ಮಗುವಿನ ಊಟದಲ್ಲಿ ಈ 5 ಅಂಶ ಮಿಸ್ ಆಗದಿರಲಿ!
ಹಿಂದಿನ ದಿನ ಮಧ್ಯಾಹ್ನದಿಂದ ಹೀಗೊಂದು ಯೋಚನೆ ಶುರುವಾಗುತ್ತೆ. ಇವತ್ತಿನದೇನೋ ಮುಗಿದುಹೋಯ್ತು. ಪಾಪು ಬಾಕ್ಸ್‌ಗೆ ನಾಳೆ ಏನು ಹಾಕೋದು ಅಂತ. ಬೆಳೆಯೋ ಮಕ್ಕಳಿಗೆ ಪೌಷ್ಟಿಕ ಆಹಾರ ಹೆಚ್ಚೆಚ್ಚು ಬೇಕು. ಆದರೆ ನಾವು ಕೊಡುವ ಪೌಷ್ಟಿಕ ಆಹಾರ ಮಗೂಗೆ ಇಷ್ಟಆಗ್ಬೇಕಲ್ಲಾ. ಜಂಕ್‌ಫುಡ್ ಬಿಟ್ಟು ಬೇರೇನು ಕೊಟ್ರೂ ತಲೆ ಅಡ್ಡಡ್ಡ ಆಡಿಸೋ ತರಲೆ ಮಕ್ಕಳು. ನಾವು ಲಂಚ್‌ಬಾಕ್ಸ್‌ಅನ್ನು ಮಕ್ಕಳಿಗೂ ಇಷ್ಟಆಗೋ ಥರ ಸೆಟ್ ಮಾಡಬಹುದು.
- ಮಕ್ಕಳು ವೆರೈಟಿ ಇಷ್ಟಪಡುತ್ತಾರೆ. ಹೊಸ ಹೊಸ ವೆರೈಟಿಗಳನ್ನು ಟ್ರೈ ಮಾಡಿ, ಮಗು ರುಚಿ ನೋಡಿಯೇ ನೋಡುತ್ತೆ. ಹೆಚ್ಚಾಗಿ ಹಾಕೋ ಚಪಾತಿಯನ್ನೇ ಮಕ್ಕಳಿಗಿಷ್ಟದ ಸ್ಮೈಲಿ ಶೇಪ್‌ನಲ್ಲಿ ಮಾಡಿ ಹಾಕಿ. ರುಚಿಯಲ್ಲಿ ತುಸು ಬದಲಾವಣೆ ಮಾಡಿ. ಸ್ವೀಟ್ ಇಷ್ಟಪಡುವವರಿಗೆ ಬಾಳೆಹಣ್ಣು ಹಾಕಿ ಚಪಾತಿ ಮಾಡಬಹುದು. ಖಾರ ಇಷ್ಟಪಡೋ ಮಗೂಗೆ ಪರಾಠ ಸ್ಟೈಲಿನಲ್ಲಿ ಚಪಾತಿ ಹಾಕಬಹುದು.
ಬೇವಿನಕಡ್ಡಿ, ಹರಳುಪ್ಪಿನ ಬದಲು ಪೇಸ್ಟ್ ಬಂತು, ಮಕ್ಕಳ ಹಲ್ಲು ಗಟ್ಟಿ ಅಯ್ತಾ?
- ಮಗುವಿನ ಆಹಾರದಲ್ಲಿ ಧಾನ್ಯ, ತರಕಾರಿ, ಹಣ್ಣು, ಹಾಲಿನ ಉತ್ಪನ್ನ ಹಾಗೂ ನಾನ್‌ವೆಜ್ (ಸಸ್ಯಾಹಾರಿಗಳು ನಾನ್‌ವೆಜ್‌ಗೆ ಪರಾರಯಯವಾಗಿರುವ ಸಸ್ಯಾಹಾರ ನೀಡಬಹುದು)
- ಲಂಚ್‌ಬ್ರೇಕ್‌ನಲ್ಲಿ ಬಾಕ್ಸ್ ಓಪನ್ ಮಾಡಿದ ಕೂಡಲೇ ಮಗುವಿನ ಕಣ್ಣರಳಬೇಕು. ನೋಡಿದ ಕೂಡಲೇ ತಿನ್ನಬೇಕು ಅನಿಸುವ ಫೀಲ್ ನೀವು ಹಾಕಿದ ಫುಡ್‌ನಲ್ಲಿರಬೇಕು. ಬಣ್ಣ, ರುಚಿ, ಫ್ಲೇವರ್ ಜೊತೆಗೆ ಊಟವನ್ನು ಸೆಟ್ ಮಾಡಿ ಇಡುವ ರೀತಿಯೂ ಮುಖ್ಯ.
ಅಪ್ಪುಗೆಯಲ್ಲಿದೆ ಬೆಚ್ಚಗಿನ ಸುಖ, ಸಂಬಂಧ ಬೆಸೆದರೆ ಇಲ್ಲ ದುಃಖ!
- ಒಂದು ಲಂಚ್‌ಬಾಕ್ಸ್‌ನೊಳಗೆ ಚಪಾತಿ-ಪಲ್ಯ, ಒಣಹಣ್ಣುಗಳು, ಒಂಚೂರು ರೈಸ್‌ಬಾತ್, ಹಣ್ಣುಗಳು, ತರಕಾರಿ ಇಷ್ಟುವೆರೈಟಿ ಇರುವ ಹಾಗೆ ನೋಡ್ಕೊಳ್ಳಿ. ಇದನ್ನೇ ಮೂಲವಾಗಿಟ್ಟುಕೊಂಡು ಬದಲಾವಣೆ ಮಾಡುತ್ತಿರಿ.