ಗಾಂಧಿ ತವರೂರು ಅಹ್ಮದಾಬಾದ್‌ ಕೃಷ್ಣ ಜನ್ಮ ಸ್ಥಾನ. ಶಿವನ ನೆಲೆವೀಡು. ದೇವಿಗೂ ಇಲ್ಲಿದೆ ಮಾನ್ಯತೆ. ಹಿಂದೂ ದೇವಿಯನ್ನು ಪೂಜಿಸೋದು ಕಾಮನ್ ಬಿಡಿ. ಆದರೆ, ಇಲ್ಲೊಂದು ದೇವಸ್ಥಾನದಲ್ಲಿ ಮುಸ್ಲಿಂ ಮಹಿಳೆಯನ್ನು ಪೂಜಿಸಲಾಗುತ್ತದೆ! ಭಾವೈಕ್ಯತೆ ಸಾರುವ ದೇಶದ ಏಕೈಕ ಮಂದಿರದ ವಿಶೇಷತೆ ಏನೇನು?

ಗುಜರಾತ್‌ನ ರಾಜಧಾನಿ ಅಹ್ಮದಾಬಾದ್‌ನಿಂದ ಸುಮಾರು 40 ಕಿಲೋಮೀಟರ್‌ ದೂರದಲ್ಲಿ ಝುಲಾಸನ್‌ ಎಂಬ ಗ್ರಾಮವಿದೆ. ಇಲ್ಲಿ ಮುಸ್ಲಿಂ ಮಹಿಳೆಯೊಬ್ಬರನ್ನು ದೇವಿ ರೂಪದಲ್ಲಿ ಪೂಜಿಸಲಾಗುತ್ತದೆ. ಡೋಲಾ ಎಂಬ ಮುಸ್ಲಿಂ ನಾರಿಗೆ ಹಿಂದೂ ಭಕ್ತರು ಹಲವು ವರ್ಷಗಳಿಂದಲೂ ದೇವಿ ಸ್ಥಾನದಲ್ಲಿ ಪೂಜಿಸುತ್ತಿದ್ದಾರೆ. 

ಸ್ಮಶಾನದಲ್ಲಿರೋ 'ಲಕ್ಕಿ' ರೆಸ್ಟೋರೆಂಟ್ ಇದು!

ಧೈರ್ಯಶಾಲಿ ಮುಸ್ಲಿಂ ಮಹಿಳೆಗೆ ದೇವಿ ಸ್ಥಾನ....

ಸುಮಾರು 250 ವರ್ಷಗಳ ಹಿಂದೆ ಡೋಲಾ  ಎಂಬ ದೈರ್ಯಶಾಲಿ ಮುಸ್ಲಿಂ ಇದ್ದರು. ಒಮ್ಮೆ ಹಲವರು ಈ ಗ್ರಾಮದ ಮೇಲೆ ಆಕ್ರಮಣ ನಡೆದಾಗ, ಡೋಲಾ ತನ್ನ ಪರಾಕ್ರಮದ ಮೂಲಕ ಗ್ರಾಮವನ್ನು ರಕ್ಷಿಸಿ, ಅಮರರಾದರು. ಅದಿರಲಿ, ಡೋಲಾ ಉಸಿರು ಇನ್ನೇನು ನಿಲ್ಲಬೇಕು ಎನ್ನುವಷ್ಟರಲ್ಲಿ ಪವಾಡವೊಂದು ನಡೆದೇ ಹೋಯಿದತು...

ಜನರನ್ನು ಕಾಪಾಡಿದ ಡೋಲಾ ಮೃತ ದೇಹ ಹೂವಾಗಿ ಪರಿವರ್ತನೆಯಾಯಿತು. ಇವೆಲ್ಲವುದರಿಂದ ಪ್ರಭಾವಿತರಾದ ಮಂದಿ ಡೋಲಾಗಾಗಿಯೇ ಮಂದಿರವೊಂದನ್ನು ನಿರ್ಮಿಸಿ, ಪೂಜಿಸಲು ಆರಂಭಿಸಿದರು.

ಈ ಮಂದಿರಕ್ಕೆ ದೇಶದ ಮೂಲೆ ಮೂಲೆ ಮೂಲೆಯಿಂದಲೂ ಭಕ್ತರು  ಆಗಮಿಸಿ, ಹರಕೆ ಹೊತ್ತು, ಇಷ್ಟಾರ್ಥ ನೆರವೇರಿಸಿಕೊಳ್ಳುತ್ತಾರೆ. ಝುಲಾಸನ್‌ ಗ್ರಾಮ ಕೇವಲ ಮಂದಿರದಿಂದಾಗಿ ಮಾತ್ರವಲ್ಲ, ಬದಲಾಗಿ ದೇಶಕ್ಕೆ ಕೀರ್ತಿ ತಂದ  ಮಹಿಳಾ ಅಂತರಿಕ್ಷ ಯಾತ್ರಿ ಸುನೀತಾ ವಿಲಿಯಮ್ಸ್‌‌ನಿಂದಲೂ ಪ್ರಸಿದ್ಧಿ. ಈ ಹಳ್ಳಿ ಸುನೀತಾ ಹುಟ್ಟೂರು. ಅವರೂ ಇಲ್ಲಿ ಪೂಜೆ ಸಲ್ಲಿಸಿದ್ದರು ಎನ್ನುತ್ತಾರೆ ಮಂದಿ. ಸುನೀತಾ ಗಗನಾ ಯಾತ್ರೆ ಹಮ್ಮಿಕೊಂಡಾಗ, ಅವರ ಸುರಕ್ಷತೆಗೆ ಇಲ್ಲಿ ವಿಶೇಷ ಪೂಜೆ ಪುನಸ್ಕಾರಗಳೂ ನಡೆದಿದ್ದವು. 

ರಾಕ್ಷಸಿ ಹಿಡಿಂಬಿಗೂ ಇದೆ ಮನಾಲಿಯಲ್ಲಿ ದೇವಸ್ಥಾನ!

ಇನ್ನು ಈ ಮಂದಿರವನ್ನು ಡಾಲರ್ ಮಾತಾ ಮಂದಿರವೆಂದೂ ಕರೆಯಲಾಗುತ್ತದೆ.  ಎಂಟು ಸಾವಿರ ಜನಸಂಖ್ಯೆ ಇರೋ ಈ ಊರಿನ ಸುಮಾರು 2 ಸಾವಿರ ಮಂದಿ ಅಮೆರಿಕದಲ್ಲಿ ನೆಲೆಸಿದ್ದಾರೆ.  ವಿದೇಶದಲ್ಲಿ ನೆಲೆಸಲು ಬಯಸುವವರು ಈ ದೇವಿಯನ್ನು ಪೂಜಿಸಿದರೆ ಅವರ ಅಸೆ ಈಡೇರುತ್ತದೆ ಎಂಬ ನಂಬಿಕೆಯೂ ಇಲ್ಲಿದೆ.