ಸಿಂಗಾಪುರಕ್ಕೆ ಪ್ರವಾಸ ಹೋಗುವ ಯೋಚನೆಯೇ? 9 ಮುಖ್ಯ ವಿಷಯ ನೆನಪಿರಲಿ

ಬ್ಯುಟಿಫುಲ್ ದೇಶವಾದ ಸಿಂಗಾಪುರಕ್ಕೆ ಭೇಟಿ ನೀಡುವುದು ಪ್ರತಿಯೊಬ್ಬ ಶ್ರೀಸಾಮಾನ್ಯನ ಕನಸು. ಆ ಕನಸನ್ನು ಈಡೇರಿಸಲು, ಏರ್ ಇಂಡಿಯಾ ಕಡಿಮೆ ದರದಲ್ಲಿ ಟಿಕೆಟ್ ಒದಗಿಸಲು ಮುಂದಾಗಿದೆ!

Planning your trip to Singapore Top 9 things you should keep in mind

ಅದು ಉದ್ಯೋಗವಾಗಿರಲಿ ಅಥವಾ ಪ್ರವಾಸವಾಗಿರಲಿ,  ಭಾರತೀಯರಿಗೆ ಸಿಂಗಾಪುರ ಅತ್ಯಂತ ಆಕರ್ಷಣಿಯ ತಾಣಗಳಲ್ಲೊಂದು. ಅಂಕಿಂಶಗಳ ಪ್ರಕಾರ ಸಿಂಗಾಪುರಕ್ಕೆ ಭೇಟಿ ನೀಡುವ ಭಾರತೀಯರ  ಸಂಖ್ಯೆಯಲ್ಲಿ ವರ್ಷಂಪ್ರತಿ ಭಾರೀ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ  ಏರ್ ಇಂಡಿಯಾವು ಕಡಿಮೆ ದರದಲ್ಲಿ ಸಿಂಗಾಪುರಕ್ಕೆ ಹೊಸ ಸೇವೆ ಆರಂಭಿಸಿದೆ. 

Planning your trip to Singapore Top 9 things you should keep in mind

ಸಿಂಗಾಪುರಕ್ಕೆ ಮೊದಲ ಬಾರಿ ಪ್ರಯಾಣಿಸುವವರು ಈ 9 ಮುಖ್ಯ ವಿಷಯಗಳನ್ನು ಗಮನದಲ್ಲಿಡಬೇಕು:

1. ನಿಮ್ಮ ಪ್ರಯಾಣದ ಯೊಜನೆಯನ್ನು ಮುಂಚಿತವಾಗಿಯೇ ಸಿದ್ಧಪಡಿಸಿ. ವಿದೇಶ ಪ್ರವಾಸಕ್ಕೆ ಹೊರಡಬೇಕಾದರೆ ನೀವು ಅನುಸರಿಸಬೇಕಾದ ಪ್ರಥಮ ನಿಯಮವಿದು. ನವೆಂಬರ್- ಫೆಬ್ರವರಿ ಅವಧಿ ಸಿಂಗಾಪುರ ಪ್ರವಾಸಕ್ಕೆ ಪ್ರಶಸ್ತ ಸಮಯ. ಆದುದರಿಂದ ನೀವು ಇಂದೇ ನಿಮ್ಮ ಟಿಕೆಟನ್ನು ಕಾಯ್ದಿರಿಸಿ.  ಪ್ರವಾಸ ಯೋಜನೆಯನ್ನು ಮುಂಚಿತವಾಗಿಯೇ  ನಿಗದಿಪಡಿಸುವುದರಿಂದ, ಏರ್ ಇಂಡಿಯಾದ ವಿಮಾನಯಾನ  ದರದಲ್ಲಿ ಭಾರೀ ಉಳಿತಾಯವನ್ನು ಮಾಡಬಹುದು.

2. ಸಿಂಗಾಪುರ ಉಷ್ಣ ಹವಾಮಾನವನ್ನು ಹೊಂದಿದೆ. ಇದರರ್ಥ ವರ್ಷದುದ್ದಕ್ಕೂ ಸೆಖೆಯಿರುತ್ತದೆ.  ಆದುದರಿಂದ  ಈ ಹವಾಮಾನಕ್ಕೆ ಸೂಕ್ತವಾದ ಧಿರಿಸನ್ನು ಇಟ್ಟುಕೊಳ್ಳಿ.  ಕೈಯಲ್ಲಿ ಕೊಡೆಯಿದ್ದರೆ ಇನ್ನೂ ಚೆನ್ನ.

3.  ಪ್ರವಾಸದ ಬಜೆಟ್ ಏನೇ ಆಗಿರಲಿ, ಸ್ವಲ್ಪ ನಗದನ್ನು ನಿಮ್ಮ ಬಳಿ ಇಟ್ಟುಕೊಳ್ಳಿ. ತುರ್ತು ಸಂದರ್ಭಗಳಲ್ಲಿ ಇದು ಸಹಕಾರಿಯಾಗಬಹುದು. ಸಿಂಗಾಪುರ ಜಗತ್ತಿನ ಅತೀ ದುಬಾರಿ ನಗರಗಳಲ್ಲಿ ಒಂದು; ಅದಕ್ಕೆ ತಕ್ಕಂತೆ ತಯಾರಾಗಿರಿ.

4.  ಸಿಂಗಾಪುರದ  ಸ್ಥಳೀಯ ಆಹಾರಗಳನ್ನು ಸೇವಿಸಬೇಕಾದರೆ ‘ಹಾಕರ್ ಸೆಂಟರ್’ಗೆ ಭೇಟಿ ನೀಡಲು ಮರೆಯದಿರಿ. ಇತರ ಕಡೆಗಳಲ್ಲಿ ಸಿಗುವ ರೆಸ್ಟೋರೆಂಟ್ ಗಳು ಆಕರ್ಷಣೀಯವಾಗಿ ಕಂಡರೂ, ಖಾದ್ಯಬೆಲೆ ಮಾತ್ರ ದುಬಾರಿಯಾಗಿರುತ್ತದೆ. ಅಲ್ಲದೇ ಸ್ಥಳೀಯ ಖಾದ್ಯ ಸೇವಿಸುವ ಅವಕಾಶ ಲಭಿಸದು.

5. ಸಿಂಗಾಪುರದಲ್ಲಿ ಓಡಾಟಕ್ಕೆ ಕ್ಯಾಬ್ ನಂತಹ ಸಾರಿಗೆಗೆ ಅವಲಂಬಿತರಾಗದೇ ಸಾರ್ವಜನಿಕ ಸಾರಿಗೆಯನ್ನು ಆಶ್ರಯಿಸುವುದೇ ಉತ್ತಮ. ಸಿಂಗಾಪುರ ನಗರದ ಸಾರಿಗೆ ಸಂಪರ್ಕಜಾಲವು ಅತ್ಯುತ್ತಮವಾಗಿದೆ ಹಾಗೂ ದರಗಳ ದೃಷ್ಟಿಯಿಂದಲೂ ಬಹಳ ಸೂಕ್ತ. ಬಸ್ ಮತ್ತು ಸಬ್ ವೇ ಪ್ರಯಾಣಕ್ಕೆ  EZ-link ಕಾರ್ಡನ್ನು ಪಡೆದುಕೊಳ್ಳಬಹುದು. ಸಾರ್ವಜನಿಕ ಸಾರಿಗೆ ಲಭ್ಯವಿಲ್ಲದ ಸ್ಥಳಗಳ್ಲಲಿ,  ಆ್ಯಪ್ ಆಧಾರಿತ ಬೈಕ್-ಶೇರಿಂಗ್ ಸೇವೆಗಳನ್ನು ಬಳಸಿಕೊಳ್ಳಬಹುದು.

Planning your trip to Singapore Top 9 things you should keep in mind

6. ಚಾಂಗಿ ವಿಮಾನ ನಿಲ್ದಾಣವನ್ನು ಮಿಸ್ ಮಾಡ್ಬೇಡಿ.  ಜಗತ್ತಿನ ಅತ್ಯಂತ ಸುಂದರವಾದ ಏರ್ಪೋರ್ಟ್ ಖ್ಯಾತಿ ಚಾಂಗಿ ಏರ್ಪೋರ್ಟಿನದ್ದು. ಪ್ರವಾಸಿಗರಿಗಾಗಿ ಬಟರ್ ಫ್ಲೈ ಪಾರ್ಕ್,  ಸುಂದರವಾದ ಉದ್ಯಾನಗಳು ಮತ್ತು ಈಜುಕೊಳದಂತಹ ಸೌಲಭ್ಯಗಳು ಇಲ್ಲಿವೆ. ಚಲನಚಿತ್ರ ಪ್ರಿಯರು ಉಚಿತವಾಗಿ ಸಿನಿಮಾ ನೋಡುವ ಸೌಲಭ್ಯವೂ ಇಲ್ಲಿದೆ. 

7. ನಗರದ ನೀತಿ-ನಿಯಮ ಹಾಗೂ ಕಾನೂನುಗಳ ಬಗ್ಗೆ ಜಾಗರೂಕರಾಗಿರಿ.  ನಿಯಮಗಳ ಉಲ್ಲಂಘನೆಯಾದಲ್ಲಿ ಭಾರೀ ಪ್ರಮಾಣದ ದಂಡವನ್ನು ಇಲ್ಲಿ ವಿಧಿಸಲಾಗುತ್ತದೆ. ಗಲೀಜು ಮಾಡುವುದು, ನಶೆ ಸೇವಿಸುವಂತಹ ಅಪರಾಧಗಳಿಗೆ ಇಲ್ಲಿ ಕಠಿಣ ಶಿಕ್ಷೆಯಿದೆ.

8. ಪ್ರವಾಸಿ ವೀಸಾಕ್ಕಾಗಿ ಕನಿಷ್ಠ ಒಂದು ತಿಂಗಳು ಮುಂಚಿತವಾಗಿ ಅರ್ಜಿ ಸಲ್ಲಿಸಿ.  ಸಿಂಗಾಪುರಕ್ಕೆ ಪ್ರವಾಸಿ ವೀಸಾ ಕಡಿಮೆ ಸಮಯದಲ್ಲಿ, ಸುಲಭವಾಗಿ ಸಿಗುತ್ತದೆ. ಸಾಮಾನ್ಯವಾಗಿ ನೀವು ಹೊರಡುವ ಒಂದು ತಿಂಗಳು ಮುಂಚಿತವಾಗಿ ಎಲ್ಲಾ ಪ್ರಕ್ರಿಯೆಗಳನ್ನು ಆರಂಭಿಸಿದರೆ ಸೂಕ್ತ. ಆ ಮೂಲಕ ಕೊನೆಕ್ಷಣದ ಅಡಚಣೆಗಳಿಂದ ಮುಕ್ತರಾಗಬಹುದು.   

9. ನೀವು ಉಳಿದುಕೊಳ್ಳುವ ಹೋಟೆಲ್ ನಿಮಗೆ ಮೊಬೈಲ್ ಹಾಗೂ ಸಿಮ್ ಸೇವೆಯನ್ನು ಒದಗಿಸುತ್ತದೋ ಎಂದು ಖಾತ್ರಿಪಡಿಸಿಕೊಳ್ಳಿ. ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಹೋಟೆಲ್ ಗಳು ಕೂಡಾ ಬಹಳ ಸ್ಪರ್ಧಾತ್ಮಕವಾಗಿವೆ. ಹಾಗಾಗಿ ಅತಿಥಿಗಳಿಗೆ ‘ಕಾಂಪ್ಲಿಮೆಂಟರಿ’ಮೊಬೈಲ್ ಹಾಗೂ ಸಿಮ್ ಕಾರ್ಡನ್ನು ಅವು  ಒದಗಿಸುತ್ತವೆ.  ಆ ಮೂಲಕ ಪ್ರವಾಸಿಗರು ಅಂತರಾಷ್ಟ್ರಿಯ ರೋಮಿಂಗ್ ಕರೆಯ ವೆಚ್ಚವನ್ನು ಉಳಿಸಬಹುದಾಗಿದೆ.  

ನೀವು ಸಿಂಗಾಪುರದ ನೀತಿ-ನಿಯಮಗಳನ್ನು ಚೆನ್ನಾಗಿ ಬಲ್ಲಿರೆಂದಾದರೆ,  ಈ ನಗರವನ್ನು ನೀವು ಹೆಚ್ಚು ಎಂಜಾಯ್ ಮಾಡಬಹುದು.  ಇಲ್ಲಿ ಅಪರಾಧ ಪ್ರಮಾಣ ಬಹಳ ಕಡಿಮೆಯಾಗಿರುವುದರಿಂದ ಇದು ಪ್ರಪಂಚದ ಸುರಕ್ಷಿತ ನಗರಗಳಲ್ಲೊಂದು.  ಆದುದರಿಂದ ಇಲ್ಲಿ ಒಂಟಿ ಮಹಿಳಾ ಪ್ರವಾಸಿಗರು ಭಾರೀ ಸಂಖ್ಯೆಯಲ್ಲಿ ಭೇಟಿ ನೀಡುವುದು ಸಾಮಾನ್ಯ. 

ನಿಮ್ಮ ಮುಂದಿನ ಪ್ರವಾಸ ಸಿಂಗಾಪುರವೇ ಯಾಕಾಗಿರಬೇಕು ಎಂದು ಮನವರಿಕೆಯಾಗಿದ್ದಲ್ಲಿ,  ನೀವು ಏರ್ ಇಂಡಿಯಾ ಆರಂಭಿಸಿರುವ ಹೊಸ ಸೇವೆಗಳ ಪ್ರಯೋಜನವನ್ನು ಪಡೆಯಿರಿ.   ₹13518 ರಷ್ಟು ಕಡಿಮೆ ಬೆಲೆಯಲ್ಲಿ ಬೆಂಗಳೂರು- ಸಿಂಗಾಪುರ ರಿಟರ್ನ್ ಟಿಕೆಟ್ ಇದೀಗ ಲಭ್ಯವಿದೆ.  ಆದುದರಿಂದ ನಿಮ್ಮ ಪಾಸ್ಪೋರ್ಟನ್ನು ಸ್ಟ್ಯಾಂಪಿಂಗ್ ಗೆ ರೆಡಿಯಾಗಿಟ್ಟುಕೊಳ್ಳಿ..  !

Latest Videos
Follow Us:
Download App:
  • android
  • ios