ಬಿಯರ್ ಕುಡಿಯುವುದರಿಂದ ಕ್ರಿಯೆಟಿವಿಟಿ ಹೆಚ್ಚಾಗುತ್ತಂತೆ!
ಕ್ರಿಯೇಟಿವಿಟಿ ಇಲ್ಲ ಎಂದು ಅಂತ ಕೊರಗುತ್ತಿದ್ದೀರಾ? ಯೋಚನೆ ಮಾಡಬೇಡಿ ಬಿಯರ್ ಕುಡಿಯಿರಿ! ಮಿತ ಪ್ರಮಾಣದಲ್ಲಿ ಬಿಯರ್ ಕುಡಿಯುವುದರಿಂದ ಮಾನವ ಸೃಜನಾತ್ಮಕ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ ಎಂಬುದನ್ನು ಸಂಶೋಧನೆಯಲ್ಲಿ ಕಂಡುಹಿಡಿದಿದ್ದಾರೆ.
ಕ್ರಿಯೇಟಿವಿಟಿ ಇಲ್ಲ ಎಂದು ಅಂತ ಕೊರಗುತ್ತಿದ್ದೀರಾ? ಯೋಚನೆ ಮಾಡಬೇಡಿ ಬಿಯರ್ ಕುಡಿಯಿರಿ. ಹೌದು, ಆಸ್ಟ್ರಿಯಾದ ಗ್ರಾಜ್ ವಿಶ್ವವಿದ್ಯಾನಿಲಯ ನಡೆಸಿದ ಸಂಶೋಧನೆಯಲ್ಲಿ ಈ ಅಂಶ
ಬಹಿರಂಗವಾಗಿದೆ.
ಮಿತ ಪ್ರಮಾಣದಲ್ಲಿ ಬಿಯರ್ ಕುಡಿಯುವುದರಿಂದ ಮಾನವ ಸೃಜನಾತ್ಮಕ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ ಎಂಬುದನ್ನು ಕಂಡುಹಿಡಿದಿದ್ದಾರೆ. ಬಿಯರ್ ನಿಮ್ಮ ಕಲಾತ್ಮಕ ಅಭಿವ್ಯಕ್ತಿಯನ್ನು ಹೆಚ್ಚಿಸಲು ಪ್ರಚೋದನೆಯನ್ನು ನೀಡುತ್ತದೆ. ಅದರ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಬಿಯರ್ ಕುಡಿಯುವುದರಿಂದ ಕಲಾತ್ಮಕ ಅಭಿವ್ಯಕ್ತಿ ಹೆಚ್ಚುತ್ತದೆ. ಆಸ್ಟ್ರಿಯಾದಗ್ರಾಂಜ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ, ಜನರು ಬಿಯರ್ ಕುಡಿದ ನಂತರದಲ್ಲಿ ಸೃಜನಾತ್ಮಕ ಕಾರ್ಯಗಳಲ್ಲಿ ಹೆಚ್ಚು ಸಕ್ರಿಯರಾಗಿರುವುದು ಸಾಬೀತಾಗಿದೆ.
ಅದ್ಯಯನಕ್ಕೊಳಪಟ್ಟ ಸ್ತೀಯರು ಮತ್ತು ಪುರುಷರಿಗೆ 3 ಪದಗಳನ್ನು ಕೊಟ್ಟು ಒಂದು ಪರೀಕ್ಷೆ ಕೊಡಲಾಗಿತ್ತು. ಆ ಪರೀಕ್ಷೆಯಲ್ಲಿ ಶೇ.40 ಎಷ್ಟು ಜನರು ಆಲ್ಕೋಹಾಲ್ ಕುಡಿದ ನಂತರದಲ್ಲಿ ಹೆಚ್ಚು ಸೃಜನಾತ್ಮಕವಾಗಿ ಪಾಲ್ಗೊಂಗೊಂಡಿರುವುದು ಕಂಡುಬಂದಿತು.
ಅಂದರೆ ಬಿಯರ್ ಕುಡಿದ ನಂತರಲ್ಲಿ ಅವರು ಮಾನಸಿಕ ಒತ್ತಡಗಳು, ಜಂಜಾಟಗಳನ್ನು ಮರೆಯುವುರಿಂದ ಈ ರೀತಿ ಸೃಜನಾತ್ಮಕವಾಗಿ ಯೋಚಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಸಂಶೋಧಕರು. ಆದರೆ ಆಲ್ಕೋಹಾಲ್ ನಿಂದ ಸೃಜನಾತ್ಮಕ ಚಿಂತನೆ ಹೆಚ್ಚಿದರೂ ಸಹ ಕಾರ್ಯನಿರ್ವಾಹಕ ಶಕ್ತಿಯನ್ನು ಕಡಿಮೆಗೊಳಿಸುತ್ತದೆ ಎನ್ನುತ್ತಾರೆ ಸಂಶೋಧಕರರು.
ವಿದ್ಯಾರ್ಥಿಗಳಲ್ಲೇ ಹೆಚ್ಚು ಮಾದಕ ವ್ಯಸನ