ಬೆಂಗಳೂರು[ಆ.16]: ಕಾಮೋತ್ತೇಜಕ ವಯಾಗ್ರಾ ಮಾತ್ರೆ ಸೇವನೆಯಿಂದ ಆಗುವು ಪ್ರಯೋಜನ, ಸೈಡ್ ಇಫೆಕ್ಟ್ ಚರ್ಚೆ ಬದಿಗಿಡಿ. ವಯಾಗ್ರಾದ ಈ ಪ್ರಯೋಜನ ಕೇಳಿದರೆ ನೀವು ಬೆಚ್ಚಿ ಬೀಳುವುದು ಖಚಿತ.

ಇದನ್ನು ಓದಿ: ವಯಾಗ್ರ ಎಷ್ಟು ತಾಸು ಕೆಲಸ ಮಾಡುತ್ತೆ? ಇದಕ್ಕೆ ಡಾಕ್ಟ್ರು ಏನಂತಾರೆ ?

ಏಕೆಂದರೆ ಇತ್ತೀಚಿನ ಅಧ್ಯಯನವೊಂದರ ಪ್ರಕಾರ ವಯಾಗ್ರಾ ಮಾತ್ರೆಗಳು ದೃಷ್ಟಿದೋಷ ನಿವಾರಣೆಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ ಎಂಬುದು ಕಂಡುಬಂದಿದೆ!  ಕೊಲಂಬಿಯಾ ವಿವಿ ಅಧ್ಯಯನದ ಪ್ರಕಾರ, ವಯಾಗ್ರಾ ವಯೋ ಸಹಜವಾಗಿ ಉಂಟಾಗುವ ದೃಷ್ಟಿಹೀನತೆ ತಡೆಯುತ್ತವೆಯಂತೆ.

ಇದನ್ನು ಓದಿ: ಕಾಮಸೂತ್ರಕ್ಕೆ ವೇಗದ ಟಚ್ ಕೊಟ್ಟ ವಯಾಗ್ರಾದ ಬಗ್ಗೆ ಒಂದು ಸುದ್ದಿ

ಕಣ್ಣಿನ ಸಮಸ್ಯೆ 5 ಹಿರಿಯ ವ್ಯಕ್ತಿಗಳಿಗೆ 2 ವರ್ಷ ಪ್ರತಿದಿನವೂ 2 ವಯಾಗ್ರಾ ಮಾತ್ರೆ ಕೊಟ್ಟು ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ಅವರ ದೃಷ್ಟಿಯಲ್ಲಿ ಸುಧಾರಣೆ ಆಗಿರುವುದು ಕಂಡು ಬಂದಿದೆ.