ಆಧ್ಯಾತ್ಮವ ಅರಸಿ ಕೈ ತುಂಬಾ ಸಂಬಳ ನೀಡೋ ಐಟಿ ಜಾಬ್ ಬಿಟ್ಟು ಅರ್ಚಕ ವೃತ್ತಿಗಿಳಿದ ಟೆಕ್ಕಿ

ಇಲ್ಲೊಬ್ಬರು ಕೈ ತುಂಬಾ ಸಂಬಳ ಪಡೆಯುವ ಟೆಕ್ಕಿ ತಮ್ಮ ಈ ಐಟಿ ವೃತ್ತಿ ಬಿಟ್ಟು  ಆಧ್ಮಾತ್ಮದಲ್ಲಿ ದೇವರ ಸೇವೆಯಲ್ಲಿ ಭಾಗಿಯಾಗುವ ಅರ್ಚಕ ವೃತ್ತಿಗೆ ಇಳಿದಿದ್ದು, ಅವರ ಸ್ಟೋರಿ ಈಗ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ.

profession vs passion Youth from kerala Unnikrishnan left high paying IT job and become priest in temple at keralas  Kottayam akb

ಕೊಟಾಯಂ: ಆಧ್ಯಾತ್ಮ ಎಂಬುದು ಸಾಗರ ಇಲ್ಲಿ ಈಜಿದಷ್ಟು ಹೆಚ್ಚು ಹೆಚ್ಚು ಹೊಸ ಹೊಸ ಅನುಭವಗಳಾಗುತ್ತಲೇ ಇರುತ್ತವೆ. ಯೋಗಿಗಳು ಜೀವನದಲ್ಲಿ ವೈರಾಗ್ಯ ಹೊಂದಿದವರು ಆಧ್ಯಾತ್ಮದ ವಾಲುವುದು ಸಾಮಾನ್ಯ. ಆದರೆ ಇಲ್ಲೊಬ್ಬರು ಕೈ ತುಂಬಾ ಸಂಬಳ ಪಡೆಯುವ ಟೆಕ್ಕಿ ತಮ್ಮ ಈ ಐಟಿ ವೃತ್ತಿ ಬಿಟ್ಟು  ಆಧ್ಮಾತ್ಮದಲ್ಲಿ ದೇವರ ಸೇವೆಯಲ್ಲಿ ಭಾಗಿಯಾಗುವ ಅರ್ಚಕ ವೃತ್ತಿಗೆ ಇಳಿದಿದ್ದು, ಅವರ ಸ್ಟೋರಿ ಈಗ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ.

ಕೇರಳದ 34 ವರ್ಷದ ಉನ್ನಿಕೃಷ್ಣನ್ ಎಂಬುವವರೇ ಹೀಗೆ ಐಟಿ ಉದ್ಯೋಗ ತೊರೆದು ತಮ್ಮ ಆಸಕ್ತಿಯ ಅರ್ಚಕ ವೃತ್ತಿಗಿಳಿದವರು. ಹಾಗಂತ ಇವರು ಕೇವಲ ಅರ್ಚಕರಾಗಿ ಉಳಿದಿಲ್ಲ, ಬೈಕ್ ರೇಸ್‌ ಕ್ರೇಜ್ ಹೊಂದಿರುವ ಇವರು ಗುಡ್ಡಗಾಡಿನ ಮಣ್ಣು ರಸ್ತೆಗಳಲ್ಲಿ ಬೈಕ್ ಓಡಿಸುವ ಹವ್ಯಾಸವನ್ನು ಕೂಡ ಹೊಂದಿದ್ದಾರೆ. ಈ ಮೂಲಕ ಆಧ್ಮಾತ್ಮ ಲೋಕದಲ್ಲಿ ಪ್ರಯಾಣಿಸುವುದರ ಜೊತೆ ತಮ್ಮ ಇಷ್ಟದ ಬೈಕ್‌ ರೈಡ್ ಕೂಡ ನಡೆಸಲು ಅವರಿಗೆ ಸಮಯ ಒದಗುತ್ತಿದ್ದು, ಎರಡನ್ನು ಬ್ಯಾಲೆನ್ಸ್ ಮಾಡುತ್ತಿದ್ದಾರೆ ಈ ಪೂಜಾರಿ. 

FIM ಮೋಟಾರ್‌ಸ್ಪೋರ್ಟ್; ಬೆಂಗಳೂರಿನ ಮಹಿಳಾ ರೇಸರ್‌ಗೆ ವಿಶ್ವಕಪ್ ಕಿರೀಟ!

ಕೇರಳದ ಕೊಟ್ಟಾಯಂ (Kottayam) ಜಿಲ್ಲೆಯ ಮಂಜೂರ್ ( Manjoor) ಗ್ರಾಮದಲ್ಲಿರುವ ಪುದುಕ್ಕುಳಂಗರ ದೇವಿ ದೇವಸ್ಥಾನದಲ್ಲಿ ಅರ್ಚಕರಾಗಿ ಆಧ್ಯಾತ್ಮ ಪ್ರಯಾಣ ಬೆಳೆಸಿರುವ ಅವರು ಬೆಳಗ್ಗೆ 5.30ಕ್ಕೆ ಎದ್ದು ಪೂಜೆ ಮಾಡಿ ದೇವಿಯ ಆರಾಧನೆಯಲ್ಲಿ ತೊಡಗುತ್ತಾರೆ.  

ಮುಂಜಾನೆಯ ಸಮಯದಲ್ಲಿಯೇ ಬಹುತೇಕರು ದೇಗುಲಕ್ಕೆ ಬಂದು ಹೋಗುವುದರಿಂದ  ಬೆಳಗ್ಗೆ 9.30ಕ್ಕೆಲ್ಲಾ ದೇಗುಲದಲ್ಲಿ ನಡೆಯುವ ಪೂಜಾ ಕಾರ್ಯಗಳು ಮುಕ್ತಾಯವಾಗುತ್ತವೆ. ನಂತರ ಅವರು ತಮ್ಮ ಪುರೋಹಿತ ಧಿರಿಸನ್ನು ಕಳಚಿ ತನ್ನಿಷ್ಟದ ಮತ್ತೊಂದು ಹವ್ಯಾಸವಾದ ಬೈಕ್ ರೇಸಿಂಗ್‌ನಲ್ಲಿ ತೊಡಗುತ್ತಾರೆ. ಪೂಜಾರಿಗೆ ಸರಿ ಉಲ್ಟಾ ಎಂಬಂತೆ ಕಾಲಿಗೆ ಶೂ, ಕೈಗೆ ಕೈಗವಸು, ಹೆಲ್ಮೆಟ್,  ರೇಸಿಂಗ್ ಸೂಟ್ ಧರಿಸಿ ಗುಡ್ಡಗಾಡಿನ ಮಣ್ಣಿನ ರಸ್ತೆಯಲ್ಲಿ ರೊಯ್ಯನೆಂದು ಮುಂದೆ ಸಾಗುತ್ತಾರೆ. 

300 kmph ವೇಗದಲ್ಲಿ ಬೈಕ್ ಓಡಿಸಲು ಯತ್ನಿಸಿದ ಅಗಸ್ತ್ಯ, ಅಷ್ಟೇ ವೇಗದಲ್ಲಿ ಯಮಲೋಕ ಸೇರಿದ ಯೂಟ್ಯೂಬರ್..!

2007ರಲ್ಲಿ ದ್ವಿಚಕ್ರ ವಾಹನ ಲೈಸೆನ್ಸ್ ಪಡೆದಾಗಿನಿಂದ ಅವರಿಗೆ ಮೋಟಾರ್ ರೇಸಿಂಗ್‌ನಲ್ಲಿ (motorcycles racing) ಮೋಹ ಶುರುವಾಗಿದ್ದು, ಕೊಚ್ಚಿಯಲ್ಲಿರುವ  ವೃತ್ತಿಪರ ಸ್ಟಂಟ್ ರೈಡಿಂಗ್ ಮತ್ತು ರೇಸಿಂಗ್ ಕ್ಲಬ್‌ಗೆ ಸೇರಿಕೊಂಡು ತಮ್ಮ ಆಸಕ್ತಿಗೆ ನೀರೆರೆದರು. ಕಂಪ್ಯೂಟರ್ ಸೈನ್ಸ್‌ನಲ್ಲಿ (computer science) ಪದವಿ ಪಡೆದಿರುವ ಉನ್ನಿಕೃಷ್ಣನ್ (Unnikrishnan) ಐಟಿ ಸೆಕ್ಟರ್‌ನಲ್ಲಿ (IT sector) ಕೆಲಸ ಮಾಡುತ್ತಿದ್ದರು. ಆದರೆ ತನ್ನಿಷ್ಟದ ರೇಸಿಂಗ್‌ಗಾಗಿ  2013ರಲ್ಲಿ ಅತೀವ ಬೇಡಿಕೆಯ ಜೊತೆ ಕೈ ತುಂಬಾ ಸಂಬಳ ನೀಡುವ ಆ ಕೆಲಸವನ್ನು ಉನ್ನಿಕೃಷ್ಣನ್  ತೊರೆದರು.  ನಂತರ ಅವರು ರೇಸಿಂಗ್ ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಭಾರತದಿಂದ ನೇಪಾಳದವರೆಗೂ ಬೈಕ್ ಟ್ರಿಪ್ ಹೋಗಿದ್ದಾರೆ. 

ಉನ್ನಿಕೃಷ್ಣನ್ ತಂದೆ ನಾರಾಯಣ ನಂಬೂದಿರಿ (Narayanan Namboothiri) ಕೂಡ ಪುರೋಹಿತರಾಗಿದ್ದು, ಅವರ ಅನಿರೀಕ್ಷಿತ ಅಗಲಿಕೆಯ ನಂತರ ಉನ್ನಿಕೃಷ್ಣನ್ ಅವರು ದೇಗುಲದ ಜವಾಬ್ದಾರಿಯನ್ನು ತೆಗೆದುಕೊಂಡರು. ಡಿಸೆಂಬರ್ 2021ರಿಂದ ಅಧಿಕೃತವಾಗಿ ದೇಗುಲದ ಪೂಜಾರಿಯಾಗಿರುವ ಇವರು ತಮ್ಮ ಈ ಬೈಕ್ ರೇಸಿಂಗ್ ಹವ್ಯಾಸವನ್ನು ಜೊತೆ ಜೊತೆಗೆ ಬೆಳೆಸಿಕೊಂಡು ಹೋಗುತ್ತಿದ್ದಾರೆ. ಹಲವು ರೇಸಿಂಗ್‌ಗಳಲ್ಲಿ ಈಗಾಗಲೇ ಭಾಗವಹಿಸಿದ್ದಾರೆ. 

Latest Videos
Follow Us:
Download App:
  • android
  • ios