ಜಗಳ ಆಡೋದ್ ಬಿಟ್ಹಾಕಿ, ಚೆನ್ನಾಗಿ ಲೈಫ್ ಲೀಡ್ ಮಾಡಲು ಹೀಗ್ ಮಾಡಿ!

ಪ್ರತಿಯೊಬ್ಬರೂ ತಮ್ಮ ಪ್ರೀತಿ ಚೆನ್ನಾಗಿರಬೇಕೆಂದು ಬಯಸುತ್ತಾರೆ. ನಿಮ್ಮ ಲವ್ ಲೈಫ್ ಚೆನ್ನಾಗಿರಲು ಫೆಂಗ್ ಶುಯಿ ಕೆಲವೊಂದು ಉಪಾಯಗಳನ್ನು ಪಾಲಿಸಬೇಕು. ಆಗ ಪ್ರೀತಿ ಹೆಚ್ಚುತ್ತೆ. 

7 feng shui tips for better love life

ಕೆಲಸದ ಒತ್ತಡ ಲವ್ ಲೈಫ್ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಪ್ರೀತಿಯಲ್ಲಿ ಹುಟ್ಟುವ ಸಣ್ಣ ಪುಟ್ಟ ಜಗಳ ಕೊನೆಗೆ ವಿಷವಾಗಿ ಪರಿಣಮಿಸುತ್ತದೆ. ಪ್ರೀತಿಯಿಂದ ಆರಂಭವಾದ ಸಂಬಂಧ ದ್ವೇಷದಲ್ಲಿ ಕೊನೆಯಾಗುತ್ತದೆ. ಹೀಗಿದ್ದರೆ ನೀವು ತಪ್ಪದೇ ಫೆಂಗ್ ಶ್ಯೂ ಟಿಪ್ಸ್ ಪಾಲಿಸಬೇಕು. 

ಮನೆಯಲ್ಲಿ ಇವಿದ್ದರೆ ಲಕ್ಷ್ಮಿ ಕಾಲು ಮುರ್ಕೊಂಡು ಬಿದ್ದಿರ್ತಾಳೆ!

- ಲವ್‌ಲೈಫ್ ಸ್ಟ್ರಾಂಗ್ ಆಗಿರಲು ಬೆಡ್ ರೂಮಿನಲ್ಲಿ ಫೆಂಗ್ ಶುಯಿ ಬಟರ್ ಫ್ಲೈ ಇಡಬೇಕು. ನೀಲಿ ಬಣ್ಣದ ಕಲ್ಲಿನಿಂದ ಮಾಡಿದ ಬಟರ್ ಫ್ಲೈ ಪ್ರೀತಿಯ ಸಂಕೇತ. 

- ಲವ್‌ಲೈಫ್‌ನಲ್ಲಿ ಯಾವುದೇ ಸಮಸ್ಯೆ ಬಂದರೆ ಬೆಡ್ ರೂಮಿನಲ್ಲಿ ಜೋಡಿ ಬಟರ್ ಫ್ಲೈ ಇಡಿ. ಇದರಿಂದ ಇಬ್ಬರ ಸಂಬಂಧ ಉತ್ತಮವಾಗುತ್ತೆ. ಪ್ರೀತಿ ಮಧುರವಾಗುತ್ತದೆ. 

- ಬಟರ್ ಫ್ಲೈ ಇಡುವ ಸಮಯದಲ್ಲಿ ಅದು ಸ್ಪಷ್ಟವಾಗಿ ಗೋಚರಿಸುವಂತೆ ಇಡಿ. ಕಣ್ಣಿನ ಎದುರೇ ಇರುವಂತೆ ಇಟ್ಟರೆ ಉತ್ತಮ. 

- ಶ್ರೀಕೃಷ್ಣನನ್ನು ಪ್ರೇಮದ ಮೂರ್ತಿ ಎನ್ನಲಾಗುತ್ತದೆ. ಮನೆಯ ನೈಋತ್ಯ ಭಾಗದಲ್ಲಿ ಕೊಳಲನೂದುವ ಕೃಷ್ಣನ ಮತ್ತು ರಾಧೆಯ ಮೂರ್ತಿಯನ್ನಿಟ್ಟರೆ ಪ್ರೀತಿ ಹೆಚ್ಚುತ್ತದೆ. 

ಹೀಗಾದ್ರೆ ಮನೆಯಲ್ಲಿ ಏನೋ ಕೆಟ್ಟ ಶಕ್ತಿ ಇದೆ ಎಂದರ್ಥ?

- ರಾಧಾ ಕೃಷ್ಣಾ ಮೂರ್ತಿಯ ಜೊತೆ ನವಿಲು, ಪ್ರಕೃತಿ, ಉದ್ಯಾನವನ ಇದ್ದ ಪ್ರೀತಿ ಸದಾ ಹಸಿರಾಗಿರುತ್ತದೆ ಎನ್ನಲಾಗುತ್ತದೆ. 

- ಪ್ರೀತಿ ಮಾಡುವವರು ಅಥವಾ ಮದುವೆಯಾದವರು ತಮ್ಮ ಕೋಣೆಯಲ್ಲಿ ಒಂದು ಚೇರ್, ಒಂದು ಪಕ್ಷಿ ಅಥವಾ ಒಂದು ಪ್ರಾಣಿಯ ಚಿತ್ರ ಇಡಬೇಡಿ. ಎಲ್ಲವೂ ಎರಡು ಅಥವಾ ಜೋಡಿಯಾಗಿಡಿ. 

- ಬೆಡ್ ರೂಮಿನಲ್ಲಿ ಹೂವು, ಅಕ್ವೇರಿಯಂ ಅಥವಾ ಅವುಗಳ ಫೋಟೋ ಇಡಲೇಬೇಡಿ. 

Latest Videos
Follow Us:
Download App:
  • android
  • ios