ತೈವಾನ್ ನ ವ್ಯಕ್ತಿಯೊಬ್ಬ ತನ್ನ ಮೀನುಗಳಿಗಾಗಿ ಪೋರ್ಟಬಲ್ ಅಕ್ವೇರಿಯಂ ನಿರ್ಮಿಸಿ, ಅವುಗಳನ್ನು ವಾಕಿಂಗ್‌ಗೆ ಕರೆದೊಯ್ಯುತ್ತಾನೆ. ನೀರು, ಆಮ್ಲಜನಕದ ವ್ಯವಸ್ಥೆಯುಳ್ಳ ಈ ಅಕ್ವೇರಿಯಂ ಅನ್ನು ಬೆನ್ನಿಗೋ, ಗಾಡಿಯಲ್ಲೋ ಸಾಗಿಸುತ್ತಾನೆ. ಸಾಕುಪ್ರಾಣಿ ಪ್ರೇಮದ ವಿಶಿಷ್ಟ ಪ್ರದರ್ಶನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ಮೀನುಗಳ ಒತ್ತಡದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಆರೋಗ್ಯಕ್ಕೆ ಒಳ್ಳೆಯದಾದ್ರೂ ವಾಕಿಂಗ್ (walking) ಈಗಿನ ದಿನಗಳಲ್ಲಿ ಫ್ಯಾಷನ್. ಜನರು ತಾವೊಬ್ರೆ ಅಲ್ಲ ತಮ್ಮ ಸಾಕು ಪ್ರಾಣಿಗಳನ್ನು ವಾಕಿಂಗ್ ಗೆ ಕರೆದುಕೊಂಡು ಹೋಗ್ತಾರೆ. ನಾಯಿ, ಬೆಕ್ಕುಗಳನ್ನು ಹಿಡ್ಕೊಂಡು ವಾಕಿಂಗ್ ಮಾಡೋ ಜನ ಸಾಕಷ್ಟು ಮಂದಿ. ಮನೆಯಲ್ಲಿರುವ ಪ್ರಾಣಿಗಳು ಹೊರಗಿನ ಪ್ರಪಂಚ ನೋಡ್ಲಿ ಎನ್ನುವ ಕಾರಣಕ್ಕೆ ಪ್ರವಾಸ, ಶಾಪಿಂಗ್ ಗೆ ಅವುಗಳನ್ನು ಕರೆತರುವ ಜನರಿದ್ದಾರೆ. ಆದ್ರೆ ಈ ಪುಣ್ಯಾತ್ಮನ ಆಲೋಚನೆ ಭಿನ್ನವಾಗಿದೆ. ಆತ ನಾಯಿ, ಬೆಕ್ಕಿನ ಬದಲು ಮೀನನ್ನು ಹಿಡ್ಕೊಂಡು ವಾಕಿಂಗ್ ಬಂದಿದ್ದಾನೆ. ಹಾಯಾಗಿ ನೀರಿನಲ್ಲಿ ಆಡ್ಕೊಂಡಿದ್ದ ಮೀನುಗಳನ್ನು ವಾಕಿಂಗ್ ಗೆ ಕರೆ ತಂದಿದ್ದಾನೆ. ನೀರಿಲ್ದೆ ಮೀನು (fish) ಸತ್ತೋಗೋದಿಲ್ವ ಅಂತ ಕೇಳ್ಬೇಡಿ. ಆತ ಮೀನುಗಳನ್ನು ಸಿಕ್ಕಾಪಟ್ಟೆ ಪ್ರೀತಿ ಮಾಡ್ತಾನೆ. ಹಾಗಿದ್ಮೇಲೆ ಸಾಯಿಸೋ ಛಾನ್ಸೇ ಇಲ್ಲ. ಮೀನುಗಳಿಗೆ ನೀರು, ಆಮ್ಲಜನಕ ಎಲ್ಲ ಸಿಗುವ ವ್ಯವಸ್ಥೆ ಮಾಡ್ಕೊಂಡೇ ಆತ ವಾಕಿಂಗ್ ಗೆ ಬರ್ತಾನೆ.
ಮನೆಯಲ್ಲಿ ಮೀನುಗಳನ್ನು ಜನ ಸಾಕ್ತಾರೆ. ಅಕ್ವೇರಿಯಂ (Aquarium) ಮನೆಯಲ್ಲಿದ್ರೆ ಒಳ್ಳೆಯದು ಎನ್ನುವವರಿದ್ದಾರೆ. ಮತ್ತೆ ಕೆಲವರು ಮೀನಿನ ಮೇಲಿರೋ ಪ್ರೀತಿಗೆ ಮನೆಯಲ್ಲೊಂದು ಅಕ್ವೇರಿಯಂ ಇಟ್ಟುಕೊಂಡಿರ್ತಾರೆ. ಮೀನು ನೀರಿನಲ್ಲಿ ಈಜೋದನ್ನು ನೋಡ್ತಾ, ಅದ್ರ ಜೊತೆ ಮಾತನಾಡ್ತಾ ವಿಶೇಷ ಬಾಂಡಿಂಗ್ ಬೆಳೆಸಿಕೊಂಡಿರ್ತಾರೆ. ಆದರೆ ಈ ವ್ಯಕ್ತಿ ಬಾಡಿಂಗ್ ಒಂದು ಕೈ ಮೇಲೇ ಇದೆ. ಮೀನುಗಳನ್ನು ಬಿಟ್ಟು ಮನೆಯಿಂದ ಹೊರಗೆ ಹೋಗೋಕೆ ಆಗಲ್ಲ ಎನ್ನುವವರು ಈತನ ಟಿಪ್ಸ್ ಫಾಲೋ ಮಾಡ್ಬಹುದು. ನಿಮ್ಮ ಜೊತೆ ಮೀನುಗಳನ್ನೂ ವಾಕಿಂಗ್ ಗೆ ಕರೆದುಕೊಂಡು ಹೋಗ್ಬಹುದು.
ಕಣ್ಣಿಲ್ಲದವರಿಗೂ ಸಮುದ್ರ ಫೀಲ್ ಮಾಡಿಕೊಳ್ಳೋ ಚಾನ್ಸ್,
ಮೀನನ್ನು ವಾಕಿಂಗ್ ಗೆ ಕರೆದುಕೊಂಡು ಹೋಗ್ತಿರೋ ವ್ಯಕ್ತಿ ಮೂಲತಃ ತೈವಾನ್ (Taiwan) ನವನು. ಆತ ಮೀನುಗಳಿಗಾಗಿ ಮೊಬೈಲ್ ಅಕ್ವೇರಿಯಂ ಸಿದ್ಧಪಡಿಸಿದ್ದಾನೆ. ತನ್ನ ಸೋಶಿಯಲ್ ಮೀಡಿಯಾದಲ್ಲಿ ಅದನ್ನು ಹೇಗೆ ತಯಾರಿಸೋದು ಎನ್ನುವ ಬಗ್ಗೆಯೂ ಮಾಹಿತಿ ನೀಡಿದ್ದಾನೆ. ಆತ ತಯಾರಿಸಿದ ಅಕ್ವೇರಿಯಂನ್ನು ನೀನು ಸುಲಭವಾಗಿ ತಳ್ಕೊಂಡು ಒಂದು ಕಡೆಯಿಂದ ಇನ್ನೊಂದು ಕಡೆ ಹೋಗ್ಬಹುದು. ಅದ್ರಲ್ಲಿ ನೀರನ್ನು ಹಾಕಿ ನಂತ್ರ ಮೀನುಗಳನ್ನು ಆತ ತುಂಬ್ತಾನೆ. ವೃತ್ತಾಕಾರದ ಪಾರದರ್ಶಕ ಟ್ಯಾಂಕ್ ಇದಾಗಿದೆ. ಇದ್ರಲ್ಲಿ ನೀರು ಹಾಗೂ ಆಮ್ಲಜನಕ ಎರಡೂ ಲಭ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಒಂದು ಸಲ ಅಕ್ವೇರಿಯಂ ಅನ್ನು ಬ್ಯಾಗ್ ನಂತೆ ಬೆನ್ನಿಗೆ ಹಾಕಿಕೊಂಡ್ರೆ ಇನ್ನೊಮ್ಮೆ ಗಾಡಿಯಲ್ಲಿ ಅದನ್ನು ತಳ್ಳುತ್ತಿದ್ದಾನೆ. ಒಟ್ಟಿನಲ್ಲಿ ಅಕ್ವೇರಿಯಂನಲ್ಲಿರುವ ಮೀನಿನ ಜೊತೆ ಆತ ವಾಕಿಂಗ್, ಶಾಪಿಂಗ್ ಅಂತ ಸುತ್ತಾಡೋದನ್ನು ಕಾಣ್ಬಹುದು.
ಆಸ್ಪತ್ರೆಯೇ ಇಲ್ಲದ ದೇಶವಿದ್ದು, ಇಲ್ಲಿ 96 ವರ್ಷಗಳಲ್ಲಿ ಒಬ್ಬರೂ ಜನಿಸಿಲ್ಲ...
ಈ ಚಲಿಸುವ ಅಕ್ವೇರಿಯಂ ತಾಂತ್ರಿಕ ಸೃಜನಶೀಲತೆ ಮತ್ತು ಸಾಕುಪ್ರಾಣಿ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗ್ತಿದ್ದಂತೆ ಜನರು ಪ್ರತಿಕ್ರಿಯೆ ಶುರು ಮಾಡಿದ್ದಾರೆ. ಅನೇಕ ತಮಾಷೆ ರಿಯಾಕ್ಷನ್ ಬಂದಿದೆ. ಒಬ್ಬರು ಇದನ್ನು ಮೊಬೈಲ್ ಅಕ್ವೇರಿಯಂ ಎಂದು ಕರೆದಿದ್ದಾರೆ. ಫಿಶ್ ವಾಕರ್ 3000 ಎಂದು ಇನ್ನೊಬ್ಬರು ನಾಮಕರಣ ಮಾಡಿದ್ದಾರೆ. ಜನರು ಮೀನುಗಳನ್ನೂ ಹಿಡಿದು ನಡೆಯುವಂತಾಯ್ತು, ಜಗತ್ತು ತುಂಬಾ ಬದಲಾಗಿದೆ ಎಂದು ಇನ್ನೊಬ್ಬರು ಹೇಳಿದ್ದಾರೆ. ಮನುಷ್ಯನಿಗೆ ಇದು ತಮಾಷೆ ಇರ್ಬಹುದು ಆದ್ರೆ ಇದು ಮೀನುಗಳಿಗೆ ಒತ್ತಡ ಹೇರಿದಂತೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಅನೇಕ ಬಳಕೆದಾರರು ಐುವಕನ ಸೃಜನ ಶೀಲನೆಯನ್ನು ಮೆಚ್ಚಿದ್ದಾರೆ. ಮನುಷ್ಯನ ಕಲ್ಪನೆಗೆ ಮಿತಿ ಇಲ್ಲ ಎಂದಿದ್ದಾರೆ. ಅಕ್ವೇರಿಯಂನಲ್ಲಿ ಮೀನುಗಳನ್ನು ಬಂಧಿಸಲು ಆತನಿಗೆ ಇಷ್ಟವಿಲ್ಲ. ಹಾಗಾಗಿ ಹೊರಗಿನ ವಾತಾವರಣದ ಅನುಭವ ನೀಡಲು ಮೀನುಗಳನ್ನು ಹೊರಗೆ ಕರೆತಂದಿದ್ದಾನೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

