Chitradurga: 20 ವರ್ಷದ ಯುವತಿಗೆ 40ರ ಅಂಕಲ್ ಜೊತೆ ಲವ್-ಮದುವೆ; ಅಳಿಯನ ಜೀವ ತೆಗೆದ ಪೋಷಕರು!
ಚಿತ್ರದುರ್ಗ ತಾಲೂಕಿನ ಕೋಣನೂರಿನಲ್ಲಿ ಪ್ರೇಮ ವಿವಾಹದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಯುವತಿಯ ಪೋಷಕರು ಮತ್ತು ಸಂಬಂಧಿಕರು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೃತ ಯುವಕನಿಗೆ ಇದು ಎರಡನೇ ವಿವಾಹವಾಗಿತ್ತು.
ಚಿತ್ರದುರ್ಗ (ನ.28): ಪ್ರೇಮ ವಿವಾಹ ಹಿನ್ನೆಲೆಯಲ್ಲಿ ಕೋಣನೂರಲ್ಲಿ ಯುವಕನ ಭೀಕರ ಕಗ್ಗೊಲೆಯಾಗಿದೆ. ಚಿತ್ರದುರ್ಗ ತಾಲೂಕಿನ ಕೋಣನೂರು ಗ್ರಾಮದಲ್ಲಿ ಘಟನೆ ನಡೆದಿದೆ. ಕೋಣನೂರು ಗ್ರಾಮದ 40 ವರ್ಷದ ವ್ಯಕ್ತಿ ಮಂಜುನಾಥ್ ಕೊಲೆಯಾದ ವ್ಯಕ್ತಿ. ಯುವತಿ ಪೋಷಕರು ಹಾಗೂ ಸಂಬಂಧಿಕರಿಂದ ವ್ಯಕ್ತಿಯ ಹತ್ಯೆಯಾಗಿದೆ ಎಂದು ವರದಿಯಾಗಿದೆ. ಒಂದು ತಿಂಗಳ ಹಿಂದೆಯಷ್ಟೇ ಮಂಜುನಾಥ್ ಹಾಗೂ ಗ್ರಾಮದ ಯುವತಿ ನಡುವೆ ಮದುವೆ ನಡೆದಿತ್ತು. ಪ್ರೇಮ ವಿವಾಹದ ಬಳಿಕ ರಾಜಿ ಪಂಚಾಯಿತಿ ಕೂಡ ನಡೆದಿತ್ತು. ಕೆಲ ದಿನಗಳ ಬಳಿಕ ಮದುವೆ ಮಾಡಿಕೊಡುವುದಾಗಿ ಹೇಳಿದ್ದರು. ಯುವತಿಯ ಪೋಷಕರು ಭರವಸೆ ನೀಡಿದ್ದ ಕಾರಣದಿಂದ ಮಗಳನ್ನು ಊರಿಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಮಂಜುನಾಥ್ ಚಿತ್ರದುರ್ಗದ ಸಂಬಂಧಿ ಮನೆಯಲ್ಲಿ ವಾಸವಾಗಿದ್ದ.
20 ದಿನಗಳ ಬಳಿಕ ನಿನ್ನೆ ಕೋಣನೂರು ಗ್ರಾಮಕ್ಕೆ ತೆರಳಿದಾಗ ಏಕಾಏಕಿ ಈತನ ಮೇಲೆ ಹಲ್ಲೆ ಮಾಡಲಾಗಿದೆ. ಮಂಜುನಾಥ್ ಮನೆಯ ಮುಂಭಾಗದಲ್ಲಿಯೇ ಭೀಕರವಾಗಿ ಹಲ್ಲೆ ನಡೆಸಿ ದಾರುಣವಾಗಿ ಹತ್ಯೆ ಮಾಡಲಾಗಿದೆ. ಮಂಜುನಾಥ್ ಮೇಲೆ ಕೋಲು,ಬಡಿಗೆ, ರಾಡಿನಿಂದ ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ. ಮಂಜುನಾಥ್ ತಂದೆ ಚಂದ್ರಪ್ಪ, ತಾಯಿ ಅನಸೂಯ ಮೇಲೂ ಹಲ್ಲೆಯಾಗಿದೆ. ಮಂಜುನಾಥ್ ಪೋಷಕರ ಕಾಲುಗಳ ಮೇಲೆ ಕಲ್ಲು ಎತ್ತಿ ಹಾಕಲಾಗಿದೆ.ಯುವತಿ ತಂದೆ ಜಗದೀಶ್, ದೊಡ್ಡಪ್ಪ ಈಶ್ವರಪ್ಪ, ಚಿಕ್ಕಪ್ಪ ನಿಂಗಪ್ಪ ದೊಡ್ಡಪ್ಪ ಬಸವರಾಜಪ್ಪ, ಪ್ರಸನ್ನ ಸೇರಿದಂತೆ ಕುಟುಂಬಸ್ಥರಿಂದ ಹಲ್ಲೆ ಕೃತ್ಯ ನಡೆದಿದೆ.
ಮಂಜುನಾಥ್‌ಗೆ 2ನೇ ಮದುವೆ: ಐದಾರು ವರ್ಷಗಳ ಹಿಂದೆ ಅದೇ ಗ್ರಾಮದಲ್ಲಿ ಮಂಜುನಾಥ್ ಅಂತರ್‌ಜಾತಿ ವಿವಾಹವಾಗಿದ್ದ. ಮಡಿವಾಳ ಸಮುದಾಯದ ಯುವತಿ ಶಿಲ್ಪಾರನ್ನು ಮಂಜುನಾಥ್ ಮದುವೆಯಾಗಿದ್ದ. ಮದುವೆಯಾದ ಬಳಿಕ ದಂಪತಿಗಳು ದಾವಣಗೆರೆಯಲ್ಲಿ ವಾಸವಾಗಿದ್ದ. ಮದುವೆಯಾದ ಕೆಲ ತಿಂಗಳಲ್ಲೇ ಗಂಡನ ಕಾಟಕ್ಕೆ ಬೇಸತ್ತು ದಾವಣಗೆರೆಯಲ್ಲೇ ಶಿಲ್ಪಾ ನೇಣಿಗೆ ಶರಣಾಗಿದ್ದಳು. ಇದೇ ವಿಚಾರವಾಗಿ ಮೃತ ಮಂಜುನಾಥ್ ಜೈಲಿಗೆ ಕೂಡ ಹೋಗಿ ಬಂದಿದ್ದ.
ಎರಡು ವರ್ಷಗಳ ಹಿಂದೆ ಜೈಲಿನಿಂದ ಹೊರಬಂದಿದ್ದ ಮಂಜುನಾಥ್, ಕಳೆದ 6-7 ತಿಂಗಳಿನಿಂದ ಪಕ್ಕದ ಮನೆಯ ರಕ್ಷಿತಾ ಎಂಬ ಯುವತಿ ಜೊತೆ ಪ್ರೇಮಾಂಕುರವಾಗಿತ್ತು. ಒಂದು ತಿಂಗಳ ಹಿಂದೆಯಷ್ಟೇ ಇವರು ಓಡಿ ಹೋಗಿ ವಿವಾಹವಾಗಿದ್ದರು. ರಾಜಿ ಪಂಚಾಯ್ತಿ ಬಳಿಕ ಮದುವೆ ಮಾಡಿಕೊಡುವುದಾಗಿ ಯುವತಿಯ ಪೋಷಕರು ಮಾತು ಕೊಟ್ಟಿದ್ದರು.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಂಪೈರ್, ಆಕ್ಷನ್ ಫಿಕ್ಸಿಂಗ್ ಆರೋಪ ಮಾಡಿದ ಐಪಿಎಲ್ ಮಾಜಿ ಕಮೀಷನರ್!
ಇದರಿಂದಾಗಿ ಬುಧವಾರ ಗ್ರಾಮಕ್ಕೆ ಮಂಜುನಾಥ್ ಹೋಗಿದ್ದೇ ತಡ, ಯುವತಿ ಪೋಷಕರು ಸಂಬಂಧಿಕರಿಂದ ಭೀಕರ ಹಲ್ಲೆ ಮಾಡಲಾಗಿದೆ. ಭೀಕರ ಹಲ್ಲೆಯಿಂದಾಗಿ ಮನೆಯ ಮುಂದೆಯೇ ಮಂಜುನಾಥ್ ಪ್ರಾಣ ಬಿಟ್ಟಿದ್ದಾರೆ. ಗಾಯಾಳು ಮಂಜುನಾಥ್ ಪೋಷಕರಾದ ಚಂದ್ರಪ್ಪ, ಪತ್ನಿ ಅನಸೂಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಜಿಲ್ಲಾಸ್ಪತ್ರೆಗೆ ಎಸ್ಪಿ ರಂಜಿತ್ ಬಂಡಾರು ಭೇಟಿ, ಪರಿಶೀಲನೆ ಮಾಡಿದ್ದಾರೆ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಿ ಪೋಲೀಸರ ಹುಡುಕಾಟ ನಡೆಸಲಾಗುತ್ತಿದ್ದು, ಭರಮಸಾಗರ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ದಾಖಲಾಗಿದೆ.
'ಚಾಣಕ್ಯನಿಗಿಂತ ಮಾಸ್ಟರ್‌ಮೈಂಡ್..' ಡೆಲ್ಲಿ ಮಾಲೀಕ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಟ್ರೆಂಡ್!