Asianet Suvarna News Asianet Suvarna News

ಮತ್ತೆ ಬಂದಿದೆ ಟೀ ಲೆನ್ತ್ ಟ್ರೆಂಡ್; ಮುಜುಗರಕ್ಕೆ ಹೇಳಿ ಬೈ!

ಈ ಟ್ರೆಂಡ್ ಅನ್ನೋದು ಎಕ್ಸ್‌ಪ್ರೆಸ್ ಟ್ರೈನ್‌ಗಿಂತ ಫಾಸ್ಟ್. ನಿನ್ನೆ ಟ್ರೆಂಡ್ ಅನಿಸ್ಕೊಂಡಿದ್ದು ನಾಳೆ ಹೊತ್ತಿಗೆ ಔಟ್‌ಡೇಟೆಡ್ ಆಗಿರುತ್ತೆ. ಚೆಂದ ಕಂಡ ಡ್ರೆಸ್‌ಅನ್ನು ಮುಂದಿನ ಯಾವುದೋ ಫಂಕ್ಷನ್‌ಗೋ, ಪಾರ್ಟಿಗೋ ಎತ್ತಿಟ್ಟಿರ‌್ತೀವಿ. ಆದ್ರೆ ಅಷ್ಟು ಹೊತ್ತಿಗೆ ಫ್ಯಾಶನ್ ಹಳೇದಾಗುತ್ತೆ. ಹಾಕೋರಿಲ್ದೇ ಚೆಂದದ ಡ್ರೆಸ್ಸು ಮೂಲೆ ಸೇರುತ್ತೆ. ಈಗ ಬಂದಿರೋ ಟೀ ಲೆನ್ತ್ ಡ್ರೆಸ್ ಕಥೆನೂ ಇದಕ್ಕಿಂತ ಭಿನ್ನವಿಲ್ಲ. ಬೇಗ್ ಬೇಗ ಕೊಂಡು ತೊಟ್ಟು ಸ್ಟೈಲ್ ಮಾಡಿದ್ರೆ ಸೂಪರ್. ಕಟ್ಟಿಟ್ರೋ ನಿಮಗೇ ಪ್ರಾಬ್ಲೆಮ್.
 

tee length dresses hits 2019 fashion trend
Author
Bangalore, First Published Aug 4, 2019, 3:09 PM IST

 

ನಿಶಾಂತ ಕಮ್ಮರಡಿ

ಟೀ ಲೆನ್ತ್ ಅಂದ್ರೆ ನೀವು ಅಂದ್ಕೊಂಡಂಗಲ್ಲ

‘ಟೀ’ ಲೆನ್ತ್ ಅಂದ್ರೆ ಟೀ ಶರ್ಟ್ ಅಳತೆಯ ಡ್ರೆಸ್ ಇರಬಹುದಾ ಅನ್ನೋ ಯೋಚನೆ ಫಸ್ಟ್ ತಲೆಗೆ ಬರುತ್ತೆ. ಇನ್ನೂ ಏನೇನೋ ಊಹೆ ಬರಬಹುದು. ಆದರೆ ಇದು ಊಹೆಗೂ ಮೀರಿದ ಡ್ರೆಸ್. ಮೈಗಂಟಿ ನಿಲ್ಲೋ ಈ ಉಡುಗೆ ಮಂಡಿಯಿಂದ ತುಸುವೇ ಕೆಳಗಿಳಿಯುತ್ತೆ. ಪಾದಕ್ಕಿಂತ ಮೇಲಿರುತ್ತೆ. ಒಂಥರ ‘ಮೊಣಕಾಲ್ಮೇಲೆ’ ಡ್ರೆಸ್ ಅನ್ನಬಹುದೇನೋ. ಸದ್ಯಕ್ಕೀಗ ಟ್ರೆಂಡ್. ನೀಳಕಾಲಿನ ಚೆಂದವನ್ನಷ್ಟೇ ಒಂಚೂರು ತೋರಿಸಿ ಮರೆ ಮಾಡುವ ಈ ಡ್ರೆಸ್‌ಅನ್ನು ಎಂಥಾ ಮಡಿವಂತಿಕೆ ಇರೋ ಹುಡುಗೀರೂ ತೊಟ್ಟುಕೊಳ್ಳಬಹುದು. ಏಕೆಂದರೆ ಇದು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮಾನ ಕಳೆಯೋ ಹಾಗಂತೂ ಇಲ್ಲ. ಸಾಧಾರಣ ಅಳತೆಯ ಸ್ಕೂಲ್ ಮಕ್ಕಳ ಯುನಿಫಾರ್ಮ್ ಲಂಗ ಎಷ್ಟು ಉದ್ದ ಬರುತ್ತೋ ಅಷ್ಟು ಉದ್ದ ಇರುತ್ತೆ. ಒಂದು ಕಾಲದಲ್ಲಿ ಎಲ್ಲ ಹುಡುಗಿಯೂ ಯುನಿಫಾರ್ಮ್ ತೊಟ್ಟವರೇ ಆದ ಕಾರಣ ಈ ಟೀ ಅಳತೆಯ ಡ್ರೆಸ್ ಹಾಕ್ಕೊಳ್ಳೋದು ಮುಜುಗರ ಆಗಲಿಕ್ಕಿಲ್ಲ.

ಡ್ರೆಸ್ ಇಷ್ಟಿದ್ದರೆ ಟ್ರೆಂಡ್ ಫಾಲೋ ಮಾಡೋದು ಸುಲಭ...

ಬಾಲಿವುಡ್ ಚೆಲುವೆಯರ ‘ಟೀ’ ಟೈಮ್

ಇನ್‌ಸ್ಟಾಗ್ರಾಮ್‌ನಲ್ಲಿ ಸಕ್ರಿಯರಾಗಿರುವವರ ಕಣ್ಣಿಗೆ ಒಂದಲ್ಲ ಒಂದು ಬಾರಿಯಾದ್ರೂ ‘ಟೀ ಲೆನ್ತ್ ಡ್ರೆಸ್’ ಧರಿಸಿದ ಬಾಲಿವುಡ್ ಬೆಡಗಿಯರು ಕಣ್ಣಿಗೆ ಬಿದ್ದೇ ಬೀಳುತ್ತಾರೆ. ಯಾಕೆಂದರೆ ಹೆಚ್ಚಿನೆಲ್ಲ ಸೆಲೆಬ್ರಿಟಿಗಳೂ ಈ ವಾರದಲ್ಲಿ ಒಂದಲ್ಲ ಒಂದು ಬಾರಿ ಈ ಟ್ರೆಡಿಂಗ್ ಡ್ರೆಸ್ ಹಾಕ್ಕೊಂಡು ಶಾಪಿಂಗ್‌ಗೋ, ಪಾರ್ಟಿಗೋ ಬಂದವರೇ. ಅದ್ರಲ್ಲಿ ಸೋನಂ ಕಪೂರ್ ತೊಟ್ಟ ಡ್ರೆಸ್ ಡಿಫರೆಂಟ್ ಹಾಗೂ ಎಲಿಗೆಂಟ್ ಅನಿಸುವಂಥಾದ್ದು. ನಿಂಬೆ ಎಲೆ ಬಣ್ಣದ ಆಫ್ ಶೋಲ್ಡರ್ ಪ್ಲೇನ್ ಡ್ರೆಸ್, ಮುಂಗೈವರೆಗೂ ಆವರಿಸಿದ ತೋಳಿನ ವಿನ್ಯಾಸ, ಸಣ್ಣದೊಂದು ಸಪರೇಶನ್ನೂ ಇಲ್ಲದ ಡ್ರೆಸ್. ಇದಕ್ಕೆ ಕಪ್ಪು ಬಣ್ಣದ ನೆಕ್ ಪೀಕ್ ಮಾತ್ರ ಹಾಕಿ ಸಿಂಪಲ್ ಚೆಲುವೆ ಅನಿಸಿಕೊಂಡರು ಸೋನಮ್. ಕೃತಿ ಸನೂನ್ ಅವರದ್ದು ಡಿಂಕ್‌ಚಿಕಾ ಸ್ಟೈಲು. ಕಡು ನೀಲಿ ಶಾಯಿ ಬಣ್ಣದ ಔಟ್‌ಫಿಟ್. ಆಫ್ ಶೋಲ್ಡರ್‌ನಂತೆ ಕಂಡರೂ ಅದಕ್ಕಿಂತ ತುಸು ಭಿನ್ನ ಕೋಲ್ಡ್ ಶೋಲ್ಡರ್ ಜೊತೆಗೆ ಬೋಟ್ ನೆಕ್ ವಿನ್ಯಾಸದ ಡ್ರೆಸ್. ಒಂದು ಬದಿಯಿಂದ ಇಳಿಬಿದ್ದಂಥಾ ಸ್ಟೋಲ್ ಮಾದರಿ. ಸಂಜೆ ಪಾರ್ಟಿಗಳಿಗೆ ಈ ಸ್ಟೈಲು ಹೇಳಿ ಮಾಡಿಸಿದಂಥಾದ್ದು. ಪಿಂಕ್ ಬಣ್ಣದ ಶೂ ಈ ಕಡು ಬ್ಲೂಗೆ ಏನ್ ಚೆಂದ ಸೂಟ್ ಆಗುತ್ತೆ. ಆಡ್ ಕಲರ್, ಸ್ವಲ್ಪ ಡಾಳು ಅನಿಸುವ ಸ್ಟೈಲ್‌ಗಳಿಗೂ ಸೈ ಅನ್ನೋ ನಮ್ ಪಿಂಕಿ, ಈ ಬಾರಿ ಸಾಮಾನ್ಯದವರು ದ್ವೇಷಿಸುವ ಕಡು ಆರೆಂಜ್ ಬಣ್ಣದ ಟೀ ಲೆನ್ತ್ ಡ್ರೆಸ್ ಧರಿಸಿ ಅದೇ ಬಣ್ಣದ ಹೈ ಹೀಲ್ಸ್ ಶೂ ಧರಿಸಿ ಬೆಕ್ಕಿನ ನಡಿಗೆಯಲ್ಲಿ ಮುಂದಕ್ಕೋದ್ರು. 
 ನಿಂಬೆಹಣ್ಣಿನಂಥ ಹುಡುಗಿ ಡಯಾನಾ ಪೆಂಟಿ ತೊಟ್ಟಿದ್ದು ನಿಂಬೆ ಬಣ್ಣದ ಟೀ ಲೆನ್ತ್ ಡ್ರೆಸ್‌ಅನ್ನೇ. ಡ್ರೆಸ್‌ನ ತುಂಬ ಅಲ್ಲಲ್ಲಿ ಟಸೆಲ್ ವಿನ್ಯಾಸವಿದೆ. ಟಸೆಲ್ ಅಂದರೆ ಜೂಲು ಜೂಲು ಥರದ ವಿನ್ಯಾಸ. ತುಸು ದಪ್ಪಗಿರುವವರು ಈ ಥರ ಡ್ರೆಸ್ ಹಾಕ್ಕೊಂಡರೆ ಇನ್ನಷ್ಟು ದಪ್ಪ ಕಾಣ್ತಾರೆ. ಡಯಾನಾ ಥರದ ಫಿಗರ್‌ಗಳಿಗೆ ಈ ಡ್ರೆಸ್ ಹೇಳಿ ಮಾಡಿಸಿದ್ದು. ಕಿಯಾರಾ ಅಧ್ವಾನಿ ಡ್ರೆಸ್ ಅಂತೂ ಚರ್ಮಕ್ಕಂಟಿಕೊಂಡು ಶೇಪ್ ಎದ್ದು ಕಾಣುವಂತೆ ವಿನ್ಯಾಸ ಮಾಡಿದ್ದು. ಆಫ್ ಶೋಲ್ಡರ್ ಕಡುಗೆಂಪು ಬಣ್ಣದಲ್ಲಿದೆ. 

ಸೀರೆ ಉಟ್ಟರೆ ನಾರಿ, ಮಂದಿ ಹೇಳಬೇಕು ಅಬ್ಬಾ ರೀ...

ಕಲರ್, ಡಿಸೈನ್ ಆಯ್ಕೆ ಹೀಗಿರಲಿ

- ಟೀ ಲೆನ್ತ್ ಡ್ರೆಸ್‌ಗಳು ಪ್ಲೇನ್ ಆಗಿದ್ದರೇ ಚೆನ್ನ. ತಿಳಿ ಹಸಿರು, ಕಡು ನೀಲಿ, ಕೆಂಪು ಇತ್ಯಾದಿ ಬಣ್ಣದ ಟೀ ಲೆನ್ತ್ ಉಡುಗೆಗಳು ಎಂಥವರಿಗೂ ಚೆಂದ ಕಾಣುತ್ತೆ. 

- ಆನ್‌ಲೈನ್‌ನಲ್ಲಿ ಜಾಲಾಡಿದರೆ ಸಾವಿರಾರು ಮಾದರಿ ಡ್ರೆಸ್‌ಗಳಿವೆ, ನಿಮಗೊಪ್ಪುವಂಥಾದ್ದು ಆರಿಸಬಹುದು. ಚೆಕ್ಸ್, ಸ್ಟ್ರೈಪ್ಸ್, ಫ್ಲೋರಲ್ ಡಿಸೈನ್‌ನವೂ ಇವೆ. ಪ್ಲೇನ್ ಇಷ್ಟ ಆಗದವರು ಇದನ್ನು ಆಯ್ಕೆ ಮಾಡಬಹುದು. 

- ಈ ಡ್ರೆಸ್‌ಗೆ ಬೇರೆಲ್ಲ ಚಪ್ಪಲಿಗಿಂತ ಚೂಪು ಮುಂಭಾಗ ಇರುವ ಫ್ಯಾನ್ಸಿ ಹೈ ಹೀಲ್ಸ್ ಶೂ ಮಸ್ತಾಗಿರುತ್ತೆ. 

ಫ್ಯಾಷನ್ ಅಂತ ಸೀರೆಗೆ ಬಿಕಿನಿ ಬ್ಲೌಸ್ ಬೇಕಾ?

- ಮೇಕಪ್ ನಿಮ್ಮ ಆಯ್ಕೆಗೆ ಬಿಟ್ಟಿದ್ದು. ಈ ಡ್ರೆಸ್‌ಗೆ ಎಲ್ಲ ನ್ಯೂಡ್ ಮೇಕಪ್ ಹೆಚ್ಚು ಸೂಕ್ತ.

- ಫ್ರೀ ಹೇರ್ ಸ್ಟೈಲ್‌ಗಿಂತಲೂ ಕೂದಲನ್ನು ಮೇಲೆತ್ತಿಕಟ್ಟಿದರೆ ಅಥವಾ ಪೋನಿ ಹಾಕಿದ್ರೆ ಸಖತ್.

Follow Us:
Download App:
  • android
  • ios