Asianet Suvarna News Asianet Suvarna News

ಬೈಕ್ ಟ್ರಿಪ್‌ ಹೋಗೋರಿಗೆ 7 ಬೆಸ್ಟ್ ಟಿಪ್ಸ್

ರಾಯಲ್ ಎನ್‌ಫೀಲ್ಡ್, ಡ್ಯೂಕ್ ಹಾರ್ಲೆ ಡೇವಿಡ್ಸನ್....ನಂಥ ಬೈಕ್ ಹಿಡಿದು, ಬೆನ್ನಿಗೊಂದು ಬ್ಯಾಗ್ ಹಾಕ್ಕೊಂಡು ಹುಡುಗ್ರು ಅಪರೂಪಕ್ಕೆ ಹುಡುಗಿಯರೂ ಬೈಕ್ ಟ್ರಿಪ್‌ಗೆ ಹೋಗೋದು ಕಾಮನ್. ಇದಕ್ಕೆ ಇಲ್ಲಿವೆ ಟಿಪ್ಸ್.....

Seven tips for motorbike trip
Author
Bengaluru, First Published Oct 3, 2018, 6:08 PM IST

ಸೋಲೋ ಆಗಿರಲಿ ಅಥವಾ ಗ್ರೂಪ್ ಆಗಿರಲಿ, ಬೈಕ್ ಟ್ರಿಪ್ ಯಾವಾಗಲೂ ಅಡ್ವೆಂಚರಸ್ ಆಗಿರುತ್ತದೆ. ಸ್ಮೂತ್ ಹೈವೇಯಲ್ಲಿ ಫಾಸ್ಟ್ ಆಗಿ ಹೋಗೋದು, ಕೆಲವೊಮ್ಮೆ ಪರ್ವತ ಪ್ರದೇಶದಲ್ಲಿ ಭಯಾನಕ  ಟರ್ನ್‌ಗಳನ್ನು ಕ್ರಾಸ್ ಮಾಡಿ, ಬೈಕ್ ಓಡಿಸುವುದು ಯುವ ಜನರನ್ನು ಸೆಳೆಯುವ ಮೋಜು, ಮಸ್ತಿಗಳಲ್ಲೊಂದು.

ಬೈಕ್ ರೈಡಿಂಗ್ ಕ್ರೇಜ್ ಇರೋರಿಗೆ, ವಿವಿಧ ಸ್ಥಳಗಳನ್ನು ಭೇಟಿ ನೀಡುವ ಆಸಕ್ತಿ ಇರೋರಿಗೆ ಬೈಕ್ ಟ್ರಿಪ್ ರೋಮಾಂಚಕಾರಿಯಾಗಿಯೇ ಇರುತ್ತದೆ. ಆದರೆ ಮಧ್ಯ ರಸ್ತೆಯಲ್ಲಿ ಬೈಕ್ ಹಾಳಾದರೆ, ರಾತ್ರಿ ಸಮಯ ಅದರ ಲೈಟ್ ಹಾಳಾದರೆ ಏನು ಮಾಡೋದು? 

ರಾತ್ರಿ ಟ್ರಿಪ್ ಬೇಡ
ಬೈಕ್ ಟ್ರಿಪ್ ಮಾಡೋದಾದರೆ ರಾತ್ರಿ ಬದಲು ಬೆಳಗ್ಗೆ ಹೊರಡಿ. ರಾತ್ರಿ ಕಡಿಮೆ ಬೆಳಕು ಇರೋದರಿಂದ ಗಾಡಿಗಳಿಗೆ ರಸ್ತೆ ಕಾಣಿಸದೆ ಇರುವ ಚಾನ್ಸ್ ಇರುತ್ತೆ. ಇದರಿಂದ ಅವಘಡ ಸಂಭವಿಸಬಹುದು. ಅಲ್ಲದೆ ಬೈಕ್ ರಿಪೇರಿ ಆಗಬೇಕಿದ್ದರೆ ಇನ್ನೂ ಕಷ್ಟ. 

ಬೆಳಗ್ಗಿನ ಸಮಯ ಆರಂಭಿಸಿ 
ಈ ಸಮಯದಲ್ಲಿ ಮನಸ್ಸು ಶಾಂತವಾಗಿರುತ್ತದೆ. ಯಾವ ಜಾಗಕ್ಕೆ ಹೋಗುವುದು, ಎಲ್ಲಿ ತಿರುಗಾಡುವವುದು, ಎಷ್ಟು ಇಂಧನ ಬೇಕು, ಎಲ್ಲಿ ಏನಿದೆ ಎಲ್ಲವನ್ನೂ ನೋಡಿಕೊಂಡು ಹೊರಡಿ. ಆದರೆ ರಾತ್ರಿ ಸಮಯ ಅಸುರಕ್ಷಿತ.

ಗಾಡಿಯಲ್ಲಿರಲಿ ಇಂಧನ
ಎಲ್ಲೆಲ್ಲಿ ಬಂಕ್ ಸಿಗುತ್ತೆ ಎನ್ನುವ ಐಡಿಯಾದೊಂದಿಗೆ, ಗಾಡಿಯಲ್ಲಿ ಇಂಧನ ಫುಲ್ ಇರಲಿ. ಅಲ್ಲದೇ ರಿಸರ್ವ್‌ಗೆ ಬಂದ ಕೂಡಲೇ ಮತ್ತೆ ಟ್ಯಾಂಕ್ ತುಂಬಿಸಿಕೊಳ್ಳಿ. ಇದರಿಂದ ಸುಖಾ ಸುಮ್ಮನೆ ಕಷ್ಟ ಪಡುವುದು ತಪ್ಪುತ್ತದೆ. ಆಯಾಸವೂ ಇಲ್ಲವಾಗುತ್ತದೆ.

ದೇಹ ಹೈಡ್ರೇಟ್ ಆಗಿರಲಿ
ಬೈಕ್ ಟ್ರಿಪ್‌ನಲ್ಲಿ ಹೋಗುವುದಾದರೆ ನೀರಿನ ಬಾಟಲ್ ಇರಲಿ. ಎಷ್ಟು ಸಾಧ್ಯವೋ ಅಷ್ಟು ನೀರು ಸೇವಿಸಿ. ದೇಹದಲ್ಲಿ ನೀರು ಕಡಿಮೆಯಾದರೆ ಅದರಿಂದ ತಲೆನೋವು, ತಲೆ ಸುತ್ತುವುದು ಮುಂತಾದ ಸಮಸ್ಯೆ ಕಾಣಿಸಿಕೊಳ್ಳುತ್ತವೆ.

ಬೈಕ್ ಸರ್ವಿಸಿಂಗ್ ಮಾಡಿಸಿ
ಟ್ರಿಪ್ ಪ್ಲಾನ್ ಮಾಡುವಾಗಲೇ ಬೈಕ್ ಸರ್ವಿಸಿಂಗ್ ಚೆಕ್ ಮಾಡಿಸಿ. ಮನೆಯಿಂದ ಹೊರಟು ಅರ್ಧ ದಾರಿ ತಲುಪುವಾಗ ಬೈಕ್ ಟಯರ್ ಪಂಚರ್ ಆದ್ರೆ ಅವಾಗ ಏನು ಮಾಡಲು ಸಾಧ್ಯವಾಗೋದಿಲ್ಲ. ಆದುದರಿಂದ ಪೂರ್ತಿಯಾಗಿ ಸರ್ವಿಸ್ ಚೆಕ್ ಮಾಡಿಸಿ. 

ಟಯರ್ ಸರಿಯಾಗಿದ್ಯಾ?
ಬೈಕ್ ಟಯರ್ ಸರಿಯಾಗಿದೆಯೇ ಎಂದು ನೋಡುವುದು ಹಾಗೂ ಏರ್ ಚೆಕ್ ಮಾಡಿಸಿಕೊಳ್ಳಿ. ದೂರದ ಪ್ರಯಾಣವಾದರೆ, ಹೊಸ ಟಯರ್ ಹಾಕಿಸಿಕೊಳ್ಳಿ. ಇದರ ಜೊತೆಗೆ ಟಯರ್ ಬದಲಾಯಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ. 

ಲೈಟ್ ಸರಿ ಇದ್ಯಾ?
ಲೈಟ್ ಸರಿ ಇದ್ಯಾ ಗಮನದಲ್ಲಿರಲಿ.  ಅದರ ವೋಲ್ಟೇಜ್, ಪಾರ್ಕ್ ಲೈಟ್ , ಟೆಲ್ ಲ್ಯಾಂಪ್, ಇಂಡಿಕೇಟರ್ ಎಲ್ಲವನ್ನೂ ಚೆಕ್ ಮಾಡಿಕೊಳ್ಳಿ. ಅಗತ್ಯ ಬಿದ್ದರೆ ಎಕ್ಸ್ ಟ್ರಾ ಬಲ್ಬ್ ಇಟ್ಟುಕೊಳ್ಳಿ. 

Follow Us:
Download App:
  • android
  • ios