‘ನಾನೀಗ ಹೋಂವರ್ಕ್ ಮಾಡಲ್ಲ. ಆಡ್ತೀನಿ..’ ಆರೇಳು ವರ್ಷದ ಸಣ್ಣ ಹುಡುಗಿ ಮೂತಿ ಊದಿಸಿಕೊಂಡು ಹೇಳಿದರೆ ಅಮ್ಮ ಹೇಳ್ತಾಳೆ, ‘ಬಿ ಎ ಗುಡ್ ಗರ್ಲ್, ಡೋಂಟ್ ಸೇ ನೋ..’
ಆ ಕ್ಷಣಕ್ಕೆ ಹುಡುಗಿ ಅಮ್ಮನ ಮಾತು ಕೇಳದೇ ಇರಬಹುದು. ಆದರೆ ಅವಳ ಮನಸ್ಸಲ್ಲಿ ತಾನು ಗುಡ್‌ಗರ್ಲ್ ಅನಿಸಿಕೊಳ್ಳಬೇಕು ಅನ್ನುವ ಮನೋಭಾವ ಬೆಳೆಯುತ್ತಾ ಹೋಗುತ್ತದೆ. ಬೇರೆಯವರ ಕಣ್ಣಲ್ಲಿ ಗ್ರೇಟ್ ಅನಿಸಿಕೊಳ್ಳಲು ತನಗೆ ಬೇಕಾದ್ದನ್ನು ಮಾಡಲು ಮಕ್ಕಳು ಹಿಂಜರಿಯುವ ಸಾಧ್ಯತೆ ಇದೆ. ತಮ್ಮ ಮೇಲೆ ಯಾರಾದರೂ ದೌರ್ಜನ್ಯ ನಡೆಸಿದರೂ ಇದೇ ಕಾರಣಕ್ಕೆ ಅದನ್ನು ನಿರಾಕರಿಸಲಾಗದ ಸ್ಥಿತಿ ತಲುಪಬಹುದು. ಹಾಗಾಗಿ ಮಕ್ಕಳಿಗೆ ಅವರ ಮನಸ್ಸಲ್ಲಿದ್ದದ್ದನ್ನು ಹೇಳಿಕೊಳ್ಳುವಂಥ ವಾತಾವರಣ ನಿರ್ಮಿಸಿ. ಅವರಿಗೆ ‘ನೋ’ ಹೇಳುವುದನ್ನೂ ಕಲಿಸಿ.
ಮಕ್ಕಳ ಬಗ್ಗೆ ತಿಲಿಯಿರಿ:
ನಾಚಿಕೆ ಸ್ವಭಾವದ ಮಗುವನ್ನು ಸಂಭಾಳಿಸೋದು ಹೇಗೆ?
