ನಾಲ್ಕು ಕಾಲಿನ ನಿಮ್ಮ ಗೆಳೆಯನೊಂದಿಗೆ ನೀವು ಮಾತನಾಡುತ್ತೀರಾ? ನಿಮ್ಮೆಲ್ಲ ಸುಖದುಃಖಗಳನ್ನು ಅವುಗಳೊಂದಿಗೆ ಹಂಚಿಕೊಳ್ಳುತ್ತೀರಾ? ನಿಮ್ಮ ದಿನ ಹೇಗಿತ್ತು ಎಂದು ಅವುಗಳ ಮುಂದೆ ಪ್ರವರ ಬಿಚ್ಚಿಡುತ್ತೀರಾ? ಅವುಗಳ ದಿನ ಹೇಗಿತ್ತು, ಏಕೆ ಮೂಡ್ ಹಾಳಾಗಿದೆ ಎಂದೆಲ್ಲ ವಿಚಾರಿಸುತ್ತೀರಾ? ಮುದ್ದಾದ ಹೆಸರುಗಳಿಂದ ಕರೆದು ಗುಡ್ ಮಾರ್ನಿಂಗ್, ಗುಡ್ ನೈಟ್ ಹೇಳುತ್ತೀರಾ?

ಸುತ್ತಮುತ್ತಲಿನವರು ನಿಮ್ಮನ್ನು ವಿಚಿತ್ರ ಎನ್ನಬಹುದು. ಆದರೆ, ವಿಜ್ಞಾನಿಗಳು ಮಾತ್ರ ನಿಮ್ಮನ್ನು ಬಹಳ ಬುದ್ಧಿವಂತರು ಅಂತಾರೆ. ಹೌದು, ಸಾಕುಪ್ರಾಣಿಗಳನ್ನು ಇನ್ನೊಂದು ವ್ಯಕ್ತಿ ಎನ್ನುವಂತೆ ಟ್ರೀಟ್ ಮಾಡಿ ಮಾತನಾಡುವುದು ಬುದ್ಧಿವಂತಿಕೆಯ ಲಕ್ಷಣ ಎಂದು ಹೊಸ ಅಧ್ಯಯನವೊಂದು ಸಾದರಪಡಿಸಿದೆ.

ಕಚಗುಳಿ ಮಾಡಿ ಮಗುವಿಗೆ ಟಾರ್ಚರ್ ಕೊಡಬೇಡಿ...

ಜೀವವಿಲ್ಲದ ವ್ಯಕ್ತಿಗಳೊಂದಿಗೆ ಮಾತನಾಡುವುದು, ಸಾಕುಪ್ರಾಣಿಗಳೊಂದಿಗೆ ಮಾತನಾಡುವುದನ್ನು ಹಲವಾರು ಶತಮಾನಗಳಿಂದಲೂ ಹುಚ್ಚು ಎಂದೋ, ಮೂರ್ಖತನ ಎಂದೋ ಆಡಿಕೊಳ್ಳುವುದು ನಡೆದು ಬಂದೇ ಇದೆ. ಆದರೂ ಒಂದಿಷ್ಟು ಜನರು ಪ್ರಾಣಿಪಕ್ಷಿಗಳೊಂದಿಗೆ, ದೇವರ ಮೂರ್ತಿ, ಹೂವು ಸೇರಿದಂತೆ ಇತರೆ ವಸ್ತುಗಳೊಂದಿಗೆ ಜೀವವಿದೆ ಎಂಬಂತೆ ಮಾತನಾಡುತ್ತಾರೆ. ಇದು ನಮ್ಮ ಮೆದುಳಿನ ಅತ್ಯುದ್ಭುತ ಸಾಮರ್ಥ್ಯದ ಪ್ರತಿಫಲನ ಎನ್ನುತ್ತಾರೆ ಚಿಕಾಗೋ ಯೂನಿವರ್ಸಿಟಿಯ ವಿಜ್ಞಾನಿಗಳು. ಇದು ಆ್ಯಂತ್ರೋಪೋಮೋರ್ಫಿಸಂ ಎಂಬ ವಿದ್ಯಮಾನ ಎಂದು ಅವರು ವಿವರಿಸುತ್ತಾರೆ.

ಆ್ಯಂತ್ರೋಪೋಮೋರ್ಫಿಸಂ

ಮಕ್ಕಳ ಬೆರಳು ಚೀಪೋ ಅಭ್ಯಾಸ ಬಿಡಿಸೋಕೆ ಹೀಗ್ ಮಾಡಿ!

ಆ್ಯಂತ್ರೋಪೋಮೋರ್ಫಿಸಂ ಎಂದರೆ ಜೀವವಿಲ್ಲದ ವಸ್ತುಗಳೊಂದಿಗೆ ಅಥವಾ ಬೇರೆ ಪ್ರಾಣಿಗಳೊಂದಿಗೆ ಅವೂ ಮನುಷ್ಯರೇ ಎಂದು, ಅವುಗಳ ಎಮೋಶನ್ಸ್ ಅರ್ಥವಾದಂತೆ ಮಾತನಾಡುವುದು ಎಂದು ಅಧ್ಯಯನ ಹೇಳುತ್ತದೆ. ಈ ಗುಣವು ಮನುಷ್ಯನನ್ನು ಈ ಭೂಮಿ ಮೇಲೆ ಇತರೆಲ್ಲ ಪ್ರಾಣಿಗಳಿಗಿಂತ ವಿಭಿನ್ನವಾಗಿಯೂ, ಬುದ್ಧಿವಂತರಾಗಿಯೂ ಕಾಣಿಸುವಂತೆ ಮಾಡುತ್ತದೆ. 

ಹಾರ್ವರ್ಡ್ ‌ಸ್ಟಡಿ ಏನು ಹೇಳುತ್ತದೆ?

2011ರಲ್ಲಿ ಈ ಸಂಬಂಧ ಹಾರ್ವರ್ಡ್ ಯೂನಿವರ್ಸಿಟಿ ನಡೆಸಿದ 'ಕ್ಯೂಟ್‌ನೆಸ್ ಆ್ಯಂಡ್ ಡಿಸ್ಗಸ್ಟ್; ದಿ ಹ್ಯೂಮನೈಜಿಂಗ್ ಆ್ಯಂಡ್ ಡಿಹ್ಯೂಮನೈಜಿಂಗ್ ಎಫೆಕ್ಟ್ಸ್ ಆಫ್ ಎಮೋಶನ್' ಅಧ್ಯಯನ ಕೂಡಾ ಸಾಕುಪ್ರಾಣಿಗಳೊಂದಿಗೆ ಇರಬಯಸುವ ಹಾಗೂ ಅವುಗಳೊಂದಿಗೆ ಮಾತನಾಡುವ ಜನರು ಇತರರಿಗಿಂತ ಹೆಚ್ಚು ಬುದ್ಧಿವಂತರಿರುತ್ತಾರೆ ಎಂದು ಹೇಳಿತ್ತು.

ನಿಮ್ಮ ಡಾಗಿ ಕೂಡಾ ಸ್ಮಾರ್ಟರ್!

ಆ್ಯಂತ್ರೋಪೋಮೋರ್ಫಿಸಂನಿಂದಾಗಿ ನಿಮ್ಮ ಪ್ರೀತಿಯ ನಾಯಿಮರಿ ಕೂಡಾ ಹೆಚ್ಚು ಸ್ಮಾರ್ಟ್ ಆಗಿರುತ್ತದೆ ಎಂದೂ ಅಧ್ಯಯನಗಳು ಕಂಡುಕೊಂಡಿವೆ. ಇದು ನಾಯಿಗಳು ನಿಮ್ಮ ದೇಹಭಾಷೆ ಹಾಗೂ ಮಾತುಗಳ ನಡುವಿನ ವ್ಯತ್ಯಾಸ ಕಂಡುಕೊಳ್ಳುವಂತೆ ಮಾಡುತ್ತದೆ. ಹೀಗಾಗಿ, ಅವು ನಮ್ಮ ಭಾವನೆಗಳು ಹಾಗೂ ಮಾತನ್ನು ಹೆಚ್ಚು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲವು ಎಂದು ವರದಿ ತಿಳಿಸಿದೆ.

ಮಕ್ಕಳ ಭವಿಷ್ಯಕ್ಕೆ ಸೇವಿಂಗ್ಸ್ ಮಾಡ್ಲಿಕ್ಕೆ ಇವೆ ನೂರಾರು ದಾರಿ...

ಸೈಂಟಿಫಿಕ್ ಸ್ಟೇಟ್ಸ್ ಜರ್ನಲ್‌ನಲ್ಲಿ ಪ್ರಕಟವಾಗಿರುವ ವರದಿಯು ನಾಯಿಗಳು ತಮ್ಮ ಮಾಲೀಕರ ಭಾವನೆಗಳನ್ನು ಪ್ರತಿಫಲಿಸುತ್ತವೆ ಎಂದು ತಿಳಿಸಿದೆ. ಅಂದರೆ, ಸಾಕಿದವರು ದುಃಖದಲ್ಲಿದ್ದರೆ ಅವೂ ದುಃಖ ವ್ಯಕ್ತಪಡಿಸುತ್ತವೆ, ನೀವು ಸಂತೋಷದಿಂದಿದ್ದರೆ ಅವೂ ಸಂತೋಷದಲ್ಲಿರುತ್ತವೆ. ನಾಯಿಗಳನ್ನು ಸಾಕಿದವರಿಗೆ ಈ ವಿಷಯಗಳು ಖಂಡಿತಾ ಅನುಭವಕ್ಕೆ ಬಂದಿರುತ್ತವೆ.
ಶಿಲಾಯುಗದಿಂದಲೇ ಮಾನವ ಹಾಗೂ ನಾಯಿಗಳ ನಡುವೆ ಬಾಂದವ್ಯ ಬೆಳೆದು ಬಂದಿದೆ. ಅಂದರೆ, ನಾಯಿಗಳೇ ಅತಿ ಪುರಾತನ ಸಾಕು ಪ್ರಾಣಿಗಳು. ಹೀಗಾಗಿ, ಅವು ಮನುಷ್ಯರೊಂದಿಗೆ ಹೆಚ್ಚು ಚೆನ್ನಾಗಿ ಒಡನಾಡಬಲ್ಲವು. ನಿಮ್ಮ ಮುದ್ದುಮರಿಯೊಂದಿಗೆ ಆಡುವುದು, ಮಾತನಾಡುವುದು ನಿಮ್ಮ ಅಭ್ಯಾಸವಾಗಿದ್ದಲ್ಲಿ ಇನ್ನು ಮುಂದೆ ಹೆಮ್ಮೆಯಿಂದ ಈ ವರ್ತನೆಯನ್ನು ಮುಂದುವರಿಸಿ. ಸುತ್ತಲಿನ ಇತರರಿಗಿಂತ ನಿೀವು, ನಿಮ್ಮ ನಾಯಿ ಹೆಚ್ಚು ಬುದ್ಧಿವಂತರೆಂದು ಸಂತೋಷ ಪಡಿ.