Asianet Suvarna News Asianet Suvarna News

ಭಾರತ್ ಬಂದ್: ಮನೆಯಲ್ಲೇ ಇದ್ದರೆ ಮಟನ್ ಬಿರಿಯಾನಿ ಟ್ರೈ ಮಾಡಿ...

ಫೇಸ್‍ಬುಕ್‍ನಲ್ಲಿ ಫ್ರೆಂಡ್ ಹಾಕಿದ್ದ ಮಟನ್ ಬಿರಿಯಾನಿ ರೆಸಿಪಿ ವಿಡಿಯೋ ನೋಡಿ ಬಾಯಲ್ಲಿ ನೀರು ಬಂದಿತ್ತು. ತುಂಬಾ ದಿನಗಳಿಂದ ಅದನ್ನೊಮ್ಮೆ ಟ್ರೈ ಮಾಡ್ಬೇಕು ಅಂದ್ಕೊಂಡಿದ್ದೆ. ನಾಳೆ ಹೇಗೋ ಭಾರತ್ ಬಂದ್ ಎಂಬ ಸುದ್ದಿಯಿದೆ. ಎಲ್ಲರೂ ಮನೆಯಲ್ಲೇ ಇರುತ್ತಾರೆ. ಏನಾದ್ರೂ ಸ್ಪೆಷಲ್ ಮಾಡೋಕ್ಕಾಗಲ್ವ ಅಂತಹ ಪತಿರಾಯರು ಬೇರೆ ರಾಗ ಹೊರಡಿಸ್ತಾರೆ. ಹೀಗಿರುವಾಗ ಈ ಮಟನ್ ಬಿರಿಯಾನಿ ರೆಸಿಪಿಯನ್ನೇಕೆ ಟ್ರೈ ಮಾಡಬಾರದು? ನಾನಂತೂ ನಾಳೆ ಘಮ ಘಮ ಅನ್ನುವ ಮಟನ್ ಬಿರಿಯಾನಿ ಮಾಡಿ ಟೇಸ್ಟ್ ನೋಡ್ತೀನಿ. 

Tasty mutton biriyani recipe
Author
Bangalore, First Published Jan 8, 2020, 12:06 PM IST
  • Facebook
  • Twitter
  • Whatsapp

ಸಿಂಪಲಾಗಿರುವ ಈ ಮಟನ್ ಬಿರಿಯಾನಿ ರೆಸಿಪಿಯನ್ನು ನೀವೇಕೆ ಟ್ರೈ ಮಾಡಬಾರದು? ಅದೆಲ್ಲ ಸರಿ, ರೆಸಿಪಿ ಎಲ್ಲಿದೆ ಅಂತೀರಾ? ಇಲ್ಲಿದೆ ನೋಡಿ.

ಬೇಕಾಗುವ ಸಮಯ: 1 ಗಂಟೆ
ತಯಾರಿ ಸಮಯ: 20 ನಿಮಿಷ

ಏನೆಲ್ಲ ಸಾಮಗ್ರಿ ಬೇಕು?

ಮಟನ್-1/2 ಕೆ.ಜಿ.
ಉದ್ದಕ್ಕೆ ಹಚ್ಚಿಕೊಂಡ ಈರುಳ್ಳಿ-2
ಒಂದು ದೊಡ್ಡ ಈರುಳ್ಳಿ ಪೇಸ್ಟ್
ಲಿಂಬೆ ಹಣ್ಣು-1
ಮೊಸರು-1/2 ಕಪ್
ಹಚ್ಚಿದ ಕೊತ್ತಂಬರಿ ಸೊಪ್ಪು-1/2 ಕಪ್
ಹಚ್ಚಿದ ಪುದೀನಾ ಸೊಪ್ಪು-1/2 ಕಪ್
ಹಚ್ಚಿದ ಹಸಿ ಮೆಣಸು-5-10
ಹಚ್ಚಿದ ಟೊಮ್ಯಾಟೋ-2
ಪಲಾವ್ ಎಲೆ-2
ಏಲಕ್ಕಿ-3
ಅರಿಶಿಣ ಪುಡಿ-1/2 ಟೇಬಲ್ ಸ್ಪೂನ್
ಅಚ್ಚು ಖಾರದ ಪುಡಿ-1 1/2 ಟೇಬಲ್ ಸ್ಪೂನ್
ಬಿರಿಯಾನಿ ಪೌಡರ್-1 ಟೇಬಲ್ ಸ್ಪೂನ್
ಶುಂಠಿ-ಬೆಳ್ಳುಳ್ಳಿ ಪೇಸ್ಟ್- 2 ಟೇಬಲ್ ಸ್ಪೂನ್
ಧನಿಯಾ ಫೌಡರ್-1 ಟೇಬಲ್ ಸ್ಪೂನ್
ತುಪ್ಪ- 1-2 ಟೇಬಲ್ ಸ್ಪೂನ್
ಎಣ್ಣೆ-5-6 ಟೇಬಲ್ ಸ್ಪೂನ್
ಉಪ್ಪು-ರುಚಿಗೆ ತಕ್ಕಷ್ಟು
ಬಾಸುಮತಿ ಅಕ್ಕಿ-1/2 ಕೆ.ಜಿ.

ಕೊರೆವ ಚಳಿಗೆ ಮಾಡಿ ಮ್ಯಾನ್ ಚೋ ಸೂಪ್,ಕ್ಯಾರೆಟ್ ಸೂಪ್,ಪಾಲಕ್ ಸೂಪ್!
 

ಮಾಡುವ ವಿಧಾನ:

1.ಬಾಸುಮತಿ ಅಕ್ಕಿಯನ್ನು ಅಡುಗೆಗೆ ಮುನ್ನ ಅರ್ಧ ಗಂಟೆ ನೆನೆ ಹಾಕಿ.

2.ಸ್ಟೌವ್ ಹಚ್ಚಿ, ಅದರ ಮೇಲೆ ಅಗಲವಾದ ಪಾತ್ರೆಯನ್ನಿಟ್ಟು ಎಣ್ಣೆ ಹಾಕಿ.

3.ಎಣ್ಣೆ ಕಾದ ಬಳಿಕ ಬಿರಿಯಾನಿ ಎಲೆ, ಏಲಕ್ಕಿ, ಹಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ ಹುರಿದುಕೊಳ್ಳಬೇಕು.

4.ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಗೂ ಈರುಳ್ಳಿ ಪೇಸ್ಟ್ ಹಾಕಿ ಮೀಡಿಯಂ ಫ್ಲೇಮ್‍ನಲ್ಲಿ ಚೆನ್ನಾಗಿ ಫ್ರೈ ಮಾಡಿ. ಹಸಿ ವಾಸನೆ ಹೋಗಿ ಎಣ್ಣೆ ಬಿಡುವ ತನಕ ಫ್ರೈ ಮಾಡಿ.

5.ಈಗ ಅಚ್ಚ ಖಾರದ ಪುಡಿ, ಅರಿಶಿಣ, ಧನಿಯಾ ಪೌಡರ್, ಬಿರಿಯಾನಿ ಪೌಡರ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ.

6. ಈ ಮಿಶ್ರಣಕ್ಕೆ ಟೊಮ್ಯಾಟೋ ಹಾಕಿ. ನಂತರ ಹಚ್ಚಿದ ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು ಹಾಗೂ ಮೊಸರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

7. ತಳ ಹಿಡಿಯದಂತೆ ಸ್ವಲ್ಪ ನೀರು ಹಾಕಿ 10 ನಿಮಿಷ ಬೇಯಿಸಿ.

8.ನಂತರ ಮಟನ್ ಹಾಕಿ ಮಿಕ್ಸ್ ಮಾಡಿ.

9.ಈಗ ಪಾತ್ರೆಯ ಮುಚ್ಚಳ ಮುಚ್ಚಿ ಮೀಡಿಯಂ ಫ್ಲೇಮ್‍ನಲ್ಲಿ 1/2 ಗಂಟೆ ಬೇಯಿಸಿ.

10. ಆ ಬಳಿಕ ಒಂದು ಲೋಟ (1/2 ಕೆ.ಜಿ.) ಅಕ್ಕಿ ಹಾಕಿ. ಒಂದೂವರೆ ಲೋಟ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅಗತ್ಯವಿದ್ದರೆ ಉಪ್ಪು ಮತ್ತು ಖಾರ ಸೇರಿಸಿ.

ಕಿಚಡಿ ಮಾಡುವುದು ಹೇಗೆಂದು ತಡಕಾಡಬೇಡಿ! ಸಿಂಪಲ್ಲಾಗಿ ಹೀಗ್ಮಾಡಿ!

11. ಈಗ ಮೀಡಿಯಂ ಫ್ಲೇಮ್‍ನಲ್ಲಿ 10 ನಿಮಿಷ ಬೇಯಿಸಿ.

12.ಅಕ್ಕಿ ಬೆಂದಾದ ಬಳಿಕ ಲಿಂಬೆ ರಸ ಸೇರಿಸಿ.

13. ಸ್ಟೌವನ್ನು ಸಿಮ್‍ನಲ್ಲಿಟ್ಟು ಕೊತ್ತಂಬರಿ ಸೊಪ್ಪು ಹಾಗೂ ತುಪ್ಪ ಹಾಕಿ.

14.ಪಾತ್ರೆಯ ಮುಚ್ಚಳ ಮುಚ್ಚಿ ಅದರ ಮೇಲೆ ಭಾರವಾದ ವಸ್ತುವನ್ನಿಟ್ಟು 10 ನಿಮಿಷ ಸಿಮ್‍ನಲ್ಲೇ ಬೇಯಿಸಿ.

15. ಆ ಬಳಿಕ ಸ್ಟೌವ್ ಆಫ್ ಮಾಡಿ. 

16.ಈಗ ಘಮ ಘಮ ಎನ್ನುವ ಬಾಯಲ್ಲಿ ನೀರೂರಿಸುವ ಮಟನ್ ಬಿರಿಯಾನಿ ರೆಡಿ.

ಪ್ರತಿದಿನ ಸೇವಿಸಿದರೆ ಮ್ಯಾಜಿಕ್ ಮಾಡುವ ಮೊಳಕೆಕಾಳುಗಳು!

ವಿಶೇಷ ಸೂಚನೆ:* ಬಿರಿಯಾನಿ ಸಿದ್ಧಪಡಿಸಲು ನಿಮಗೆ ಜಾಸ್ತಿ ಟೈಮ್ ಇಲ್ಲವೆಂದಾದ್ರೆ ಮಟನ್ ಅನ್ನು ಸ್ವಲ್ಪ ಉಪ್ಪು ಸೇರಿಸಿ ಕುಕ್ಕರ್‍ನಲ್ಲಿ ಬೇಯಿಸಿ ನಂತರ ಮಸಾಲ ಮಿಶ್ರಣಕ್ಕೆ ಸೇರಿಸಬಹುದು. ಇಲ್ಲವಾದರೆ ಪಪ್ಪಾಯ ಕಾಯಿಯನ್ನು
ಪೇಸ್ಟ್ ಮಾಡಿ ಅದರಲ್ಲಿ ಮಟನ್ ಅನ್ನು 10 ನಿಮಿಷ ನೆನೆಹಾಕಿದರೆ ಕೂಡ ಬೇಗ ಬೇಯುತ್ತದೆ. 
*ಅನ್ನವನ್ನು ಕೂಡ ಕುಕ್ಕರ್‍ನಲ್ಲಿ ಬೇಯಿಸಿಕೊಂಡು ಆ ಬಳಿಕ ಮಟನ್ ಮಿಶ್ರಣಕ್ಕೆ ಸೇರಿಸಬಹುದು. 

Follow Us:
Download App:
  • android
  • ios