ಈ ಪ್ಲೇಸ್‌ಗೆ ಭೇಟಿ ನೀಡ್ಲಿಲ್ಲವೆಂದರೆ ಬದುಕಿದ್ದೇನು ಪ್ರಯೋಜನ?

ಕೆಲವು ಸ್ಥಳಗಳು ಹಾಗೆ. ಒಮ್ಮೆ ಹೋದರೆ ಮತ್ತೆ ಮತ್ತೆ ಹೋಗಬೇಕೆನಿಸುವಷ್ಟು ಮುದ ನೀಡುತ್ತದೆ. ಅಂಥ ಸಾವಿರಾರು ಸ್ಥಳಗಳು ಭಾರತದಲ್ಲಿವೆ. ಅವುಗಳಲ್ಲಿ ಕೆಲವು ಇವು.

Six places must be visited before  you die

ಭಾರತದ ಇತಿಹಾಸ ಮತ್ತು ಇಲ್ಲಿನ ಸಾಸ್ಕೃತಿಕ ಹಾಗು ಭೌಗೋಳಿಕ ಹಿನ್ನೆಲೆ ಪ್ರಪಂಚದಾದ್ಯಂತದಿಂದ ಜನರು ಇಲ್ಲಿಗೆ ಆಗಮಿಸುವಂತೆ ಮಾಡುತ್ತದೆ. ಈ ಸುಂದರ ಭಾರತದಲ್ಲಿ ನೋಡಬೇಕಾದ ತಾಣಗಳು ಬಹಳಷ್ಟಿವೆ. ಅವುಗಳಲ್ಲಿ ಕೆಲವೊಂದು ತಾಣಗಳನ್ನು ಜೀವನದಲ್ಲಿ ಒಂದು ಬಾರಿಯಾದರೂ ನೋಡಲೇಬೇಕು. ಅವುಗಳಲ್ಲಿ ಕೆಲವು ಇವು.

ತಾಜ್ ಮಹಲ್: ವಿಶ್ವದ ಮೂಲೆ ಮೂಲೆಯಿಂದಲೂ ಪ್ರವಾಸಿಗರನ್ನು ಆಕರ್ಷಿಸುವ ತಾಜ್ ಮಹಲ್ ಸೌಂದರ್ಯವನ್ನು ಸವಿದವನೇ ಬಲ್ಲ. ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ಈ ಅದ್ಭುತ ಮಾನವ ನಿರ್ಮಿತ ಅದ್ಭುತವನ್ನು ನೋಡದಿದ್ದರೆ ಹೇಗೆ?
Six places must be visited before  you die

ವಾರಣಾಸಿ; ಗಂಗಾ ತಟದ ಈ ಊರಲ್ಲಿ ಸಾಕಷ್ಟು ಭೇಟಿ ನೀಡಲೇ ಬೇಕಾದ ದೇವಸ್ಥಾನಗಳಿವೆ. 
Six places must be visited before  you die

ಅಜಂತಾ ಗುಹೆ: ಇಲ್ಲಿನ ಅದ್ಭುತ ಶಿಲ್ಪ ಕಲಾಕೃತಿಗಳನ್ನು ನೋಡುವುದು ಕಣ್ಣಿಗೆ ಹಬ್ಬ. ಇದು 1819ರವರೆಗೆ ಯಾರಿಗೂ ಗೊತ್ತಿರದ ಸ್ಥಳವಾಗಿತ್ತು. ಅದರ ನಂತರವಷ್ಟೇ ಇದನ್ನು ಕಂಡು ಹಿಡಿದರು. 

ಜೈಸಲ್ಮೇರ್: ಇದು ರಾಜಸ್ಥಾನದ ಮೂಲೆಯಲ್ಲಿರುವ ಹಾಗೂ ಪಾಕಿಸ್ತಾನದ ಗಡಿಯಲ್ಲಿರುವಂತಹ ಇಲ್ಲಿ ಲೇಕ್, ಅರಮನೆಗಳು, ಮರಳು.. ಎಲ್ಲವನ್ನೂ ಕಣ್ತುಂಬಿಕೊಳ್ಳಲೇ ಬೇಕು.

ಗೋಲ್ಡನ್ ಟೆಂಪಲ್; ಅಮೃತಸರ ಎಂದರೆ ನೆನಪಾಗುವುದು ಗೋಲ್ಡನ್ ಟೆಂಪಲ್. ಇದನ್ನು 1577ರಲ್ಲಿ 4ನೇ ಗುರು ಸಿಖ್ಖರ ಗುರು ರಾಮ್ ದಾಸ್ ನಿರ್ಮಿಸಿದರು. 

ಕೇರಳ : ಕೇರಳ ಬ್ಯಾಕ್ ವಾಟರ್ ನೋಡದೆ ಇದ್ದರೆ ಹೇಗೆ? ಇಲ್ಲಿನ ಬೊಟ್ ಹೌಸ್, ರುಚಿ ರುಚಿಯಾದ ಮೀನಿನ ಖಾದ್ಯಗಳು, ವಲಸೆ ಬಂಡ ಹಕ್ಕಿಗಳನ್ನು ನೋಡಲು ಎರಡು ಕಣ್ಣುಗಳ ಸಾಲದು.

Latest Videos
Follow Us:
Download App:
  • android
  • ios