ಬಾಯಲ್ಲಿ ನೀರು ತರಿಸೋ ಆಲೂ ಚಾಟ್ಸ್ ರೆಸಿಪಿ
ಚಾಟ್ಸ್‌ನಲ್ಲಿ ಆಲೂ ಇದ್ದರೆ ರುಚಿ. ಬರೀ ಆಲೂಗಡ್ಡೆ ಮಾತ್ರ ಬಳಸಿ ಮಾಡೋ ಚಾಟ್ಸ್ ಇನ್ನೂ ಟೇಸ್ಟಿ. ಬರೀ ಲೇಸ್, ಆಲೂ ಚಿಪ್ಸ್ ತಿನ್ನುವವರಿಗೆ ಮತ್ತೊಂದು ಟೇಸ್ಟಿ ಚಾಟ್ ಅನ್ನು ಮನೆಯಲ್ಲಿಯೇ ಮಾಡಿಕೊಳ್ಳಬಹುದು. ಇಲ್ಲಿದೆ ರೆಸಿಪಿ....
ಬೇಕಾಗುವ ಸಾಮಾಗ್ರಿ:
- ಆಲೂಗಡ್ಡೆ
- ಖಾರದ ಪುಡಿ
- ಜೀರಿಗೆ ಪುಡಿ
- ಚಾಟ್ ಮಸಾಲ
- ಉಪ್ಪು
- ಎಣ್ಣೆ
- ನಿಂಬೆಹಣ್ಣು
- ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ತೊಳೆದ ಆಲೂಗಡ್ಡೆಯನ್ನು ಬೇಯಿಸಬೇಕು.(ತುಂಬಾ ಬೇಯಿಸಿ ಮೆದುವಾಗಬಾರದು. ಕಟ್ ಮಾಡುವಷ್ಟು ಗಟ್ಟಿ ಇರಬೇಕು) ನಂತರ ಅಲೂಗಡ್ಡೆ ಸಿಪ್ಪೆ ತೆಗೆದು ಸಣ್ಣ -ಸಣ್ಣ ಬಾಕ್ಸ್ ರೂಪದಲ್ಲಿ ಕಟ್ ಮಾಡಬೇಕು. ಕಾದ ಪ್ಯಾನ್‌ನಲ್ಲಿ ಆಲೂಗಡ್ಡೆಯನ್ನು ಸಣ್ಣ ಉರಿಯಲ್ಲಿ ಹುರಿಯಬೇಕು. ಅದಕ್ಕೆ ಜೀರಿಗೆ ಪುಡಿ, ಖಾರದ ಪುಡಿ ಹಾಗೂ ಮಸಾಲ ಚಾಟ್ಸ್ ಜೊತೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಬೇಕು. ನಂತರ ಅದಕ್ಕೆ ಸ್ವಲ್ಪ ನಿಂಬೆ ರಸ ಹಾಗೂ ಕೊತ್ತಂಬರಿ ಉದುರಿಸಿ ಬಿಸಿ ಇದ್ದಾಗ ಸೇವಿಸಿದರೆ ವಿಪರೀತ ಟೇಸ್ಟ್..
ಸೂಪರ್ ವಡಾ ಪಾವ್ : ಮಿಸ್ ಮಾಡಿದರೆ ನಿಮಗೆ ಲಾಸ್!