ನನ್ನ ಮಗ ಓದಿನಲ್ಲಿ ಹಿಂದಿದ್ದಾನೆ. ಅವನು ಚೆನ್ನಾಗಿ ಓದುತ್ತಿಲ್ಲ ಎಂದು ಅವರ ತಂದೆ ಬೈಯುತ್ತಾರೆ, ಹೊಡೆಯುತ್ತಾರೆ. ಇದೇ ಕಾರಣಕ್ಕೆ ನನಗೂ ಅವರಿಗೂ ನಿತ್ಯವೂ ಜಗಳ. ಮಗ ಚೆನ್ನಾಗಿ ಓದಲಿ ಎಂದು ಅವರು ಹಾಗೆ ವರ್ತಿಸುತ್ತಾರೆ. ಆದರೆ ನನಗೆ ನನ್ನ ಮಗನ ಸಾಮರ್ಥ್ಯ ಗೊತ್ತು. ಅಲ್ಲದೇ ಮಗನಿಗೂ ಕುಳಿತು ಓದು ಎಂದು ಎಷ್ಟೇ ಹೇಳಿದರೂ ಕೇಳುತ್ತಿಲ್ಲ.

ಇವರಿಬ್ಬರ ಮಧ್ಯೆ ನಾನು ಸಿಕ್ಕು ನರಳುವಂತಾಗಿದೆ. ಅತ್ತ ಅವರಿಗೂ ಹೇಳಲಾರೆ, ಇತ್ತ ಮಗನಿಗೂ ಏನು ಹೇಳಿದರೂ ಕೇಳುತ್ತಿಲ್ಲ. ಏನು ಮಾಡಲಿ, ಏನಾದರೂ ಸಲಹೆ ಇದ್ದರೆ ಕೊಡಿ.

-ಅನಾಮಿಕ 

ನಿಮ್ಮ ಉತ್ತರಗಳನ್ನು suvarnanews@gmail.com ಗೆ ಕಳುಹಿಸಿ 

-ಸಾಂದರ್ಭಿಕ ಚಿತ್ರ