4 ಕಾರು ಬುಕ್ ಮಾಡಿದ್ರೂ, ರಾತ್ರಿಯಿಡೀ 28 ಕಿ.ಮೀ​ ನಡೆದು ಮದುವೆ ಮಂಟಪ ತಲುಪಿದ ವರ!

ಮದುವೆ ಅಂದ್ರೆ ಹಾಗೇನೆ. ಆಗೋ ವರೆಗೂ ನೂರೆಂಟು ಅಡ್ಡಿಗಳಿರುತ್ತವೆ. ಅಲ್ಲೊಂದು ಮದುವೆಯಲ್ಲೂ ಹಾಗೆಯೇ ಆಗಿತ್ತು. ಮದುವೆ ಮಂಟಪ ತಲುಪೋಕೆ ವರ ರಾತ್ರಿ ಇಡೀ 28 ಕಿ.ಮೀ​ ನಡೆಯಬೇಕಾಯ್ತು. ಇಷ್ಟಕ್ಕೂ ಅಲ್ಲಿ ಆಗಿದ್ದ ಸಮಸ್ಯೆಯೇನು? ಇಲ್ಲಿದೆ ಮಾಹಿತಿ.

Odisha groom walks 28 km to reach marriage venue amid drivers strike Vin

ಮದುವೆ ಅನ್ನೋದು ಶುಭ ಕಾರ್ಯ. ಎಲ್ಲವೂ ಅಚ್ಚುಕಟ್ಟಾಗಿ ನಡೆಯಬೇಕು ಅಂತಾನೆ ಎಲ್ಲರೂ ಅಂದುಕೊಳ್ತಾರೆ. ಹೀಗಿದ್ದೂ ಮದುವೆಗೆ ಎದುರಾಗೋ ಅಡ್ಡಿಗಳು ಒಂದೆರಡಲ್ಲ. ಮಾಡಿಕೊಂಡ ವ್ಯವಸ್ಥೆಯಲ್ಲ ಅಡಚಣೆಯಾಗುವುದು, ಯಾವುದೋ ಸಮಸ್ಯೆಯಿಂದ ಮದುವೆ ಅರ್ಧಕ್ಕೆ ನಿಂತು ಹೋಗುವುದು ಸಾಮಾನ್ಯವಾಗಿ ನಡೆಯುತ್ತದೆ. ಆದರೆ ಇಲ್ಲೊಂದು ಮದುವೆ ಮನೆಯಲ್ಲಿ ಉಂಟಾದ ಸಮಸ್ಯೆಯಿಂದ ವರ ರಾತ್ರಿ ಇಡೀ 28 ಕಿ.ಮೀ​ ನಡೆದು ಮದುವೆ ಮಂಟಪಕ್ಕೆ ತಲುಪಬೇಕಾಯ್ತು. ಇಷ್ಟಕ್ಕೂ ಅಲ್ಲಿ ಆಗಿದ್ದ ಸಮಸ್ಯೆಯೇನು?

ಚಾಲಕರ ಮಹಾಸಂಘದಿಂದ ನಡೆಯುತ್ತಿರುವ ಮುಷ್ಕರವು (Strike) ಒಡಿಶಾದಾದ್ಯಂತ ಸಾಮಾನ್ಯ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಜನರು ಒಂದೆಡೆಯಿಂದ ಇನ್ನೊಂದೆಡೆ ಓಡಾಡಲಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಿರುವಾಗ ದಕ್ಷಿಣ ರಾಯಗಡ ಜಿಲ್ಲೆಯ ವರನೊಬ್ಬ ತನ್ನ ಮದುವೆಯ (Marriage) ದಿನದಂದು ಮುಷ್ಕರದಿಂದಾಗಿ ತೊಂದರೆ ಅನುಭವಿಸಬೇಕಾಯಿತು. ಚಾಲಕರ ಮುಷ್ಕರದ ನಡುವೆ ಒಡಿಶಾದ ವರ 28 ಕಿ.ಮೀ ನಡೆದು ಮದುವೆ ಸ್ಥಳಕ್ಕೆ ತಲುಪಿದನು. ಕಲ್ಯಾಣಸಿಂಗ್‌ಪುರ ಬ್ಲಾಕ್‌ನ ಸುನಖಂಡಿ ಪಂಚಾಯಿತಿನಲ್ಲಿ ಈ ಘಟನೆ ನಡೆದಿರೋದಾಗಿ ವರದಿಯಾಗಿದೆ.

ಗುಂಡಿನ ಗಮ್ಮತ್ತು..ಫುಲ್ ಟೈಟ್‌ ಆಗಿ ತನ್ನದೇ ಮದ್ವೆಗೆ ಬರಲು ಮರೆತ ವರ!

ರಾತ್ರಿಯಿಡೀ ನಡೆದು ಮದುವೆ ಮಂಟಪಕ್ಕೆ ತಲುಪಿದ ವರ, ಸಂಬಂಧಿಕರು
ಒಡಿಶಾದ ರಾಯಗಡ ಜಿಲ್ಲೆಯ ವಧುವಿನ ಗ್ರಾಮಕ್ಕೆ ಮದುವೆಗಾಗಿ ವರ ನರೇಶ್ ಪ್ರಾಸ್ಕಾ(22) ಮತ್ತು ಅವರ ಕುಟುಂಬ ಸದಸ್ಯರು 28 ಕಿಲೋಮೀಟರ್ ನಡೆದುಕೊಂಡು ಹೋಗಿದ್ದಾರೆ. ಕಲ್ಯಾಣಸಿಂಗ್‌ಪುರ ಬ್ಲಾಕ್‌ನ ಸುನಖಂಡಿ ಪಂಚಾಯಿತಿಯಿಂದ ಗುರುವಾರ ರಾತ್ರಿಯಿಡೀ ನಡೆದುಕೊಂಡು ದಿಬಳಪಾಡು ಗ್ರಾಮಕ್ಕೆ ಆಗಮಿಸಿ ಅಲ್ಲಿ ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ವರನ ಕುಟುಂಬವು ಮದುವೆಯ ಅದ್ಧೂರಿ ಮೆರವಣಿಗೆಗಾಗಿ 4 ಕಾರು ವ್ಯವಸ್ಥೆ ಮಾಡಿದ್ದರು. ಆದರೆ ಮುಷ್ಕರದ ಕಾರಣದಿಂದ ವರ ಹಾಗೂ ಆತನ ಕುಟುಂಬ ಸುಮಾರು 28 ಕಿ.ಮೀ ಅಂದರೆ ರಾತ್ರೀ ಪೂರ್ತಿ ನಡೆದು ಮರುದಿನ ಮುಂಜಾನೆ ವಧುವಿನ ಮನೆಗೆ ತಲುಪಿದರು. ಒಡಿಶಾದ ಹುಡುಗನಿಗೆ ದಿಬಲಪಾಡು ಗ್ರಾಮದ ಹುಡುಗಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ, ಚಾಲಕರ ಮುಷ್ಕರದಿಂದ ಗ್ರಾಮದಲ್ಲಿ ಸಾರಿಗೆ ಸೌಲಭ್ಯವಿರಲಿಲ್ಲ. ಹೀಗಾಗಿ ಯಾವುದೇ ಆಯ್ಕೆಯಿಲ್ಲದೆ, ವರ ಮಂಟಪಕ್ಕೆ ನಡೆದುಕೊಂಡೇ ಹೋಗಬೇಕಾಯಿತು. ಗುರುವಾರ ರಾತ್ರಿ ಪಾರ್ತಿಗುಡ ಗ್ರಾಮದಿಂದ  ಮದುವೆ ಮೆರವಣಿಗೆ ಹೊರಟಿತು. ವರ, ಮನೆಮಂದಿ ಮತ್ತು ಸಂಬಂಧಿಕರು ವಧುವಿನ ಮನೆಯನ್ನು ತಲುಪಲು ಸುಮಾರು 28 ಕಿಲೋಮೀಟರ್ ದೂರವನ್ನು ಕ್ರಮಿಸಿದರು. 

ತಂಗಿಯನ್ನೇ ಮದ್ವೆಯಾಗಿ ಸಂಸಾರ ನಡೆಸಿದ್ದ, ಆರು ವರ್ಷದ ನಂತ್ರ ಗೊತ್ತಾಯ್ತು ಬೆಚ್ಚಿಬೀಳಿಸೋ ಸತ್ಯ!

ದ್ವಿಚಕ್ರ ವಾಹನಗಳಲ್ಲಿ ಮದುವೆಗೆ ಬೇಕಾದ ಸಾಮಗ್ರಿಗಳನ್ನು ಕಳುಹಿಸಲಾಗಿತ್ತು. ಎಂಟು ಮಹಿಳೆಯರು ಸೇರಿದಂತೆ ಕುಟುಂಬದ ಸುಮಾರು 30 ಸದಸ್ಯರು, ಸಂಬಂಧಿಕರು ಮತ್ತು ಸ್ನೇಹಿತರು ಕಾಲ್ನಡಿಗೆಯಲ್ಲಿ ವಧುವಿನ ಮನೆಗೆ ಹೋಗಲು ನಿರ್ಧರಿಸಿದೆವು ಎಂದು ವರ ನರೇಶ್ ಹೇಳಿದ್ದಾರೆ. ಮಹಿಳೆಯರು ಸೇರಿದಂತೆ ವರ ಮತ್ತು ಅವರ ಕುಟುಂಬ ಸದಸ್ಯರು ರಾತ್ರಿಯಲ್ಲಿ ನಡೆದುಕೊಂಡು ಹೋಗುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಒಡಿಶಾದಲ್ಲಿ ಚಾಲಕ ಏಕತಾ ಮಂಚ್ ಬ್ಯಾನರ್ ಅಡಿಯಲ್ಲಿ ಸಾವಿರಾರು ಟ್ರಕ್ ಮತ್ತು ಟ್ಯಾಕ್ಸಿ ಚಾಲಕರು ರಾಜ್ಯಾದ್ಯಂತ ಅನಿರ್ದಿಷ್ಟಾವಧಿಯ 'ಚುಕ್ವಿಟ್ ಸ್ಟೀರಿಂಗ್' ಮುಷ್ಕರ ನಡೆಸುತ್ತಿದ್ದಾರೆ. 60 ವರ್ಷ ತುಂಬಿದ ನಂತರ ಪಿಂಚಣಿ, ಮರಣ ಸೌಲಭ್ಯ, ಜೀವ ವಿಮೆ, ಸಾಮಾಜಿಕ ಭದ್ರತೆ, ವಾಹನ ನಿಲುಗಡೆ ಹಾಗೂ ಶೌಚಾಲಯ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಧರಣಿ ನಿರತ ಚಾಲಕರು ಒತ್ತಾಯಿಸಿದ್ದಾರೆ. ಒಡಿಶಾದ ಮುಖ್ಯ ಕಾರ್ಯದರ್ಶಿ ಪ್ರದೀಪ್ ಜೆನಾ ಗುರುವಾರ ಚಾಲಕರ ಸಂಘಕ್ಕೆ ತಮ್ಮ ಸಮಸ್ಯೆಗಳನ್ನು ಮೂರು ತಿಂಗಳೊಳಗೆ ಪರಿಹರಿಸುವುದಾಗಿ ಭರವಸೆ ನೀಡಿದರು. ಈ ಮಧ್ಯೆ ಒಡಿಶಾ ಖಾಸಗಿ ಬಸ್ ಮಾಲೀಕರ ಸಂಘವು ರಾಜ್ಯ ಸರ್ಕಾರದೊಂದಿಗಿನ ಚರ್ಚೆಯ ನಂತರ ತನ್ನ ಯೋಜಿತ ಮುಷ್ಕರವನ್ನು ಮುಂದುವರಿಸದಿರಲು ನಿರ್ಧರಿಸಿದೆ.

ಮುಖ್ಯ ಕಾರ್ಯದರ್ಶಿ ಪಿಕೆ ಜೆನಾ ಮತ್ತು ಡಿಜಿಪಿ ಎಸ್‌ಕೆ ಬನ್ಸಾಕ್ ಅವರು ಮುಷ್ಕರವನ್ನು ಹಿಂಪಡೆಯುವಂತೆ ಮುಷ್ಕರ ನಿರತ ಚಾಲಕರಿಗೆ ಮನವಿ ಮಾಡಿದ ಕೆಲವೇ ಗಂಟೆಗಳ ನಂತರ ಚಾಲಕರ ಏಕತಾ ಮಹಾಸಂಘದ ಪ್ರಕಟಣೆ ಹೊರಬಿದ್ದಿದೆ. ಚಾಲಕರ ಮುಷ್ಕರದಿಂದಾಗಿ ಯಾವುದೇ ಸಾರಿಗೆ ಲಭ್ಯವಿಲ್ಲ. ನಾವು ಹಳ್ಳಿಗೆ ತಲುಪಲು ರಾತ್ರಿಯಿಡೀ ನಡೆದಿದ್ದೇವೆ. ನಮಗೆ ಬೇರೆ ದಾರಿ ಇರಲಿಲ್ಲ' ಎಂದು ವರನ ಕುಟುಂಬದ ಸದಸ್ಯರೊಬ್ಬರು ಹೇಳಿದ್ದಾರೆ.

Odisha groom walks 28 km to reach marriage venue amid drivers strike Vin

Latest Videos
Follow Us:
Download App:
  • android
  • ios