ಇಪ್ಪತ್ತರ ಹರೆಯದಲ್ಲಿ ಸ್ಟೈಲಿಶ್ ಆಗಿ ಕಾಣಬೇಕೆಂದು ಎಲ್ಲರೂ ಬಯಸುತ್ತಾರೆ. ಹೊಸದಾಗಿ ಕಾಲೇಜಿಗೆ ಸೇರಿದಾಗ ಅಥವಾ ಹೊಸ ಕೆಲಸಕ್ಕೆ ಸೇರಿದಾಗ ಯಾವ ಡ್ರೆಸ್ ಧರಿಸಬೇಕು, ಹೇಗೆ ಕಾಣಬೇಕು ಎಂಬ ತವಕ ಸಹಜ. ಹಾಗಿದ್ದರೆ ನೀವು ಈ ಡ್ರೆಸ್ ಗಳನ್ನು ನಿಮ್ಮ ವಾಡ್ರೋಬಿನಲ್ಲಿ ಇರಲೇ ಬೇಕು... 

ಡೆನಿಮ್ ಜಾಕೆಟ್ 

ಡೆನಿಮ್ ಜಾಕೆಟ್ ಯಾವತ್ತೂ ಔಟ್ ಆಫ್  ಫ್ಯಾಷನ್ ಆಗೋದಿಲ್ಲ. ಇದನ್ನು ಡ್ರೆಸ್, ಟೀ ಶರ್ಟ್ ಜೊತೆ ಧರಿಸಿದರೂ ಸಕತ್ತಾಗಿ ಕಾಣಿಸುತ್ತದೆ. 

ಪಾರ್ಟಿ ಲುಕ್ ಹೆಚ್ಚಿಸೋ ಬ್ಲ್ಯಾಕ್ ಆ್ಯಂಡ್ ಸಿಲ್ವರ್ ಚೋಕರ್...

ಲಿಟಲ್ ಬ್ಲ್ಯಾಕ್ ಡ್ರೆಸ್ 

ನಿಮ್ಮ ಬಳಿ ಧರಿಸಲು ಏನೂ ಇಲ್ಲ ಎಂದೆನಿಸಿದರೆ  ಬ್ಲ್ಯಾಕ್ ಡ್ರೆಸ್ ಧರಿಸಿ. ಇದು ನಿಮಗೆ ಕ್ಲಾಸಿಕ್ ಲುಕ್ ನೀಡುತ್ತದೆ. 

ಬ್ಲೇಝರ್ 

ಕೆಲವೊಮ್ಮೆ ನೀವು ಸೀರಿಯಸ್ ಆಗಿ ಕಾಣಲೇಬೇಕು. ಅದಕ್ಕಾಗಿ ಚೆನ್ನಾಗಿ ಫಿಟ್ ಆಗಿರುವ ಬ್ಲೇಝರ್ ಟ್ರೈ ಮಾಡಿ. ಶಾರ್ಟ್ ಡ್ರೆಸ್ ಜೊತೆ ಇದನ್ನು ಫಾರ್ಮಲ್ ಆಗಿ ಯಾವಾಗ ಬೇಕಾದರೂ ಧರಿಸಬಹುದು. ಇದನ್ನು ಜೀನ್ಸ್ ಜೊತೆಯೂ ಧರಿಸಬಹುದು. 

ಫ್ಯಾಷನ್ ಅಂತ ಸೀರೆಗೆ ಬಿಕಿನಿ ಬ್ಲೌಸ್ ಬೇಕಾ?

ವೈಟ್ ಶರ್ಟ್

ಬಟನ್ ಡೌನ್ ಅಥವಾ ಸಿಲ್ಕ್ ಶರ್ಟ್ ಇರಬಹುದು. ಇದನ್ನು ನೀವು ಸಣ್ಣ ನೆಕ್‌ಪೀಸ್ ಜೊತೆ ಸ್ಕರ್ಟ್ ಅಥವಾ ಜೀನ್ಸ್ ಜೊತೆಗೆ ಧರಿಸಿದರೂ ಚೆಂದ. ಅಲ್ಲದೆ ನೀವು ಇದನ್ನು ಬೇರೆ ಬೇರೆ ರೀತಿ ಸ್ಟೈಲ್ ಆಗಿಯೂ ಧರಿಸಬಹುದು. 

ಫಿಟ್ ಟ್ರೌಸರ್

ನಿಮ್ಮ ವಾಡ್ರೋಬಿನಲ್ಲಿ ಈಗಾಗಲೇ ಸ್ಕಿನ್ನಿ ಜೀನ್ಸ್ ಅಥವಾ ಇನ್ಯಾವುದೋ ಜೀನ್ಸ್ ಇದ್ದರೆ ಇರಲಿ ಬಿಡಿ. ನಿಮ್ಮ ಬಳಿ ಒಂದು ಫಿಟ್ ಆಗಿರುವ ಒಂದು ಫಾರ್ಮಲ್ ಟ್ರೌಸರ್ ಸಹ ಇರಲಿ. ಬ್ಲಾಕ್ ಟ್ರೌಸರ್ ಆಫೀಸ್ ಲುಕ್‌ಗೆ ಚೆನ್ನಾಗಿ ಕಾಣುತ್ತದೆ.