Asianet Suvarna News Asianet Suvarna News

Punjabi Wedding: ಫನ್ನಿ ಜೊತೆ, ವಿಭನ್ನತೆ ಇಲ್ಲಿರುತ್ತೆ

ಹಿಂದೆ 10 ದಿನಗಳವರೆಗೆ ಮದುವೆ ಸಂಪ್ರದಾಯಗಳು ನಡೆಯುತ್ತಿದ್ದವು. ಆದ್ರೀಗ ಬಹುತೇಕ ಮದುವೆಗಳು ಎರಡು ದಿನಕ್ಕೆ ಸೀಮಿತವಾಗಿದೆ. ಮದುವೆಗಳಲ್ಲಿ ಅನೇಕ ಪದ್ಧತಿಗಳನ್ನು ಈಗ್ಲೂ ಆಚರಿಸಿಕೊಂಡು ಬರಲಾಗುತ್ತಿದೆ. ಪಂಜಾಬಿ ಮದುವೆ ಕೂಡ ಇದಕ್ಕೆ ಹೊರತಾಗಿಲ್ಲ.

Punjabi Wedding Rituals
Author
First Published Nov 8, 2022, 2:56 PM IST

ಭಾರತದಲ್ಲಿ ಅನೇಕ ಸಂಸ್ಕೃತಿಯ ಸಮ್ಮಿಲನವಾಗಿದೆ. ಪ್ರತಿಯೊಂದು ಜಾತಿ, ಪಂಗಡ, ಊರು ಹೀಗೆ ಎಲ್ಲ ಕಡೆ ಭಿನ್ನ ಸಂಸ್ಕೃತಿಯನ್ನು ನಾವು ನೋಡಬಹುದು. ಭಾರತದಲ್ಲಿ ಅನೇಕ ಹಬ್ಬಗಳನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಅದ್ರ ಜೊತೆ ಮದುವೆ ಸಮಾರಂಭಗಳು ಕೂಡ ವೈವಿದ್ಯತೆಯಿಂದ ಕೂಡಿರುತ್ತವೆ. ಭಾರತದಲ್ಲಿ ನಾವು ಬೇರೆ ಬೇರೆ ಪದ್ಧತಿಯಲ್ಲಿ ಮದುವೆಗಳನ್ನು ನೋಡಬಹುದು. ಭಾರತೀಯರಿಗೆ ಮದುವೆ ಮಹತ್ವವಾದ ಘಟ್ಟ. ಕುಟುಂಬಸ್ಥರು, ಸಂಬಂಧಿಕರು, ಸ್ನೇಹಿತರು ಸೇರಿದಂತೆ ಎಲ್ಲರ ಸಾಕ್ಷಿಯಾಗಿ ವಧು – ವರರು ಒಂದಾಗ್ತಾರೆ. ಈ ಮದುವೆಯಲ್ಲಿ ಪೂಜೆಗಳ ಜೊತೆ ನೃತ್ಯ, ಸಂಗೀತ, ವಾದ್ಯಗಳಿರುತ್ತವೆ. ಎಲ್ಲೆಡೆ ಸಡಗರ ಮನೆ ಮಾಡಿರುತ್ತದೆ. ತಿಂಗಳುಗಳ ಮೊದಲೇ ಮದುವೆಗೆ ತಯಾರಿ ನಡೆಯುತ್ತಿರುತ್ತದೆ. 

ಪಂಜಾಬಿ (Punjabi) ವಿವಾಹ (Wedding) ಕೂಡ ಸಾಕಷ್ಟು ವಿಶೇಷತೆಯಿಂದ ಕೂಡಿದೆ. ಮೋಜಿನಿಂದ ಕೂಡಿರುವ ಪಂಜಾಬಿ ಮದುವೆಯಲ್ಲಿ ಅನೇಕ ವಿಶಿಷ್ಟ ಆಚರಣೆಗಳನ್ನು ಸಹ ನಡೆಸಲಾಗುತ್ತದೆ. ಪಂಜಾಬಿ ಮದುವೆಯ ಸಂಪ್ರದಾಯಗಳು ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ. ಪಂಜಾಬಿ ಮದುವೆಯಲ್ಲಿ ಆಚರಿಸುವ ಅನೇಕ ಸಂಪ್ರದಾಯಗಳು  ಸಾಕಷ್ಟು ಅನನ್ಯವಾಗಿವೆ. ಅನೇಕ ಆಚರಣೆಗಳು ವಿನೋದದಿಂದ ತುಂಬಿರುತ್ತವೆ. ಮದುವೆ ಸಂದರ್ಭದಲ್ಲಿ ವಧು – ವರರ ಜೊತೆ ಸಂಬಂಧಿಕರು ಈ ಸಂಪ್ರದಾಯಗಳನ್ನು ಆನಂದಿಸುತ್ತಾರೆ. ಜನರು  ಮದುವೆಯ ಆಚರಣೆಗಳಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ.  

ಪಂಜಾಬಿ ವಿವಾಹದಲ್ಲಿರುವ ವಿಶೇಷ ಆಚರಣೆಗಳು : 

ನಿಶ್ಚಿತಾರ್ಥಕ್ಕಿಂತ (Engagement) ಮೊದಲು ನಡೆಯುತ್ತೆ ರೋಕಾ (Roka) : ಪಂಜಾಬಿನಲ್ಲಿ ಮದುವೆ ಆಚರಣೆಗಳು ನಿಶ್ಚಿತಾರ್ಥದಿಂದಲೇ ಶುರುವಾಗುತ್ತವೆ. ನಿಶ್ಚಿತಾರ್ಥಕ್ಕೆ ಮೊದಲು ರೋಕಾ ಮಾಡಲಾಗುತ್ತದೆ. ರೋಕಾ ಅಂದ್ರೆ, ಈ ಗಂಡಿಗೆ ಈ ಹೆಣ್ಣು ಎಂಬುದು ನಿಶ್ಚಿತವಾಗಿದೆ. ಇನ್ಮುಂದೆ ಇಬ್ಬರು ಕೂಡ ಬೇರೆ ಯಾವುದೇ ಸಂಬಂಧವನ್ನು ಹುಡುಕುವಂತಿಲ್ಲ ಎಂದು ಒಪ್ಪಂದ ಮಾಡಿಕೊಳ್ಳುವುದು. ಇದಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರು ಪೂಜೆ ಕಾರ್ಯಗಳನ್ನು ಕೂಡ ನಡೆಸುತ್ತಾರೆ. ಒಂದೇ ಸ್ಥಳದಲ್ಲಿ ಎರಡು ಕುಟುಂಬಸ್ಥರು ಸೇರಿ ಪ್ರಾರ್ಥನೆ (prayer) ಸಲ್ಲಿಸ್ತಾರೆ.

ಹೆಂಡತಿಯನ್ನು WIFE ಎಂದು ಕರೆಯೋದ್ಯಾಕೆ? ಇದರ ಅರ್ಥ ಗೊತ್ತಾ?

ಪಂಜಾಬಿ ಮದುವೆ ಆರಂಭ ಕೀರ್ತನೆ (Kirtan) ಯಿಂದ : ಪಂಜಾಬಿ ಮದುವೆಯಲ್ಲಿ ಡಾನ್ಸ್ ಇಲ್ಲವೆಂದ್ರೆ ಅದು ಮದುವೆಯಾಗಲು ಸಾಧ್ಯವೇ ಇಲ್ಲ. ಅಲ್ಲಿ ಡಾನ್ಸ್ ಗೆ ಹೆಚ್ಚಿನ ಮಾನ್ಯತೆಯಿದೆ. ಆದರೆ ಎಲ್ಲಕ್ಕಿಂತ ಮೊದಲು ಕೀರ್ತನೆ ನಡೆಯುತ್ತದೆ. ವರ ಹಾಗೂ ವಧು ಇಬ್ಬರ ಮನೆಯಲ್ಲೂ ಕೀರ್ತನೆ ಆಯೋಜಿಸಲಾಗುತ್ತದೆ. ಮದುವೆಯಲ್ಲಿ ಯಾವುದೇ ಸಮಸ್ಯೆ ಬರದೆ ನಿರ್ವಿಘ್ನವಾಗಿ ಮದುವೆ ನಡೆಯಲಿ ಎನ್ನುವ ಕಾರಣಕ್ಕೆ ಕೀರ್ತನೆ ಮಾಡಿಸಲಾಗುತ್ತದೆ. ಇಲ್ಲಿ ಮಹಿಳೆಯರು ಹಾಡುಗಳನ್ನು ಹಾಡುತ್ತಾರೆ, ಕೀರ್ತನೆ ಮತ್ತು ನೃತ್ಯ ಮಾಡುತ್ತಾರೆ. ಕೀರ್ತನೆ ಬೆಳಿಗ್ಗೆ ಪೂರ್ತಿ ನಡೆದ್ರೆ ರಾತ್ರಿ ಡೋಲ್ಕಿ ಅಂದರೆ ಸಂಗೀತ ಸಮಾರಂಭದ ಸರದಿ. ಇದರಲ್ಲಿ ಕುಟುಂಬ ಸಮೇತರಾಗಿ ಡೋಲು ಬಾರಿಸುತ್ತಾ ಕುಣಿದು ಕುಪ್ಪಳಿಸುತ್ತಾರೆ. ಆದರೆ ಇಂದು ಅದರ ಸ್ವರೂಪ ಬದಲಾಗಿದೆ. ಮಾಡರ್ನ್ ವೆಡ್ಡಿಂಗ್‌ಗಳಲ್ಲಿ ಡೋಲಿನ ಬದಲು ಡಿಜೆ ಬಂದಿದೆ.

ಮುತ್ತೈದೆ ಎಂದು ಸಾರಿ ಹೇಳುವ 5 ಮುತ್ತುಗಳಿವು..

ಪಂಜಾಬಿ ಮದುವೆಯಲ್ಲಿ ಬಳೆಗಿದೆ (Bangles) ವಿಶೇಷ ಮಹತ್ವ : ಮದುವೆಯಲ್ಲಿ ವಧು ಕೈ ತುಂಬ ಬಳೆ ಧರಿಸುವ ಸಂಪ್ರದಾಯವಿದೆ. ಕೈ ತುಂಬ ಬಳೆ ಧರಿಸಿ ವಧು (Bride) ಮಂಟಪಕ್ಕೆ ಬರೋದು ಸಾಮಾನ್ಯ. ಪಂಜಾಬಿ ಮದುವೆಯಲ್ಲಿ ಈ ಬಳೆಯನ್ನು ವಧು ಖರೀದಿ ಮಾಡುವಂತಿಲ್ಲ. ವಧುವಿನ ತಾಯಿಯ ಸಹೋದರ ಅಂದ್ರೆ ವಧುವಿನ ಮಾವ, ಬಳೆ ನೀಡಬೇಕಾಗುತ್ತದೆ. ಮಾವ ನೀಡಿದ ಬಳೆಯನ್ನು ಹಾಲಿನಲ್ಲಿ ಇಡಲಾಗುತ್ತದೆ. ಅದನ್ನು ಮಂಟಪದಲ್ಲಿ ವಧು ಧರಿಸಬೇಕು. ಹಿಂದಿನ ದಿನಗಳಲ್ಲಿ ಈ ಬಳೆಯನ್ನು ತೆಗೆಯುವ ಪದ್ಧತಿ ಕೂಡ ಇತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಆ ಪದ್ಧತಿ ಮರೆಯಾಗ್ತಿದೆ.  ದ್ರ ಜೊತೆಗೆ ಪಂಜಾಬಿ ಮದುವೆಗಳಲ್ಲಿ ಮೆಹಂದಿ (Mehandi) ಕಾರ್ಯಕ್ರಮ ಹಾಗೂ ಅರಿಶಿನ ಕಾರ್ಯಕ್ರಮ ಕೂಡ ಇರ್ಲೇಬೇಕು. ,

Follow Us:
Download App:
  • android
  • ios