ಹೊಸ ಅಧ್ಯಾಯ ಆರಂಭಿಸಿದ ಮಾಜಿ ವಿಶ್ವ ಸುಂದರಿ,CDS ಡಿಫೆನ್ಸ್ ಪರೀಕ್ಷೆಯಲ್ಲಿ 2ನೇ ರ‍್ಯಾಂಕ್!

ಈಕೆ ಮಾಜಿ ವಿಶ್ವ ಸುಂದರಿ. ಆದರೆ ಇದೀಗ ಹೊಸ ಅಧ್ಯಾಯ ಆರಂಭಿಸಿದ್ದಾಳೆ. ದೇಶದ ಅತ್ಯಂತ ಕಠಿಣ ಪರೀಕ್ಷೆ ಎಂದೇ ಗುರುತಿಸಿಕೊಂಡಿರುವ ಭಾರತೀಯ ಸೇನೆಯ ಸಿಡಿಎಸ್ ಪರೀಕ್ಷೆಯಲ್ಲಿ ಆಲ್ ಇಂಡಿಯಾಗೆ 2ನೇ ರ‍್ಯಾಂಕ್ ಪಡೆದಿದ್ದಾಳೆ. ಇದೀಗ ಚೆನ್ನೈನ ತರಬೇತಿ ಅಕಾಡೆಮಿಗೆ ಸೇರಿಕೊಳ್ಳುತ್ತಿರುವ ಈ ಚೆಲುವೆ ಯಾರು? 

Former miss international kashish methwani bags air 2nd rank in Defence service exam ckm

ಪುಣೆ(ನ.27) ಮಿಸ್ ಇಂಟರ್ನ್ಯಾಷನಲ್ ಕಿರೀಟ ಮುಡಿಗೇರಿಸಿಕೊಂಡು ಸೌಂದರ್ಯ ಹಾಗೂ ಫ್ಯಾಶನ್ ಜಗತ್ತಿನಲ್ಲಿ ಭಾರಿ ಸಂಚಲನ ಸೃಷ್ಟಿಸಿದ ಕಾಶಿಶ್ ಮೆತ್ವಾನಿ ಇದೀಗ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಸಾಮಾನ್ಯವಾಗಿ ಮಿಸ್ ವರ್ಲ್ಡ್, ಮಿಸ್ ಇಂಡಿಯಾ ಪಟ್ಟ ಗೆದ್ದ ಸುಂದರಿಯರು ಫ್ಯಾಶನ್, ಸಿನಿಮಾ ಜಗತ್ತಿನಲ್ಲೇ ತೊಡಗಿಸಿಕೊಳ್ಳುತ್ತಾರೆ. ಆದರೆ ಕಾಶಿಶ್ ಮೆತ್ವಾನಿ ಇದರಿಂದ ಭಿನ್ನವಾಗಿದ್ದಾರೆ. ಅಪ್ರತಿಮ ಸೌಂದರ್ಯದ ಖನಿ ಕಾಶಿಶ್ ಫ್ಯಾಶನ್ ಜಗತ್ತಿಗಿಂತ ತಾನು ದೇಶ ಸೇವೆಯಲ್ಲಿ ತೊಡಗಿಕೊಳ್ಳಬೇಕು ಅನ್ನೋದು ಕನಸಾಗಿತ್ತು. ಇದರಂತ ಕಠಿಣ ಪರಿಶ್ರಮವಹಿಸಿದ ಕಾಶಿಶ್ ಇದೀಗ ಭಾರತೀಯ ಡೆಫೆನ್ಸ್ ಸರ್ವೀಸ್‌ನ ಸಿಡಿಎಸ್ ಪರೀಕ್ಷೆಯಲ್ಲಿ ಆಲ್ ಇಂಡಿಯಾ ಮಟ್ಟದಲ್ಲಿ 2ನೇ ರ‍್ಯಾಂಕ್ ಪಡೆದಿದ್ದಾಳೆ. ಶೀಘ್ರದಲ್ಲೇ ಕಾಶಿಶ್ ಚೆನ್ನೈನಲ್ಲಿರುವ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ ಸೇರಿಕೊಳ್ಳುತ್ತಿದ್ದಾರೆ. ತರಬೇತಿ ಮುಗಿಸಿ ಭಾರತೀಯ ಸೇನೆಯ ಹೈಯರ್ ಆಫೀಸರ್ ಆಗಿ ನೇಮಕಗೊಳ್ಳಲಿದ್ದಾರೆ.

ಕಾಲೇಜು ದಿನಗಳಲ್ಲಿ ಮಿಸ್ ಇಂಟರ್ನ್ಯಾಷನಲ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಕಾಶಿಶ್ ಮೆತ್ವಾನಿ ಕೀರಿಟ ಗೆದ್ದು ಇತಿಹಾಸ ರಚಿಸಿದ್ದರು. ಬಳಿಕ ಫ್ಯಾಶನ್ ಸೇರಿದಂತೆ ಸಿನಿ ಜಗತ್ತಿನಿಂದ ಹಲವು ಆಫರ್ ಬಂದರೂ ಕಾಶಿಶ್ ತನ್ನ ಇಚ್ಚೆಯಂತೆ ದೇಶ ಸೇವೆಗೆ ತಯಾರಿ ಮಾಡಿಕೊಳ್ಳುತ್ತಿದ್ದರು. ಪುಣೆ ಮೂಲದ ಕಾಶಿಶ್ ಬೆಂಗಳೂರಿನ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ ನ್ಯೂರೋಸೈನ್ಸ್‌ನಲ್ಲಿ MSc ಪದವಿ ಪಡೆದಿದ್ದಾರೆ. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪಿಹೆಚ್‌ಡಿ ಮುಗಿಸಿದ್ದಾರೆ. ಆದರೆ ತನ್ನೊಳಗೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕು ಅನ್ನೋ ತುಡಿತ ತೀವ್ರಗೊಂಡಿತ್ತು. ಹೀಗಾಗಿ ಡೆಫೆನ್ಸಿ ಸರ್ವೀಸ್ ಪರೀಕ್ಷೆಗ ತಯಾರಿ ಆರಂಭಿಸಿದ್ದಾರೆ.

ಈ ಭಾರತೀಯ ಮೂಲದ ಮಾಜಿ ಪೋಲೀಸ್ ಆಫೀಸರ್ ನ್ಯೂಜಿಲೆಂಡ್‌ನ ಮಿಸ್ ವರ್ಲ್ಡ್ ಸ್ಪರ್ಧಿ

ಭಾರತೀಯ ಸೇನೆಯಲ್ಲಿನ ಉನ್ನತ ಅಧಿಕಾರಿಗಳಾಗ ಆಯ್ಕೆಯಾಗಲು ಸಿಡಿಎಸ್( Combined Defence Services) ಪರೀಕ್ಷೆ ಪಾಸ್ ಆಗಿರಬೇಕು. ಈ ಕಠಿಣ ಪರೀಕ್ಷೆ ತಯಾರಿ ನಡೆಸಿ ಇದೀಗ ಆಲ್ ಇಂಡಿಯಾ ಮಟ್ಟದಲ್ಲಿ 2ನೇ ಸ್ಥಾನ ಪಡೆದಿದ್ದಾಳೆ. ಮತ್ತೊಂದು ವಿಶೇಷ ಅಂದರೆ ಪ್ರಧಾನಿ ನರೇಂದ್ರ ಮೋದಿಯಿಂದ ಆಲ್ ಇಂಡಿಯಾ ಬೆಸ್ಟ್ ಕೆಡೆಟ್ ಪ್ರಶಸ್ತಿಯನ್ನು ಪಡೆದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ವಿದ್ಯಾಭ್ಯಾಸದಲ್ಲಿ ಮಾತ್ರವಲ್ಲ, ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳಲ್ಲೂ ಕಾಶಿಶ್ ಮೆತ್ವಾನಿ ಮುಂದಿದ್ದರು. ಕಾಶಿಶ್ ರಾಷ್ಟ್ರೀಯ ಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ. ಇಷ್ಟೇ ಅಲ್ಲ ಬಾಸ್ಕೆಟ್ ಬಾಲ್ ಆಟಗಾರ್ತಿಯೂ ಆಗಿದ್ದಾರೆ. ತಬಲ ಹಾಗೂ ಭರತನಾಟ್ಯ ನೃತಗಾರ್ತಿಯಾಗಿಯೂ ಮಿಂಚಿದ್ದಾರೆ. ಇದೀಗ ಚೆನ್ನೈನಲ್ಲಿರುವ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ ಪಡೆಯಲು ಸಜ್ಜಾಗಿದ್ದಾರೆ. ತರಬೇತಿ ಮುಗಿಸಿ ಭಾರತೀಯ ಸೇನೆಯ ಉನ್ನತ ಅಧಿಕಾರಿಯಾಗಿ ನೇಮಕಗೊಳ್ಳಲಿದ್ದಾರೆ.
 

Latest Videos
Follow Us:
Download App:
  • android
  • ios