Asianet Suvarna News Asianet Suvarna News

ವಯಾಗ್ರ ಎಷ್ಟು ತಾಸು ಕೆಲಸ ಮಾಡುತ್ತೆ? ಇದಕ್ಕೆ ಡಾಕ್ಟ್ರು ಏನಂತಾರೆ ?

ವಯಾಗ್ರ ಎಷ್ಟು ತಾಸು ಕೆಲಸ ಮಾಡುತ್ತೆ? ಇದಕ್ಕೆ ಡಾಕ್ಟ್ರು ಏನಂತಾರೆ ?

Benefits of Viagra Use

1) ನನಗೆ 37 ವರ್ಷ. ವಿವಾಹಿತ. ನಿಮಿರು ದೌರ್ಬಲ್ಯ ಕಾಣಿಸುತ್ತಿದೆ. ವಯಾಗ್ರಗಳ ಬಗ್ಗೆ ಕೇಳಿದ್ದೇನೆ. ಇದನ್ನು ಯಾವ ಸಮಯದಲ್ಲಿ ತೆಗೆದುಕೊಳ್ಳಬೇಕು? ನಮ್ಮೊಳಗೆ ಇದು ಎಷ್ಟು ಗಂಟೆ ಕಾಲ ಕೆಲಸ ಮಾಡುತ್ತದೆ? ಸಹಜ ಆಹಾರದ ರೂಪದಲ್ಲೂ ನಾನು ನಿಮಿರು ದೌರ್ಬಲ್ಯಕ್ಕೆ ಪರಿಹಾರ ಕಂಡುಕೊಳ್ಳಬಹುದೇ?

- ಹೆಸರು ಬೇಡ, ಊರು ಬೇಡ

ವಯಾಗ್ರ ಮೊದಲಾದ ಔಷಧಗಳು ಅವುಗಳ ಪ್ರಮಾಣದ (ಡೋಸೇಜ್) ಪ್ರಕಾರ, ಕೆಲಸ ಮಾಡುವ ಅವಧಿಯನ್ನು ಬದಲಿಸುತ್ತವೆ. ಹಾಗಾಗಿ, ವೈದ್ಯರ ನಿರ್ದೇಶನದಲ್ಲಿ ತೆಗೆದುಕೊಳ್ಳಿ. ಆದರೆ, ನಿಮ್ಮ ವಯಸ್ಸಿಗೆ ನಿಮಿರು ದೌರ್ಬಲ್ಯ ಬಹಳ ಅಪರೂಪ. ನೀವು ಧೂಮಪಾನ, ಮದ್ಯಪಾನ ಮಾಡುತ್ತಿದ್ದರೆ ಅಥವಾ ಯಾವುದಾದರೂ ರೋಗದಿಂದ ಬಳಲುತ್ತಿದ್ದರೆ, ಮಾನಸಿಕ ಅಥವಾ ದೈಹಿಕ ಒತ್ತಡಗಳಿದ್ದರೆ, ಮಧುಮೇಹವಿದ್ದರೆ ನಿಮರು ದೌರ್ಬಲ್ಯವಾಗಬಹುದು. ಹಾಗಾಗಿ ಇವನ್ನೆಲ್ಲ ಪರೀಕ್ಷಿಸಿ, ನಿವಾರಿಸಿಕೊಳ್ಳಿ. ಅಲ್ಲದೆ, ಸಾಕಷ್ಟು ಪ್ರೇಮ ಪ್ರಚೋದನೆಯಿಲ್ಲದೆ ಸುಮ್ಮನೆ ಸಂಭೋಗಕ್ಕೆ ಪ್ರಯತ್ನಿಸಿದರೆ ಶಿಶ್ನವು ಉದ್ರೇಕಗೊಳ್ಳುವುದಿಲ್ಲ. ಅಂತೆಯೇ ಮೇಲೆ ಹೇಳಿದ ಯಾವುದಾದರೂ ಕಾರಣಕ್ಕೆ ಒಂದೊಮ್ಮೆ ದೌರ್ಬಲ್ಯವಾಗಿ ಅದೇ ಮನಸ್ಸಿನಲ್ಲಿದ್ದರೂ ಹೀಗಾಗುತ್ತದೆ. ಹಾಗಾಗಿ ಒಂದೆರಡು ವಾರ ಸಂಭೋಗ ಮಾಡದೆ, ರತಿಯಾಟಗಳಾಡುತ್ತಾ ಸುಖಿಸಿ ದೌರ್ಬಲ್ಯವನ್ನು ಮರೆಯಿರಿ. ಅನಂತರವೂ ಸಂಭೋಗಕ್ಕೆ ಮುನ್ನ ಸಾಕಷ್ಟು ರತಿಯಾಟಗಳಾಡಿ. ಜೊತೆಗೆ ಸಂಗಾತಿಯಿಂದ ಶಿಶ್ನದ ಸ್ಪರ್ಶ, ತೀಡುವಿಕೆ ಮುಂತಾದ ಕ್ರಿಯೆಗಳಿಂದ ಶಿಶ್ನೋದ್ರೇಕ ಸಾಧ್ಯ. ಒಳ್ಳೆಯ ಮಧುರವಾದ (ಸಿಹಿ ಇತ್ಯಾದಿ) ಆಹಾರಗಳಿಂದ ಮನಸ್ಸು ಉಲ್ಲಸಿತವಾಗಿ ಪ್ರೇಮ ಪ್ರಚೋದನೆಯಾಗಬಹುದು. ಅಶ್ವಗಂಧ ಲೇಹ್ಯ ಮುಂತಾದ ಆಯುರ್ವೇದ ಔಷಧಗಳೂ ಇದಕ್ಕೆ ನೆರವಾಗಬಲ್ಲವು. ತಣ್ಣೀರು ಸ್ನಾನ ಮಾಡಿದರೂ ಅನುಕೂಲವೇ.

(ಡಾ. ಬಿಆರ್ ಸುಹಾಸ್, ಲೈಂಗಿಕತಜ್ಞ (ಕನ್ನಡ ಪ್ರಭ))

Click Here : ಹಾಟ್ ನ್ಯೂಸ್ : ಬಿಗ್'ಬಾಸ್'ಗೆ ಹುಚ್ಚ ವೆಂಕಟ್ ಎಂಟ್ರಿ ಖಚಿತ, ಗೊಂದಲದಲ್ಲಿ ಪ್ರಥಮ್ 

Follow Us:
Download App:
  • android
  • ios