆಲೆಯಲ್ಲಿ ಚಿತ್ರತಂಡಗಳೂ ಯೂಟ್ಯೂಬ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಅಲ್ಲಿಯೇ ವೀಕ್ಷಕರು ಕಮೆಂಟ್ ಹಾಕುವ ಹಿನ್ನೆಲೆಯಲ್ಲಿ ಚಿತ್ರ ಯಾವ ಮಟ್ಟಿನ ಸಕ್ಸಸ್ ಪಡೆಯಬಹುದು ಎಂದು ಸುಲಭದಲ್ಲಿ ಊಹಿಸಲೂ ಸಾಧ್ಯವಾಗುತ್ತದೆ. ಅಂಥ ಒಂದು ಶಕ್ತಿ ಇಂದು ಸಾಮಾಜಿಕ ಜಾಲತಾಣ ಅದರಲ್ಲಿಯೂ ಯೂಟ್ಯೂಬ್ಗೆ ಇದೆ.
ಹಾಗಿದ್ದರೆ ಕನ್ನಡ ಚಿತ್ರಗಳ ಬಗ್ಗೆ ಇಲ್ಲಿ ಮಾತನಾಡುವುದಾದರೆ, ಕನ್ನಡ ಚಿತ್ರರಂಗ ಕೂಡ ಯೂಟ್ಯೂಬ್ ಅನ್ನೇ ಹೆಚ್ಚು ಅವಲಂಬಿಸಿವೆ. ಇಲ್ಲಿ ಯೂಟ್ಯೂಬ್ನಲ್ಲಿ ಇಲ್ಲಿಯವರೆಗೆ ಅತಿ ಹೆಚ್ಚು ವೀಕ್ಷಣೆ ಪಡೆದ ಕನ್ನಡ ಚಲನಚಿತ್ರಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಬೇರೆ ಭಾಷೆಗೆ ಡಬ್ ಆಗಿ ಹೆಚ್ಚು ವೀಕ್ಷಣೆ ಪಡೆದ ಕನ್ನಡ ಚಿತ್ರಗಳು ಈ ಪಟ್ಟಿಗೆ ಸೇರಿಲ್ಲ.
1) ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ (Mr. and Mrs. Ramachari)
ಈ ಪಟ್ಟಿಯಲ್ಲಿ ಮೊದಲಿಗೆ ಇರುವುದು ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ. 2014ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರದಲ್ಲಿ ಯಶ್ ನಾಯಕರಾಗಿ ಮತ್ತು ರಾಧಿಕಾ ಪಂಡಿತ್ ಅವರು ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಅಭಿನಹಿಸಿದ್ದಾರೆ. ಶ್ರೀನಾಥ್, ಅಚ್ಯುತ್ ಕುಮಾರ್, ಮಾಳವಿಕಾ ಅವಿನಾಶ್, ಸಮೀರ್ ದಟ್ಟಣಿ ಅವರ ತಾರ ರಂಗವೇ ಚಿತ್ರದಲ್ಲಿದೆ. ಸಂತೋಷ್ ಅನ್ನಂದ್ರಂ ಅವರ ನಿರ್ದೇಶನವಿದ್ದು, ವಿ. ಹರಿಕೃಷ್ಣ ಅವರು ಸಂಗೀತ ಸಂಯೋಜಿಸಿದ್ದಾರೆ. ಇದು ಟಾಪ್-1 ಸ್ಥಾನದಲ್ಲಿದೆ. ಇದು ಗಳಿಸಿರುವುದು 77 ಮಿಲಿಯನ್ ವೀಕ್ಷಣೆ.
2) ಗೂಗ್ಲಿ (Googly)
ಯೂಟ್ಯೂಬ್ನಲ್ಲಿ ಇಲ್ಲಿಯವರೆಗೆ ಅತಿ ಹೆಚ್ಚು ವೀಕ್ಷಣೆ ಪಡೆದ ಕನ್ನಡ ಚಲನಚಿತ್ರಗಳ ಪೈಕಿ 2ನೇ ಸ್ಥಾನದಲ್ಲಿ ಇರುವುದು ಗೂಗ್ಲಿ ಚಿತ್ರ. 2013ರಲ್ಲಿ ತೆರೆ ಕಂಡ ಈ ಚಿತ್ರ ರೋಮ್ಯಾಂಟಿಕ್ ಹಾಸ್ಯ ಚಲನಚಿತ್ರವಾಗಿದೆ. ರಾಕಿಂಗ್ ಸ್ಟಾರ್ ಯಶ್ ಹಾಗೂ ಕೃತಿ ಕರಬಂಧ ಮುಖ್ಯ ಭೂಮಿಕೆಯಲ್ಲಿದ್ದು, ಪವನ್ ಒಡೆಯರ್ ನಿರ್ದೇಶಿಸಿದ್ದಾರೆ. ಈ ಚಿತ್ರವು ಯೂಟ್ಯೂಬ್ನಲ್ಲಿ 57 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ವೇಷ ಅಡುಗೆ ಭಟ್ಟ, ಕೈಯಲ್ಲಿ ರಕ್ತಸಿಕ್ತ ಚಾಕು! ಬೆಳ್ಳಿ ಪರದೆ ಮೇಲೆ ಜೊತೆ ಜೊತೆಯಲಿ 'ಆರ್ಯ'
3) ಉಗ್ರಂ (Ugram)
ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿರುವುದು ಉಗ್ರಂ ಚಿತ್ರ. 2014ರಲ್ಲಿ ಬಿಡುಗಡೆಯಾದ ಈ ಚಿತ್ರವು 47 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ಚಿತ್ರದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ಹರಿಪ್ರಿಯ ನಾಯಕ-ನಾಯಕಿಯಾಗಿ ನಟಿಸಿದ್ದಾರೆ.
4) ಮಿಸ್ಟರ್ ಐರಾವತ (Mr.Iravatha)
2015ರಲ್ಲಿ ತೆರೆಕಂಡ ಮಿಸ್ಟರ್ ಐರಾವತ ಸಿನಿಮಾ 44 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.
5) ಯಜಮಾನ (Yajamana)
2019ರಲ್ಲಿ ತೆರೆಕಂಡ ವಿಷ್ಣುವರ್ಧನ್ ನಟನೆಯ ಯಜಮಾನ ಚಿತ್ರ 43 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡು ಯೂಟ್ಯೂಬ್ನಲ್ಲಿ ಅತಿ ಹೆಚ್ಚು ವೀಕ್ಷಣೆ ಮಾಡಿರುವ ಚಿತ್ರಗಳ ಪೈಕಿ ಐದನೇ ಸ್ಥಾನದಲ್ಲಿದೆ.
100 ಕೋಟಿ ಕ್ಲಬ್ ಸೇರಿದ ಆಲಿಯಾ 8ನೇ ಚಿತ್ರ! '100 ಕೋಟಿ ರಾಣಿ' ಪಟ್ಟಕ್ಕೇರಿದ ನಟಿ
