ಜೀವನ ಸಂತೋಷದಿಂದ ಕೂಡಿರಬೇಕಾದರೆ ದೊಡ್ಡ ದೊಡ್ಡ ಸಂತೋಷಕ್ಕೆ ಕಾದು ಕುಳಿತುಕೊಳ್ಳಬೇಕಾಗಿಲ್ಲ. ಸಣ್ಣ ಸಣ್ಣ ಖುಷಿಯನ್ನೂ ಎಂಜಾಯ್ ಮಾಡಬಹುದು. ಅದನ್ನು ಕಲಿಯಬೇಕಷ್ಟೆ. ಹೀಗೆ ಮಾಡಿದರೆ ಜೀವನ ಪೂರ್ತಿ ಸಂತೋಷವಾಗಿಯೇ ಇರಬಹುದು. ಅಂಥ ಕೆಲವು ಮಧುರ ನೆನಪುಗಳ ಗುಚ್ಛವಿದು. 

#Relationshipಗೆ ಸಂಬಂಧಿಸಿದ ಲೇಖನಗಳಿಗೆ ಇಲ್ಲಿ ಕ್ಲಿಕ್ ಮಾಡಿ

- ಪ್ರಥಮ ಬಾರಿ ಲವ್ ಆಗಿದ್ದು, ಆ ನೋಟ, ಹೊಟ್ಟೆಯಲ್ಲಿ ಚಿಟ್ಟೆ ಹಾರಿದಂತಾಗಿದ್ದು. ಇಂಥ ಮಧುರ ಅನುಭವದ ನೆನಪಿದ್ಯಾ?
- ಕ್ಲಾಸ್‌ನಲ್ಲಿ ಫಸ್ಟ್ ಬಂದು ಟೀಚರ್‌ ಭೇಷ್ ಎಂದಿದ್ದು. 
- ನಮ್ಮಲ್ಲಿರೋ ವಿಶೇಷ ಟ್ಯಾಲೆಂಟ್‌‌ವೊಂದನ್ನು ಮೊದಲು ಪ್ರದರ್ಶಿಸಿದಾಗ, ಸಿಕ್ಕ ಪ್ರಶಂಸೆ.
- ನಾಲಿಗೆಯನ್ನು ಟ್ವಿಸ್ಟ್ ಮಾಡಿದ್ದು, ಪಿಯಾನೋ ನುಡಿಸಿದ್ದು, ಮ್ಯಾಜಿಕ್ ಮಾಡಿದ್ದು...
- ಬೆಸ್ಟ್ ಫ್ರೆಂಡ್ ನೀಡಿದ ಪ್ರೀತಿಯ ಅಪ್ಪುಗೆ. 


- ನಿಮ್ಮನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ವ್ಯಕ್ತಿಯೊಬ್ಬರು ಇದ್ದಾರೆ ಎನ್ನುವ  ಸತ್ಯ ಕಷ್ಟ ಕಾಲದಲ್ಲಿ ಅರಿವಿಗೆ ಬಂದಾಗ. 
- ಹೊಸ ಹೊಸ ವಿಷಯಗಳನ್ನು ತಿಳಿದುಕೊಂಡಾಗ, ಹೊಸ ವಿದ್ಯೆ ಕಲಿತಾಗ. 
- ಜೀವಕ್ಕಿಂತ ಹೆಚ್ಚು ಇಷ್ಟ ಪಟ್ಟ ಗೆಳತಿಗೆ ಮೊದಲ ಬಾರಿಗೆ ಕಿಸ್ ಮಾಡಿದ ಆ ಕ್ಷಣ. 
- ಊರಿನ ಟೆಂಟ್‌ನಲ್ಲಿ ನೆಲದ ಮೇಲೆ ಕೂತು ಫಿಲ್ಮ್ ನೋಡಿದ್ದು. 
- ಮರಕ್ಕೆ ಹತ್ತಿ ಎತ್ತರದ ಕೊಂಬೆಯಲ್ಲಿ ಕುಳಿತು, ಆಕಾಶವನ್ನು ಮುಟ್ಟಿದಷ್ಟು ಖುಷಿ ಪಟ್ಟಿದ್ದು. 
- ಜೀವನಶೈಲಿಯಲ್ಲಿ ಮಾಡಿಕೊಂಡ ಸಣ್ಣದೊಂದು ಬದಲಾವಣೆ. ಅದರಿಂದ ಸಿಕ್ಕ ಖುಷಿ, ಯಶಸ್ಸು...ಅದನ್ನು ಮತ್ತೊಬ್ಬರು ಫಾಲೋ ಮಾಡುವಂತೆ ಮಾಡಿದ್ದು. 
- ಒಳ್ಳೆ ಹಾಡೊಂದನ್ನು ಮೈ ಮರತು ಕೇಳಿದಾಗಿನ ಕ್ಷಣ....